ಹನಿ ನೀರಿಗೂ ಕಿಲೋಮೀಟರ್​ಗಟ್ಟಲೆ ಹೋಗ್ಬೇಕು, ಸಮಸ್ಯೆಯಿಂದ ಬೇಸತ್ತು ಹಿರಿಯ ವಕೀಲ ಆತ್ಮಹತ್ಯೆ

|

Updated on: Jun 06, 2024 | 2:10 PM

ದೆಹಲಿ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಕುಡಿಯುವ ನೀರಿಗೂ ಕಿಲೋಮೀಟರ್​ಗಟ್ಟಲೆ ದೂರ ನಡೆಯಬೇಕಾದ ಪರಿಸ್ಥಿತಿ ಇದ್ದ ಕಾರಣ ಹಿರಿಯ ವಕೀಲರೊಬ್ಬರು ಸಮಸ್ಯೆಯಿಂದ ಹೊರಬರಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹನಿ ನೀರಿಗೂ ಕಿಲೋಮೀಟರ್​ಗಟ್ಟಲೆ ಹೋಗ್ಬೇಕು, ಸಮಸ್ಯೆಯಿಂದ ಬೇಸತ್ತು ಹಿರಿಯ ವಕೀಲ ಆತ್ಮಹತ್ಯೆ
ನೀರಿನ ಸಮಸ್ಯೆ
Follow us on

ಭಾರತದ ಹಲವು ರಾಜ್ಯಗಳು ನೀರಿನ ಸಮಸ್ಯೆ(Water Problem) ಎದುರಿಸುತ್ತಿವೆ. ಆಗೊಮ್ಮೆ ಈಗೊಮ್ಮೆ ಮಳೆ ಬರುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜಸ್ಥಾನದ ಅಲ್ವಾರ್​ನಲ್ಲಿ ಬಿಸಿಲ ಧಗೆಯೂ ಹೆಚ್ಚಿದೆ ಜತೆಗೆ ನೀರಿಗಾಗಿ ದಿನವೊಂದೊಂದು ಕಡೆ ಹೋಗುವ ಪರಿಸ್ಥಿತಿಯೂ ಇದೆ. ಈ ಸಮಸ್ಯೆಗೆ ಪರಿಹಾರ ಸಿಗದೆ ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಹಿರಿಯ ವಕೀಲರು ಸಹ ಆಗಿದ್ದರು.

ಮೋಹನ್ ಲಾಲ್ ಸೈನಿ ಕುಟುಂಬದೊಂದಿಗೆ ಅಲ್ವಾರ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಕೆಲ ದಿನಗಳಿಂದ ಮನೆಯಲ್ಲಿ ನೀರಿನ ಸಮಸ್ಯೆ ಇತ್ತು. ಈ ಬಗ್ಗೆ ಹಲವು ಬಾರಿ ಜಲಮಂಡಳಿಗೂ ದೂರು ನೀಡಿದ್ದರು. ಆದರೆ ಪರಿಹಾರ ಸಿಕ್ಕಿಲ್ಲ. ಜೀವನಕ್ಕೆ ನೀರು ಬಹಳ ಮುಖ್ಯ. ಒಬ್ಬ ವ್ಯಕ್ತಿಯು ಆಹಾರವನ್ನು ತಿನ್ನದೆ ಕೆಲವು ದಿನಗಳವರೆಗೆ ಬದುಕಬಹುದು. ಆದರೆ ನೀರಿಲ್ಲದೆ ಜೀವನ ಸಂಪೂರ್ಣ ಅಪೂರ್ಣ. ಮನೆಗೆ ನೀರು ಬರದ ಕಾರಣ ವಕೀಲರು ದಿನವೂ ದೂರದ ಪ್ರದೇಶಗಳಿಗೆ ಹೋಗಿ ನೀರು ತರುತ್ತಿದ್ದರು.

ಒಮ್ಮೊಮ್ಮೆ ಒಂದು ಕಡೆ, ಇನ್ನು ಕೆಲವೊಮ್ಮೆ ಬೇರೆ ಕಡೆ ಹೋಗುತ್ತಿದ್ದರು. ವಕೀಲರು ನೀರಿಗಾಗಿ ದಿನವೂ ಕಿಲೋಮೀಟರ್ ಗಟ್ಟಲೆ ಅಲೆಯುತ್ತಿದ್ದರು. ನೀರು ಸಿಕ್ಕಾಗಲೆಲ್ಲಾ ಮನೆಯವರು ಉಪಯೋಗಿಸಲು ಮನೆಗೆ ತರುತ್ತಿದ್ದರು. ನೀರಿನ ಕುರಿತು ಸಂಬಂಧಪಟ್ಟ ಇಲಾಖೆಗೆ ನಿರಂತರವಾಗಿ ದೂರು ನೀಡುತ್ತಿದ್ದರು. ಆದರೆ ಸಮಸ್ಯೆ ಹಾಗೆಯೇ ಉಳಿದಿತ್ತು. ಅವರು ತುಂಬಾ ಅಸಮಾಧಾನಗೊಂಡಿದ್ದರು.

ಮತ್ತಷ್ಟು ಓದಿ: ಉಡುಪಿಯಲ್ಲಿ ಮತ್ತೆ ಕುಡಿಯುವ ನೀರಿನ ಸಮಸ್ಯೆ; ನಗರಸಭೆಯಿಂದ ಮಹತ್ವದ ನಿರ್ಧಾರ

ಮೋಹನ್ ಲಾಲ್ ಅವರಿಗೂ 75 ವರ್ಷ ವಯಸ್ಸಾಗಿತ್ತು. ಈ ವಯಸ್ಸಿನಲ್ಲಿ ದಿನವೂ ನೀರಿಗಾಗಿ ಕಿಲೋಮೀಟರ್‌ಗಟ್ಟಲೆ ನಡೆಯುವುದು ಕಷ್ಟಕರವಾಗಿತ್ತು. ಅತ್ಯಂತ ಒತ್ತಡದ ವಿಷಯವೆಂದರೆ ಸ್ವತಃ ವಕೀಲರಾಗಿದ್ದರೂ ಅವರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ ಅವರು ತಮ್ಮ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದರು. ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅಲ್ಲದೆ, ಮುಂದಿನ ಕ್ರಮ ಆರಂಭಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ