ದೆಹಲಿ: ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಅವರು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿಯಾಗಿ ಸುಪ್ರೀಂಕೋರ್ಟ್ ನಿಂದ ಇಂದು 1 ರೂ ದಂಡನಾರ್ಹ ಶಿಕ್ಷೆಗೊಳಗಾದರು. ಸೆ. 15ರೊಳಗೆ ಆ 1 ರೂ ದಂಡ ಕಟ್ಟುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತಾದರೂ, ಪ್ರಶಾಂತ್ ಭೂಷಣ್ ಅವರ ಪರ ವಕೀಲರು ತಕ್ಷಣವೇ ಕೋರ್ಟ್ಗೆ 1 ರೂ ದಂಡ ಕಟ್ಟಿದ್ದಾರೆ.
ದಂಡ ಕಟ್ಟಿದ ತಮ್ಮ ಸಹೋದ್ಯೋಗಿಗೆ ವಕೀಲ ಪ್ರಶಾಂತ್ ಭೂಷಣ್ ಕೃತಜ್ಞತೆ ತಿಳಿಸಿದ್ದಾರೆ. ಇಂದು ನನಗೆ ಸುಪ್ರೀಂಕೋರ್ಟ್ ಒಂದು ರೂಪಾಯಿ ದಂಡ ವಿಧಿಸಿದ್ದಾಗ ನನ್ನ ವಕೀಲ ಮತ್ತು ಹಿರಿಯ ಸಹೋದ್ಯೋಗಿ ರಾಜೀವ್ ಧವನ್ ಅವರು ತಕ್ಷಣ 1 ರೂ ನೀಡಿ ಸಹಾಯ ಮಾಡಿದ್ದಾರೆ. ಅದನ್ನು ನಾನು ಕೃತಜ್ಞತೆಯಿಂದ ಅಂಗೀಕರಿಸಿದ್ದೇನೆ ಎಂದು ಹೇಳಿದ್ರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿಜೆ ಎಸ್.ಎ. ಬೊಬ್ಡೆ ವಿರುದ್ಧ ಟ್ವಿಟರ್ನಲ್ಲಿ ಅವಹೇಳನಕಾರಿ ಫೋಸ್ಟ್ ಮಾಡಿದ್ದ ಕಾರಣದಿಂದಾಗಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಕೀಲ ಪ್ರಶಾಂತ್ ಭೂಷಣ್ ದೋಷಿಯಾಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಪ್ರಶಾಂತ್ ಭೂಷಣ್ಗೆ ಸುಪ್ರೀಂಕೋರ್ಟ್ ಸಾಂಕೇತಿಕವಾಗಿ ಒಂದು ರೂಪಾಯಿ ದಂಡ ವಿಧಿಸಿದೆ.
1 ರೂ. ದಂಡ ಪಾವತಿಸದಿದ್ದರೆ 3 ತಿಂಗಳು ಜೈಲು ಶಿಕ್ಷೆ ಹಾಗೂ 3 ವರ್ಷ ಕೋರ್ಟ್ನಲ್ಲಿ ವಾದ ಮಾಡಬಾರದು ಎಂದೂ ಸಹ ಇಂದು ಬೆಳಗ್ಗೆ ತೀರ್ಪು ನೀಡಿತ್ತು.
ಇದನ್ನೂ ಓದಿ: ಸೆ. 15ರೊಳಗೆ ಸಾಂಕೇತಿಕವಾಗಿ 1 ರೂ ದಂಡ ಕಟ್ಟುವಂತೆ ಆದೇಶಿಸಿದ ಸುಪ್ರೀಂ ಕೋರ್ಟ್
Published On - 3:05 pm, Mon, 31 August 20