Ramanujacharya Sahasrabdi: ಸಂತ ಶ್ರೀ ರಾಮಾನುಜಾಚಾರ್ಯರು ಹುಟ್ಟಿ 1,000 ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಸಮೀಪ ಅವರ ಪ್ರತಿಮೆ ನಿರ್ಮಿಸಲಾಗುತ್ತಿದ್ದು, ಅದಕ್ಕೆ ‘ಸಮಾನತೆಯ ಪ್ರತಿಮೆ’ ಎಂದು ಹೆಸರಿಡಲಾಗಿದೆ. ಈ ಸಂದರ್ಭದಲ್ಲಿ ರಾಮಾನುಜಾಚಾರ್ಯ ಸಹಸ್ರಾಬ್ದಿ ಕಾರ್ಯಕ್ರಮಗಳು ಮುಚ್ಚಿಂತಲ್ದಲ್ಲಿ (Muchinthal) ಇಂದು ಮಂಗಳವಾರ ಬೆಳಗ್ಗೆ 8.30ರ ಸುಮುಹೂರ್ತದಲ್ಲಿ ಆರಂಭಗೊಂಡಿದೆ. ಶ್ರೀ ರಾಮಚಂದ್ರ ವಿಗ್ರಹವನ್ನು ಕುದುರೆಯ ಮೇಲಿಟ್ಟು ಮೆರವಣಿಗೆ ಮೂಲಕ ತರಲಾಯಿತು. ಅದಕ್ಕೂ ಮುಂಚೆ ಬೆಳಗಿನ ಜಾವ ವಾಸ್ತು ಆರಾಧನೆಯೂ ನಡೆಯಿತು. ಇಂದು ಸಂಜೆ 5 ಗಂಟೆಗೆ ವಿಶೇಷ ಕಾರ್ಯಕ್ರಮಗಳು ಜರುಗಲಿವೆ.
ಮುಚ್ಚಿಂತಲ್ದಲ್ಲಿ ಶ್ರೀ ಶ್ರೀ ಶ್ರೀ ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ ಆಶ್ರಮದಲ್ಲಿ (Chinna Jeeyar Swamy Ashram) ಶ್ರೀ ರಾಮಾನುಜಾಚಾರ್ಯ ಸಹಸ್ರಾಬ್ದಿ ಸಮಾರೋಪ ಉತ್ಸವಗಳು ಘನವಾಗಿ ಆರಂಭಗೊಂಡಿವೆ. ಈ ಉತ್ಸವಕ್ಕಾಗಿ ಅತಿರಥ ಮಹಾರಥಲು ಹಾಜರಾಗಲಿದ್ದಾರೆ. ಉತ್ಸವಕ್ಕೆ ಸಂಬಂಧಪಟ್ಟಂತೆ ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಸಾಂಗೋಪಂಗವಾಗಿ ನೆರವೇರತೊಡಗಿದೆ. ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ವತಃ ಶ್ರೀ ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ ಅವರು ಗಣ್ಯರಿಗೆ ಆಮಂತ್ರಣ ನೀಡಿದ್ದಾರೆ. ಶ್ರೀ ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ ಆಶ್ರಮದಲ್ಲಿ ಶ್ರೀ ರಾಮಚಂದ್ರನ ವಿಗ್ರಹದ ಜೊತೆಗೆ 108 ವಿಷ್ಣು ಆಲಯಗಳ ಪ್ರತಿಷ್ಠಾಪನೆ ಸಹ ನಡೆದಿದೆ.
ಬೆಳಗ್ಗೆ ಶ್ರೀ ರಾಮಾನುಜಾಚಾರ್ಯ ಸಹಸ್ರಾಬ್ದಿ ಸಮಾರಂಭ ಪ್ರಾರಂಭವಾಗಿದೆ. ಬೆಳಗಿನ ಜಾವ ವಾಸ್ತು ಆರಾಧನೆಯೂ ನಡೆಯಿತು. ಇಂದು ಸಂಜೆ 5 ಗಂಟೆಗೆ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಉತ್ಸವದ ಅಂಗವಾಗಿ 12 ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. 128 ಯಾಗ ಶಾಲೆಗಳಲ್ಲಿ 5 ಸಾವಿರ ಮಂದಿ ಋತ್ವಿಕರು 4 ವೇದಗಳ ಪಾರಾಯಣ ಮಾಡಲಿದ್ದಾರೆ. ಹೋಮ, ಹವನ, ಕೋಟಿ ನಾರಾಯಣ ಜಪ, ಕೋಟಿ ಹವನ, ಗೋಪೂಜೆ ನೆರವೇರಲಿದೆ. ಹೋಮಕ್ಕಾಗಿ ವಿವಿಧ ರಾಜ್ಯಗಳಿಂದ ತಂದಿರುವ 2 ಲಕ್ಷ ಕೆಜಿ ದೇಶೀ ಹಸುವಿನ ತುಪ್ಪವನ್ನು ಬಳಸಲಾಗುವುದು. ಇನ್ನು, ಫೆಬ್ರವರಿ 14ರಂದು ಪೂರ್ಣಾಹುತಿ ಕಾರ್ಯ್ರಮಕ್ಕೆ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಉಪಸ್ಥಿತರಾಗಲಿದ್ದಾರೆ.
ಪ್ರಧಾನಿ ಮೋದಿಯಿಂದ ಶನಿವಾರ ಉದ್ಘಾಟನೆ:
ಮಾಹಾ ಯಜ್ಞಗಳನ್ನು 1,035 ಕುಂಡಗಳೊಂದಿಗೆ ಪ್ರತಿ ದಿನ ಫೆಬ್ರವರಿ 14 ವರೆಗೂ ನೆರವೇರಲಿದೆ. ಸಮತಾಮೂರ್ತಿ ಎಂದು ಜನಜನಿತರಾದ ಸಂತ ಶ್ರೀ ರಾಮಾನುಜಾಚಾರ್ಯರ 218 ಅಡಿ ಎತ್ತರದ ಬೃಹತ್ ವಿಗ್ರಹವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೆಬ್ರವರಿ 5 ಶನಿವಾರ ಉದ್ಘಾಟಿಸಲಿದ್ದಾರೆ. ಇದು ವಿಶ್ವದ ಎರಡನೇ ಅತಿ ಎತ್ತರದ ಪ್ರತಿಮೆಯಾಗಿದೆ. ಹೈದರಾಬಾದಿಗೆ ಅಂಟಿಕೊಂಡಿರುವ ಆರ್ ಆರ್ ಜಿಲ್ಲೆ ವ್ಯಾಪ್ತಿಯಲ್ಲಿರುವ ಮುಚ್ಚಿಂತಲ್ದಲ್ಲಿ 40 ಎಕರೆ ಪ್ರದೇಶದಲ್ಲಿರುವ ಶ್ರೀ ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ ಆಶ್ರಮದಲ್ಲಿ ಸುಮಾರು 216 ಅಡಿ ಎತ್ತರದ ಈ ಪ್ರತಿಮೆಯ ನಿರ್ಮಾಣಕ್ಕೆ 1800 ಟನ್‌ಗಳಿಗಿಂತ ಹೆಚ್ಚು ಪಂಚ ಲೋಹಗಳನ್ನು ಬಳಸಲಾಗಿದೆ.
ಇದನ್ನೂ ಓದಿ:
Statue of Equality: ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿರುವ ಸಮಾನತೆಯ ಮೂರ್ತಿ ಬಗ್ಗೆ ನಿಮಗೆಷ್ಟು ತಿಳಿದಿದೆ?
ಇದನ್ನೂ ಓದಿ:
Statue of Equality: ದಿವ್ಯ ಸಾಕೇತಂ ಆಶ್ರಮದಲ್ಲಿ ತ್ರಿದಂಡಿ ಚಿನ್ನಜೀಯರ್ ಶ್ರೀಗಳ ಸುದ್ದಿಗೋಷ್ಠಿ
Published On - 10:28 am, Wed, 2 February 22