ಗರ್ಭಿಣಿಗೆ ಸರಿಯಾದ ಚಿಕಿತ್ಸೆ ನೀಡದೆ ಕೊಂದ ಆರೋಪ; ಅವಮಾನದಿಂದ ಸ್ತ್ರೀರೋಗ ತಜ್ಞೆ ಆತ್ಮಹತ್ಯೆ

| Updated By: ಸುಷ್ಮಾ ಚಕ್ರೆ

Updated on: Mar 30, 2022 | 4:53 PM

ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯ ಸಾವಿಗೆ ಕಾರಣವಾದ ಆರೋಪದ ಮೇಲೆ ಮಹಿಳಾ ವೈದ್ಯೆಯ ಮೇಲೆ ಕೇಸ್ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಖಿನ್ನತೆಗೊಳಗಾದ ಮಹಿಳಾ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗರ್ಭಿಣಿಗೆ ಸರಿಯಾದ ಚಿಕಿತ್ಸೆ ನೀಡದೆ ಕೊಂದ ಆರೋಪ; ಅವಮಾನದಿಂದ ಸ್ತ್ರೀರೋಗ ತಜ್ಞೆ ಆತ್ಮಹತ್ಯೆ
ಡಾ. ಅರ್ಚನಾ ಶರ್ಮ
Follow us on

ಜೈಪುರ: ರಾಜಸ್ಥಾನದ ದೌಸಾ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸ್ತ್ರೀರೋಗತಜ್ಞರ (gynaecologist) ಮೇಲೆ ಗರ್ಭಿಣಿಯನ್ನು ಕೊಂದ ಆರೋಪ ಬಂದಿತ್ತು. ವೈದ್ಯಕೀಯ ನಿರ್ಲಕ್ಷ್ಯದಿಂದ ಗರ್ಭಿಣಿಯ ಸಾವಿಗೆ ಕಾರಣವಾದ ಬಗ್ಗೆ ಆ ವೈದ್ಯೆಯ ಮೇಲೆ ಕೇಸ್ ದಾಖಲಾಗಿದ್ದರಿಂದ ನೊಂದ ಆಕೆ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಮೃತ ಡಾ. ಅರ್ಚನಾ ಶರ್ಮಾ ಅವರು ಹೆರಿಗೆ ವೇಳೆ ತಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದರು. ಗೋಲ್ಡ್​ ಮೆಡಲಿಸ್ಟ್​ ಆಗಿದ್ದ ಅರ್ಚನಾ ಶರ್ಮಾ ತನ್ನ ಮೇಲೆ ಬಂದ ಈ ಆರೋಪ ಮತ್ತು ಪೊಲೀಸ್ ಕೇಸ್​ನಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯ ಸಾವಿಗೆ ಕಾರಣವಾದ ಆರೋಪದ ಮೇಲೆ ಮಹಿಳಾ ವೈದ್ಯೆಯ ಮೇಲೆ ಕೇಸ್ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಖಿನ್ನತೆಗೊಳಗಾದ ಮಹಿಳಾ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಗರ್ಭಿಣಿ ಮಹಿಳೆ ಮಂಗಳವಾರ ವೈದ್ಯರಾದ ಅರ್ಚನಾ ಶರ್ಮಾ ಮತ್ತು ಅವರ ಪತಿ ನಡೆಸುತ್ತಿದ್ದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಇದೇ ಕಾರಣಕ್ಕೆ ಮೃತಳ ಕುಟುಂಬಸ್ಥರು ಅರ್ಚನಾ ಶರ್ಮ ವಿರುದ್ಧ ದೂರು ನೀಡಿದ್ದರು.

ಗರ್ಭಿಣಿಯ ಕುಟುಂಬ ಸದಸ್ಯರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿದ ನಂತರ ಅರ್ಚನಾ ವಿರುದ್ಧ ಲಾಲ್ಸೋಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ತಪ್ಪಿತಸ್ಥ ವೈದ್ಯರ ವಿರುದ್ಧ ತಕ್ಷಣ ಕ್ರಮಕ್ಕೆ ಒತ್ತಾಯಿಸಲಾಯಿತು. ಎಫ್‌ಐಆರ್‌ನಿಂದ ಒತ್ತಡಕ್ಕೆ ಒಳಗಾದ ಅರ್ಚನಾ ಶರ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಾ. ಅರ್ಚನಾ ಶರ್ಮ ಅವರ ಕುಟುಂಬ

ಚಿಕಿತ್ಸೆ ವೇಳೆ ನಿರ್ಲಕ್ಷ್ಯದಿಂದ ಗರ್ಭಿಣಿಯ ಸಾವಿಗೆ ಕಾರಣರಾದ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಂಗಳವಾರ ಮಧ್ಯಾಹ್ನ ಆಸ್ಪತ್ರೆಯ ಮೇಲಿರುವ ತನ್ನ ನಿವಾಸದಲ್ಲಿ ಡಾ. ಅರ್ಚನಾ ಶರ್ಮ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಮಂಗಳವಾರ 22 ವರ್ಷದ ಗರ್ಭಿಣಿ ಮಹಿಳೆಯನ್ನು ಡಾ. ಅರ್ಚನಾ ಶರ್ಮಾ ಮತ್ತು ಅವರ ಪತಿ ನಡೆಸುತ್ತಿರುವ ಆನಂದ್ ಆಸ್ಪತ್ರೆಗೆ ಕರೆತರಲಾಗಿತ್ತು. ಆಕೆಯನ್ನು ಲೇಬರ್ ರೂಮ್‌ಗೆ ಕರೆದೊಯ್ದರೂ, ಆಕೆಯ ಸ್ಥಿತಿ ಹದಗೆಟ್ಟಿತು ಮತ್ತು ತೀವ್ರ ರಕ್ತ ಸೋರಿಕೆಯಿಂದಾಗಿ ಆಕೆ ಸಾವನ್ನಪ್ಪಿದಳು. ಇದರ ಬೆನ್ನಲ್ಲೇ ಮಹಿಳೆಯ ಸಂಬಂಧಿಕರು ಡಾ. ಅರ್ಚನಾ ಶರ್ಮಾ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಹೊರಿಸಿ ಆಸ್ಪತ್ರೆಯಲ್ಲಿ ಗದ್ದಲ ಸೃಷ್ಟಿಸಿದ್ದರು. ವೈದ್ಯ ದಂಪತಿಗಳ ವಿರುದ್ಧ ಪ್ರತಿಭಟಿಸಿದರು. ಈ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ಕೇಸ್ ದಾಖಲಿಸಲಾಗಿತ್ತು.

ಆತ್ಮಹತ್ಯೆಗೂ ಮುನ್ನ ಸೂಸೈಡ್ ನೋಟ್ ಬರೆದಿಟ್ಟಿರುವ ಡಾ. ಅರ್ಚನಾ ಶರ್ಮ, ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಯಾರನ್ನೂ ಕೊಂದಿಲ್ಲ. ದಯವಿಟ್ಟು ನನ್ನ ಕುಟುಂಬ ಮತ್ತು ನನ್ನ ಮಕ್ಕಳಿಗೆ ಕಿರುಕುಳ ನೀಡಬೇಡಿ. ರೋಗಿಯು PPHನಿಂದ ಮರಣಹೊಂದಿದಳು. ವಿನಾಕಾರಣ ವೈದ್ಯರಿಗೆ ಕಿರುಕುಳ ನೀಡಬೇಡಿ. ನಾನು ತಪ್ಪಿತಸ್ಥಳಲ್ಲ ಎಂಬುದು ಇನ್ನಾದರೂ ಎಲ್ಲರಿಗೂ ಗೊತ್ತಾಗಬಹುದು ಎಂದು ಬರೆದಿಟ್ಟು ಅರ್ಚನಾ ಶರ್ಮ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ: ವಿವಾಹಿತ ಮಹಿಳೆ ಜೊತೆ ಯುವಕನ ಲವ್ವಿಡವ್ವಿ; ಬೇರೆ ಯುವತಿ ಜೊತೆ ಎಂಗೇಜ್ಮೆಂಟ್ ಆದ ಮೂರೇ ದಿನಕ್ಕೆ ರಕ್ತದಲ್ಲಿ ಪತ್ರ ಬರೆದು ಯುವಕ ಆತ್ಮಹತ್ಯೆ

Shocking News: ಅಕ್ಕನ ಬಾಯ್​ಫ್ರೆಂಡ್​ನಿಂದ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಗುಪ್ತಾಂಗಕ್ಕೆ ಕೋಲು ತುರುಕಿ ಚಿತ್ರಹಿಂಸೆ!

Published On - 4:43 pm, Wed, 30 March 22