ಜಾರ್ಖಂಡ್ ವಿಧಾನಸಭೆಯಲ್ಲಿ ನಮಾಜ್​ಗೆ ಪ್ರತ್ಯೇಕ ಕೊಠಡಿ ವಿವಾದ; ಜೈ ಶ್ರೀರಾಮ್ ಘೋಷಣೆ ಕೂಗಿ ಬಿಜೆಪಿ ಪ್ರತಿಭಟನೆ

ಇಂದು ಅಧಿವೇಶನ ಆರಂಭವಾಗುವುದಕ್ಕೂ ಮೊದಲೇ ವಿಧಾನಸಭೆ ಕೊಠಡಿಯ ಮೆಟ್ಟಿಲುಗಳ ಮೇಲೆ ಕುಳಿತ ಬಿಜೆಪಿ ಶಾಸಕರು ಹನುಮಾನ್ ಚಾಲೀಸಾ ಪಠಿಸಿ, ಹರೇ ರಾಮ ಎಂದು ಘೋಷಣೆ ಕೂಗಿದರು. ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ಜೈ ಶ್ರೀರಾಮ್ ಎಂದು ಕೂಗುತ್ತಾ ಸದನದ ಬಾವಿಗೆ ಇಳಿದರು.

ಜಾರ್ಖಂಡ್ ವಿಧಾನಸಭೆಯಲ್ಲಿ ನಮಾಜ್​ಗೆ ಪ್ರತ್ಯೇಕ ಕೊಠಡಿ ವಿವಾದ; ಜೈ ಶ್ರೀರಾಮ್ ಘೋಷಣೆ ಕೂಗಿ ಬಿಜೆಪಿ ಪ್ರತಿಭಟನೆ
ಜಾರ್ಖಂಡ್​ನ ನೂತನ ವಿಧಾನಸಭಾ ಕಟ್ಟಡ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Sep 06, 2021 | 4:26 PM

ರಾಂಚಿ: ಜಾರ್ಖಂಡ್‌ ವಿಧಾನಸಭಾ ನೂತನ ಕಟ್ಟಡದಲ್ಲಿ ನಮಾಜ್‌ ಮಾಡಲು ಪ್ರತ್ಯೇಕ ರೂಂ ಮೀಸಲಿಟ್ಟಿರುವುದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇಂದು ಜಾರ್ಖಂಡ್ ವಿಧಾನಸಭೆ ಅಧಿವೇಶನದಲ್ಲಿ ಕೂಡ ಇದೇ ವಿಚಾರಕ್ಕೆ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದರು. ಇಂದು ಅಧಿವೇಶನ ಆರಂಭವಾಗುವುದಕ್ಕೂ ಮೊದಲೇ ವಿಧಾನಸಭೆ ಕೊಠಡಿಯ ಪ್ರವೇಶ ದ್ವಾರದ ಬಳಿಯ ಮೆಟ್ಟಿಲುಗಳ ಮೇಲೆ ಕುಳಿತ ಬಿಜೆಪಿ ಶಾಸಕರು ಹನುಮಾನ್ ಚಾಲೀಸಾ ಪಠಿಸಿ, ಹರೇ ರಾಮ ಎಂದು ಘೋಷಣೆ ಕೂಗಿದರು.

ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ಎದ್ದು ನಿಂತು ಜೈ ಶ್ರೀರಾಮ್ ಎಂದು ಕೂಗುತ್ತಾ ಸದನದ ಬಾವಿಗೆ ಇಳಿದರು. ಸದನದೊಳಗೆ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿ, ಗಲಭೆ ಎಬ್ಬಿಸಿದ್ದರಿಂದ ವಿಧಾನಸಭಾ ಕಲಾಪಕ್ಕೆ ತೊಂದರೆಯಾಯಿತು. ಜಾರ್ಖಂಡ್ ಸರ್ಕಾರ ನಮಾಜ್‌ಗಾಗಿ ಪ್ರತ್ಯೇಕ ಕೊಠಡಿ ಮೀಸಲಿಡುವ ಆದೇಶವನ್ನು ವಾಪಾಸ್ ಪಡೆಯಲೇಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದರು.

ಈ ವೇಳೆ ಬಿಜೆಪಿ ಸದಸ್ಯರನ್ನು ಸಾಂತ್ವನಗೊಳಿಸಿ, ಕಲಾಪ ಮುಂದುವರೆಸಲು ಪ್ರಯತ್ನಿಸಿದ ವಿಧಾನಸಭಾ ಸ್ಪೀಕರ್ ರವೀಂದ್ರನಾಥ್ ಮಾಹ್ಟೋ, ಬಿಜೆಪಿ ಶಾಸಕರೆಲ್ಲರೂ ದಯವಿಟ್ಟು ನಿಮ್ಮ ಸೀಟಿನಲ್ಲಿ ಕುಳಿತುಕೊಳ್ಳಿ. ಈ ಕಲಾಪ ನಡೆಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಆದರೂ ಬಿಜೆಪಿ ಸದಸ್ಯರು ಪ್ರತಿಭಟನೆ ನಿಲ್ಲಿಸಲಿಲ್ಲ. ಹೀಗಾಗಿ, ಅನಿವಾರ್ಯವಾಗಿ ಕಲಾಪವನ್ನು ಮುಂದೂಡಲಾಯಿತು.

ಜಾರ್ಖಂಡ್ ವಿಧಾನಸಭಾ ಸ್ಪೀಕರ್‌ ರವೀಂದ್ರನಾಥ್ ಮಾಹ್ಟೋ, ವಿಧಾನಸಭಾ ಕಟ್ಟಡದ 348ನೇ ನಂಬರ್ ಕೊಠಡಿಯನ್ನು ನಮಾಜ್‌ ಮಾಡಲು ಮೀಸಲಿಡುವಂತೆ ಆದೇಶ ನೀಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ವಿಧಾನಸಭೆಯ ಆವರಣದಲ್ಲಿ ಹನುಮಾನ್ ಮಂದಿರವನ್ನು ನಿರ್ಮಿಸಿ, ಪ್ರಾರ್ಥನೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು.

ನೂತನ ವಿಧಾನ ಸಭೆ ಕಟ್ಟಡದಲ್ಲಿ ನಮಾಜ್‌ ಮಾಡಲು ಪ್ರತ್ಯೇಕ ಕೊಠಡಿ ಮೀಸಲಿಟ್ಟ ಜಾರ್ಖಂಡ್‌ನ ಹೇಮಂತ್‌ ಸೊರೇನ್‌ ನೇತೃತ್ವದ ಸರ್ಕಾರದ ನಿರ್ಧಾರ ಭಾರೀ ವಿವಾದಕ್ಕೆ ಕಾರಣವಾಗಿದೆ. ಎರಡು ದಿನಗಳ ಹಿಂದೆ ವಿಧಾನಸಭೆಯ ಸ್ಪೀಕರ್‌ ರವೀಂದ್ರನಾಥ್ ಮೆಹ್ಟೋ ಈ ಆದೇಶ ಹೊರಡಿಸಿದ್ದರು. ಬಿಜೆಪಿ ನಾಯಕರು ಇದಕ್ಕೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ವಿಧಾನಸಭೆ ಕಟ್ಟಡದಲ್ಲಿ ಆಂಜನೇಯನ ದೇವಸ್ಥಾನ ನಿರ್ಮಿಸಿ ಎಂದು ಒತ್ತಾಯ ಮಾಡಿದ್ದಾರೆ.

ಸ್ಪೀಕರ್ ಆದೇಶಕ್ಕೆ ಜಾರ್ಖಂಡ್‌ ವಿಧಾನಸಭೆಯ ಉಪ ಕಾರ್ಯದರ್ಶಿಯ ಸಹಿಯೂ ಬಿದ್ದಿದ್ದು, ಈ ಆದೇಶವನ್ನು ಹಿಂಪಡೆಯದಿದ್ದರೆ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ. ಆಡಳಿತ ಪಕ್ಷದ ಶಾಸಕರು ತಾಲಿಬಾನ್‌ ಬೆಂಬಲಿಗರಾಗಿದ್ದು, ಹೀಗಾಗಿಯೇ ಇಂತಹ ಆದೇಶ ಹೊರಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಯಾವ ವ್ಯಕ್ತಿಯೂ ಈ ರೀತಿಯ ಆದೇಶ ನೀಡುತ್ತಿರಲಿಲ್ಲ. ಮುಖ್ಯಮಂತ್ರಿ ಹೇಮಂತ್ ಸೊರೇನ್‌ ನೇತೃತ್ವದ ಸರ್ಕಾರ ಮತ ಬ್ಯಾಂಕ್‌ ರಾಜಕಾರಣಕ್ಕೆ ಸಂವಿಧಾನದ ಘನತೆಯನ್ನು ಹಾಳು ಮಾಡಿದೆ ಎಂದು ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ.

ಆದರೆ, ತಮ್ಮ ಆದೇಶವನ್ನು ಸಮರ್ಥಿಸಿಕೊಂಡಿರುವ ಸ್ಪೀಕರ್ ರವೀಂದ್ರನಾಥ್ ಮಾಹ್ಟೋ, ಈ ವಿಚಾರದಲ್ಲಿ ಬಿಜೆಪಿ ಅನಗತ್ಯವಾಗಿ ವಿವಾದ ಉಂಟು ಮಾಡುತ್ತಿದೆ. ವಿಧಾನಸಭೆ ಈಗಾಗಲೇ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧವಾಗಿರಲಿದೆ ಎಂದಿದ್ದಾರೆ.

ಇದನ್ನೂ ಓದಿ: Javed Akhtar ಮುಂಬೈಯಲ್ಲಿರುವ ಜಾವೇದ್ ಅಖ್ತರ್  ಮನೆಗೆ ಬಿಗಿ ಭದ್ರತೆ; ಹೇಳಿಕೆಗೆ ಕ್ಷಮೆಯಾಚಿಸಲು ಬಿಜೆಪಿ ಒತ್ತಾಯ

Viral News: ಬ್ರೈನ್ ಟ್ಯೂಮರ್ ಸರ್ಜರಿ ವೇಳೆ ಹನುಮಾನ್ ಚಾಲೀಸಾ ಪಠಿಸಿದ ಮಹಿಳೆ; ಆಮೇಲೆ ನಡೆದಿದ್ದು ಅಚ್ಚರಿ!

(Ruckus in Jharkhand assembly over Namaz room BJP Protests in chanting Jai Shri Ram in Session)

Published On - 4:20 pm, Mon, 6 September 21

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ