AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಹುಲ್ ಗಾಂಧಿ ಪಾದಯತ್ರೆ: ಬಲವರ್ಧನೆಗೆ ಕಾಂಗ್ರೆಸ್ ಯತ್ನ

ರಾಷ್ಟ್ರೀಯ ಮಟ್ಟದಲ್ಲಿ ಹೀನಾಯ ಸ್ಥಿತಿ ತಲುಪುತ್ತಿರುವ ಪಕ್ಷವನ್ನು ಪುನರುಜ್ಜೀವನಗೊಳಿಸಲು ಕಾಂಗ್ರೆಸ್ ನಾಯಕರು ಹಲವು ಯೋಜನೆಗಳನ್ನು ರೂಪಿಸಿದ್ದಾರೆ.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಹುಲ್ ಗಾಂಧಿ ಪಾದಯತ್ರೆ: ಬಲವರ್ಧನೆಗೆ ಕಾಂಗ್ರೆಸ್ ಯತ್ನ
ರಾಹುಲ್ ಗಾಂಧಿ (ಫೋಟೋ ಕೃಪೆ-ಪಿಟಿಐ)
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:May 15, 2022 | 7:44 AM

Share

ದೆಹಲಿ: ದೇಶದಲ್ಲಿ ಕಾಂಗ್ರೆಸ್ (Congress Party) ದಿನದಿಂದ ದಿನಕ್ಕೆ ಜನಬೆಂಬಲ ಕಳೆದುಕೊಳ್ಳುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಹೀನಾಯ ಸ್ಥಿತಿ ತಲುಪುತ್ತಿರುವ ಪಕ್ಷವನ್ನು ಪುನರುಜ್ಜೀವನಗೊಳಿಸಲು ಕಾಂಗ್ರೆಸ್ ನಾಯಕರು ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದ ಒಂದೊಂದೇ ರಾಜ್ಯವನ್ನು ಕಾಂಗ್ರೆಸ್ ಕಳೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ಹಿರಿಯ ನಾಯಕರು ಹೈಕಮಾಂಡ್ ನಡೆ ಖಂಡಿಸಿ ಪಕ್ಷವನ್ನು ಒಬ್ಬೊಬ್ಬರಾಗಿ ತೊರೆಯುತ್ತಿದ್ದಾರೆ. ಈ ಸಮಸ್ಯೆಗಳ ನಡುವೆ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂದಿನ ಒಂದು ವರ್ಷ ಪೂರ್ತಿ ಪಾದಯಾತ್ರೆ ಮಾಡಲಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಹುಲ್ ಗಾಂಧಿ ಪಾದಯಾತ್ರೆ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ.

ಕಾಂಗ್ರೆಸ್ ಸಂಸದೀಯ ಮಂಡಳಿ ಬದಲಾವಣೆ

ಕಾಂಗ್ರೆಸ್​ ಪಕ್ಷದ ಆಂತರಿಕ ವ್ಯವಹಾರಗಳನ್ನು ನಿರ್ವಹಿಸುವ ಪ್ರಭಾವಶಾಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ (Congress working committee – CWC) ಅಗತ್ಯ ಬದಲಾವಣೆಗಳು ಆಗಬೇಕು. ಪಕ್ಷದ ಸಂಸದೀಯ ಮಂಡಳಿಯನ್ನು ಮತ್ತೆ ಚಾಲ್ತಿಗೆ ತರಬೇಕು ಎನ್ನುವ ಕಾಂಗ್ರೆಸ್​ನ ಜಿ23 ಬಂಡುಕೋರ ಗುಂಪಿನ ಬೇಡಿಕೆಗೆ ಕಾಂಗ್ರೆಸ್ ನಾಯಕರು ಮಣಿದಿದ್ದಾರೆ ಎನ್ನಲಾಗಿದೆ. ರಾಜಸ್ಥಾನದ ಉದಯ್​ಪುರದಲ್ಲಿ ನಡೆದ ಚಿಂತನ ಶಿಬಿರದಲ್ಲಿ ಈ ಕುರಿತು ಸುದೀರ್ಘ ಚರ್ಚೆಗಳು ನಡೆದವು. ಈ ವೇಳೆ ವ್ಯಕ್ತವಾದ ವಿಚಾರಗಳನ್ನು ಆಧರಿಸಿ ಕಾಂಗ್ರೆಸ್​ನಲ್ಲಿ ಸುಧಾರಣೆ ಪ್ರಯತ್ನಗಳು ಅರಂಭವಾಗಲಿದೆ ಎಂದು ಹೇಳಲಾಗಿದೆ.

ಕಾಂಗ್ರೆಸ್​ನ ಕಾರ್ಯಕಾರಿ ಸಮಿತಿಯು ತೆಗೆದುಕೊಳ್ಳುವ ತೀರ್ಮಾನಗಳನ್ನು ಅನುಷ್ಠಾನಗೊಳಿಸುವ ಕೆಲಸವನ್ನು ಸಂಸದೀಯ ಮಂಡಳಿ ಮಾಡುತ್ತದೆ. ಸುಮಾರು 10 ಜನರಿರುವ ಈ ಮಂಡಳಿಯ ಮೂಲಕ ಸಾಮೂಹಿಕ ನಾಯಕತ್ವಕ್ಕೆ ಹೊಸ ಅರ್ಥ ಬರುತ್ತದೆ ಎಂದು ಜಿ23 ಗುಂಪಿನ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಈ ಬೇಡಿಕೆಗಳಿಗೆ ಆಕ್ಷೇಪಗಳೂ ಕೇಳಿಬಂದಿವೆ. ‘ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಮತ್ತು ಸಮಗ್ರ ಚರ್ಚೆಯ ನಂತರ ತೀರ್ಮಾನ ತೆಗೆದುಕೊಳ್ಳುವ ವ್ಯವಸ್ಥೆ ರೂಪುಗೊಂಡಿದೆ. ಸಂಸದೀಯ ಮಂಡಳಿಯನ್ನು ಮತ್ತೆ ಚಾಲ್ತಿಗೆ ತರುವುದರಿಂದ ಕೆಲ ಜಿ-23 ನಾಯಕರಿಗೆ ಪುನರ್ವಸತಿ ಸಿಗಬಹುದೇ ಹೊರತು ಬೇರೆ ಯಾವುದೇ ಸಾಧನೆಯಾಗುವುದಿಲ್ಲ’ ಎಂದು ಇತರ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

1991ರಲ್ಲಿ ಅಂದಿನ ಪ್ರಧಾನಿ ಮತ್ತು ಕಾಂಗ್ರೆಸ್ ನಾಯಕ ಪಿ.ವಿ.ನರಸಿಂಹರಾವ್ ಕಾಂಗ್ರೆಸ್ ಸಂಸದೀಯ ಮಂಡಳಿಯನ್ನು ರದ್ದುಪಡಿಸಿದ್ದರು.

ಇನ್ನಷ್ಟು ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:35 am, Sun, 15 May 22

‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು