ಚೀನಾದ ವಿರುದ್ಧ ದುರ್ಬಲವಾಗುತ್ತಿದೆ ಭಾರತ: ಸಂಸದ ರಾಹುಲ್ ಗಾಂಧಿ
ಕೃಷಿ ಕ್ಷೇತ್ರದ ಸುಧಾರಣೆ ಮಾಡುವುದಾಗಿ ಕಾಂಗ್ರೆಸ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದೆವು. ಆದರೆ, ಕೃಷಿ ಕ್ಷೇತ್ರವನ್ನು ನಾಶಮಾಡುವ ಬಗ್ಗೆ ಮಾತನಾಡಿರಲಿಲ್ಲ ಎಂದು ಸಹ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ದೆಹಲಿ: ಕೇಂದ್ರ ಸರ್ಕಾರ ಭಾರತದ ರಕ್ಷಣೆಯ ತನ್ನ ಮೂಲ ಜವಾಬ್ದಾರಿಯನ್ನು ಮರೆತಿದೆ. ಹೀಗಾಗಿ, ಚೀನಾ ವಿರುದ್ಧ ದಿನೇದಿನೇ ದುರ್ಬಲವಾಗುತ್ತಿದೆ. ಚೀನಾ ವಿರುದ್ಧ ಜಾಗತಿಕವಾಗಿ ಸಮರ್ಪಕ ರಾಜಕೀಯ ಮತ್ತು ಮಿಲಿಟರಿ ಕಾರ್ಯತಂತ್ರಗಳನ್ನು ರೂಪಿಸಬೇಕಿದೆ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ.
ಜತೆಗೆ, ಅರ್ನಬ್ ಗೋಸ್ವಾಮಿ ಮತ್ತು ಮಾಜಿ ಬಾರ್ಕ್ ಮುಖ್ಯಸ್ಥ ಪಾರ್ಥೋ ದಾಸ್ಗುಪ್ತಾ ನಡುವಿನ ವಾಟ್ಸ್ಆ್ಯಪ್ ಚಾಟ್ ಎನ್ನಲಾದ ಸೋರಿಕೆಯಾದ ದಾಖಲೆಗಳಲ್ಲಿ ಪಾಕ್ನ ಬಾಲಾಕೋಟ್ ದಾಳಿ ಕುರಿತು ಉಲ್ಲೇಖವಿರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಬಾಲಾಕೋಟ್ ದಾಳಿಯಂತಹ ಸೂಕ್ಷ್ಮ ನಿರ್ಧಾರಗಳು ದೇಶದ ಪ್ರಧಾನಿ, ಕೇಂದ್ರ ಗೃಹ ಸಚಿವರು, ರಕ್ಷಣಾ ಇಲಾಖೆ ಸಚಿವರು ಮತ್ತು ವಾಯು ಸೇನೆ ಮುಖ್ಯಸ್ಥರಿಗೆ ಮಾತ್ರ ತಿಳಿದಿರುತ್ತದೆ. ಆದರೆ ದಾಳಿಯ ಮುನ್ನವೇ ಈ ಕುರಿತು ರಿಪಬ್ಲಿಕ್ ವಾಹಿನಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಮಾಹಿತಿ ಹೊಂದಿದ್ದರೆ ಅದು ಗಂಭೀರ ಅಪರಾಧವಾಗಿದೆ. ದೇಶದ ಭದ್ರತೆಗೆ ಸಂಬಂಧಿಸಿದ ರಹಸ್ಯ ಮಾಹಿತಿ ಸೋರಿಕೆ ಮಾಡಿದವರ ವಿರುದ್ಧ ತನಿಖೆ ನಡೆಸಿ ಕಾರಾಗೃಹಕ್ಕೆ ಅಟ್ಟಬೇಕಿದೆ ಎಂದು ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.
ಕೃಷಿ ಕ್ಷೇತ್ರದ ಸುಧಾರಣೆ ಮಾಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ, ಕೃಷಿ ಕ್ಷೇತ್ರವನ್ನು ನಾಶಮಾಡುವ ಬಗ್ಗೆ ಮಾತನಾಡಿರಲಿಲ್ಲ ಎಂದು ಅವರು ವ್ಯಂಗ್ಯ ಮಾಡಿದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಹಳ್ಳಿ ನಿರ್ಮಾಣ; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
Published On - 8:03 pm, Tue, 19 January 21