
ನವದೆಹಲಿ, (ಮೇ 07): ಪೆಹಲ್ಗಾಮ್ ಉಗ್ರರ ದಾಳಿ (Pahalgam terror attack) ಬೆನ್ನಲ್ಲೇ ಭಾರತ ಹಾಗೂ ಪಾಕಿಸ್ತಾನ (India And Pakistan) ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಭಾರತ ಯಾವ ಸಂದರ್ಭದಲ್ಲೂ ಬೇಕಾದರೂ ಪಾಕಿಸ್ತಾನದಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಬಹುದು ಎನ್ನಲಾಗಿತ್ತು. ಅದಂತೆ ಮಂಗಳವಾರ ತಡರಾತ್ರಿ ಭಾರತೀಯ ಸೇನೆ ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ನೆಲೆಗಳ ಮೇಲೆ ದಾಳಿ ಎಲ್ಲಾ ಉಡೀಸ್ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಆಪರೇಷನ್ ಸಿಂಧೂರ್ ಬೆನ್ನಲ್ಲೇ ಪಾಕಿಸ್ತಾನ ಬೆದರಿದೆ. ಇದಕ್ಕೆ ಪೂಕರವೆಂಬಂತೆ ಭಾರತ ದಾಳಿ ನಿಲ್ಲಿಸಿದರೆ ಉದ್ವಿಗ್ನತೆ ಶಮನಕ್ಕೆ ಸಿದ್ಧ ಎಂದು ಪಾಕ್ ರಕ್ಷಣಾ ಸಚಿವ ಖವಾಜಾ ಅಸಿಫ್ (Pakistan defense minister Khawaja Asif) ಶಾಂತಿ ಪಠಣ ಮಾಡಿದ್ದಾರೆ. ಈ ಮೂಲಕ ಮೊದಲೆಲ್ಲ ಬಡಾಯಿ ಬೊಗಳೆ ಬಿಡುತ್ತಿದ್ದ ಆಸಿಫ್ ಯುಟರ್ನ್ ಹೊಡೆದಿದ್ದಾರೆ.
ಭಾರತ ಉಗ್ರದ ನೆಲೆ ಗುರಿಯಾಗಿಸಿ ಏರ್ಸ್ಟ್ರೈಕ್ ಮಾಡಿದ ನಂತರ ಪಾಕಿಸ್ತಾನ ರಕ್ಷಣಾ ಸಚಿವ ಅಸಿಫ್ ಪ್ರತಿಕ್ರಿಯಿಸಿದ್ದು, ಭಾರತ ದಾಳಿ ಮಾಡಿದರೆ ಮಾತ್ರ ಪಾಕಿಸ್ತಾನ ಪ್ರತಿಕ್ರಿಯಿಸುತ್ತದೆ. ಕಳೆದ ಹದಿನೈದು ದಿನಗಳಿಂದ ನಾವು ಭಾರತದ ವಿರುದ್ಧ ಯಾವುದೇ ಬಗೆಯ ಕ್ರಮಕೈಗೊಳ್ಳುವಿದಲ್ಲ ಎಂದು ಹೇಳುತ್ತಿದ್ದೇವೆ. ಆದರೆ ನಮ್ಮ ಮೇಲೆ ದಾಳಿ ನಡೆದರೆ, ನಾವು ಪ್ರತಿದಾಳಿ ಮಾಡುತ್ತೇವೆ. ಇನ್ನು ಒಂದು ವೇಳೆ ಭಾರತ ಹಿಂದೆ ಸರಿದರೆ ನಾವು ಸಹ ಖಂಡಿತವಾಗಿಯೂ ಈ ಉದ್ವಿಗ್ಬತೆಯನ್ನು ಶಮನಗೊಳಿಸುತ್ತೇವೆ ಎಂದಿದ್ದಾರೆ ಎಂದು ಬ್ಲೂಮ್ಬರ್ಗ್ ಟಿವಿಷನ್ ವರದಿ ಮಾಡಿದೆ ಎಂದು ಪಿಟಿಐ ತಿಳಿಸಿದೆ.
ಅಲ್ಲದೇ ಅಸಿಫ್ ಉಭಯ ದೇಶಗಳ ಮಾತುಕತೆಯ ಸಾಧ್ಯತೆಯ ಬಗ್ಗೆಯೂ ಮಾತನಾಡಿದ್ದು, ಭಾರತ ದಾಳಿ ನಿಲ್ಲಿಸಿದ ಮೇಲೆ ನಾವು ಅಟ್ಯಾಕ್ ಮಾಡುವುದಿಲ್ಲ. ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದ್ರೆ ಪ್ರತಿದಾಳಿ ಮಾಡುತ್ತೇವೆ. ಆದ್ರೆ, ಈ ಉದ್ವಿಗ್ನತೆ ಸರಿಪಡಿಸಿಕೊಳ್ಳುವುದಕ್ಕೆ ಸಿದ್ಧ ಎಂದು ಶಾಂತಿ ಒಪ್ಪಂದಕ್ಕೆ ಮುಂದಾದಂತಿದೆ.
ಇನ್ನು ನಿನ್ನೆ (ಮೇ 06) ಅಷ್ಟೇ ಇದೇ ಪಾಕ್ ರಕ್ಷಣಾ ಸಚಿವ ಅಸಿಫ್, ಎಲ್‌ಒಸಿಯಲ್ಲಿ ಭಾರತ ಯಾವುದೇ ಸ್ಥಳದ ಮೇಲೆ ದಾಳಿ ಮಾಡಬಹುದು ಎಂಬ ವರದಿಗಳಿವೆ. ಸೂಕ್ತ ಪ್ರತ್ಯುತ್ತರ ನೀಡಲಾಗುವುದು, ಪ್ರಧಾನಿ ನರೇಂದ್ರ ಮೋದಿಯವರು ರಾಜಕೀಯ ಲಾಭಕ್ಕಾಗಿ ಈ ಪ್ರದೇಶವನ್ನು ಯುದ್ಧದ ಅಂಚಿಗೆ ತಳ್ಳುತ್ತಿದ್ದಾರೆ ಎಂದು ಟೀಕಿಸಿದ್ದರು. ಅಲ್ಲದೇ ಭಾರತಕ್ಕೆ ಹಾಗೇ ಮಾಡುತ್ತೇವೆ. ಹೀಗೆ ಮಾಡುತ್ತೇವೆ ಎಂದು ಬೊಗಳೆ ಬಿಡುತ್ತಿದ್ದ ಪಾಕ್ ಸಚಿವ ಇದೀಗ ಭಾರತದ ಒಂದೇ ಒಂದು ಆಪರೇಷನ್ ಸಿಂಧೂರ್ ಏಟಿಗೆ ತಣ್ಣಗಾಗಿ ಶಾಂತಿ ಮಂತ್ರ ಪಠಿಸಲು ಶುರು ಮಾಡಿದ್ದಾರೆ.
ಮತ್ತೊಂದೆಡೆ ಭಾರತದ ಒಂದೇ ಒಂದು ಏಟಿಗೆ ಪಾಕಿಸ್ತಾನ ಅಕ್ಷರಶಃ ತಣ್ಣಗಾಗಿದೆ. ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ ಬೆನ್ನಲ್ಲೇ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:31 pm, Wed, 7 May 25