ಕೊಚ್ಚಿ: ಹಿರಿಯ ಮಹಿಳೆಯೊಬ್ಬರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮಗ ಎಂದು ಕರೆಯುವ ಮತ್ತು ಸಿಹಿ ತಿಂಡಿಗಳ ಪೊಟ್ಟಣ ಕೊಡುವ ಹೃದಯಸ್ಪರ್ಶಿ ವಿಡಿಯೊ ಒಂದನ್ನು ಕೇರಳ ಕಾಂಗ್ರೆಸ್ನ ಟ್ವಿಟರ್ ಹ್ಯಾಂಡ್ಲ್ ಟ್ವೀಟ್ ಮಾಡಿದೆ. ರಾಹುಲ್ ಗಾಂಧಿ ತಮ್ಮ ಲೋಕಸಭಾ ಕ್ಷೇತ್ರಕ್ಕೆ ಎರಡು ದಿನಗಳ ಭೇಟಿಗೆಂದು ಬಂದಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಮಗ ಎಂದು ಸಂಬೋಧಿಸಿದ ಮಹಿಳೆಯನ್ನು ರಾಜಮ್ಮ ಎಂದು ಗುರುತಿಸಲಾಗಿದೆ. ರಾಹುಲ್ ಗಾಂಧಿ ಜನಿಸಿದ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ರಾಜಮ್ಮ ಸೇವೆ ಸಲ್ಲಿಸುತ್ತಿದ್ದರು. 19ನೇ ಜೂನ್ 1970ರಂದು ರಾಹುಲ್ ಗಾಂಧಿ ಜನಿಸಿದಾಗ ರಾಜಮ್ಮ ಟ್ರೇನಿ ನರ್ಸ್ ಆಗಿ ಕರ್ತವ್ಯದ ಮೇಲಿದ್ದರು.
ರಾಹುಲ್ ಗಾಂಧಿ ನನ್ನ ಮಗ ಎಂದು ರಾಹುಲ್ರ ಭದ್ರತಾ ಸಿಬ್ಬಂದಿಯೊಂದಿಗೆ ಮಾತನಾಡುವಾಗ ರಾಜಮ್ಮ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಜಗತ್ತಿನಲ್ಲಿ ಬೇರೆ ಯಾರೊಬ್ಬರೂ ನೋಡುವ ಮೊದಲು ನಾನು ಅವರನ್ನು ನೋಡಿದ್ದೆ ಎಂದು ರಾಜಮ್ಮ ಹೇಳಿದ್ದರು. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಬಗ್ಗೆಯೂ ವಿಚಾರಿಸಿದ ರಾಜಮ್ಮ, ಅವರಿಗೂ ನಮಸ್ಕಾರಗಳನ್ನು ತಿಳಿಸುವಂತೆ ಕೋರಿದರು.
ರಾಹುಲ್ ಗಾಂಧಿ ಹೊರಡಲು ಅನುವಾದಾಗ ರಾಜಮ್ಮ, ತಮ್ಮ ಮತ್ತು ಅವರ ಸಂಬಂಧ ಪಕ್ಷ ಅಥವಾ ಇತರ ಎಲ್ಲ ವಿಚಾರಗಳಿಗೂ ಮಿಗಿಲಾದದ್ದು ಎಂದು ಹೇಳಿದರು. ವಯನಾಡ್ ಕ್ಷೇತ್ರದಲ್ಲಿ 2019ರಲ್ಲಿ 4.31 ಲಕ್ಷ ಮತಗಳ ಅಂತರದಿಂದ ಜಯಗಳಿಸಿದ ನಂತರ ರಾಜಮ್ಮ ಅವರನ್ನು ರಾಹುಲ್ ಗಾಂಧಿ ಭೇಟಿಯಾಗಿದ್ದರು. ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ರಾಹುಲ್ ಗಾಂಧಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿದರು. ವಯನಾಡ್ ಸಮೀಪದ ಕರಸೆರಿ ಪಂಚಾಯತ್ನಲ್ಲಿ ರೈತ ದಿನಾಚರಣೆಯನ್ನು ಉದ್ಘಾಟಿಸಿ, ಕೃಷಿ ಸಾಧಕರನ್ನು ಸನ್ಮಾನಿಸಿದರು.
The wholesome love and affection from Rajamma Amma who was a nurse at Delhi’s holy family hospital where
Shri @RahulGandhi was born. pic.twitter.com/fMCDNIsUio— Congress Kerala (@INCKerala) August 17, 2021
(Rahul Gandhi is my Son proudly says nurse from Wayanad of Kerala)
ಇದನ್ನೂ ಓದಿ: Rahul Gandhi Twitter: ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆ ಮತ್ತೆ ಸಕ್ರಿಯ; ಸತ್ಯಮೇವ ಜಯತೇ ಎಂದ ಕಾಂಗ್ರೆಸ್
ಇದನ್ನೂ ಓದಿ: Rahul gandhi: ರಾಹುಲ್ ಗಾಂಧಿ ದಿಢೀರನೇ ರಾಜಕೀಯವಾಗಿ ಸಕ್ರಿಯ; ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಹೋರಾಡಲು ಸನ್ನದ್ಧ