AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramanujacharya Statue: ರಾಮಾನುಜಾಚಾರ್ಯ ಸಹಸ್ರಾಬ್ದಿ ಕಾರ್ಯಕ್ರಮಗಳ ಆರಂಭಕ್ಕೆ ಭರದ ಸಿದ್ಧತೆ

ಶ್ರೀ ರಾಮಾನುಜಾಚಾರ್ಯರ 1003ನೇ ಜಯಂತಿ ಅಂಗವಾಗಿ ಸಮತಾಮೂರ್ತಿ ಸ್ಥಾಪನೆಯಾಗಲಿದ್ದು, 14 ದಿನಗಳ ಉತ್ಸವದಲ್ಲಿ ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅನೇಕ ಕೇಂದ್ರ ಸಚಿವರುಗಳು, 9 ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ.

Ramanujacharya Statue: ರಾಮಾನುಜಾಚಾರ್ಯ ಸಹಸ್ರಾಬ್ದಿ ಕಾರ್ಯಕ್ರಮಗಳ ಆರಂಭಕ್ಕೆ ಭರದ ಸಿದ್ಧತೆ
ಶ್ರೀ ರಾಮಾನುಜಾಚಾರ್ಯ ಸಹಸ್ರಾಬ್ದಿ ಕಾರ್ಯಕ್ರಮಗಳ ಆರಂಭ
TV9 Web
| Updated By: ಸಾಧು ಶ್ರೀನಾಥ್​|

Updated on:Feb 02, 2022 | 2:54 PM

Share

ದೀರ್ಘ ಕಾಲದಿಂದ ನಿರೀಕ್ಷಣೆಯಲ್ಲಿದ್ದ ಶ್ರೀ ರಾಮಾನುಜಾಚಾರ್ಯ ಸಹಸ್ರಾಬ್ದಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಮತಾಮೂರ್ತಿ (Statue of Equality) ಎಂದು ಜನಜನಿತರಾದ ಸಂತ ಶ್ರೀ ರಾಮಾನುಜಾಚಾರ್ಯರ 218 ಅಡಿ ಎತ್ತರದ ಬೃಹತ್​ ವಿಗ್ರಹವನ್ನು (ramanujacharya statue inauguration) ಜನ ಕಣ್ತುಂಬಿಕೊಳ್ಳಲಿದ್ದಾರೆ. ಸಂತ ಶ್ರೀ ರಾಮಾನುಜಾಚಾರ್ಯರು 11 ನೇ ಶತಮಾನದಲ್ಲಿ ಭಾರತದಲ್ಲಿ ಜನ್ಮವೆತ್ತಿದ ಹಿಂದೂ ವೇದಾಂತ ತತ್ತ್ವಜ್ಞಾನಿ. ಭಕ್ತಿ, ಶರಣಾಗತಿ, ಸೇವೆ ಅಂತಹ ಸುಗುಣಗಳೊಂದಿಗೆ ಭಗವಂತನ ಭಕ್ತಿ ಪಥದಲ್ಲಿ ಸಾಗಿದ ಮಹಾನ್​ ಸಂತ ಶ್ರೀ ರಾಮಾನುಜಾಚಾರ್ಯ. ಶ್ರೀ ರಾಮಾನುಜಾಚಾರ್ಯರ 1003ನೇ ಜಯಂತಿ ಅಂಗವಾಗಿ ಸಮತಾಮೂರ್ತಿ ಸ್ಥಾಪನೆ ಕೈಂಕರ್ಯ ವಿಜೃಂಭಣೆಯಿಂದ ನಡೆದಿದೆ. ಹೈದರಾಬಾದ್​ ಬಳಿಯಿರುವ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ಮುಚ್ಚಿಂತಲ್​ (Muchinthal) ಬಳಿ ಶ್ರೀ ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ ಆಶ್ರಮದಲ್ಲಿ ಈ ಮಹಾಮೂರ್ತಿ ಪ್ರತಿಷ್ಠಾಪನೆಗೊಂಡಿದೆ. ಮಹಾಮೂರ್ತಿಯ ಉದ್ಘಾಟನೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ಶ್ರೀ ರಾಮಾನುಜಾಚಾರ್ಯರ 1003ನೇ ಜಯಂತಿ ಅಂಗವಾಗಿ ಸಮತಾಮೂರ್ತಿ ಸ್ಥಾಪನೆಯಾಗಲಿದ್ದು, 14 ದಿನಗಳ ಉತ್ಸವದಲ್ಲಿ (ಫೆಬ್ರವರಿ 2 ರಿಂದ ಫೆಬ್ರವರಿ 14 ವರೆಗೂ) ಯಾರೆಲ್ಲಾ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂಬುದನ್ನು ನೋಡುವುದಾದರೆ ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅನೇಕ ಕೇಂದ್ರ ಸಚಿವರುಗಳು, 9 ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ.

ಸಮಾನತೆಯನ್ನು ಸಾರಿದ ವೈಷ್ಣವ ಸಂತ ರಾಮಾನುಜಾಚಾರ್ಯ ಸ್ವಾಮಿಗಳು ಹುಟ್ಟಿ 1000 ವರ್ಷಗಳು ಸಂದಿವೆ . ಅವರ ನೆನಪಿಗಾಗಿ, ಹೈದರಾಬಾದಿನ ಸಮೀಪವಿರುವ ಶಂಶಾಬಾದ್‌ನಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗಿದೆ. ಸುಮಾರು 1000 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಇದು ನಿರ್ಮಾಣವಾಗುತ್ತಿದೆ. ರಾಮಾನುಜಾಚಾರ್ಯರ ಪ್ರತಿಮೆಗೆ ಸಮತಾಮೂರ್ತಿ (Statue of Equality) ಎಂದೂ ಕರೆಯಲಾಗುತ್ತಿದೆ.

ಇದು ವಿಶ್ವದ ಎರಡನೇ ಅತಿ ಎತ್ತರದ ಪ್ರತಿಮೆಯಾಗಿದೆ. ಸುಮಾರು 216 ಅಡಿ ಉದ್ದವಿರುವ ಈ ಪ್ರತಿಮೆಯ ನಿರ್ಮಾಣಕ್ಕೆ 1800 ಟನ್‌ಗಳಿಗಿಂತ ಹೆಚ್ಚು ಪಂಚ ಲೋಹಗಳನ್ನು ಬಳಸಲಾಗಿದೆ. ದೇವಾಲಯದ ಕುರಿತು ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ ಅವರು ಟಿವಿ9 ಭಾರತವರ್ಷದೊಂದಿಗೆ ವಿಶೇಷ ಸಂವಾದದಲ್ಲಿ ವಿವರವಾಗಿ ಮಾತನಾಡಿದ್ದಾರೆ.

ಪ್ರಧಾನಿ ಮೋದಿಯಿಂದ ಶನಿವಾರ ಉದ್ಘಾಟನೆ: ಮಾಹಾ ಯಜ್ಞಗಳನ್ನು 1,035 ಕುಂಡಗಳೊಂದಿಗೆ ಪ್ರತಿ ದಿನ ಫೆಬ್ರವರಿ 14 ವರೆಗೂ ನೆರವೇರಲಿದೆ. ಸಮತಾಮೂರ್ತಿ ಎಂದು ಜನಜನಿತರಾದ ಸಂತ ಶ್ರೀ ರಾಮಾನುಜಾಚಾರ್ಯರ 218 ಅಡಿ ಎತ್ತರದ ಬೃಹತ್​ ವಿಗ್ರಹವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೆಬ್ರವರಿ 5 ಶನಿವಾರ ಉದ್ಘಾಟಿಸಲಿದ್ದಾರೆ. ಇದು ವಿಶ್ವದ ಎರಡನೇ ಅತಿ ಎತ್ತರದ ಪ್ರತಿಮೆಯಾಗಿದೆ. ಹೈದರಾಬಾದಿಗೆ ಅಂಟಿಕೊಂಡಿರುವ ಆರ್ ಆರ್​ ಜಿಲ್ಲೆ ವ್ಯಾಪ್ತಿಯಲ್ಲಿರುವ ಮುಚ್ಚಿಂತಲ್​ದಲ್ಲಿ 40 ಎಕರೆ ಪ್ರದೇಶದಲ್ಲಿರುವ ಶ್ರೀ ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ ಆಶ್ರಮದಲ್ಲಿ ಸುಮಾರು 216 ಅಡಿ ಎತ್ತರದ ಈ ಪ್ರತಿಮೆಯ ನಿರ್ಮಾಣಕ್ಕೆ 1800 ಟನ್‌ಗಳಿಗಿಂತ ಹೆಚ್ಚು ಪಂಚ ಲೋಹಗಳನ್ನು ಬಳಸಲಾಗಿದೆ.

Also Read: Ramanujacharya Sahasrabdi: ಮುಚ್ಚಿಂತಲ್​ದಲ್ಲಿ ಘನವಾಗಿ ಆರಂಭವಾದ ರಾಮಾನುಜಾಚಾರ್ಯರ ಸಹಸ್ರಾಬ್ದಿ ಕಾರ್ಯಕ್ರಮ

Also Read: Statue of Equality: ಶ್ರೀರಾಮಾನುಜಾಚಾರ್ಯರ ಪ್ರತಿಮೆ ಅನಾವರಣಕ್ಕೆ ಬರಲು ಒಪ್ಪಿಗೆ ನೀಡಿದ ಮೋದಿ

Published On - 11:20 am, Wed, 2 February 22

ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ