Prajwal Revanna Case: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಮೋದಿಗೆ ಮೊದಲೇ ಗೊತ್ತಿತ್ತು; ಕಾಂಗ್ರೆಸ್ ಆರೋಪ

ಜನತಾ ದಳ (ಜಾತ್ಯತೀತ) ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಮೊದಲೇ ತಿಳಿದಿತ್ತು ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಟೆ ಬುಧವಾರ ಪ್ರಧಾನಿ ಮೋದಿ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ.

Prajwal Revanna Case: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಮೋದಿಗೆ ಮೊದಲೇ ಗೊತ್ತಿತ್ತು; ಕಾಂಗ್ರೆಸ್ ಆರೋಪ
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ
Follow us
ಸುಷ್ಮಾ ಚಕ್ರೆ
|

Updated on: May 01, 2024 | 8:15 PM

ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣನ (Prajwal Revanna) ಅಶ್ಲೀಲ ವಿಡಿಯೋ ಪ್ರಕರಣ ಇದೀಗ ದೇಶಾದ್ಯಂತ ಸುದ್ದಿಯಾಗುತ್ತಿದೆ. ಜೆಡಿಎಸ್​ (JDS) ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಈ ಬಾರಿ ಹಾಸನದ ಎನ್​ಡಿಎ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣನವರನ್ನು ಕಣಕ್ಕಿಳಿಸಲಾಗಿದೆ. ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಮೊದಲೇ ಗೊತ್ತಿದ್ದರೂ ಅವರ ಪರ ಪ್ರಚಾರ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಟೆ ಮಾತನಾಡಿದ್ದು, ಪ್ರಧಾನಿ ಮೋದಿ ಹಾಗೂ ಪ್ರಜ್ವಲ್ ರೇವಣ್ಣ ಜೊತೆಯಾಗಿರುವ ಫೋಟೋಗಳನ್ನು ತೋರಿಸಿದರು. ಪ್ರಜ್ವಲ್ ಅವರನ್ನು ಮೋದಿ ಮೆಚ್ಚಿದ್ದಲ್ಲದೆ, ಏಪ್ರಿಲ್ 14ರಂದು ಅವರಿಗೆ ಮತ ಕೇಳಿದರು. ಪ್ರಜ್ವಲ್ ಮಾಡಿರುವ ಕೆಲಸ ಸಂಪೂರ್ಣವಾಗಿ ಆಘಾತಕಾರಿಯಾಗಿದೆ, ನಮಗೆ ನಂಬಲು ಆಗುತ್ತಿಲ್ಲ. ಒಂದಲ್ಲ, ಎರಡಲ್ಲ ಸುಮಾರು 3,000 ವೀಡಿಯೋಗಳು ಮತ್ತು ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಈ ದೇಶದ ಇತಿಹಾಸದಲ್ಲಿಯೇ ದೊಡ್ಡ ಅತ್ಯಾಚಾರವಲ್ಲದೆ ಮತ್ತೇನು? ಎಂದು ಪ್ರಶ್ನಿಸಿದ್ದಾರೆ.

“ಏಪ್ರಿಲ್ 14ರಂದು ಮೋದಿಗೆ ಈ ವ್ಯಕ್ತಿ ಮಾಡುತ್ತಿರುವ ಈ ಘೋರ ಅಪರಾಧಗಳು ತಿಳಿದಿರಲಿಲ್ಲವೇ? ಪ್ರಜ್ವಲ್ ರೇವಣ್ಣನ ಬಗ್ಗೆ ಮತ್ತು ಅವರ ಅಪರಾಧಗಳ ಬಗ್ಗೆ ಮೋದಿಗೆ ಎಲ್ಲವೂ ತಿಳಿದಿತ್ತು” ಎಂದು ಸುಪ್ರಿಯಾ ಹೇಳಿದ್ದಾರೆ. 2023ರ ಡಿಸೆಂಬರ್‌ನಲ್ಲಿ ಅವರದೇ ಪಕ್ಷದ ನಾಯಕ ದೇವರಾಜೇಗೌಡ ಪ್ರಧಾನಿ ಮೋದಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್‌: ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯ, ಪತ್ರದಲ್ಲೇನಿದೆ?

ಬಿಜೆಪಿಯ ನಾಯಕ ದೇವರಾಜೇಗೌಡ ಅವರು 2023ರ ಡಿಸೆಂಬರ್‌ನಲ್ಲಿ ಅಮಿತ್ ಶಾ, ಜೆಪಿ ನಡ್ಡಾ (ಬಿಜೆಪಿ ಅಧ್ಯಕ್ಷ), ನರೇಂದ್ರ ಮೋದಿ ಅವರಿಗೆ ಪ್ರಜ್ವಲ್ ರೇವಣ್ಣನ ಬಗ್ಗೆ ತಿಳಿಸಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಡಿ ಎಂದು ಮೇಲ್‌ಗಳನ್ನು ಬರೆದು ಪತ್ರಗಳನ್ನು ಬರೆದಿದ್ದಾರೆ. ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಈ ಪ್ರಕರಣದ ಬಗ್ಗೆ ಕ್ರಮಗಳನ್ನು ತೆಗೆದುಕೊಂಡಿದೆ. ಕರ್ನಾಟಕ ಮಹಿಳಾ ಆಯೋಗವು ಈ ವಿಷಯದ ಬಗ್ಗೆ ಸ್ವಯಂಪ್ರೇರಿತವಾಗಿ ತಿಳಿದುಕೊಂಡು ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದಿದೆ. ಈ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳಲು ಎಸ್ಐಟಿ ರಚಿಸಲಾಗಿದೆ. ಪ್ರಜ್ವಲ್ ಜೊತೆಗೆ ಅವರ ತಂದೆ ಎಚ್​ಡಿ ರೇವಣ್ಣನವರನ್ನು ಕೂಡ ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿದೆ ಮತ್ತು ಸಮನ್ಸ್ ನೀಡಲಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಫೆಬ್ರವರಿ-ಮಾರ್ಚ್‌ನಲ್ಲಿ ಮೈತ್ರಿ ಮಾತುಕತೆಗಳ ನಡುವೆ ಮೈಸೂರಿಗೆ ಭೇಟಿ ನೀಡಿದಾಗ ಪ್ರಜ್ವಲ್ ಅವರ ಅಪರಾಧಗಳ ಬಗ್ಗೆ ಷಾ ಅವರನ್ನು ಹಲವಾರು ಬಿಜೆಪಿ ನಾಯಕರು ಎಚ್ಚರಿಸಿದ್ದರು. ಫೆಬ್ರವರಿ-ಮಾರ್ಚ್‌ನಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾತುಕತೆ ನಡೆಯುತ್ತಿದ್ದಾಗ ಮತ್ತು ಅಮಿತ್ ಶಾ ಮೈಸೂರಿಗೆ ಬಂದಾಗ, ಹಲವಾರು ಬಿಜೆಪಿ ಕಾರ್ಯಕರ್ತರು ಪ್ರಜ್ವಲ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡದಂತೆ ಎಚ್ಚರಿಕೆ ನೀಡಿದ್ದರು ಎಂದು ಆರೋಪಿಸಿದ್ದಾರೆ.

ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ, ಎಲ್ಲರೂ ಎಲ್ಲಿದ್ದಾರೆ ಎಂಬುದು ಅವರಿಗೆ ಯಾವಾಗಲೂ ತಿಳಿದಿರುತ್ತದೆ. ಪ್ರಿಯಾಂಕಾ ಗಾಂಧಿ ಎರಡು ದಿನ ತಮ್ಮ ಮಗಳನ್ನು ಭೇಟಿಯಾಗಲು ಹೋದರೆ ಆ ವಿಷಯವೂ ಅಮಿತ್ ಶಾಗೆ ಗೊತ್ತಾಗುತ್ತದೆ. ಆದರೆ, ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಓಡಿಹೋಗುವ ವಿಚಾರ ಮಾತ್ರ ಅವರಿಗೆ ಗೊತ್ತಾಗಲಿಲ್ಲವೇ? ಎಸ್‌ಐಟಿ ರಚನೆಯಾದ ಕೆಲವೇ ಗಂಟೆಗಳಲ್ಲಿ ಪ್ರಜ್ವಲ್ ರೇವಣ್ಣ ದೇಶದಿಂದ ಓಡಿಹೋಗಿದ್ದಾರೆ. ಆತ ತನ್ನ ಸ್ವಂತ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾನೋ ಅಥವಾ ಇಲ್ಲವೋ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಎಸ್‌ಐಟಿ ನೋಟಿಸ್​: ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ಪ್ರಜ್ವಲ್‌, ಎಷ್ಟು ದಿನ?

ಪ್ರಜ್ವಲ್ ರೇವಣ್ಣನ ವಿರುದ್ಧ ಆರೋಪಗಳು ಬಹಿರಂಗವಾಗುತ್ತಿದ್ದಂತೆ ಅವರು ಏಪ್ರಿಲ್ 27ರಂದು ಜರ್ಮನಿಗೆ ತೆರಳಿದರು. ದೇಶದಿಂದ ಪಲಾಯನ ಮಾಡಲು ಸಹಾಯ ಮಾಡಿದ್ದಕ್ಕಾಗಿ ಪ್ರತಿಪಕ್ಷಗಳು ನಿರಂತರವಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಗುರಿಯಾಗಿಸಿಕೊಂಡಿವೆ. ಪ್ರಜ್ವಲ್ ಮೇ 3ರ ಮಧ್ಯರಾತ್ರಿ ಭಾರತಕ್ಕೆ ಮರಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. 33 ವರ್ಷದ ಪ್ರಜ್ವಲ್ ಜೆಡಿಎಸ್ ಮುಖ್ಯಸ್ಥ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ. ಇದರ ಜೊತೆಗೆ ಆತನ ತಂದೆ ಹಾಲಿ ಶಾಸಕ ಹೆಚ್ ಡಿ ರೇವಣ್ಣ ಅವರ ಮೇಲೆ ಕೂಡ ಅವರ ಮನೆಯ ಕೆಲಸಗಾರರೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜೆಡಿಎಸ್‌ ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿತ್ತು.

ಪ್ರಜ್ವಲ್ ರೇವಣ್ಣ ಹಾಸನದ ಎನ್​ಡಿಎ ಅಭ್ಯರ್ಥಿಯಾಗಿದ್ದು, ಇಲ್ಲಿ ಈಗಾಗಲೇ ಚುನಾವಣೆ ನಡೆದಿದೆ. ಪ್ರಜ್ವಲ್ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಲಾದ ಸುಮಾರು 3,000 ಸ್ಪಷ್ಟ ವೀಡಿಯೊ ತುಣುಕುಗಳು ಬಿಡುಗಡೆಯಾಗಿ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್