ಪ್ರಧಾನಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ (Amit Shah) ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸುತ್ತಲೇ ಬಂದಿದೆ. ಟೀಕಿಸುವ ಭರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಕೆಲವು ಆರೋಪಗಳನ್ನು ಕೂಡ ಮಾಡಿದ್ದಾರೆ. ಆದರೆ, ಅದರಲ್ಲಿ ಸತ್ಯಾಸತ್ಯತೆ ಎಷ್ಟಿದೆ? ಎಂಬುದರ ಕುರಿತು ದಿ ಪಾಂಪ್ಲೆಟ್ (The Pamphlet) ಎಂಬ ಡಿಜಿಟಲ್ ಮಾಧ್ಯಮ ಟ್ವಿಟ್ಟರ್ (ಎಕ್ಸ್)ನಲ್ಲಿ ದಾಖಲೆ ಸಮೇತ ಬಹಿರಂಗಪಡಿಸಿದೆ. ರಾಹುಲ್ ಗಾಂಧಿ ಹೇಳಿರುವ ಮುಖ್ಯವಾದ 10 ಸುಳ್ಳುಗಳನ್ನು ಸಾಕ್ಷಿ ಸಹಿತ ಬಯಲು ಮಾಡಿದೆ. ಆ 10 ಸುಳ್ಳುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಸುಳ್ಳು 1: ‘ಅಮಿತ್ ಶಾ ಅವರು ಗೆದ್ದರೆ ಸಂವಿಧಾನವನ್ನು ರದ್ದುಪಡಿಸುವುದಾಗಿ ಹೇಳಿದ್ದಾರೆ’
ಸತ್ಯ: ಕೇಂದ್ರ ಗೃಹ ಸಚಿವ ಅಮಿತ್ ಶಾ ಇದನ್ನು ಎಂದಿಗೂ ಹೇಳಲಿಲ್ಲ.
झूठ नंबर 1: ‘अमित शाह ने कहा है कि जीतने पर संविधान खत्म कर देंगे’
तथ्य: केंद्रीय गृह मंत्री अमित शाह ने ऐसा कभी नहीं कहा, बल्कि प्रधानमंत्री मोदी का संविधान के मुद्दे पर स्पष्ट कहना है कि 👇 pic.twitter.com/MOHqCaRwZt
— The Pamphlet (@Pamphlet_in) May 1, 2024
ಸುಳ್ಳು 2: ‘ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಶ್ರೀಮಂತರು ಮಾತ್ರ ಹಾಜರಿದ್ದರು. ಅಲ್ಲಿ ಬಡ ಕಾರ್ಮಿಕರು ಇರಲಿಲ್ಲ’
ಸತ್ಯ: ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಕೂಲಿಕಾರ್ಮಿಕರು ಇದ್ದರು. ಅವರ ಮೇಲೆ ಪ್ರಧಾನಿ ಹೂವಿನ ಮಳೆಗರೆದಿದ್ದರು.
झूठ नंबर 2: ‘राम मंदिर प्राण प्रतिष्ठा कार्यक्रम में सिर्फ अमीर लोग थे लेकिन गरीब मजदूर नहीं थे’
तथ्य: मजदूर भी थे और प्रधानमंत्री ने उन पर पुष्पवर्षा भी की थी pic.twitter.com/22LlN1P6ZU
— The Pamphlet (@Pamphlet_in) May 1, 2024
ಇದನ್ನೂ ಓದಿ: Lok Sabha Elections: ಅಮೇಥಿ, ರಾಯ್‌ಬರೇಲಿಯಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿಯಲು ರಾಹುಲ್ ಗಾಂಧಿ ನಕಾರ
ಸುಳ್ಳು 3: ‘ರಾಷ್ಟ್ರಪತಿಯವರು ಬುಡಕಟ್ಟು ಜನಾಂಗದವರಾಗಿದ್ದು, ಅವರನ್ನು ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ’
ಸತ್ಯ: ರಾಷ್ಟ್ರಪತಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿಕೆ ನೀಡಿತ್ತು.
झूठ नंबर 3: ‘राष्ट्रपति आदिवासी हैं, इसलिए उन्हें प्राण प्रतिष्ठा कार्यक्रम में नहीं बुलाया गया’
तथ्य: राष्ट्रपति को न्योता दिया गया था…. श्रीराम जन्मभूमि तीर्थ क्षेत्र ट्रस्ट ने बयान जारी किया है pic.twitter.com/jJRx8NeXeV
— The Pamphlet (@Pamphlet_in) May 1, 2024
ಸುಳ್ಳು 4: ಕೇಂದ್ರ ಸರ್ಕಾರವು ಅದಾನಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಕೆಲಸ ನೀಡಿದೆ.
ಸತ್ಯ: ಯುಪಿಎ ಆಡಳಿತಾವಧಿಯಲ್ಲಿ ಅದಾನಿ ಸಮೂಹದ ಬೆಳವಣಿಗೆಯ ದರ ಅತ್ಯುತ್ತಮವಾಗಿತ್ತು. ಹಾಗೇ, ಅದಾನಿ ಗ್ರೂಪ್ ಕೂಡ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಭಾರಿ ಹೂಡಿಕೆ ಮಾಡಿದೆ.
झूठ नंबर 4: केंद्र सरकार ने हर क्षेत्र में अडानी को काम दिया है
तथ्य: -UPA शासन काल में अडानी समूह का ग्रोथ रेट शानदार रहा
और कांग्रेस शासित प्रदेशों में भी अडानी समूह का भारी निवेश रहा है pic.twitter.com/a0PKVsTsOE— The Pamphlet (@Pamphlet_in) May 1, 2024
ಸುಳ್ಳು 5: ಪ್ರಧಾನಿ ಮೋದಿ ರೈತರನ್ನು ಭಯೋತ್ಪಾದಕರು ಎಂದು ಕರೆದಿದ್ದರು.
ಸತ್ಯ: ಪ್ರಧಾನಿ ಮೋದಿ ರೈತರನ್ನು ಎಂದಿಗೂ ಭಯೋತ್ಪಾದಕರು ಎಂದು ಕರೆಯಲಿಲ್ಲ, ಅವರು ದೇಶದ ಸಣ್ಣ ರೈತರಿಗಾಗಿ ಏನು ಮಾಡಿದ್ದಾರೆ ಎಂಬುದರ ವಿಡಿಯೋ ಇಲ್ಲಿದೆ.
झूठ नंबर 5: प्रधानमंत्री मोदी ने किसानों को आतंकवादी कहा
तथ्य: प्रधानमंत्री मोदी ने किसानों को कभी आतंकवादी नहीं कहा बल्कि देश के छोटे किसानों के लिए क्या किया, वो आप स्वयं इस वीडियो में सुन सकते हैं 👇 pic.twitter.com/4ivjHqoeE0
— The Pamphlet (@Pamphlet_in) May 1, 2024
ಸುಳ್ಳು 6: ಭಾರತದಲ್ಲಿ ನಿರುದ್ಯೋಗವು 45 ವರ್ಷಗಳಲ್ಲೇ ಅತಿ ಹೆಚ್ಚಾಗಿದೆ.
ಸತ್ಯ: ಕಳೆದ ಕೆಲವು ವರ್ಷಗಳಿಂದ ಉದ್ಯೋಗಗಳಲ್ಲಿನ ಬೆಳವಣಿಗೆಯಾಗಿದೆ ಮತ್ತು ನಿರುದ್ಯೋಗ ದರದಲ್ಲಿನ ಇಳಿಕೆಯಾಗಿದೆ. EPFO, PLFS, RBI, ರಾಷ್ಟ್ರೀಯ ವೃತ್ತಿ ಸೇವೆಗಳು ಮತ್ತು ಕೇಂದ್ರ ಸರ್ಕಾರದ ವಿವಿಧ ಉದ್ಯೋಗ ಕೇಂದ್ರಿತ ಯೋಜನೆಗಳಿಂದ ಡೇಟಾ ಸಂಗ್ರಹಿಸಲಾಗಿದೆ.
ಇದನ್ನೂ ಓದಿ: Prajwal Revanna Case: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಮೋದಿಗೆ ಮೊದಲೇ ಗೊತ್ತಿತ್ತು; ಕಾಂಗ್ರೆಸ್ ಆರೋಪ
ಸುಳ್ಳು 7: ಪ್ರತಿಯೊಬ್ಬರ ಖಾತೆಗೆ ಲಕ್ಷಾಂತರ ರೂಪಾಯಿಗಳು ಬರುತ್ತವೆ.
ಸತ್ಯ: ಕಾಂಗ್ರೆಸ್ ಪ್ರಣಾಳಿಕೆಯನ್ನು ತಯಾರಿಸಿದ ಪ್ರವೀಣ್ ಚಕ್ರವರ್ತಿ ಅಂತಹ ಯೋಜನೆಯನ್ನು ಜಾರಿಗೆ ತರಲು ತಮ್ಮ ಬಳಿ ಯಾವುದೇ ಡೇಟಾ ಇಲ್ಲ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ.
झूठ नंबर 7: ‘खटाखट सबके खातों में लाखों रुपये आएँगे’
तथ्य: कांग्रेस का घोषणापत्र बनाने वाले प्रवीण चक्रवर्ती स्वयं स्वीकार कर चुके हैं कि ऐसी योजना लागू करने के लिए उनके पास कोई डेटा नहीं है pic.twitter.com/zyvyWGeZN3
— The Pamphlet (@Pamphlet_in) May 1, 2024
ಸುಳ್ಳು 8: ‘ಅದಾನಿ ರಾಮಮಂದಿರದಲ್ಲಿ ಪ್ರಧಾನಿ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ ಮತ್ತು ಅದಾನಿಗೆ ಕಾಂಗ್ರೆಸ್‌ಗೆ ಯಾವುದೇ ಸಂಬಂಧವಿಲ್ಲ’
ಸತ್ಯ: ಗೌತಮ್ ಅದಾನಿ ರಾಮಮಂದಿರ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ ಅಥವಾ ಯಾವುದೇ ಫೋಟೋ ತೆಗೆದುಕೊಂಡಿಲ್ಲ. ಆದರೆ ರಾಹುಲ್ ಗಾಂಧಿ ಅವರ ಸೋದರ ಮಾವ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರೊಂದಿಗೆ ಗೌತಮ್ ಅದಾನಿ ಅವರ ಫೋಟೋಗಳಿವೆ.
झूठ नंबर 8: ‘अडानी ने राम मंदिर में प्रधानमंत्री के साथ फोटो खिंचाई और कांग्रेस के साथ अडानी का कोई सम्बन्ध नहीं’
तथ्य: गौतम अडानी ना राम मंदिर कार्यक्रम में शामिल हुए और ना ही कोई फोटो खिंचाई बल्कि गौतम अडानी की राहुल गाँधी के जीजा समेत कई कांग्रेस नेताओं के साथ फोटो मौजूद हैं pic.twitter.com/QXqR7IVJKt
— The Pamphlet (@Pamphlet_in) May 1, 2024
ಸುಳ್ಳು 9: ಮೋದಿ ಸರ್ಕಾರ ಕೈಗಾರಿಕೋದ್ಯಮಿಗಳ 16 ಲಕ್ಷ ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಿದೆ.
ಸತ್ಯ: 2019ರ ಲೋಕಸಭೆ ಚುನಾವಣೆಯಿಂದಲೂ ಸರ್ಕಾರ ಅಂತಹ ಯಾವುದೇ ಸಾಲವನ್ನು ಮನ್ನಾ ಮಾಡದಿದ್ದರೂ ರಾಹುಲ್ ಗಾಂಧಿ ಈ ಸುಳ್ಳನ್ನು ಹೇಳುತ್ತಿದ್ದಾರೆ, ಈ ವಿಡಿಯೋ ನೋಡಿ.
झूठ नंबर 9: मोदी सरकार ने उद्योगपतियों का 16 लाख करोड़ रुपये कर्ज माफ़ कर दिया है
तथ्य: 2019 लोकसभा चुनाव से राहुल गाँधी यही झूठ बोल रहे हैं जबकि सरकार ने ऐसा कोई कर्ज माफ़ नहीं किया है, ये वीडियो देखिए pic.twitter.com/lCr8SnUpye
— The Pamphlet (@Pamphlet_in) May 1, 2024
ಸುಳ್ಳು 10: ‘ಕಾಂಗ್ರೆಸ್ ಸಂವಿಧಾನದಲ್ಲಿ ನೀಡಿರುವ ಹಕ್ಕುಗಳನ್ನು ಸಾರ್ವಜನಿಕರಿಗೆ ಕೊಂಡೊಯ್ದಿದೆ’
ಸತ್ಯ: ಕಾಂಗ್ರೆಸ್ ಭಾರತದಾದ್ಯಂತ ಸಂವಿಧಾನವನ್ನು ಜಾರಿಗೆ ತರಲಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:15 pm, Wed, 1 May 24