Ram Mandir Inauguration: ಅಯೋಧ್ಯೆಯ ರಾಮ ಮಂದಿರಕ್ಕೆ ಅಫ್ಘಾನಿಸ್ತಾನದಿಂದಲೂ ಬಂತು ವಿಶೇಷ ಉಡುಗೊರೆ

|

Updated on: Jan 21, 2024 | 11:59 AM

ಅಯೋಧ್ಯೆ(Ayodhya)ಯಲ್ಲಿ ಪೂರ್ಣಗೊಂಡಿರುವ ಭವ್ಯವಾದ ರಾಮಮಂದಿರ(Ram Mandir)ದಲ್ಲಿ ಪ್ರಾಣ ಪ್ರತಿಷ್ಠೆಯ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಇದಕ್ಕಾಗಿ ವಾರದಿಂದಲೇ ವೈದಿಕ ಆಚರಣೆಗಳು ಆರಂಭಗೊಂಡಿವೆ. ಅಫ್ಘಾನಿಸ್ತಾನವನ್ನು ಒಳಗೊಂಡಂತೆ ಪ್ರಪಂಚದಾದ್ಯಂತದ ಶ್ರೀರಾಮ ದೇವಾಲಯಕ್ಕೆ ಉಡುಗೊರೆಗಳು ಬರುತ್ತಿವೆ. ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಲೋಕ್ ಕುಮಾರ್ ಅವರು ಕಾಶ್ಮೀರ, ತಮಿಳುನಾಡು ಮತ್ತು ಅಫ್ಘಾನಿಸ್ತಾನದಿಂದ ಪಡೆದ ಉಡುಗೊರೆಗಳನ್ನು ಶ್ರೀರಾಮ ಮಂದಿರದ ಅನಿಲ್ ಮಿಶ್ರಾ ಅವರಿಗೆ ಹಸ್ತಾಂತರಿಸಿದ್ದಾರೆ.

Ram Mandir Inauguration: ಅಯೋಧ್ಯೆಯ ರಾಮ ಮಂದಿರಕ್ಕೆ ಅಫ್ಘಾನಿಸ್ತಾನದಿಂದಲೂ ಬಂತು ವಿಶೇಷ ಉಡುಗೊರೆ
ರಾಮ ಮಂದಿರ
Follow us on

ಅಯೋಧ್ಯೆ(Ayodhya)ಯಲ್ಲಿ ಪೂರ್ಣಗೊಂಡಿರುವ ಭವ್ಯವಾದ ರಾಮಮಂದಿರ(Ram Mandir)ದಲ್ಲಿ ಪ್ರಾಣ ಪ್ರತಿಷ್ಠೆಯ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಇದಕ್ಕಾಗಿ ವಾರದಿಂದಲೇ ವೈದಿಕ ಆಚರಣೆಗಳು ಆರಂಭಗೊಂಡಿವೆ. ಅಫ್ಘಾನಿಸ್ತಾನವನ್ನು ಒಳಗೊಂಡಂತೆ ಪ್ರಪಂಚದಾದ್ಯಂತದ ಶ್ರೀರಾಮ ದೇವಾಲಯಕ್ಕೆ ಉಡುಗೊರೆಗಳು ಬರುತ್ತಿವೆ. ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಲೋಕ್ ಕುಮಾರ್ ಅವರು ಕಾಶ್ಮೀರ, ತಮಿಳುನಾಡು ಮತ್ತು ಅಫ್ಘಾನಿಸ್ತಾನದಿಂದ ಪಡೆದ ಉಡುಗೊರೆಗಳನ್ನು ಶ್ರೀರಾಮ ಮಂದಿರದ ಅನಿಲ್ ಮಿಶ್ರಾ ಅವರಿಗೆ ಹಸ್ತಾಂತರಿಸಿದ್ದಾರೆ.

ಅಲೋಕ್ ಕುಮಾರ್ ಅವರು ಶ್ರೀರಾಮ ಮಂದಿರ ನಿರ್ಮಾಣದಿಂದ ಮುಸ್ಲಿಂ ಸಮುದಾಯವೂ ಸಂತೋಷವಾಗಿದೆ ಎಂದು ಹೇಳಿದ್ದಾರೆ. ರಾಮಮಂದಿರ ನಿರ್ಮಾಣದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ನಾವು ವಿವಿಧ ಧರ್ಮಗಳನ್ನು ಅನುಸರಿಸುತ್ತಿದ್ದರೂ ನಮ್ಮ ಪೂರ್ವಜರು ಒಂದೇ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ. 2 ಕೆಜಿ ಕುಂಕುಮದ ಜತೆಗೆ ಕಾಬೂಲ್​ ನದಿಯ ನೀರನ್ನು ಕೂಡ ಕಳುಹಿಸಿದ್ದಾರೆ. ತಮಿಳುನಾಡಿನ ರೇಷ್ಮೆ ತಯಾರಕರು ಶ್ರೀರಾಮ ದೇವಾಲಯದ ಚಿತ್ರವಿರುವ ರೇಷ್ಮೆ ಹಾಳೆಗಳನ್ನು ಕಳುಹಿಸಿದ್ದಾರೆ.

ಶಾರದಾ ಪೀಠದಿಂದ ಪವಿತ್ರ ನೀರು

ಯುವಕನೊಬ್ಬ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಶಾರದಾ ಪೀಠದ ಕುಂಡದಿಂದ ಪವಿತ್ರ ನೀರನ್ನು ಸಂಗ್ರಹಿಸಿ ಬ್ರಿಟನ್‌ನಿಂದ ಭಾರತಕ್ಕೆ ಪವಿತ್ರ ಸಮಾರಂಭದಲ್ಲಿ ಬಳಸಲು ಕಳುಹಿಸಿದ್ದಾರೆ. ರಾಮಮಂದಿರದ ಪ್ರತಿಷ್ಠಾಪನೆಗಾಗಿ ಭಾರತದ ನೆರೆಯ ರಾಷ್ಟ್ರ ನೇಪಾಳದಿಂದ ಶೂಗಳು, ಆಭರಣಗಳು ಮತ್ತು ಬಟ್ಟೆಗಳನ್ನು ಒಳಗೊಂಡಂತೆ 3,000 ಕ್ಕೂ ಹೆಚ್ಚು ಉಡುಗೊರೆಗಳನ್ನು ನೀಡಲಾಗಿದೆ.

ಮತ್ತಷ್ಟು ಓದಿ: ರಾಮಮಂದಿರ ನಿರ್ಮಾಣಕ್ಕೆ ಯಾವ ರಾಜ್ಯ ಯಾವ ರೀತಿಯ ವಸ್ತುಗಳನ್ನು ಒದಗಿಸಿದೆ?

ನೇಪಾಳದ ಜನಕಪುರವನ್ನು ರಾಮನ ಪತ್ನಿ ಸೀತೆಯ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರಿಗೆ ಜನಕಪುರದ ಜಾನಕಿ ದೇವಸ್ಥಾನದ ಮಹಂತ್ ರಾಮ್ ರೋಷನ್ ದಾಸ್ ಅವರು ಸುಂದರವಾಗಿ ಅಲಂಕರಿಸಿದ ಸ್ಮರಣಿಕೆಗಳನ್ನು ನೀಡಿದರು. ರಾಮಾಯಣದ ಪ್ರಕಾರ, ರಾಮನು ಅಯೋಧ್ಯೆಯಲ್ಲಿ ಸೀತೆಯನ್ನು ಮದುವೆಯಾದನು ಮತ್ತು ಅವಳ ತಾಯಿಯ ಹೆಸರು ಜಾನಕಿ.

ನೇಪಾಳದಿಂದ ಚಿನ್ನ, ಬೆಳ್ಳಿ, ಬಟ್ಟೆಗಳ ಉಡುಗೊರೆ

ಇದಲ್ಲದೆ, ಚಿನ್ನ ಮತ್ತು ಬೆಳ್ಳಿ ವಸ್ತುಗಳು, ಪೀಠೋಪಕರಣಗಳು, ಬಟ್ಟೆಗಳು, ಹಣ್ಣುಗಳು, ಸೌಂದರ್ಯವರ್ಧಕಗಳು ಮತ್ತು ರುಚಿಕರವಾದ ಆಹಾರ ಪದಾರ್ಥಗಳು ಸೇರಿವೆ. ಶ್ರೀಲಂಕಾದ ನಿಯೋಗವು ಅಯೋಧ್ಯೆಗೆ ಭೇಟಿ ನೀಡಿತ್ತು ಮತ್ತು ರಾಮ ಜನ್ಮಭೂಮಿಗೆ ಪುರಾಣ ಪ್ರಸಿದ್ಧ ಅಶೋಕ ವಾಟಿಕಾದೊಂದಿಗೆ ಸಂಬಂಧಿಸಿದ ಒಂದು ಕಲ್ಲನ್ನು ಅರ್ಪಿಸಿತು.

ಅಶೋಕ ವಾಟಿಕಾ ಉದ್ಯಾನವು ನುವಾರಾ ಎಲಿಯದ ರೆಸಾರ್ಟ್ ಪಟ್ಟಣದ ಸಮೀಪದಲ್ಲಿದೆ ಎಂದು ನಂಬಲಾಗಿದೆ. ರಾಮಮಂದಿರದ ಬಗ್ಗೆ ಅಮೆರಿಕದಲ್ಲಿ ಅದ್ಭುತ ಉತ್ಸಾಹ ಕಂಡು ಬರುತ್ತಿದೆ. ಅಲ್ಲಿನ ರಸ್ತೆಗಳಲ್ಲಿ ರಾಮನ ಚಿತ್ರವಿರುವ ದೊಡ್ಡ ಫಲಕಗಳನ್ನು ಹಾಕಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ