ನನ್ನ ತಂದೆಯಂತೆ ತತ್ವ, ಸಿದ್ಧಾಂತಕ್ಕಾಗಿ ಸಚಿವ ಸ್ಥಾನ ಬಿಟ್ಟುಕೊಡಲೂ ಸಿದ್ಧ; ಚಿರಾಗ್ ಪಾಸ್ವಾನ್ ಅಚ್ಚರಿಯ ಹೇಳಿಕೆ

|

Updated on: Oct 01, 2024 | 6:51 PM

ಸಂವಿಧಾನ ಅಥವಾ ಮೀಸಲಾತಿಯನ್ನು ತಿದ್ದಿದರೆ ಅಥವಾ ವಂಚಿತ ವರ್ಗದ ಜನರಿಗೆ ಯಾವುದಾದರೂ ಅನ್ಯಾಯವಾದರೆ ನಾನು ನನ್ನ ಸಚಿವ ಸ್ಥಾನವನ್ನು ಕೂಡ ಬಿಟ್ಟುಕೊಡಲು ಸಿದ್ಧ ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಇಂದು ಹೇಳಿಕೆ ನೀಡುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ತಮ್ಮ ದಿವಂಗತ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರಂತೆ ತತ್ವ, ಸಿದ್ಧಾಂತಗಳಿಗಾಗಿ ಸಚಿವ ಸ್ಥಾನವನ್ನೂ ಬಿಟ್ಟುಕೊಡಲು ತಯಾರಿದ್ದೇನೆ ಎಂದು ಚಿರಾಗ್ ಹೇಳಿದ್ದಾರೆ.

ನನ್ನ ತಂದೆಯಂತೆ ತತ್ವ, ಸಿದ್ಧಾಂತಕ್ಕಾಗಿ ಸಚಿವ ಸ್ಥಾನ ಬಿಟ್ಟುಕೊಡಲೂ ಸಿದ್ಧ; ಚಿರಾಗ್ ಪಾಸ್ವಾನ್ ಅಚ್ಚರಿಯ ಹೇಳಿಕೆ
ಚಿರಾಗ್ ಪಾಸ್ವಾನ್
Follow us on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಚಿರಾಗ್ ಪಾಸ್ವಾನ್ ತಮ್ಮ ಇತ್ತೀಚಿನ ಹೇಳಿಕೆಯ ಮೂಲಕ ಚರ್ಚೆಗೆ ಕಾರಣರಾಗಿದ್ದಾರೆ. ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥರಾದ ಚಿರಾಗ್ ಪಾಸ್ವಾನ್ ತಮ್ಮ ದಿವಂಗತ ತಂದೆ ರಾಮ್ ವಿಲಾಸ್ ಪಾಸ್ವಾನ್ ಸ್ಥಾಪಿಸಿದ ಪೂರ್ವನಿದರ್ಶನವನ್ನು ಇಟ್ಟುಕೊಂಡು ತಮ್ಮ ತತ್ವಗಳ ಮೇಲೆ ರಾಜಿ ಮಾಡಿಕೊಳ್ಳುವ ಬದಲು ತಮ್ಮ ಸಚಿವ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧ ಇರುವುದಾಗಿ ಹೇಳಿದ್ದಾರೆ.

“ನರೇಂದ್ರ ಮೋದಿ ಪ್ರಧಾನಿಯಾಗಿರುವವರೆಗೂ ನಾನು ಎನ್‌ಡಿಎಯಲ್ಲಿರುತ್ತೇನೆ” ಎಂದು ಚಿರಾಗ್ ಪಾಸ್ವಾನ್ ಸಮರ್ಥಿಸಿಕೊಂಡಿದ್ದಾರೆ. ತತ್ವ, ಆದರ್ಶಗಳಿಗಾಗಿ ನನ್ನ ತಂದೆಯಂತೆ ನನ್ನ ಮಂತ್ರಿ ಸ್ಥಾನವನ್ನು ತ್ಯಜಿಸಲು ನಾನು ಹಿಂಜರಿಯುವುದಿಲ್ಲ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ. ಮೋದಿಯನ್ನು ಹೊಗಳಿದ ಚಿರಾಗ್ ಪಾಸ್ವಾನ್, ಪ್ರಸ್ತುತ ಆಡಳಿತವು ದಲಿತರ ಬಗ್ಗೆ ಅವರ ಕಾಳಜಿಗೆ ಸಂವೇದನಾಶೀಲವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಜಾತೀಯತೆ ಮೂಲಕ ದೇಶಭಕ್ತಿಯನ್ನು ಹತ್ತಿಕ್ಕಲು ಕಾಂಗ್ರೆಸ್ ಪ್ರಯತ್ನ; ಹರಿಯಾಣ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ

“ನನ್ನ ತಂದೆ ಯುಪಿಎ ಸರ್ಕಾರದಲ್ಲಿಯೂ ಸಚಿವರಾಗಿದ್ದರು. ಮತ್ತು ದಲಿತರ ಹಿತಾಸಕ್ತಿಗಳಿಗೆ ಧಕ್ಕೆ ತರುವ ಹಲವು ಸಂಗತಿಗಳು ಆಗ ನಡೆದವು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿತ್ರಗಳನ್ನು ಸಹ ಹಾಕಲಿಲ್ಲ. ಆದ್ದರಿಂದ ನಾವು ಸರ್ಕಾರದಿಂದ ಬೇರೆಯಾದೆವು” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ