ಯುವಕರನ್ನು ಮರುಳು ಮಾಡೋದೆ ದಂಧೆ, 25 ಪುರುಷರನ್ನು ಮದುವೆಯಾಗಿ ವಂಚಿಸಿದ್ದ ಖತರ್ನಾಕ್ ಲೇಡಿ ಅರೆಸ್ಟ್​

25 ಯುವಕರನ್ನು ಮರುಳು ಮಾಡಿ ನಕಲಿ ಮದುವೆಯಾಗಿ ವಂಚಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಗಿನ್ನು 23 ವರ್ಷ ವಯಸ್ಸು.ಮಹಿಳೆಯನ್ನು ಭೋಪಾಲ್‌ನ ಶಿವನಗರ ನಿವಾಸಿ ಅನುರಾಧ ಎಂದು ಗುರುತಿಸಲಾಗಿದೆ. ಮದುವೆಯ ಹೆಸರಿನಲ್ಲಿ ಕನಿಷ್ಠ 25 ಪುರುಷರಿಗೆ ವಂಚನೆ ಮಾಡಿದ ಆರೋಪ ಆಕೆಯ ಮೇಲಿದೆ. ಅವಳು ನಕಲಿ ಮದುವೆ ಮಾಡಿಕೊಂಡು, ನಂತರ ಅವರಿಂದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಓಡಿಹೋಗುತ್ತಿದ್ದಳು. ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ.

ಯುವಕರನ್ನು ಮರುಳು ಮಾಡೋದೆ ದಂಧೆ, 25 ಪುರುಷರನ್ನು ಮದುವೆಯಾಗಿ ವಂಚಿಸಿದ್ದ ಖತರ್ನಾಕ್ ಲೇಡಿ ಅರೆಸ್ಟ್​
ಮದುವೆ
Image Credit source: Indiafilings

Updated on: May 22, 2025 | 9:24 AM

ಜೈಪುರ, ಮೇ 22: ಮದುವೆ(Marriage) ಎಂಬುದು ಈಕೆಗೆ ವ್ಯಾಪಾರ, ಯುವಕರನ್ನು ಮರುಳು ಮಾಡಿ, ಮದುವೆಯಾಗಿ ವಂಚಿಸಿ ಪರಾರಿಯಾಗುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಜೈಪುರದಲ್ಲಿ ನಡೆದಿದೆ. ಆಕೆ ಕೇವಲ 7 ತಿಂಗಳಲ್ಲಿ 25 ಪುರುಷರಿಗೆ ವಂಚನೆ ಮಾಡಿದ್ದಳು. ಆಕೆಗಿನ್ನು 23 ವರ್ಷ ವಯಸ್ಸು. ಮಹಿಳೆಯನ್ನು ಭೋಪಾಲ್‌ನ ಶಿವನಗರ ನಿವಾಸಿ ಅನುರಾಧ ಎಂದು ಗುರುತಿಸಲಾಗಿದೆ. ಮದುವೆಯ ಹೆಸರಿನಲ್ಲಿ ಕನಿಷ್ಠ 25 ಪುರುಷರಿಗೆ ವಂಚನೆ ಮಾಡಿದ ಆರೋಪ ಆಕೆಯ ಮೇಲಿದೆ. ಅವಳು ನಕಲಿ ಮದುವೆ ಮಾಡಿಕೊಂಡು, ನಂತರ ಅವರಿಂದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಓಡಿಹೋಗುತ್ತಿದ್ದಳು. ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿ ಮಹಿಳೆ ನಕಲಿ ವಿವಾಹಗಳ ಮೂಲಕ ಹಲವಾರು ರಾಜ್ಯಗಳಲ್ಲಿ ಜನರನ್ನು ಮದುವೆಯಾಗುವ ಮೂಲಕ ವಂಚಿಸಿದ್ದಾರೆ ಎಂದು ಮಾಂಟೌನ್ ಪೊಲೀಸ್ ಠಾಣೆಯ ಉಸ್ತುವಾರಿ ಸುನಿಲ್ ಕುಮಾರ್ ತಿಳಿಸಿದ್ದಾರೆ. ಮದುವೆಯಾದ ಕೆಲವು ದಿನಗಳ ನಂತರ ಅವಳು ಕಣ್ಮರೆಯಾಗುತ್ತಿದ್ದಳು, ತನ್ನೊಂದಿಗೆ ನಗದು, ಆಭರಣಗಳು ಮತ್ತು ಮೊಬೈಲ್ ಫೋನ್‌ಗಳಂತಹ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದಳು.

ಮೇ 3ರಂದು ವಿಷ್ಣುಗುಪ್ತಾ ಎಂಬುವವರು ಎಫ್​ಐಆರ್​ ದಾಖಲಿಸಿದ್ದರು. ಆಗ ಈ ಎಲ್ಲಾ ವಿಚಾರಗಳು ಬೆಳಕಿಗೆ ಬಂದಿವೆ. ಸುನೀತಾ ಮತ್ತು ಪಪ್ಪು ಮೀನಾ ಎಂಬುವವರು ಒಳ್ಳೆಯ ಹುಡುಗಿಯನ್ನು ಹುಡುಕಿಕೊಡುವುದಾಗಿ ಭರವಸೆ ನೀಡಿದ್ದರು. ಬಳಿಕ ಅನುರಾಧಾ ಫೋಟೊ ತೋರಿಸಿ ಮದುವೆಯ ಒಪ್ಪಂದಕ್ಕೆ ಸಹಿ ಹಾಕುವಂತೆ ಕೇಳಿದ್ದರು. ಅವರಿಂದ 2 ಲಕ್ಷ ರೂ. ಪಡೆದಿದ್ದರು. ಕಳೆದ ತಿಂಗಳು ಸವಾಯಿ ಮಾಧೋಪುರದಲ್ಲಿ ಮದುವೆ ನಡೆದಿತ್ತು ಆದರೆ ಒಂದು ವಾರದ ನಂತರ ಅನುರಾಧಾ ನಗದು, ಆಭರಣ ಮತ್ತು ಮೊಬೈಲ್ ಫೋನ್ ನೊಂದಿಗೆ ಪರಾರಿಯಾಗಿದ್ದಳು.

ಇದನ್ನೂ ಓದಿ
ಪತಿಯ ಮುಂದೆ ವಧುದಕ್ಷಿಣೆ ಬೇಡಿಕೆಯಿಟ್ಟ ವಾಯುಪಡೆಯ ಮಹಿಳಾ ಅಧಿಕಾರಿ
ಇಟಲಿ ಪ್ರಧಾನಿಗೆ ಅಲ್ಬೇನಿಯಾದ ಪ್ರಧಾನಿ ಪ್ರಪೋಸ್ ಮಾಡಿದ್ರಾ!
8 ರಾಜ್ಯಗಳ ಸುತ್ತಾಟ, ಇದು ಕ್ಯಾರವ್ಯಾನ್ ನಲ್ಲಿ ಕೇರಳ ಕುಟುಂಬ
ಮೊಮ್ಮಗನ ಕಾರಿನ ಕೀ ಕೈಗೆ ಸಿಗುತ್ತಿದ್ದಂತೆ ಈ ಅಜ್ಜ ಮಾಡಿದ್ದೇನು ಗೊತ್ತಾ?

ಮತ್ತಷ್ಟು ಓದಿ: ಪ್ಲೀಸ್ ನಾನು ನೀನು ಅಣ್ಣ ತಂಗಿಯಂತೆ ಇರೋಣ, ಮದುವೆ ಬೇಡ ಶಾಕ್ ಆದ ವರ

ಲೂಟಿಕೋರರ ಪ್ಲ್ಯಾನ್​ ಏನು?
ಈ ಗ್ಯಾಂಗ್​ನ ಕೆಲವು ಸದಸ್ಯರು ಮೊದಲು ಯಾರು ಮದುವೆಗಾಗಿ ಹುಡುಗಿ ಹುಡುಕುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು., ಅವರ ಬಳಿ ಹೋಗಿ ಅನುರಾಧಾ ಫೋಟೊ ತೋರಿಸಿ ಅವಳ ಅಂದ, ಗುಣಗಳನ್ನು ಹೊಗಳುತ್ತಿದ್ದರು.ನಂತರ ಮದುವೆ ಹೆಸರಿನಲ್ಲಿ 2 ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದರು. ನಕಲಿ ವಿವಾಹವನ್ನು ಮಾಡಿಸುತ್ತಿದ್ದರು. ಬಳಿಕ ಹಣದೊಂದಿಗೆ ಪರಾರಿಯಾಗುತ್ತಿದ್ದರು.

ಅನುರಾಧ ಬಡ ಕುಟುಂಬದವಳು. ಆಕೆಯ ಸಹೋದರರು ಕೂಡ ನಿರುದ್ಯೋಗಿ. ಆರ್ಥಿಕ ಸಂಕಷ್ಟದಿಂದಾಗಿ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಹೀಗಾಗಿ, ಅನುರಾಧ ವಂಚನೆ ದಾರಿ ಆಯ್ಕೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ. 32 ವಯಸ್ಸಿನ ಈಕೆ ವಧುವಿನಂತೆ ನಟಿಸಿ ಅಮಾಯಕ ವರರನ್ನು ವಂಚಿಸುತ್ತಿದ್ದಳು.

ಗಂಡನ ಮನೆಯಲ್ಲಿ ಎಲ್ಲರೊಟ್ಟಿಗೂ ಮುಗ್ಧಳಂತೆ ವರ್ತಿಸಿ ಎಲ್ಲರನ್ನೂ ಮರುಳು ಮಾಡುತ್ತಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ ಆಹಾರದಲ್ಲಿ ಮತ್ತು ಬರುವ ಪದಾರ್ಥ ಬೆರೆಸಿ ಪತಿ ಕುಟುಂಬದವರಿಗೆ ಕೊಡುತ್ತಿದ್ದಳು. ನಂತರ ಮನೆಯಲ್ಲಿ ನಗದು, ಚಿನ್ನಾಭರಣವನ್ನು ದೋಚಿ ಪರಾರಿಯಾಗುತ್ತಿದ್ದಳು. ಆದರೆ ಆ ಒಂದು ಮದುವೆ ಆಕೆ ಆಟಕ್ಕೆ ಪೂರ್ಣವಿರಾಮ ನೀಡಿತು.

ಶರ್ಮಾ ಅವರನ್ನು ಮದುವೆಯಾದ ನಂತರ ಅನುರಾಧಾ ಭೋಪಾಲ್‌ನಲ್ಲಿ ಗಬ್ಬರ್ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಅವನಿಂದ 2 ಲಕ್ಷ ರೂ.ಗಳನ್ನು ಪಡೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಈ ಗ್ಯಾಂಗ್‌ನಲ್ಲಿ ಇತರರ ಹೆಸರುಗಳನ್ನು ಹೆಸರಿಸಿದ್ದಾರೆ, ರೋಶ್ನಿ, ರಘುಬೀರ್, ಗೋಲು, ಮಜ್‌ಬೂತ್ ಸಿಂಗ್ ಯಾದವ್ ಮತ್ತು ಅರ್ಜನ್, ಎಲ್ಲರೂ ಭೋಪಾಲ್‌ನವರು ಎನ್ನಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ