AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸತ್ತಿನೊಳಗೆ ವಂದೇ ಮಾತರಂ, ಜೈಹಿಂದ್ ಪದಬಳಕೆ ನಿಷೇಧ

ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 1ರಂದು ಪ್ರಾರಂಭವಾಗಲಿದೆ. ರಾಜ್ಯಸಭೆಯ ಬುಲೆಟಿನ್‌ನಲ್ಲಿ ಸಂಸದರು ತಮ್ಮ ಕಲಾಪಗಳ ಸಮಯದಲ್ಲಿ ಕೆಲವು ಪದಗಳನ್ನು ಬಳಸುವುದನ್ನು ತಪ್ಪಿಸುವಂತೆ ಸಲಹೆ ನೀಡಲಾಗಿದೆ. ರಾಜ್ಯಸಭೆಯು ಸೋಮವಾರ ಹೊರಡಿಸಿದ ಬುಲೆಟಿನ್‌ನಲ್ಲಿ ಸಂಸತ್ತಿನ ಸದಸ್ಯರು ತಮ್ಮ ಭಾಷಣಗಳನ್ನು ಧನ್ಯವಾದಗಳು, ಜೈ ಹಿಂದ್, ಮತ್ತು ವಂದೇ ಮಾತರಂ ಮುಂತಾದ ನುಡಿಗಟ್ಟುಗಳೊಂದಿಗೆ ಮುಕ್ತಾಯಗೊಳಿಸಬಾರದು ಎಂದು ಸ್ಪಷ್ಟವಾಗಿ ಹೇಳಿದೆ.

ಸಂಸತ್ತಿನೊಳಗೆ ವಂದೇ ಮಾತರಂ, ಜೈಹಿಂದ್ ಪದಬಳಕೆ ನಿಷೇಧ
ಸಂಸತ್ತು
ನಯನಾ ರಾಜೀವ್
|

Updated on: Nov 27, 2025 | 12:56 PM

Share

ನವದೆಹಲಿ, ನವೆಂಬರ್ 27: ಸಂಸತ್ತಿನ ಚಳಿಗಾಲದ ಅಧಿವೇಶನ(Parliament Winter Session) ಡಿಸೆಂಬರ್ 1ರಂದು ಪ್ರಾರಂಭವಾಗಲಿದೆ. ರಾಜ್ಯಸಭೆಯ ಬುಲೆಟಿನ್‌ನಲ್ಲಿ ಸಂಸದರು ತಮ್ಮ ಕಲಾಪಗಳ ಸಮಯದಲ್ಲಿ ಕೆಲವು ಪದಗಳನ್ನು ಬಳಸುವುದನ್ನು ತಪ್ಪಿಸುವಂತೆ ಸಲಹೆ ನೀಡಲಾಗಿದೆ. ರಾಜ್ಯಸಭೆಯು ಸೋಮವಾರ ಹೊರಡಿಸಿದ ಬುಲೆಟಿನ್‌ನಲ್ಲಿ ಸಂಸತ್ತಿನ ಸದಸ್ಯರು ತಮ್ಮ ಭಾಷಣಗಳನ್ನು ಧನ್ಯವಾದಗಳು, ಜೈ ಹಿಂದ್, ಮತ್ತು ವಂದೇ ಮಾತರಂ ಮುಂತಾದ ನುಡಿಗಟ್ಟುಗಳೊಂದಿಗೆ ಮುಕ್ತಾಯಗೊಳಿಸಬಾರದು ಎಂದು ಸ್ಪಷ್ಟವಾಗಿ ಹೇಳಿದೆ.

ದೇಶವು ಪ್ರಸ್ತುತ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕುರಿತು ವಿವಾದದಲ್ಲಿ ಸಿಲುಕಿರುವಾಗ, ರಾಜ್ಯಸಭೆಯ ಬುಲೆಟಿನ್ ಕೂಡ ವಿವಾದವನ್ನು ಹುಟ್ಟುಹಾಕಿದೆ. ಹಲವಾರು ನಾಯಕರು ಬುಲೆಟಿನ್ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸ್ಪೀಕರ್ ನೀಡುವ ತೀರ್ಪುಗಳನ್ನು ಸದನದ ಒಳಗೆ ಅಥವಾ ಹೊರಗೆ ನೇರವಾಗಿ ಅಥವಾ ಪರೋಕ್ಷವಾಗಿ ಟೀಕಿಸಬಾರದು ಎಂದು ಅದು ಹೇಳಿದೆ.

ಒಬ್ಬ ಸದಸ್ಯರು ಮತ್ತೊಬ್ಬ ಸದಸ್ಯರನ್ನು ಟೀಕಿಸಿ, ನಂತರ ಅವರು ಉತ್ತರಿಸುವಾಗ ಗೈರುಹಾಜರಾದರೆ ಅದನ್ನು ವಿಶ್ವಾಸದ್ರೋಹವೆಂದು ಪರಿಗಣಿಸಲಾಗುತ್ತದೆ ಎಂದು ಬುಲೆಟಿನ್ ಹೇಳಿದೆ. ಯಾವುದೇ ಸದಸ್ಯರು ಮತ್ತೊಬ್ಬ ಸದಸ್ಯರು ಅಥವಾ ಸಚಿವರ ಬಗ್ಗೆ ಟೀಕೆ ಮಾಡಿದಾಗ, ಆ ವಿಮರ್ಶಕ ತನ್ನ ಉತ್ತರವನ್ನು ಕೇಳಲು ಸದನದಲ್ಲಿ ಹಾಜರಿರಬೇಕು ಎಂದು ನಿರೀಕ್ಷಿಸುವ ಹಕ್ಕನ್ನು ಹೊಂದಿರುತ್ತಾರೆ. ಅವರು ಉತ್ತರಿಸುವಾಗ ಗೈರುಹಾಜರಾಗುವುದು ಸಂಸದೀಯ ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ.

ಮತ್ತಷ್ಟು ಓದಿ: ನವೆಂಬರ್ 30ರಂದು ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ

ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 1 ರಂದು ಪ್ರಾರಂಭವಾಗಿ ಡಿಸೆಂಬರ್ 19 ರವರೆಗೆ ನಡೆಯಲಿದೆ. ಸಂಸತ್ತಿನ ಒಳಗೆ ಜೈ ಹಿಂದ್‌ ಮತ್ತು ವಂದೇ ಮಾತರಂ ಎಂದು ಹೇಳುವುದನ್ನು ನಿಷೇಧಿಸಲಾಗಿದೆ ಎಂಬ ಬಗ್ಗೆ ಕೆಲ ಮಾಧ್ಯಮಗಳ ವರದಿ ನೋಡಿದೆ. ಇದು ಕಳವಳಕಾರಿ. ರಾಜ್ಯದ ಅಸ್ಮಿತೆಯನ್ನು ಕುಂದಿಸುವ ಕ್ರಮವೇ ಇದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದರು.

ವಂದೇ ಮಾತರಂ ನಮ್ಮ ರಾಷ್ಟ್ರೀಯ ಗೀತೆ ಎಂಬುದನ್ನು ನಾವು ಮರೆಯಬಾರದು. ಇದನ್ನು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ಹೋರಾಟದಲ್ಲಿ ಬಳಸುತ್ತಿದ್ದರು. ಇದನ್ನು ಮರೆಯುವುದು ಹೇಗೆ, ಬಂಗಾಳದ ಅಸ್ಮಿತೆಯನ್ನು ಹಾಳು ಮಾಡಲು ಹೋರಟಿದ್ದಾರೆಯೇ? ಎಂದರು. ನಾವು ಅದನ್ನು ಏಕೆ ಹೇಳಬಾರದು? ನಾವು ಬಂಗಾಳಿಯಲ್ಲಿ ಜೈ ಬಾಂಗ್ಲಾ ಎಂದು ಹೇಳುತ್ತೇವೆ. ನಾವು ವಂದೇ ಮಾತರಂ ಎಂದು ಹೇಳುತ್ತೇವೆ. ಇದು ನಮ್ಮ ಸ್ವಾತಂತ್ರ್ಯ ಘೋಷಣೆ. ಇದು ರಾಷ್ಟ್ರಗೀತೆ. ಜೈ ಹಿಂದ್ ನೇತಾಜಿ (ಸುಭಾಷ್ ಚಂದ್ರ ಬೋಸ್) ಅವರ ಘೋಷಣೆ. ನಾವು ಈ ಘೋಷಣೆಗಾಗಿ ಹೋರಾಡಿದೆವು. ಇದು ನಮ್ಮ ದೇಶದ ಘೋಷಣೆ ಎಂದರು.

ಸಂಸತ್ತಿನ ಒಳಗೆ ಮತ್ತು ಆವರಣದಲ್ಲಿ ಜೈ ಹಿಂದ್‌ ಮತ್ತು ವಂದೇ ಮಾತರಂ ಅನ್ನು ಹೇಳುವಂತಿಲ್ಲ ಎಂದು 2024ರಲ್ಲಿ ರಾಜ್ಯಸಭಾ ಸಚಿವಾಲಯವು ಸಂಸದರಿಗೆ ಹೇಳಿತ್ತು. ಸಂಸತ್ತಿನ ಘನತೆಯನ್ನು ಮತ್ತು ಸಭ್ಯತೆಯನ್ನು ಕಾಪಾಡಲು ಇವುಗಳನ್ನು ಹೇಳುವಂತಿಲ್ಲ ಎಂದು ಸಚಿವಾಲಯ ಹೇಳಿತ್ತು. ‘ರಾಜ್ಯಸಭಾ ಸದಸ್ಯರ ಕೈಪಿಡಿ’ಯಲ್ಲಿ ಈ ಬಗ್ಗೆ ಉಲ್ಲೇಖವಿದೆ. 2024ರ ಅಧಿವೇಶನಕ್ಕೂ ಮೊದಲು ಈ ಕೈಪಿಡಿಯನ್ನು ಸಂಸದರಿಗೆ ನೀಡಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ