Karnataka Municipal Election Results 2021: ಪಾಲಿಕೆ ಚುನಾವಣೆಯಲ್ಲಿ ಗೆಲ್ಲಲು ಮಾಸ್ಟರ್​ ಪ್ಲಾನ್ ಮಾಡಿದ್ದ ಬಿಜೆಪಿ: ಇಲ್ಲಿದೆ ಒಳ ಚಿತ್ರಣ

Karnataka Civil Body Polls Result 2021: ಮಹಾರಾಷ್ಟ್ರದಿಂದ 6 ತಂಡ ಕಳಿಸಿ ಬೆಳಗಾವಿಯ ಮರಾಠ ಸಮುದಾಯದ ಮತಗಳು ಬಿಜೆಪಿ ಪಾಲಾಗುವಂತೆ ದೇವೇಂದ್ರ ಫಡ್ನವೀಸ್ ನೋಡಿಕೊಂಡಿದ್ದರು ಎಂದು ಬಿಜೆಪಿಯ ಆಂತರಿಕ ಮೂಲಗಳು ತಿಳಿಸಿವೆ.

Karnataka Municipal Election Results 2021: ಪಾಲಿಕೆ ಚುನಾವಣೆಯಲ್ಲಿ ಗೆಲ್ಲಲು ಮಾಸ್ಟರ್​ ಪ್ಲಾನ್ ಮಾಡಿದ್ದ ಬಿಜೆಪಿ: ಇಲ್ಲಿದೆ ಒಳ ಚಿತ್ರಣ
ಬಿಜೆಪಿ

ಮೂರು ಮಹಾನಗರ ಪಾಲಿಕೆಗಳಲ್ಲಿ (Karnataka Municipal Election Results 2021) ಬಿಜೆಪಿ ಬಹುತೇಕ ಮುನ್ನಡೆ ಸಾಧಿಸಿದ್ದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಯಶದ ಸಿಹಿ ಗಳಿಸಿದ್ದಾರೆ. ಬಿಜೆಪಿಯ ಗೆಲುವಿನ ಹಿಂದೆ ಯಾವ ಅಂಶಗಳು ಕೆಲಸ ಮಾಡಿವೆ ಎಂದು ಅವಲೋಕಿಸಿದರೆ ದೊರೆಯುವ ಕಾರಣಗಳು ಹಲವು. ತನ್ನ ವಿವಿಧ ಮುಖಂಡರ ಹೆಗಲ ಮೇಲೆ ಪಾಲಿಕೆ ಚುನಾವಣೆಗಳನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಬಿಜೆಪಿ ಹಸ್ತಾಂತರಿಸಿತ್ತು. ಒಂದು ತರಹದಲ್ಲಿ ಗೆಲುವನ್ನು ಟಾಸ್ಕ್ ಎಂದೇ ಭಾವಿಸಿ ಪಕ್ಷವನ್ನು ಸ್ಥಳೀಯ ಸಂಸ್ಥೆಗಳಲ್ಲಿ ಗೆಲ್ಲಿಸುವ ಹೊಣೆಯನ್ನು ಆಯಾ ಮುಖಂಡರಿಗೆ ವಹಿಸಲಾಗಿತ್ತು.

ಬೆಳಗಾವಿಯಲ್ಲಿ ಸಚಿವ ಗೋವಿಂದ ಕಾರಜೋಳ, ಕಲಬುರಗಿ ಪಾಲಿಕೆಯಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ಮತ್ತು ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಪುತ್ರ ಚಂದು ಪಾಟೀಲ್, ಹುಬ್ಬಳ್ಳಿಯಲ್ಲಿ ಸಚಿವ ಮುನೇನಕೊಪ್ಪ ಮತ್ತು ವಿಶೇಷ ಜವಾಬ್ದಾರಿಯನ್ನು ಭೈರತಿ ಬಸವರಾಜ್‌ ಹೊತ್ತಿದ್ದರು. ಕಲಬುರಗಿ ಪಾಲಿಕೆಯಲ್ಲಿ ಸಚಿವ ಮುರುಗೇಶ್ ನಿರಾಣಿಗೆ ಗೆಲುವಿನ ಟಾಸ್ಕ್ ವಹಿಸಲಾಗಿತ್ತು.

ಕಲಬುರಗಿಯಲ್ಲಿ 20 ಮಾಜಿ ಕಾರ್ಪೊರೇಟರ್‌ಗಳನ್ನು ನಿಯೋಜಿಸಿ ಪ್ರತಿಯೊಬ್ಬರಿಗೂ 500 ಮತ ಸೆಳೆಯಬೇಕೆಂಬ ಟಾಸ್ಕ್ ನೀಡಲಾಗಿತ್ತು. ಹುಬ್ಬಳ್ಳಿಗೆ 15 ಮಾಜಿ ಕಾರ್ಪೊರೇಟರ್‌ಗಳನ್ನು ನಿಯೋಜಿಸಿ ತಲಾ 700 ಬಿಜೆಪಿಯೇತರ ಮತ ಸೆಳೆಯುವ ಗುರಿ ನೀಡಲಾಗಿತ್ತು. ಬೆಳಗಾವಿಗೆ 25 ಮಾಜಿ ಕಾರ್ಪೊರೇಟರ್‌ಗಳನ್ನು ನೇಮಿಸಲಾಗಿತ್ತು. ಬೆಳಗಾವಿಯಲ್ಲಿ ಬಿಜೆಪಿ ಗೆಲುವಿಗೆ ಮಹಾರಾಷ್ಟ್ರ ವಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಪಾತ್ರವೂ ಬಹಳ ಪ್ರಾಮುಖ್ಯತೆ ಪಡೆದಿದೆ. ಮಹಾರಾಷ್ಟ್ರದಿಂದ 6 ತಂಡ ಕಳಿಸಿ ಬೆಳಗಾವಿಯ ಮರಾಠ ಸಮುದಾಯದ ಮತಗಳು ಬಿಜೆಪಿ ಪಾಲಾಗುವಂತೆ ದೇವೇಂದ್ರ ಫಡ್ನವೀಸ್ ನೋಡಿಕೊಂಡಿದ್ದರು ಎಂದು ಬಿಜೆಪಿಯ ಆಂತರಿಕ ಮೂಲಗಳು ತಿಳಿಸಿವೆ.

ಇದನ್ನೂ ಓದಿ: 

ರಾಜ್ಯದಲ್ಲಿ ಬಿಜೆಪಿ ಅಲೆ ಇದೆ ಎನ್ನುವುದು ಮತ್ತೆ ಖಚಿತವಾಗಿದೆ; ಕಾಂಗ್ರೆಸ್​ ಒಳಜಗಳ ಬಯಲಾಗಿದೆ: ನಳಿನ್ ಕುಮಾರ್ ಕಟೀಲ್

ಬಿಜೆಪಿಯವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ; ಆದರೂ ಮಹಾನಗರ ಪಾಲಿಕೆ ಫಲಿತಾಂಶ ಸಮಾಧಾನ ತಂದಿದೆ: ಡಿ.ಕೆ.ಶಿವಕುಮಾರ್

(Karnataka Municipal Election Results 2021 how bjp won in Belagavi Kalaburagi and Hubballi Dharwad polls)

Click on your DTH Provider to Add TV9 Kannada