ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಬೆನ್ನ ಹಿಂದೆಯೇ ಭಾರತಕ್ಕೆ ಬರಲಿವೆ ಇನ್ನಷ್ಟು ಕೊರೊನಾ ಲಸಿಕೆಗಳು

ಜೈಡಸ್​ ಕ್ಯಾಡಿಲಾ ಸಂಸ್ಥೆಯ ಜೈಕೊವ್​-ಡಿ ಮತ್ತು ರಷ್ಯಾದ ಸ್ಪುಟ್ನಿಕ್-ವಿ ಕೊರೊನಾ ಲಸಿಕೆಗಳು ಅನುಮತಿ ಗಿಟ್ಟಿಸಿಕೊಳ್ಳಲು ಸರತಿಯಲ್ಲಿ ನಿಂತಿವೆ. ಇನ್ನು ಮಾಡೆರ್ನಾ ಮತ್ತು ಫೈಜರ್​-ಬಯೋಎನ್​ಟೆಕ್​ ಲಸಿಕೆಗಳು ಸಹ ಭಾರತದ ಮಾರುಕಟ್ಟೆಗೆ ಕಾಲಿಡುವ ಸಾಧ್ಯತೆ ದಟ್ಟವಾಗಿದೆ.

ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಬೆನ್ನ ಹಿಂದೆಯೇ ಭಾರತಕ್ಕೆ ಬರಲಿವೆ ಇನ್ನಷ್ಟು ಕೊರೊನಾ ಲಸಿಕೆಗಳು
ಪ್ರಾತಿನಿಧಿಕ ಚಿತ್ರ
Follow us
Skanda
|

Updated on:Jan 11, 2021 | 7:12 PM

ಭಾರತದಲ್ಲಿ ಸೆರಮ್​ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ತಯಾರಿಸಿದ ಕೊವಿಶೀಲ್ಡ್​ ಮತ್ತು ಭಾರತ್ ಬಯೋಟೆಕ್​ ಸಂಸ್ಥೆಯ ಕೊವ್ಯಾಕ್ಸಿನ್​ ಲಸಿಕೆಗಳನ್ನು ಜನವರಿ 16 ರಿಂದ ವಿತರಿಸಲಾಗುವುದು ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಇನ್ನೂ 6 ಹೊಸ ಲಸಿಕೆಗಳು ಭಾರತದ ಮಾರುಕಟ್ಟೆಗೆ ಪ್ರವೇಶಿಸಲಿವೆ ಎಂದು ಹೇಳುವ ಮೂಲಕ ಎಲ್ಲರ ಕಿವಿ ನೆಟ್ಟಗಾಗಿಸಿದ್ದಾರೆ.

ಪುಣೆ ಮೂಲದ ಸೆರಮ್ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ತಯಾರಿಸಿರುವ ಕೊವಿಶೀಲ್ಡ್​ ಲಸಿಕೆಯನ್ನು ಮೊದಲು ಅಭಿವೃದ್ಧಿಪಡಿಸಿರುವುದು ಆಕ್ಸ್​ಫರ್ಡ್ ಮತ್ತು ಆಸ್ಟ್ರಾಜೆನೆಕಾ ಸಂಸ್ಥೆಗಳು. ಬ್ರಿಟನ್​ನಲ್ಲಿ ಈ ಸಂಸ್ಥೆಗಳ ಸಹಯೋಗದಲ್ಲಿ ತಯಾರಿಸಲಾದ ಲಸಿಕೆಯನ್ನು ಭಾರತದಲ್ಲಿ ಸೆರಮ್​ ಉತ್ಪಾದಿಸುತ್ತಿದೆ. ವೈದ್ಯಕೀಯ ಪರೀಕ್ಷೆ ಸಂದರ್ಭದಲ್ಲಿ 2 ಡೋಸ್​ ಲಸಿಕೆಯನ್ನು ನೀಡಿ ಪರಿಶೀಲಿಸಿದಾಗ ಶೇ.62ರಷ್ಟು ಪರಿಣಾಮಕಾರಿಯಾಗಿ ಕಂಡುಬಂದಿದೆ. ವಿಪರ್ಯಾಸವೆಂದರೆ ಇದೇ ಲಸಿಕೆಯನ್ನು ಕಡಿಮೆ ಡೋಸ್ ನೀಡಿದಾಗ ಶೇ.90ರಷ್ಟು ಪರಿಣಾಮ ದಾಖಲಾಗಿದೆ.

ಒಟ್ಟು 1.1 ಕೋಟಿ ಡೋಸ್​ ಕೊವಿಶೀಲ್ಡ್ ಲಸಿಕೆ ಖರೀದಿಸಲು ಕೇಂದ್ರ ಸರ್ಕಾರ ಈಗಾಗಲೇ ಸೆರಮ್​ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದದ ಪ್ರಕಾರವಾಗಿ ಒಂದು ಡೋಸ್​ಗೆ ₹200ರಂತೆ ಲಸಿಕೆ ನೀಡಲು ಸೆರಮ್​ ತೀರ್ಮಾನಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಖಾಸಗಿ ಮಾರುಕಟ್ಟೆಯಲ್ಲಿ ಇದೇ ಲಸಿಕೆಯ ದರ ಒಂದು ಡೋಸ್​ಗೆ ₹1000 ಆಗುವ ಕುರಿತು ಸಂಸ್ಥೆಯ ಸಿಇಓ ಅದರ್​ ಪೂನಾವಾಲಾ ಸುಳಿವು ನೀಡಿದ್ದಾರೆ.

ಹೈದರಾಬಾದ್​ನಲ್ಲಿರುವ ಭಾರತ್ ಬಯೋಟೆಕ್​ ಸಂಸ್ಥೆ ಸ್ವಯಂ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್​ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿರುವ ಕುರಿತು ಈಗಾಗಲೇ ಹಲವರು ಆಕ್ಷೇಪ ಎತ್ತಿದ್ದಾರೆ. ಕೊವ್ಯಾಕ್ಸಿನ್​ 3ನೇ ಹಂತದ ವೈದ್ಯಕೀಯ ಪರೀಕ್ಷೆಯನ್ನು ಇನ್ನೂ ಮುಗಿಸಿಲ್ಲವಾದ್ದರಿಂದ ಅದು ಎಷ್ಟು ಪರಿಣಾಮಕಾರಿ ಎಂದು ನಿಖರವಾಗಿ ಹೇಳುವುದು ಕಷ್ಟ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸ್ಥೆಯ ಮುಖ್ಯಸ್ಥ ಕೃಷ್ಣ ಎಲ್ಲಾ ಲಸಿಕೆಯ ಬಗ್ಗೆ ಅನುಮಾನ ಬೇಡ ಎಂದಿದ್ದಾರೆ. ಕೊವ್ಯಾಕ್ಸಿನ್​ ಲಸಿಕೆಯ ದರ ಇನ್ನೂ ಸ್ಪಷ್ಟವಾಗಿ ನಿಗದಿಯಾಗಿಲ್ಲವಾದರೂ ಕೆಲ ಮೂಲಗಳ ಪ್ರಕಾರ ಒಂದು ಡೋಸ್ ಲಸಿಕೆಗೆ ₹100 ನಿಗದಿಪಡಿಸುವ ಸಾಧ್ಯತೆ ಇದೆ.

ಭಾರತದ ಮಟ್ಟಿಗೆ ಈ ಲಸಿಕೆಗಳು ಅನುಕೂಲಕರ ಈ ಎರಡೂ ಲಸಿಕೆಗಳನ್ನು 2ರಿಂದ 8 ಡಿಗ್ರಿ ಸೆಲ್ಸಿಯಸ್​ ತಾಪಮಾನದಲ್ಲಿ ಶೇಖರಿಸಿಡಬಹುದಾಗಿದೆ. ಈ ಕಾರಣದಿಂದ ಭಾರತದಲ್ಲಿ ಕೊವಿಶೀಲ್ಡ್​ ಮತ್ತು ಕೊವ್ಯಾಕ್ಸಿನ್​ ಬಳಕೆ ಅನುಕೂಲಕರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸೆರಮ್​ ಸಂಸ್ಥೆ ಕೊವಿಶೀಲ್ಡ್​ ಲಸಿಕೆಗೆ ಅನುಮತಿ ನೀಡುವಂತೆ ಕೋರಿ ಡಿಸೆಂಬರ್​ 6ರಂದು ಭಾರತೀಯ ಔಷಧ ನಿಯಂತ್ರಣಾ ಮಂಡಳಿಗೆ (DCGI) ಮನವಿ ಮಾಡಿತ್ತು. ಇತ್ತ ಭಾರತ್​ ಬಯೋಟೆಕ್​ ಅದರ ಮರುದಿನವೇ (ಡಿ.7) ಕೊವ್ಯಾಕ್ಸಿನ್​ ಲಸಿಕೆಗೆ ಒಪ್ಪಿಗೆ ನೀಡುವಂತೆ DCGIಗೆ ಕೋರಿಕೆ ಸಲ್ಲಿಸಿತ್ತು.

ಕೊವಿಶೀಲ್ಡ್​ ಮತ್ತು ಕೊವ್ಯಾಕ್ಸಿನ್​ ಲಸಿಕೆಗಳಲ್ಲಿ ಕೆಲ ಸಾಮ್ಯತೆಗಳಿದ್ದು ಈ ಎರಡೂ ಲಸಿಕೆಗಳು ದೇಹದಲ್ಲಿ ಪ್ರತಿಕಾಯ ಹುಟ್ಟುಹಾಕುವ ಮತ್ತು ವೈರಾಣುಗಳ ಶಕ್ತಿಯನ್ನು ಕುಗ್ಗಿಸುವ ಸಾಮರ್ಥ್ಯ ಹೊಂದಿವೆ. ಆದರೆ, ವಿದೇಶಿ ಮೂಲದ ಫೈಜರ್​-ಬಯೋಎನ್​ಟೆಕ್ ಸಂಸ್ಥೆಯ ಕೊರೊನಾ ಲಸಿಕೆ mRNA ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ.

ಈ ಎರಡು ಲಸಿಕೆಗಳಲ್ಲದೇ ಭಾರತದಲ್ಲಿ ಜೈಡಸ್​ ಕ್ಯಾಡಿಲಾ ಸಂಸ್ಥೆಯ ಜೈಕೊವ್​-ಡಿ ಮತ್ತು ರಷ್ಯಾದ ಸ್ಪುಟ್ನಿಕ್-ವಿ ಕೊರೊನಾ ಲಸಿಕೆಗಳು ಅನುಮತಿ ಗಿಟ್ಟಿಸಿಕೊಳ್ಳಲು ಸರತಿಯಲ್ಲಿ ನಿಂತಿವೆ. ಇನ್ನು ಮಾಡೆರ್ನಾ ಮತ್ತು ಫೈಜರ್​-ಬಯೋಎನ್​ಟೆಕ್​ ಲಸಿಕೆಗಳು ಸಹ ಭಾರತದ ಮಾರುಕಟ್ಟೆಗೆ ಕಾಲಿಡುವ ಸಾಧ್ಯತೆ ದಟ್ಟವಾಗಿದ್ದು, ಪ್ರಧಾನ ಮಂತ್ರಿಗಳು ಇಂದು ಹೇಳಿರುವ ಮಾತು ಇನ್ನಷ್ಟು ಪುಷ್ಠಿ ನೀಡಿದೆ.

ಮೊದಲ ಹಂತದಲ್ಲಿ ರಾಜಕಾರಣಿಗಳಿಗೆ ಲಸಿಕೆ ಇಲ್ಲ: ಪ್ರಧಾನಿ ಮೋದಿ ಸ್ಪಷ್ಟ ನಿಲುವು

Published On - 7:08 pm, Mon, 11 January 21

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು