Karnataka Andhra Tamil Nadu Rains Live: ಆಂಧ್ರಪ್ರದೇಶದಲ್ಲಿ ಕುಸಿದ ಕಟ್ಟಡ; ನಾಲ್ವರು ಬಲಿ
Rains In South India Live Updates: ಆಂಧ್ರಪ್ರದೇಶದಲ್ಲಿ ಶುಕ್ರವಾರ ಸುರಿದ ಭಾರೀ ಮಳೆಗೆ ಸುಮಾರು 17 ಜನ ಅಸುನೀಗಿದ್ದಾರೆ. ಅಲ್ಲದೇ ಸುಮಾರು 100ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ವಾಹನ ಸವಾರರು ರಸ್ತೆಯಲ್ಲಿ ಪರದಾಡುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಶುಕ್ರವಾರ ಸುರಿದ ಭಾರೀ ಮಳೆಗೆ ಸುಮಾರು 17 ಜನ ಅಸುನೀಗಿದ್ದಾರೆ. ಅಲ್ಲದೇ ಸುಮಾರು 100ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಎನ್ಡಿಆರ್ಎಫ್ ತಂಡ ತನ್ನ ಕಾರ್ಯನಿರ್ವಹಿಸುತ್ತಿದೆ. ಇನ್ನು ಕೇರಳದಲ್ಲೂ ವರುಣಾರ್ಭಟ ಜೋರಾಗಿದೆ. ಪಂಪಾ ನದಿ ಸೇರಿ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಈ ಹಿನ್ನೆಲೆ ಶಬರಿಮಲೆಯ ಪ್ರಸಿದ್ಧ ಅಯ್ಯಪ್ಪ ದೇವಾಲಯಕ್ಕೆ ಇಂದಿನ ಯಾತ್ರೆ ಸ್ಥಗಿವಾಗಿದೆ.
LIVE NEWS & UPDATES
-
ಆಂಧ್ರಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ವೈಮಾನಿಕ ಸಮೀಕ್ಷೆ
ಆಂಧ್ರಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ಮುಖ್ಯಮಂತ್ರಿ ಜಗನ್ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ರಾಯಲ್ ಸೀಮಾ ಜಿಲ್ಲೆಯಲ್ಲಿ ಜಗನ್ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಸಿಎಂ ಜಗನ್ ಮೋಹನ್ ರೆಡ್ಡಿ ಜಲಾವೃತ ಪ್ರದೇಶವನ್ನು ವೀಕ್ಷಿಸಿದ್ದಾರೆ.
#WATCH | Andhra Pradesh CM Jagan Mohan Reddy conducted an aerial survey of flood-affected areas in Chittoor and Kadapa districts. pic.twitter.com/gu5vdVYfM5
— ANI (@ANI) November 20, 2021
-
ಉತ್ತರ ಕರ್ನಾಟಕದ ಹಲವೆಡೆ ಭಾರಿ ಮಳೆ ಸಾಧ್ಯತೆ
ಮುಂದಿನ 12 ರಿಂದ 14 ಗಂಟೆಯಲ್ಲಿ ಉತ್ತರ ಕರ್ನಾಟಕದ ಹಲವೆಡೆ ಭಾರಿ ಮಳೆ ಸಾಧ್ಯತೆಯಿದ್ದು, ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಬಗ್ಗೆ ಹವಾಮಾನ ತಜ್ಞ ಡಾ.ಆರ್.ಹೆಚ್.ಪಾಟೀಲ್ ಮಾಹಿತಿ ನೀಡಿದ್ದಾರೆ.
-
ಕೊಪ್ಪಳದಲ್ಲಿ ಮತ್ತೆ ಮಳೆ ಆರಂಭ
ಕೊಪ್ಪಳದಲ್ಲಿ ಮತ್ತೆ ಮಳೆ ಆರಂಭವಾಗಿದೆ. ಬೆಳಿಗ್ಗೆಯಿಂದ ಬಿಡುವು ನೀಡಿದ್ದ ಮಳೆ ಇದೀಗ ಮತ್ತೆ ಶುರುವಾಗಿದೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಚೆನ್ನೈನಲ್ಲಿ ಮುಂದಿನ 48 ಗಂಟೆ ಕಾಲ ಮಳೆ ಮುಂದುವರಿಕೆ ಸಾಧ್ಯತೆ
ಹಿಂಗಾರು ಮಾರುತಗಳು ಇನ್ನೂ ಎರಡು ವಾರ ಸಕ್ರಿಯವಾಗಲಿದೆ. ಚೆನ್ನೈನಲ್ಲಿ ಮುಂದಿನ 48 ಗಂಟೆ ಕಾಲ ಮಳೆ ಮುಂದುವರಿಯುವ ಸಾಧ್ಯತೆಯಿದೆ ಅಂತ ತಮಿಳುನಾಡು ರಾಜ್ಯದ ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. 48 ಗಂಟೆ ಬಳಿಕ ಮಳೆಯ ತೀವ್ರತೆ ಕಡಿಮೆ ಆಗುವ ಸಾಧ್ಯತೆಯಿದೆ.
ಕುಸಿದು ಬಿದ್ದ ಹತ್ತು ಗುಡಿಸಲು ಮನೆಯ ಗೋಡೆಗಳು
ರಾಮನಗರ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಮಳೆಯಿಂದಾಗಿ ಹತ್ತು ಗುಡಿಸಲು ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದ ವಿನಾಯಕ ನಗರದಲ್ಲಿ ಈ ಘಟನೆ ನಡೆದಿದೆ. ಗೋಡೆ ಕುಸಿಯುವುದನ್ನ ಕಂಡ ಮನೆಯವರು ಮಧ್ಯರಾತ್ರಿ ಮನೆಯಿಂದ ಏಕಾಏಕಿ ಹೊರಬಂದಿದ್ದಾರೆ. ಮನೆಯ ಪರಿಸ್ಥಿತಿ ಕಂಡು ಮಹಿಳೆ ಕಣ್ಣೀರಿಟ್ಟಿದ್ದಾರೆ. ಇದುವರೆಗೂ ಯಾರು ಬಂದು ನಮ್ಮ ಪರಿಸ್ಥಿತಿ ಕೇಳಿಲ್ಲ ಅಂತ ಕಣ್ಣೀರು ಹಾಕಿದ್ಧಾರೆ.
ಸತತ ಮಳೆ ಹಿನ್ನೆಲೆ ಬರದನಾಡಲ್ಲಿ ಅಂತರ್ಜಲ ಹೆಚ್ಚಳ
ಸತತ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೋಗೆಹಳ್ಳಿ ಗ್ರಾಮದ ಬೋರ್ಗಳಲ್ಲಿ ನೀರು ಉಕ್ಕುತ್ತಿದೆ. ಗ್ರಾಮದ ಹತ್ತಕ್ಕೂ ಹೆಚ್ಚು ಬೋರ್ಗಳಲ್ಲಿ ನೀರು ಉಕ್ಕುತ್ತಿದೆ. ಇದೇ ಮೊದಲ ಬಾರಿಗೆ ಬೋರ್ಗಳಲ್ಲಿ ಯಥೇಚ್ಛವಾಗಿ ನೀರು ಹರಿಯುತ್ತಿದೆ.
ಭಾರೀ ಮಳೆಗೆ ಚಿತ್ರದುರ್ಗದಲ್ಲಿ ಕುಸಿದ ಹಳೆ ಕಟ್ಟಡಗಳು
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ ಜಿಲ್ಲೆಯ ವಿವಿದೆಡೆ ಹಳೆ ಕಟ್ಟಡಗಳು ಕುಸಿದಿವೆ.ಚೇಳಗುಡ್ಡ ಬಡಾವಣೆಯಲ್ಲಿ ಟೈಲರ್ ರಂಗನಾಥ ಮನೆಗೆ ಹಾನಿಯಾಗಿದೆ. ರಂಗನಾಥ ಮನೆಯ ಗೋಡೆ ಮತ್ತು ಮೇಲ್ಛಾವಣಿ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಮನೆ ಹಾನಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಮಳೆಯಿಂದ ಕೆರೆ ಕಟ್ಟೆಗಳು ಭರ್ತಿ
ಕೋಲಾರ ಜಿಲ್ಲೆಯಲ್ಲಿ ಮಳೆಯಿಂದ ಕೆರೆ ಕಟ್ಟೆಗಳು ಭರ್ತಿಯಾಗಿವೆ. ಬೇತಮಂಗಲ ಕೆರೆಯ 19 ಗೇಟ್ನಿಂದ ನೀರು ಹೊರಕ್ಕೆ ಬಿಡಲಾಗಿದೆ. ಕೆರೆಗೆ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕೆರೆಯಿಂದ ನೀರು ಹೊರಕ್ಕೆ ಬಿಡಲಾಗಿದೆ.
ಮಳೆಯ ಅಬ್ಬರಕ್ಕೆ ಕೋಲಾರದ ಆರ್.ಟಿ.ಓ ಕಚೇರಿ ಜಲಾವೃತ
ಮಳೆಯ ಅಬ್ಬರಕ್ಕೆ ಕೋಲಾರದ ಆರ್.ಟಿ.ಓ ಕಚೇರಿ ಜಲಾವೃತವಾಗಿದೆ. ಕಚೇರಿ ಆವರಣ ಸಂಪೂರ್ಣ ಜಲಾವೃತವಾಗಿದ್ದು, ನೀರಿನಲ್ಲಿ ಮುಳುಗಿದ ಕಚೇರಿ ಆವರಣದಲ್ಲೇ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಕಚೇರಿಗೆ ತೆರಳಲಾಗದೆ ಸಾರ್ವಜನಿಕರು ಪರದಾಡುತ್ತಿದ್ದಾರೆ.
ನಿರಂತರ ಮಳೆಗೆ ನೂರಾರು ಎಕರೆ ಜಮೀನು ಜಲಾವೃತ
ಚಿತ್ರದುರ್ಗ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಜಿಲ್ಲೆಯ ವಿವಿಧೆಡೆ ನೂರಾರು ಎಕರೆ ಜಮೀನು ಜಲಾವೃತವಾಗಿದೆ. ಮೆಕ್ಕೆಜೋಳ, ಅವರೆ, ಕಡಲೆ, ಅಲಸಂದೆ ನೀರುಪಾಲಾಗಿವೆ.
ನಲ್ಲೂರು ಗ್ರಾಮದ ಹಳ್ಳದಲ್ಲಿ ಕೊಚ್ಚಿ ಹೋದ ವೃದ್ಧ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಹಳ್ಳದಲ್ಲಿ ವೃದ್ಧ ಕೊಚ್ಚಿ ಹೋಗಿದ್ದಾರೆ. 60 ವರ್ಷದ ವೃದ್ಧನ ಶವವನ್ನು ಸ್ಥಳೀಯರು ಹೊರತೆಗೆದಿದ್ದಾರೆ.
ದಾವಣಗೆರೆ ವಡ್ನಾಳ್ ಕೆರೆಯಲ್ಲಿ ಸಿಲುಕಿದ ಓಮಿನಿ
ದಾವಣಗೆರೆ ವಡ್ನಾಳ್ ಕೆರೆಯಲ್ಲಿ ಓಮಿನಿ ಸಿಲುಕಿದ್ದು, ಸವಾರರು ಪರದಾಡುತ್ತಿದ್ದಾರೆ. ಓಮಿನಿಯಲ್ಲಿದ್ದವರು ಆಪಾಯದಿಂದ ಪಾರಾಗಿದ್ದಾರೆ. ಸದ್ಯಗ್ರಾಮಸ್ಥರ ಸಹಕಾರದಿಂದ ಓಮಿನಿ ಹೊರಕ್ಕೆ ತೆಗೆಯಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ 360 ಕೋಟಿ ರೂಪಾಯಿಯಷ್ಟು ಹಾನಿ ಆಗಿದೆ; ಜಿಲ್ಲಾಧಿಕಾರಿ ಆರ್ ಲತಾ ಮಾಹಿತಿ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಹಾ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಸುಮಾರು 360 ಕೋಟಿ ರೂಪಾಯಿಯಷ್ಟು ಹಾನಿ ಆಗಿದೆ ಅಂತ ಟಿವಿ9ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ಮಾಹಿತಿ ನೀಡಿದ್ಧಾರೆ. ಜಿಲ್ಲೆಯಲ್ಲಿ 1253 ಕೆರೆಗಳು ತುಂಬಿವೆ. 24 ಸೇತುವೆಗಳ ಮೇಲೆ ನೀರು ನೀರು ಹರಿಯುತ್ತಿದೆ. ಹರಿಯುವ ನೀರಿನಲ್ಲಿ ಯಾರೂ ಸಂಚಾರ ಮಾಡಬೇಡಿ. ಗೌರಿಬಿದನೂರಿನಲ್ಲಿ 1015 ಜನರನ್ನು ಸ್ಥಳಾಂತರಿಸಿದ್ದೇವೆ. ಉತ್ತರ ಪಿನಾಕಿನಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನಿನ್ನೆ ಮೇಳ್ಯಾ ಕೆರೆ ಇಂದು ಕಲ್ಲೊಡಿ ಕೆರೆ ಏರಿ ಒಡೆದಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 48 ಮನೆ ಸಂಪೂರ್ಣ ಕುಸಿದಿವೆ. 500ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಆಗಿದೆ. 33,000 ಹೆಕ್ಟೇರ್ನಷ್ಟು ರಾಗಿ ಬೆಳೆ ಹಾಳಾಗಿದೆ. 30,000 ಹೆಕ್ಟೇರ್ನಷ್ಟು ಜೋಳದ ಬೆಳೆ ಹಾನಿಯಾಗಿದೆ. 5000 ಹೆಕ್ಟೇರ್ನಲ್ಲಿದ್ದ ಹೂ, ಹಣ್ಣು ತರಕಾರಿ ಹಾಳಾಗಿದೆ ಅಂತ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದ್ದಾರೆ.
ಮೊಳಕೆಯೊಡೆದ ರಾಗಿ ಪೈರು ಕೃಷಿ ಇಲಾಖೆಗೆ ತಂದ ರೈತ
ಮಳೆಯಿಂದ ರಾಗಿ ಮೊಳಕೆಯೊಡೆದು ಹಾಳಾದ ಹಿನ್ನೆಲೆ ಮೊಳಕೆಯೊಡೆದ ರಾಗಿ ಪೈರನ್ನು ಕೃಷಿ ಇಲಾಖೆಗೆ ರೈತ ತಂದಿದ್ದಾರೆ. ಬೆಳೆ ನಷ್ಟ ಸರ್ವೆಗೆ ಆಗಮಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಸಹಾಯಕ ಕೃಷಿ ಅಧಿಕಾರಿಗಳ ವಿರುದ್ಧ ರೈತ ನರಸಿಂಹಯ್ಯ ಎಂಬುವವರು ಆಕ್ರೋಶ ಹೊರಹಾಕಿದ್ದಾರೆ.
2,600 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಹೂ ಬೆಳೆ ನಾಶ
ನಿರಂತರ ಹಾಗೂ ಧಾರಾಕಾರವಾಗಿ ಸುರಿದ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಹೂ ಬೆಳೆಗಾರರು ತತ್ತರಿಸಿದ್ದು, ಕಟಾವಿಗೆ ಬಂದಿದ್ದ ಹೂಗಳು ಹಾಳಾಗಿವೆ. ಜಿಲ್ಲೆಯಾದ್ಯಂತ 2,600 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಹೂ ನೀರಿನಲ್ಲಿ ಕೊಳೆತು ಹೋಗಿವೆ.
ಎರಡು ದಿನಗಳಿಂದ ಸುರಿದ ಮಳೆಗೆ ದೇವನಹಳ್ಳಿಯಲ್ಲಿ ಅಂಡರ್ ಪಾಸ್ ಜಲಾವೃತ
ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ದೇವನಹಳ್ಳಿ ತಾಲೂಕಿನ ಇರಿಗೇನಹಳ್ಳಿ ಗ್ರಾಮದ ಅಂಡರ್ ಪಾಸ್ ಜಲಾವೃತವಾಗಿದೆ. ನೀರಿನಿಂದ ಸಂಪೂರ್ಣ ತುಂಬಿದ ಅಂಡರ್ ಪಾಸ್ನಿಂದ ಗ್ರಾಮಸ್ಥರು ಪರದಾಟ ಪಡುತ್ತಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದ ಕೆರೆಯಿಂದ ಅಂಡರ್ ಪಾಸ್ಗೆ ನೀರು ಬರುತ್ತಿದೆ. ಗ್ರಾಮಸ್ಥರು ಬೈಕ್ಗಳನ್ನ ಎರಡು ದಿನಗಳಿಂದ ಗ್ರಾಮದ ಹೊರ ವಲಯದಲ್ಲಿ ನಿಲ್ಲಿಸುತ್ತಿದ್ದಾರೆ.
ಚೆನ್ನೈ ಮಹಾನಗರ ಪಾಲಿಕೆಯಲ್ಲಿ ವಾರ್ ರೂಂ ಸ್ಥಾಪನೆ
ಚೆನ್ನೈ ಮಹಾನಗರ ಪಾಲಿಕೆಯಲ್ಲಿ ವಾರ್ ರೂಂ ಸ್ಥಾಪಿಸಲಾಗಿದ್ದು, ಚೆನ್ನೈನಲ್ಲಿ ಇಂದು ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಪಾಲಿಕೆ ಅಧಿಕಾರಿಗಳು ರೆಡ್ ಅಲರ್ಟ್‌ನ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
Tamil Nadu: War room set up at Chennai Corporation where the corporation officials are monitoring red alert on heavy rain announced for today in Chennai.#ChennaiRains pic.twitter.com/M87IPWUEOd
— ANI (@ANI) November 18, 2021
ನೋಡ ನೋಡುತಿದ್ದಂತೆ ಬಳ್ಳಾರಿಯಲ್ಲಿ ನದಿಗೆ ಬಿದ್ದ ಲಾರಿ
ಬಳ್ಳಾರಿಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ನೋಡ ನೋಡುತಿದ್ದಂತೆ ಲಾರಿ ನದಿಗೆ ಬಿದ್ದಿದೆ. ಲಾರಿಯಲ್ಲಿ ಇದ್ದ ನೂರಾರು ಸಕ್ಕರೆ ಚೀಲ ನದಿ ಪಾಲಾಗಿದೆ. ರಾರಾವಿ ಬ್ರಿಡ್ಜ್ ಮೇಲೆ ನೀರು ಹರಿಯುತ್ತಿದೆ. ಬೆಳಗಿನ ಜಾವ ನೀರಿನ ರಭಸಕ್ಕೆ ಬ್ರಿಡ್ಜ್ ಮೇಲಿಂದ ಲಾರಿ ನದಿಗೆ ಬಿದ್ದಿದೆ.
ಮಳೆ ಕಡಿಮೆಯಾಗಲು ಮಂಡ್ಯ ರಕ್ಷಣಾ ವೇದಿಕೆಯಿಂದ ಪೂಜೆ
ಮಳೆ ಕಡಿಮೆಯಾಗಲು ಮಂಡ್ಯ ರಕ್ಷಣಾ ವೇದಿಕೆಯಿಂದ ಪೂಜೆ ನಡೆದಿದೆ. ಮೂಡಲಬಾಗಿಲು ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಸಮಿತಿಯ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಪೂಜೆ ಸಲ್ಲಿಕೆಯಾಗಿದೆ.
ಸಿಎಂ ಸಿನಿಮಾ ಕಾರ್ಯಕ್ರಮಗಳ ಭಾಗಿ ವಿರುದ್ಧ ಜಯಚಂದ್ರ ಆಕ್ರೋಶ
ರಾಜ್ಯದಲ್ಲಿ ಮಳೆ ಇದ್ದರೂ ಸಿಎಂ ಪ್ರವಾಸ ಮಾಡುತ್ತಿಲ್ಲಅಂತ ಮಾಜಿ ಸಚಿವ ಟಿ ಬಿ ಜಯಚಂದ್ರ ಹೇಳಿಕೆ ನೀಡಿದ್ದಾರೆ. ಮಳೆಯಿಂದ ಬೆಳೆ ನಾಶವಾಗಿದೆ. ಮಳೆಯಿಂದಾಗಿ ಜನರು ಆಹಾರ ಪದಾರ್ಥ ಕೆಳೆದುಕೊಳ್ಳುತ್ತಿದ್ದಾರೆ. ಜನರು ನೊಡುತ್ತಾರೆ ಅಂತ ಸಿನಿಮಾ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗುತ್ತಾರೆ. ಇಂತಹ ಬೇಜವಾಬ್ದಾರಿ ಸಿಎಂ ನಾವು ನೋಡಿರಲಿಲ್ಲ ಅಂತ ಜಯಚಂದ್ರ ಆಕ್ರೋಶ ಹೊರಹಾಕಿದ್ದಾರೆ.
ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಿಸಿದ ಆಂಧ್ರ ಸಿಎಂ
ಭಾರೀ ಮಳೆಗೆ ಆಂಧ್ರಪ್ರದೇಶದಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ತಮಿಳುನಾಡಿನ 8 ಜಿಲ್ಲೆಗಳಲ್ಲಿ ನಾಳೆ ಭಾರೀ ಮಳೆಯಾಗುವ ಸಾಧ್ಯತೆ; ಮುನ್ಸೂಚನೆ ನೀಡಿದ IMD
ತಮಿಳುನಾಡಿನ 8 ಜಿಲ್ಲೆಗಳಾದ ಕಲ್ಲಕುರಿಚಿ, ಕಡಲೂರು, ಪೆರಂಬಲೂರು, ಅರಿಯಲೂರು, ಮೈಲಾಡುತುರೈ, ತಂಜಾವೂರು, ತಿರುವರೂರು, ನಾಗಪಟ್ಟಿಣಂನಲ್ಲಿ ನವೆಂಬರ್ 21 ರಂದು ಭಾರೀ ಮಳೆಯಾಗಲಿದೆ ಅಂತ IMD ಮುನ್ಸೂಚನೆ ನೀಡಿದೆ.
ಕೊಡಗು ಜಿಲ್ಲೆಯಲ್ಲಿ ಹುತ್ತರಿ ಸಂಭ್ರಮಕ್ಕೆ ಮಳೆರಾಯನ ಅಡ್ಡಿ
ಕೊಡಗು ಜಿಲ್ಲೆಯಲ್ಲಿಂದು ಹುತ್ತರಿ ಹಬ್ಬದ ಸಂಭ್ರಮ. ಆದರೆ ಮಳೆರಾಯ ಸಂಭ್ರಮಕ್ಕೆ ಅಡ್ಡಿಪಡಿಸಿದೆ. ಮುಂಜಾನೆಯಿಂದ ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆಯಾಗುತ್ತಿದೆ. ಹುತ್ತರಿ ಹಬ್ಬಕ್ಕೆ ಪಟಾಕಿ ಸಿಡಿಸುವ ವಾಡಿಕೆ. ಆದರೆ ನಿರಂತರ ಮಳೆಯಿಂದ ಪಟಾಕಿ ವ್ಯಾಪಾರಕ್ಕೆ ಅಡ್ಡಿಯಾಗಿದೆ. ಮಳೆ ನಿಲ್ಲದ ಹಿನ್ನೆಲೆ ಪಟಾಕಿ ಖರೀದಿಗೆ ಜನರು ಬರುತ್ತಿಲ್ಲ.
ಕೇಂದ್ರ ತಂಡದಿಂದ ವರದಿ ಮಾಡಿಸಲು ಮೋದಿಗೆ ಮನವಿ ಮಾಡಿದ ಯಡಿಯೂರಪ್ಪ
ರಾಜ್ಯದಲ್ಲಿ ಭಾರಿ ಮಳೆಯಿಂದ ಅಪಾರ ಬೆಳೆ ಹಾನಿಯಾಗಿದೆ. ಈ ಬಗ್ಗೆ ಕೇಂದ್ರ ತಂಡದಿಂದ ವರದಿ ಮಾಡಿಸಲು ಪ್ರಧಾನಿ ಮೋದಿಗೆ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಹರಿಯುವ ನೀರಿನಲ್ಲಿ ಚೆಲ್ಲಾಟ! ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಸವಾರರು
ಹರಿಯುವ ನೀರಿನಲ್ಲಿ ಚೆಲ್ಲಾಟವಾಡುತ್ತಿದ್ದ ಬೈಕ್ ಸವಾರರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ನೀರಿನ ರಭಸಕ್ಕೆ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದ್ದಾರೆ. ಸ್ಥಳೀಯರು ಬೈಕ್ ಹಾಗೂ ಸವಾರರನ್ನು ರಕ್ಷಣೆ ಮಾಡಿದ್ದಾರೆ. ಈ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಲ್ಲಾಘಟ್ಟ ಕೆರೆ ಬಳಿ ನಡೆದಿದೆ.
ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕರ ರಕ್ಷಣೆ
ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕರನ್ನು ರಕ್ಷಣೆ ಮಾಡಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಶಾನಗಾನಹಳ್ಳಿಯ ಜಯಮಂಗಲಿ ನದಿ ಬಳಿ ಸಂಭವಿಸಿದೆ. ಮಳೆಯಿಂದ ಜಯಮಂಗಲಿ ನದಿ ಹರಿವು ಏಕಾಏಕಿ ಹೆಚ್ಚಿದೆ. ನೀರಿನ ರಭಸಕ್ಕೆ ಸಿಕ್ಕಿ ಇಬ್ಬರು ಯುವಕರು ಕೊಚ್ಚಿ ಹೋಗುತ್ತಿದ್ದರು. ಇಬ್ಬರು ಯುವಕರನ್ನ ಹಗ್ಗದ ಸಹಾಯದಿಂದ ರಕ್ಷಣೆ ಮಾಡಲಾಗಿದೆ.
ಮನೆ ಕುಸಿತ; ಹೊರಗೆ ಓಡಿಬಂದು ಜೀವ ಉಳಿಸಿಕೊಂಡ ಕುಟುಂಬದ 8 ಜನ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಲುಮೆಹಟ್ಟಿ ಗ್ರಾಮದಲ್ಲಿ ಮಳೆಗೆ ಮನೆ ಕುಸಿದಿದೆ. ಗೊಲ್ಲರ ತಿಮ್ಮಣ್ಣ ಎಂಬುವರಿಗೆ ಸೇರಿದ ಮನೆ ಗೋಡೆ ಕುಸಿದಿದೆ. ತಕ್ಷಣ ಮನೆಯಿಂದ ಹೊರಗೆ ಓಡಿಬಂದು ಕುಟುಂಬದ 8 ಜನ ಜೀವ ಉಳಿಸಿಕೊಂಡಿದ್ದಾರೆ.
ಮಳೆ ಅಬ್ಬರಕ್ಕೆ ಮೊಳಕೆಯೊಡೆದ ಮೆಕ್ಕೆಜೋಳ
ಮಳೆ ಅಬ್ಬರದಿಂದ ಧಾರವಾಡ ಜಿಲ್ಲೆಯಲ್ಲಿ ರೈತರು ಬೆಳೆದ ಮೆಕ್ಕೆಜೋಳ ಹಾಳಾಗಿದೆ. ರಾಶಿಯಲ್ಲಿಯೇ ಮೆಕ್ಕೆಜೋಳ ಮೊಳಕೆಯೊಡೆದಿದೆ. ಕಟಾವು ಮಾಡಿ ರಾಶಿ ಹಾಕಿದ್ದರು. ನೀರಿನಿಂದ ಬೆಳೆ ರಕ್ಷಿಸಿಕೊಳ್ಳಲಾಗದೇ ಪರದಾಡುತ್ತಿದ್ದಾರೆ.
ಒಣಗಿಸಲು ಹಾಕಿದ್ದ ಮೆಣಸಿನಕಾಯಿ ಮಳೆಗೆ ಮೊಳಕೆ
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಕುರುಗೋಡು ಗ್ರಾಮದಲ್ಲಿ ಒಣಗಿಸಲು ಹಾಕಿದ್ದ ಮೆಣಸು ಮಳೆಯಿಂದ ಹಾಳಾಗಿದೆ. ರೈತರು ಗಣಿನಾಡಿನಲ್ಲಿ 77 ಸಾವಿರ ಹೆಕ್ಟೇರ್ ಪ್ರದೇಶಕ್ಕಿಂತಲೂ ಹೆಚ್ಚು ಮೆಣಸಿನಕಾಯಿ ಬೆಳೆದಿದ್ದಾರೆ. ಮಳೆ ನೀರಿಗೆ ಸಿಲುಕಿ ಮೆಣಸಿನಕಾಯಿ ಕೊಳೆಯುತ್ತಿವೆ. ಒಂದು ಎಕರೆ ಜಮೀನಿಗೆ ಸುಮಾರು 25 ಸಾವಿರ ಖರ್ಚು ಮಾಡಿ ಬೆಳೆ ಬೆಳಿದಿದ್ದ ಅನ್ನದಾತರು ನಿರಂತರ ಮಳೆಯಿಂದ ಕಂಗಾಲಾಗಿದ್ದಾರೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ದೇವಸ್ಥಾನಕ್ಕೆ ನುಗ್ಗಿದ ನೀರು
ನಿರಂತರವಾಗಿ ಸುರಿತಿರುವ ಮಳೆಯಿಂದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮಾಗೋಡ ಗ್ರಾಮದ ಹನುಮಂತ ದೇವರ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದೆ. ದೇವಸ್ಥಾನದಲ್ಲಿ ನೀರು ನಿಂತಿದ್ದರಿಂದ ದೇವರ ದರ್ಶನಕ್ಕೆ ಹೋಗಲು ಭಕ್ತರು ಪರದಾಡುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯಾದ್ಯಂತ ಭಾರೀ ಮಳೆ; ಭತ್ತದ ಬೆಳೆ ಸಂಪೂರ್ಣ ಹಾನಿ
ಕೊಪ್ಪಳ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮಳೆಗೆ ಭತ್ತದ ಬೆಳೆ ಸಂಪೂರ್ಣ ಹಾನಿಯಾಗಿದೆ. ಬೆಳೆ ನಾಶವಾದ ಪ್ರದೇಶಕ್ಕೆ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭತ್ತದ ಬೆಳೆಸಂಪೂರ್ಣವಾಗಿ ನೆಲಕ್ಕಚ್ಚಿದೆ. ಪರಿಹಾರ ಒದಗಿಸುವ ಬಗ್ಗೆ ಸಿಎಂಗೆ ಮಾಹಿತಿ ನೀಡಲಾಗುತ್ತದೆ ಅಂತ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ. ಈ ಬಾರೀ ಅತಿಹೆಚ್ಚು ಬೆಳೆ ಹಾನಿಯಾಗಿದೆ. ಸರ್ಕಾರ ಸಮೀಕ್ಷೆ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಿದೆ. ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಅಂತ ಪರಣ್ಣ ಮುನವಳ್ಳಿ ತಿಳಿಸಿದರು.
ಕೆಲ್ಲೋಡಿ ಕೆರೆ ಕಟ್ಟೆ ಒಡೆದು ಗ್ರಾಮಕ್ಕೆ ನುಗ್ಗಿದ ನೀರು; ಕಾಳಜಿ ಕೇಂದ್ರಕ್ಕೆ ಗ್ರಾಮಸ್ಥರು ಶಿಫ್ಟ್
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕೆಲ್ಲೋಡಿ ಕೆರೆ ಒಡೆದು ಗ್ರಾಮಕ್ಕೆ ನೀರು ನುಗ್ಗಿದೆ. ಗ್ರಾಮಸ್ಥರನ್ನು ಸದ್ಯ ಗೌರಿಬಿದನೂರಿನ ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಹೀಗಾಗಿ ಭಾರಿ ಅನಾಹುತ ತಪ್ಪಿದಂತಾಗಿದೆ. ಮನೆಗಳಲ್ಲಿದ್ದ ಅಕ್ಕಿ, ಧಾನ್ಯ, ವಸ್ತುಗಳು ನೀರುಪಾಲಾಗಿವೆ.
ನಿರಂತರ ಮಳೆಗೆ ತರಕಾರಿ ಬೆಲೆ ಏರಿಕೆ
ನಿರಂತರ ಮಳೆಯಿಂದ ತರಕಾರಿ ಬೆಲೆ ಏರಿಕೆಯಾಗಿದೆ. ಟೊಮ್ಯಾಟೋ, ಈರುಳ್ಳಿ ಬೆಲೆ ಗಗನಕ್ಕೇರಿದೆ. ಒಂದು ಕೆಜಿ ಟೊಮ್ಯಾಟೋಗೆ 100 ರೂಪಾಯಿ ಆಗಿದೆ. 15 ದಿನದಿಂದ ನಿರಂತರ ಮಳೆಯಾಗುತ್ತಿದೆ. ಹೀಗಾಗಿ ತರಕಾರಿಗಳು ಹೆಚ್ಚಿನದಾಗಿ ಮಾರುಕಟ್ಟೆಗೆ ಬರುತ್ತಿಲ್ಲ. ಬರುವ ಅಲ್ಪ ತರಕಾರಿಗೆ ವ್ಯಾಪರಸ್ಥರು ಹೆಚ್ಚಿನ ಬೆಲೆ ನಿಗದಿ ಮಾಡಿದ್ದಾರೆ. ಹೀಗೆ ಮಳೆ ಮುಂದುವರೆದರೆ ಟೊಮ್ಯಾಟೋಗೆ 150 ರೂ. ದಾಟುವ ಸಾಧ್ಯತೆಯಿದೆ.
ಆಂಧ್ರಪ್ರದೇಶದಲ್ಲಿ ಸಿಎಂ ಜಗನ್ಮೋಹನ್ ರೆಡ್ಡಿಯಿಂದ ವೈಮಾನಿಕ ಸಮೀಕ್ಷೆ
ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಇಂದು ಮಧ್ಯಾಹ್ನ 12 ಗಂಟೆಗೆ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಕಡಪ, ನೆಲ್ಲೂರು, ಅನಂತಪುರ, ಚಿತ್ತೂರು ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ.
ಶಬರಿಮಲೆ ಯಾತ್ರೆಗೆ ಇಂದು ನಿರ್ಬಂಧ; ಜಿಲ್ಲಾಧಿಕಾರಿ ಮಾಹಿತಿ
ಕೇರಳದಲ್ಲಿ ನಿರಂತರ ಮಳೆಯಿಂದ ಇಂದು (ನವೆಂಬರ್ 20) ಶಬರಿಮಲೆ ಯಾತ್ರೆಯನ್ನು ನಿಷೇಧಿಸಲಾಗಿದೆ ಅಂತ ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ತಿಳಿಸಿದ್ದಾರೆ.
Kerala: Due to continuous rainfall in Pathanamthitta pilgrimage to Sabarimala is prohibited for today ( 20th November): Divya S Iyer, District Collector pic.twitter.com/UDLAQUroG7
— ANI (@ANI) November 20, 2021
ಭಾರೀ ಮಳೆಗೆ ಆಂಧ್ರಪ್ರದೇಶದಲ್ಲಿ ಕುಸಿದ ಕಟ್ಟಡ; ನಾಲ್ವರು ಬಲಿ
ಭಾರೀ ಮಳೆಯಿಂದ ಆಂಧ್ರಪ್ರದೇಶದಲ್ಲಿ ಕಟ್ಟಡವೊಂದು ಕುಸಿದು ನಾಲ್ವರು ಮೃತಪಟ್ಟಿದ್ದಾರೆ. ಮೂವರು ಮಕ್ಕಳು ಸೇರಿ ಓರ್ವ ವೃದ್ಧೆ ಅಸುನೀಗಿದ್ದಾರೆ.
Andhra Pradesh | 3 children & an aged woman died in the Kadiri town of Anantapur district after an old 3-story building collapsed due to heavy rains late at night. Rescue operation underway. Over 4 people still trapped inside the building rubble: Circle Inspector Satyababu pic.twitter.com/cFx0zBvRwx
— ANI (@ANI) November 20, 2021
ತಮಿಳುನಾಡಿನ ಆರು ಜಿಲ್ಲೆಗಳಲ್ಲಿ ಭಾರೀ ಮಳೆ; ಎಚ್ಚರಿಕೆ ನೀಡಿದ IMD
ತಮಿಳುನಾಡಿನ ಆರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಅಂತ IMD ತಿಳಿಸಿದೆ. ನೀಲಗಿರ್, ಕೃಷ್ಣಗಿರಿ, ಈರೋಡ್ ಮತ್ತು ಸೇಲಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಎಚ್ಚರಿಕೆಯಿಂದಿರಲು IMD ಸೂಚಿಸಿದೆ.
ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳದಲ್ಲಿ ಗುಡುಗು ಸಹಿತ ಭಾರೀ ಮಳೆ
ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಇನ್ನು ನವೆಂಬರ್ 20 ರಂದು ರಾಯಲಸೀಮಾ, ಕರ್ನಾಟಕ ಮತ್ತು ಉತ್ತರ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಧಾರವಾಡದಲ್ಲಿ ಮಳೆ ಅಬ್ಬರ; ನೀರಿನಲ್ಲಿ ನಿಂತ ಕಡಲೆ ಬೆಳೆ
ಧಾರವಾಡ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದೆ. ಭಾರಿ ಮಳೆಗೆ ನೀರಿನಲ್ಲಿ ಕಡಲೆ ಬೆಳೆ ನಿಂತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ 1.17 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿದೆ. ತೇವಾಂಶ ಹೆಚ್ಚಾಗಿ ಸಿಡಿ ರೋಗದ ಸಾಧ್ಯತೆಯಿದೆ. ಹುಳಿ ಅಂಶ ಕಡಿಮೆಯಾದರೆ ಇಳುವರಿ ಕಡಿಮೆಯಾಗುತ್ತದೆ. ಹೀಗಾಗಿ ನಿರಂತರ ಮಳೆಯಿಂದ ರೈತರು ಹೈರಾಣಾಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ಭಾರಿ ಮಳೆ; ರಸ್ತೆ ಕಾಣದೆ ಕಂಬಕ್ಕೆ ಕಾರು ಡಿಕ್ಕಿ
ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಿಂದ ವಾಹನ ಸವಾರರಿಗೆ ರಸ್ತೆ ಕಾಣುತ್ತಿಲ್ಲ. ರಸ್ತೆ ಮೇಲೆ ಚಲಿಸುತ್ತಿದ್ದ ಕಾರೊಂದು ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಪಾರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ನೀರ್‌ಗುಂಡಿ ಬಳಿ ಈ ಘಟನೆ ಸಂಭವಿಸಿದೆ.
ಪರಿಹಾರಕ್ಕಾಗಿ ಅಂಗಲಾಚುತ್ತಿರುವ ಅನ್ನದಾತ
ಅಕಾಲಿಕ ಮಳೆಯಿಂದ ಕಂಗಾಲಾದ ರೈತರು, ಪರಿಹಾರಕ್ಕಾಗಿ ಅಂಗಲಾಚುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಬಯಲು ಪ್ರದೇಶದಲ್ಲಿ ಒಣಗಿಸಲು ಹಾಕಿದ್ದ ಮೆಣಸಿನಕಾಯಿ ಇದೀಗ ನೀರು ಪಾಲಾಗಿದೆ. ಮೆಣಸಿನಕಾಯಿ ಬೆಳೆ ಕೊಳೆತು ನಾರುವ ಸ್ಥಿತಿ ತಲುಪಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳು ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಅಂತ ರೈತರು ಕಣ್ಣೀರು ಹಾಕುತ್ತಿದ್ದಾರೆ.
30,000 ಕ್ಯೂಸೆಕ್ ನೀರು ಬಿಡುಗಡೆ; ಚೆನ್ನೈನಲ್ಲಿ ಪ್ರವಾಹದ ಎಚ್ಚರಿಕೆ
ಪೂಂಡಿ ಜಲಾಶಯದಿಂದ ಸುಮಾರು 30,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆ ತಿರುವಳ್ಳೂರು ಜಿಲ್ಲಾಡಳಿತ ಮನಾಲಿ ಮತ್ತು ಎನ್ನೋರ್ ಸೇರಿದಂತೆ ಹಲವು ಗ್ರಾಮಗಳಿಗೆ ಎಚ್ಚರಿಕೆಯಿಂದಿರಲು ಸೂಚಿಸಿದೆ.
ನಿರಂತರ ಮಳೆಗೆ ಕುಸಿದ ವಿಜಯನಗರ ಉಚ್ಚಂಗಿದುರ್ಗದ ಐತಿಹಾಸಿಕ ತಂಗುದಾನ
ನಿರಂತರ ಮಳೆಗೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಐತಿಹಾಸಿಕ ತಂಗುದಾನ ಕುಸಿದಿದೆ. ಮಳೆ ನಿಲ್ಲುವ ತನಕ ಪುಣ್ಯಕ್ಷೇತ್ರಕ್ಕೆ ಭಕ್ತರಿಗೆ ಬರದಂತೆ ವಿನಂತಿ ಮಾಡಲಾಗಿದೆ.
ಬಳ್ಳಾರಿ ಜಿಲ್ಲೆಯಾದ್ಯಂತ ಭಾರಿ; ರಾರಾವಿ ಬ್ರಿಡ್ಜ್ ಮೇಲೆ ವಾಹನಗಳ ಸಂಚಾರ ಬಂದ್
ಬಳ್ಳಾರಿ ಜಿಲ್ಲೆಯಾದ್ಯಂತ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ರಾರಾವಿ ಬ್ರಿಡ್ಜ್ ಮೇಲೆ ವಾಹನಗಳ ಸಂಚಾರ ಬಂದ್ ಆಗಿದೆ. ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ರಾರಾವಿ ಬ್ರಿಡ್ಜ್ ಆಂಧ್ರ, ಕರ್ನಾಟಕ ಸಂಪರ್ಕ ಕಲ್ಪಿಸುತ್ತದೆ.
ಚಿಕ್ಕಮಗಳೂರು: ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹುಲಿ ತಿಮ್ಮಪುರ ಬಳಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ಧಾರೆ. ಪೊನ್ನುಸ್ವಾಮಿ ಎಂಬುವವರು ಕಿರುಸೇತುವೆಯ ಮೇಲೆ ನೀರು ಹರಿಯುತ್ತಿದ್ದಾಗ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿದ್ದರು. ಅಗ್ನಿಶಾಮಕ ದಳ ಬೆಳಗ್ಗೆ ಶೋಧ ಕಾರ್ಯ ನಡೆಸಿದ್ದಾರೆ. ಕೊಚ್ಚಿ ಹೋದ ಸ್ಥಳದಿಂದ ನೂರು ಮೀಟರ್ನಲ್ಲಿ ಮೃತದೇಹ ಪತ್ತೆಯಾಗಿದೆ.
ಬಳ್ಳಾರಿ ರಾರಾವಿ ಸೇತುವೆ ಬಳಿ ಪಲ್ಟಿಯಾದ ಲಾರಿ
ಬಾರಿ ಮಳೆಯಿಂದ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಬಳಿಯ ವೇದಾವತಿ ಹಗರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ವೇಳೆ ಸೇತುವೆ ಬಳಿ ಬಂದಿದ್ದ ಸಕ್ಕರೆ ಚೀಲ ತುಂಬಿದ ಲಾರಿ ಪಲ್ಟಿಯಾಗಿದೆ. ಅಪಾರ ಪ್ರಮಾಣದ ಸಕ್ಕರೆ ನೀರು ಪಾಲಾಗಿದೆ. ಲಾರಿ ಚಾಲಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಕುಮಾರಸ್ವಾಮಿಯನ್ನು ಕೇಳಿ ಸರ್ಕಾರ ನಡೆಸಬೇಕಾ?- ಸಚಿವ ಆರಗ ಜ್ಞಾನೇಂದ್ರ
ಕುಮಾರಸ್ವಾಮಿ ವಿರುದ್ಧ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ್ದೇವೆ, ಜನರ ಸಮಸ್ಯೆ ಕೇಳಿದ್ದೇವೆ. ಕುಮಾರಸ್ವಾಮಿ ಅವರನ್ನು ಕೇಳಿ ನಾವು ಸರ್ಕಾರ ನಡೆಸಬೇಕಾ ಅಂತ ಕಲಬುರಗಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಕರಾವಳಿ ಭಾಗದಲ್ಲಿ ಇಂದು ಭಾರೀ ಮಳೆಯಾಗುವ ಸೂಚನೆ
ಇಂದು ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಅಂತ ಭಾರತೀಯ ಹವಾಮಾನ ಇಲಾಖೆ (IMD) ಸೂಚನೆ ನೀಡಿದೆ.
ಶಿವಮೊಗ್ಗದಲ್ಲಿ ಮೂರು ದಿನಗಳಿಂದ ಧಾರಾಕಾರ ಮಳೆ! ರೈತರು ಕಂಗಾಲು
ಶಿವಮೊಗ್ಗ ಜಿಲ್ಲಾದ್ಯಾಂತ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಗೆ ರೈತರು ಕಂಗಾಲಾಗಿದ್ದಾರೆ. ಸಾಗರ ತಾಲೂಕಿನ ಶಿರವಾಳ, ಕಾಗೋಡು, ಮಂಡಗಳಲೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಭತ್ತ ಬೆಳೆದ ರೈತರು ಪರದಾಡುತ್ತಿದ್ದಾರೆ. 100 ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೋಯ್ಲು ಆಗಿತ್ತು. ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೋಯ್ಲು ಆಗಿರಲಿಲ್ಲ. ಮಳೆಗೆ ಬೆಳೆ ಸಿಕ್ಕಿ ರೈತರು ಕಂಗಾಲಾಗಿದ್ದಾರೆ. ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.
ದಾವಣಗೆರೆಯಲ್ಲಿ ಭಾರಿ ಮಳೆಗೆ ವ್ಯಕ್ತಿ ಬಲಿ
ದಾವಣಗೆರೆ ಜಿಲ್ಲೆಯಲ್ಲಿ ಭಾರಿ ಮಳೆಗೆ ವೃದ್ಧ ಬಲಿಯಾಗಿದ್ದಾರೆ. 60 ವರ್ಷದ ಬಸವರಾಜಪ್ಪ ಎಂಬುವವರು ಕೊಟ್ಟಿಗೆ ಬಿದ್ದು ಮೃತಪಟ್ಟಿದ್ದಾರೆ. ಹರಿಹರ ತಾಲೂಕಿನ ಗ್ರಾಮ ಗೋವಿನಹಾಳ್‌ನಲ್ಲಿ ಈ ಘಟನೆ ನಡೆದಿದೆ.
ತುಮಕೂರಿನಲ್ಲಿ ಕೊಚ್ಚಿ ಹೋದ ಬೈಕ್! ಬೈಕ್ ಹಿಡಿಯಲು ಸ್ಥಳೀಯರು ಹರಸಾಹಸ
ತುಮಕೂರಿನಲ್ಲಿ ಮತ್ತೆ ಬೈಕ್ ಕೊಚ್ಚಿ ಹೋಗಿದೆ. ಬೈಕ್ ಹಿಡಿಯಲು ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ. ಬೈಕ್ ಹೊಗುತ್ತದೆ ಅಂತಾ ಗೊತ್ತಿದರೂ ಸವಾರರು ಸೇತುವೆ ಮೇಲೆ ಬಂದಿದ್ದಾರೆ. ನಾಲ್ಕೈದು ಜನರಿಂದ ಬೈಕ್ ತೆಗೆದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ನಿನ್ನೆ ಒಂದು ಬೈಕ್ ಇಂದು ಒಂದು ಬೈಕ್ ನೀರಿಗೆ ಬಿದ್ದಿದ್ದೆ. ಸೇತುವೆಯಿಂದ ಕೆಳಗಡೆ ಬೈಕ್ಗಳು ಸಿಲುಕಿ ಹಾಕಿಕೊಂಡಿವೆ.
ಇಂದು ಶಬರಿಮಲೆಯ ಅಯ್ಯಪ್ಪಸ್ವಾಮಿ ದರ್ಶನಕ್ಕೆ ನಿರ್ಬಂಧ
ಕೇರಳದಲ್ಲಿ ಭಾರಿ ಮಳೆಗೆ ಪಂಪಾ ನದಿ ಉಕ್ಕಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಶಬರಿಮಲೆಯ ಅಯ್ಯಪ್ಪಸ್ವಾಮಿ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.
ಮಳೆ ಪರಿಹಾರಕ್ಕಾಗಿ ಕೇಂದ್ರಕ್ಕೆ ಪತ್ರ ಬರೆದ ಪುದುಚೇರಿ ಸಿಎಂ
ಮಳೆಯಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಹೀಗಾಗಿ ಪರಿಹಾರ ನಿಡುವಂತೆ ಪುದುಚೇರಿ ಮುಖ್ಯಮಂತ್ರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮಳೆ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ವೇಳಿ ಸಿಎಂ ಮಾಧ್ಯಮಕ್ಕೆ ಈ ವಿಷಯವನ್ನು ತಿಳಿಸಿದ್ದಾರೆ.
Published On - Nov 20,2021 10:12 AM