ನಿಮಗೆ ಕೆಂಪು ಬೆಂಡೆ ಗೊತ್ತಾ?-ಆರೋಗ್ಯಕ್ಕೆ ತುಂಬ ಒಳ್ಳೆಯದಾದ ಈ ತರಕಾರಿ ಬೆಲೆ ಕಡಿಮೆ ಅಲ್ಲ !
Red Okra: ಹಸಿರು ಬೆಂಡೆಕಾಯಿ ಕೂಡ ಆರೋಗ್ಯಕ್ಕೆ ತುಂಬ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಈ ಕೆಂಪು ಬೆಂಡೆ ಮತ್ತೂ ಒಳ್ಳೆಯದು ಎನ್ನುತ್ತಾರೆ ಮಿಸ್ರಿಲಾಲ್ ರಜಪೂತ್.
ಬೆಂಡೆಕಾಯಿ (LadyFinger) ಎಂದಾಕ್ಷಣ ಹಸಿರು ಬಣ್ಣದಲ್ಲಿ ಇರುತ್ತದೆ ಎಂದು ನಮ್ಮ ಅನಿಸಿಕೆ. ಆದರೆ ಮಧ್ಯಪ್ರದೇಶ (Madhya Pradesh) ದ ರೈತರೊಬ್ಬರು ಕೆಂಪು ಬೆಂಡೆಕಾಯಿ (Red Ladyfinger, Kashi Lalima) ಬೆಳೆಯುತ್ತಿದ್ದಾರೆ. ಭೋಪಾಲ್ನ ಖಜೂರಿ ಕಲಾನ್ ಪ್ರದೇಶದ ಮಿಸ್ರಿಲಾಲ್ ರಜಪೂತ್ ತೋಟವೀಗ ಕೆಂಪು ಬೆಂಡೆಯ ಮೂಲಕ ಜನರ ಆಕರ್ಷಣೆಯ ಕೇಂದ್ರವಾಗಿದೆ. ತೋಟದಲ್ಲಿ ಕೆಂಪು ಬೆಂಡೆ ಬೀಜಗಳನ್ನು ಹಾಕಿದ್ದ ಮಿಸ್ರಿಲಾಲ್ ಕೇವಲ 40ದಿನಗಳಲ್ಲಿ ಗಿಡ ಬೆಳೆದು, ಕಾಯಿಯೂ ಬಿಟ್ಟಿದೆ ಎಂದು ತಿಳಿಸಿದ್ದಾರೆ.
ಆರೋಗ್ಯಕ್ಕೆ ತುಂಬ ಒಳ್ಳೆಯದು ಹಸಿರು ಬೆಂಡೆಕಾಯಿ ಕೂಡ ಆರೋಗ್ಯಕ್ಕೆ ತುಂಬ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಈ ಕೆಂಪು ಬೆಂಡೆ ಮತ್ತೂ ಒಳ್ಳೆಯದು ಎನ್ನುತ್ತಾರೆ ಮಿಸ್ರಿಲಾಲ್ ರಜಪೂತ್. ಹಸಿರು ಬೆಂಡೆಕಾಯಿಯಲ್ಲಿ ಇರುವುದಕ್ಕಿಂತಲೂ ಜಾಸ್ತಿ ಪೌಷ್ಟಿಕಾಂಶ ಕೆಂಪು ಬೆಂಡೆಯಲ್ಲಿ ಇದೆ. ಅದರಲ್ಲೂ ರಕ್ತದೊತ್ತಡ ಮತ್ತು ಹೃದಯಸಂಬಂಧಿ ಕಾಯಿಲೆ, ಡಯಾಬಿಟಿಸ್, ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೆಂಪು ಬೆಂಡೆಕಾಯಿ ಹೇಳಿಮಾಡಿಸಿದ ತರಕಾರಿ ಎಂದು ಹೇಳಿದ್ದಾರೆ.
ಭರ್ಜರಿ ಬೆಲೆ ಕೆಂಪು ಬೆಂಡೆಕಾಯಿ ಬೆಲೆ ಸ್ವಲ್ಪ ಜಾಸ್ತಿಯೇ ಇದೆ. ಮಿಸ್ರಿಲಾಲ್ ರಜಪೂತ್ ಹೇಳುವ ಪ್ರಕಾರ ಅವರು 250 ಗ್ರಾಂ. ಕೆಂಪು ಬೆಂಡೆಯನ್ನು 75-80 ರೂಪಾಯಿಗೆ ಮಾರಾಟ ಮಾಡುತ್ತಾರೆ. ಹಾಗೇ, 500 ಗ್ರಾಂ.ಗೆ 300-400 ರೂ.ನಿಗದಿ ಮಾಡಿದ್ದಾರೆ. ಅಲ್ಲಿಗೆ 1 ಕೆಜಿ ಕೆಂಪುಬೆಂಡೆಯನ್ನು ಅವರ ಬಳಿ ಕೊಂಡರೆ 800 ರೂ. ನೀಡಬೇಕಾಗುತ್ತದೆ. ಮಾರುಕಟ್ಟೆ ಬೆಲೆ ಇರುವುದೇ ಹೀಗೆ ಎನ್ನುತ್ತಾರೆ ಮಿಸ್ರಿಲಾಲ್. ತಾವು ಈ ಕೆಂಪು ಬೆಂಡೆ ಬೆಳೆಸಲು ಸ್ವಲ್ಪವೂ ವಿಷಕಾರಿ ಕ್ರಿಮಿ ನಾಶಕ ಬಳಸಲಿಲ್ಲ ಎಂದಿರುವ ಅವರು, ಒಂದು ಎಕರೆ ಜಾಗದಲ್ಲಿ ಕನಿಷ್ಠ 40-50 ಕ್ವಿಂಟಲ್ ಮತ್ತು ಗರಿಷ್ಠ 70-80 ಕ್ವಿಂಟಲ್ ಕೆಂಪು ಬೆಂಡೆ ಬೆಳೆಯಬಹುದು ಎಂದು ತಿಳಿಸಿದ್ದಾರೆ.
ಬೀಜ ಕೊಂಡಿದ್ದು ಎಲ್ಲಿಂದ? ತಾನು ಈ ಕೆಂಪು ಬೆಂಡೆಯ ಬೀಜವನ್ನು ವಾರಾಣಸಿಯ ಕೃಷಿ ಸಂಶೋಧನಾ ಸಂಸ್ಥೆ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವೆಜಿಟೆಬಲ್ ರಿಸರ್ಚ್ ಸಂಸ್ಥೆ)ಯಿಂದ ಒಂದು ಕೆಜಿಯಷ್ಟು ತಂದಿದ್ದೆ ಎಂದು ರಜಪೂತ್ ತಿಳಿಸಿದ್ದಾರೆ. ಅಂದಹಾಗೆ ಈ ರಿಸರ್ಚ್ ಸಂಸ್ಥೆ ಭಾರತೀಯ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತದೆ. 23 ವರ್ಷಗಳ ಸಂಶೋಧನೆ ನಂತರ 2019ರಲ್ಲಿ ಈ ಕೆಂಪು ಬೆಂಡೆಯನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಕಾಶಿ ಲಲಿಮಾ ಎಂದು ಅಧಿಕೃತವಾಗಿ ನಾಮಕರಣ ಮಾಡಿದೆ.
ಇದನ್ನೂ ಓದಿ: ರಾಮ್ ಚರಣ್ ಒಪ್ಪದಿದ್ದರೂ ಲಿಪ್ ಲಾಕ್ ಮಾಡಿದ್ದ ಸಮಂತಾ? ‘ರಂಗಸ್ಥಲಂ’ ತೆರೆಹಿಂದೆ ಮುತ್ತಿನ ಪ್ರಹಸನ
ಕೊವಿಡ್ 19 ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ; TOCIRA ಔಷಧ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ