Ramanujacharya Sahasrabdi: 5000 ವೇದಪಂಡಿತರು, 1035 ಯಾಗಕುಂಡದಲ್ಲಿ ಲಕ್ಷ್ಮೀನಾರಾಯಣ ಮಹಾಯಜ್ಞ ಆರಂಭ

ಹೀಗಾಗಿ ಶ್ರೀರಾಮಾನುಜಾಚಾರ್ಯರ 1,000ನೇ ಜನ್ಮೋತ್ಸವವನ್ನು ಸಮಾನತೆಯ ಉತ್ಸವ ಎಂಬ ನೆಲೆಯಲ್ಲಿ ಆಚರಣೆ ಮಾಡಲಾಗುತ್ತಿದೆ. ಮಹಾಯಾಗ ಸಮಾರಂಭದ ಎಲ್ಲಾ 12 ದಿನಗಳಲ್ಲಿ ಕೂಡ ಅಷ್ಟಾಕ್ಷರಿ ಮಹಾಮಂತ್ರ ಪಠಣ ನಡೆಯಲಿದೆ. ಯಾಗದ ಮುಕ್ತಾಯದ ವೇಳೆಗೆ ಮಂತ್ರ ಪಠಣ 1 ಕೋಟಿ ಸಂಖ್ಯೆ ತಲುಪಲಿದೆ.

Ramanujacharya Sahasrabdi: 5000 ವೇದಪಂಡಿತರು, 1035 ಯಾಗಕುಂಡದಲ್ಲಿ ಲಕ್ಷ್ಮೀನಾರಾಯಣ ಮಹಾಯಜ್ಞ ಆರಂಭ
ಶ್ರೀ ರಾಮಾನುಜಾಚಾರ್ಯ ಸಹಸ್ರಾಬ್ದಿ ಕಾರ್ಯಕ್ರಮಗಳ ಆರಂಭ
Follow us
TV9 Web
| Updated By: ganapathi bhat

Updated on:Feb 02, 2022 | 6:05 PM

ಹೈದರಾಬಾದ್: ಶ್ರೀರಾಮಾನುಜಾಚಾರ್ಯರ 1000ನೇ ಜನ್ಮೋತ್ಸವವನ್ನು/ ಸಹಸ್ರಾಬ್ಧಿ ಸಮಾರೋಹಮ್​ನ್ನು ಇಲ್ಲಿನ ಮುಂಚಿತಾಲ್ ಶಮ್ಶಾಬಾದ್​ನಲ್ಲಿ ಆಚರಿಸಲಾಗುತ್ತಿದೆ. ಈ ವೇಳೆ, ಸಮಾನತೆಯ ಮೂರ್ತಿ (Statue of Equality) ಇರುವ 45 ಎಕರೆ ಪ್ರದೇಶದಲ್ಲಿ ಇಂದು (ಫೆಬ್ರವರಿ 2) ಶ್ರೀ ಲಕ್ಷ್ಮೀ ನಾರಾಯಣ ಮಹಾ ಯಜ್ಞ ನಡೆಸಲಾಗಿದೆ. ಸುಮಾರು 5,000 ವೇದ ಪಂಡಿತರು, 1,035 ಯಾಗ ಕುಂಡದಲ್ಲಿ, 144 ಯಾಗಶಾಲೆಯಲ್ಲಿ ಈ ಮಹಾಯಾಗವನ್ನು ನಡೆಸಿಕೊಟ್ಟಿದ್ದಾರೆ. ಆಧುನಿಕ ಇತಿಹಾಸದಲ್ಲಿ ಇದು ಜಗತ್ತಿನ ಬೃಹತ್ ಯಾಗ ಎಂದು ಪರಿಗಣಿಸಬಹುದಾಗಿದೆ. ಈ ಮಹಾಯಜ್ಞವು ಮುಂದಿನ 14 ದಿನಗಳವರೆಗೆ ನಡೆಯಲಿದೆ. ಚಿನ್ನ ಜೀಯರ್ ಸ್ವಾಮೀಜಿ ಮಹಾಯಜ್ಞದಲ್ಲಿ ಭಾಗಿ ಆಗಿದ್ದಾರೆ.

ಈ ಸಂದರ್ಭ ಚತುರ್ವೇದಗಳ ಒಂಭತ್ತು ಶಾಖೆಗಳ ವೇದಪಠಣವೂ ನಡೆಸಲಾಗಿದೆ. ಅಷ್ಟಾಕ್ಷರಿ ಮಹಾಮಂತ್ರ, ಪುರಾಣ, ಆಗಮಗಳನ್ನು ಪಠಿಸಲಾಗಿದೆ. ಭಾಗವಹಿಸಿದ ಎಲ್ಲರಿಗೂ ಮಹಾಪ್ರಸಾದವನ್ನು ದಿನಪೂರ್ತಿ ನೀಡಲಾಗಿದೆ. ಮಹಾಯಾಗ ಸಮಾರಂಭದ ಎಲ್ಲಾ 12 ದಿನಗಳಲ್ಲಿ ಕೂಡ ಅಷ್ಟಾಕ್ಷರಿ ಮಹಾಮಂತ್ರ ಪಠಣ ನಡೆಯಲಿದೆ. ಯಾಗದ ಮುಕ್ತಾಯದ ವೇಳೆಗೆ ಮಂತ್ರ ಪಠಣ 1 ಕೋಟಿ ಸಂಖ್ಯೆ ತಲುಪಲಿದೆ.

ಮಹಾಯಾಗಕ್ಕೆ ಹೋಮಿಸಿದ ವಸ್ತುಗಳ ಪೈಕಿ 1.5 ಲಕ್ಷ ಕಿಲೋ ಗ್ರಾಂನಷ್ಟು ದೇಸಿ ಹಸುವಿನ ಶುದ್ಧ ತುಪ್ಪ, ಸಮಿತ್ತು, ಯಜ್ಞ ವೃಕ್ಷದ ಕಟ್ಟಿಗೆ, ಕೆಂಪು ಮಣ್ಣು, ಗೋಮಯ ಬಳಸಲಾಗಿದೆ. ಯಾಗಕ್ಕೆ ಹಸುವಿನ ತುಪ್ಪ ತಯಾರಿ ಕಾರ್ಯವನ್ನು ಚಿನ್ನ ಜೀಯರ್ ಸ್ವಾಮೀಜಿ 6 ತಿಂಗಳ ಹಿಂದೆ ಆರಂಭಿಸಲಾಗಿರುವುದು ವಿಶೇಷವಾಗಿದೆ.

ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಲಿಂಗ, ಆರ್ಥಿಕ, ಸ್ವಾತಂತ್ರ್ಯ, ಸಮಾನತೆಯನ್ನು ಶ್ರೀ ಚಿನ್ನ ಜೀಯರ್ ಸ್ವಾಮೀಜಿ ನೀಡಿದರು. ಪ್ರತಿಯೊಬ್ಬ ಮನುಷ್ಯ ಕೂಡ ದೇಶ, ಲಿಂಗ, ಜಾತಿ, ಮತ, ಪಂಥ ಹೊರತಾಗಿ ಸಮಾನರು. ಹೀಗಾಗಿ ಶ್ರೀರಾಮಾನುಜಾಚಾರ್ಯರ 1,000ನೇ ಜನ್ಮೋತ್ಸವವನ್ನು ಸಮಾನತೆಯ ಉತ್ಸವ ಎಂಬ ನೆಲೆಯಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದು ಚಿನ್ನ ಜೀಯರ್ ಸ್ವಾಮೀಜಿ ಹೇಳಿದ್ದಾರೆ. ವಸುಧೈವ ಕುಟುಂಬಕಂ ಎಂಬ ನೆಲೆಯಲ್ಲಿ ತಮ್ಮ ಚಿಂತನೆ ನೀಡಿದ್ದಾರೆ.

ಯಾಗದ ಮಂತ್ರಪಠಣದಿಂದ ಎಲ್ಲರಿಗೂ ಒಳ್ಳೆಯದಾಗಲಿದೆ. ಯಜ್ಞಕ್ಕೆ ಬಳಸುವ ಪ್ರತಿ ವಸ್ತುವು ಕೂಡ ಪವಿತ್ರವಾಗಿದೆ. ಯಾಗದಿಂದ ಹೊರಬರುವ ಹೊಗೆ ಹಾಗೂ ಶಕ್ತಿಯು ಜನರನ್ನು ಹಾಗೂ ಪರಿಸರವನ್ನು ಪ್ರಭಾವಿಸುತ್ತದೆ. ಇಂತಹ ಯಾಗದಲ್ಲಿ ಭಾಗವಹಿಸುವುದು ಉತ್ತಮದ್ದಾಗಿದೆ. ಜಗತ್ತಿನ ವಿವಿಧ ಭಾಗದಿಂದ ಸಾವಿರಾರು ಮಂದಿ ಈ ಯಾಗದಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿರುವುದು ಸಂತೋಷದ ಸುದ್ದಿಯಾಗಿದೆ ಎಂದು ಚಿನ್ನ ಜೀಯರ್ ಸ್ವಾಮೀಜಿ ಹೇಳಿದ್ದಾರೆ.

ಇಲ್ಲಿನ ಸಮಾನತೆಯ ಮೂರ್ತಿ (Statue of Equality) ಉದ್ಘಾಟನೆಯು ಈ ಅವಧಿಯಲ್ಲಿ ನಡೆಯಲಿದೆ. ರಾಮಾನುಜಾಚಾರ್ಯರ 216 ಅಡಿ ಎತ್ತರದ ಕುಳಿತ ಭಂಗಿಯಲ್ಲಿ ಇರುವ ಮೂರ್ತಿ ಇಲ್ಲಿನ ವಿಶೇಷವಾಗಿದೆ. ಫೆಬ್ರವರಿ 5ರಂದು ಪ್ರಧಾನಿ ನರೇಂದ್ರ ಮೋದಿ ಸಮಾನತೆಯ ಮೂರ್ತಿಯನ್ನು ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ: Ramanujacharya Sahasrabdi: ಮುಚ್ಚಿಂತಲ್​ದಲ್ಲಿ ಘನವಾಗಿ ಆರಂಭವಾದ ರಾಮಾನುಜಾಚಾರ್ಯರ ಸಹಸ್ರಾಬ್ದಿ ಕಾರ್ಯಕ್ರಮ

ಇದನ್ನೂ ಓದಿ: Statue of Equality: ಶ್ರೀರಾಮಾನುಜಾಚಾರ್ಯರ ಪ್ರತಿಮೆ ಅನಾವರಣಕ್ಕೆ ಬರಲು ಒಪ್ಪಿಗೆ ನೀಡಿದ ಮೋದಿ

Published On - 5:22 pm, Wed, 2 February 22

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ