AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2021 ಕೊರೊನಾ ಮಹಿಮೆ! Cashless.. Paperless ಬಜೆಟ್; ಈ ಬಾರಿ ಆಯವ್ಯಯದ ಪ್ರತಿ ಮುದ್ರಣ ಆಗೋದಿಲ್ಲ..

ದೇಶದಲ್ಲಿ 1947ರಿಂದಲೂ ಬಜೆಟ್​ ಪ್ರತಿಗಳನ್ನು ಮುದ್ರಿಸುವ ಸಂಪ್ರದಾಯವಿದೆ. ಇಷ್ಟು ವರ್ಷಗಳ ಕಾಲ ಪಾಲಿಸಿಕೊಂಡು ಬಂದಿದ್ದ ಈ ಪರಂಪರೆಯನ್ನು ಕೊರೊನಾ ನಿಮಿತ್ತ ಮೊಟಕುಗೊಳಿಸಲಾಗುತ್ತಿದೆ. ಆಯವ್ಯಯದ ಪ್ರತಿಗಳನ್ನು ಮುದ್ರಿಸಲು ಏಕಕಾಲಕ್ಕೆ 100 ಜನ ಬೇಕಾಗುತ್ತದೆ. ಆದರೆ, ಕೊರೊನಾ ಸಂದರ್ಭದಲ್ಲಿ ಹೀಗೆ ಹೆಚ್ಚು ಜನರನ್ನು ಒಂದೆಡೆ ಸೇರಿಸುವುದು ಸಮಂಜಸವಲ್ಲ ಎಂಬ ಕಾರಣಕ್ಕೆ ಈ ಸಲ ಪೇಪರ್​ಲೆಸ್​ ಬಜೆಟ್​ ಮಂಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ 2021 ಮಂಡನೆ
Skanda
| Edited By: |

Updated on:Jan 30, 2021 | 12:59 PM

Share

ದೆಹಲಿ:  ಪ್ರಸಕ್ತ ಆರ್ಥಿಕ ವರ್ಷದ ಕೇಂದ್ರ ಆಯವ್ಯಯ ಬಜೆಟ್​ ನಿಗದಿಯಂತೆ ಫೆಬ್ರವರಿ 1 ರಂದು ಮಂಡನೆಯಾಗಲುದ್ದು, ಬಜೆಟ್​ ಪ್ರತಿಗಳನ್ನು ಮುದ್ರಣ ಮಾಡದೇ ಇರಲು ಸರ್ಕಾರ ನಿರ್ಧರಿಸಿದೆ! ಈ ಕುರಿತು ಲೋಕಸಭೆ ಮತ್ತು ರಾಜ್ಯಸಭೆಯಿಂದ ಅನುಮತಿಯನ್ನೂ ಪಡೆಯಲಾಗಿದ್ದು, ಸಂಸದರಿಗೆ ಸಾಫ್ಟ್​ ಕಾಪಿ ನೀಡುವುದಕ್ಕೆ ಸರ್ಕಾರ ತೀರ್ಮಾನಿಸಿದೆ. ಕೊವಿಡ್​ ಹರಡುವ ಭಯದಿಂದ ಇಂತಹ ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸಮಜಾಯಿಷಿ ನೀಡಿದೆ.

ದೇಶದಲ್ಲಿ 1947ರಿಂದಲೂ ಬಜೆಟ್​ ಪ್ರತಿಗಳನ್ನು ಮುದ್ರಿಸುವ ಸಂಪ್ರದಾಯವಿದೆ. ಇಷ್ಟು ವರ್ಷಗಳ ಕಾಲ ಪಾಲಿಸಿಕೊಂಡು ಬಂದಿದ್ದ ಈ ಪರಂಪರೆಯನ್ನು ಕೊರೊನಾ ನಿಮಿತ್ತ ಮೊಟಕುಗೊಳಿಸಲಾಗುತ್ತಿದೆ. ಆಯವ್ಯಯದ ಪ್ರತಿಗಳನ್ನು ಮುದ್ರಿಸಲು ಏಕಕಾಲಕ್ಕೆ 100 ಜನ ಬೇಕಾಗುತ್ತದೆ. ಆದರೆ, ಕೊರೊನಾ ಸಂದರ್ಭದಲ್ಲಿ ಹೀಗೆ ಹೆಚ್ಚು ಜನರನ್ನು ಒಂದೆಡೆ ಸೇರಿಸುವುದು ಸಮಂಜಸವಲ್ಲ ಎಂಬ ಕಾರಣಕ್ಕೆ ಈ ಸಲ ಪೇಪರ್​ಲೆಸ್​ ಬಜೆಟ್​ ಮಂಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಫೆಬ್ರವರಿ 1 ರಂದು ವಾರ್ಷಿಕ ಆಯವ್ಯಯ ಮಂಡಿಸಲಿದ್ದಾರೆ. ಜನವರಿ 29 ರಂದು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡಲಿದ್ದು, ಜನವರಿ 29 ರಂದೇ ಆರ್ಥಿಕ ಸಮೀಕ್ಷೆಯ ವರದಿ ಲೋಕಸಭೆಯಲ್ಲಿ ಮಂಡನೆ ಆಗಲಿದೆ. ಅದಕ್ಕೂ ಮುನ್ನ ಲೋಕಸಭೆ ಸ್ಪೀಕರ್​ ಮತ್ತು ರಾಜ್ಯಸಭೆ ಸಭಾಪತಿ ಪೇಪರ್​ಲೆಸ್ ಬಜೆಟ್​ ಕುರಿತು ಸಂಸದರ ಮನವೊಲಿಸಲಿದ್ದಾರೆ ಎನ್ನಲಾಗಿದೆ.

ಫೆಬ್ರವರಿ 1ರಂದು ಕೇಂದ್ರ ಬಜೆಟ್‌ ಮಂಡನೆ; ಬಜೆಟ್‌ ಅಧಿವೇಶನ ದೈನಂದಿನ ಕಲಾಪ ಅವಧಿ ಮೊಟಕು

Published On - 4:48 pm, Mon, 11 January 21

Follow Us
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು

ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!

ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ

‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್

ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ

ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!

ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!

ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ

ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ

ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​