ಉಕ್ರೇನ್‌ನಿಂದ ಹಿಂತಿರುಗುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ನಿಯಮಗಳನ್ನು ಸಡಿಲಗೊಳಿಸಿ: ಬಿಜೆಪಿ ಸಂಸದ ವರುಣ್ ಗಾಂಧಿ
ಭಾರತೀಯ ಸಂಸ್ಥೆಗಳಲ್ಲಿ ಈ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ನಾವು ನಿಯಮಗಳನ್ನು ಸಡಿಲಿಸಬೇಕಾಗುತ್ತದೆ. ಅವರ ಚಿಂತೆಗಳು ಮತ್ತು ಅವರ ಪೋಷಕರ ಚಿಂತೆಗಳು ನಮ್ಮ ಚಿಂತೆಯಾಗಬೇಕು" ಎಂದು ವರುಣ್ ಹೇಳಿದ್ದಾರೆ.
ದೆಹಲಿ: ಉಕ್ರೇನ್‌ನಿಂದ (Ukraine) ಭಾರತಕ್ಕೆ ಮರಳುತ್ತಿರುವ ವಿದ್ಯಾರ್ಥಿಗಳು ಎದುರಿಸುತ್ತಿರುವ ಅನಿಶ್ಚಿತತೆಯ ಬಗ್ಗೆ ಬಿಜೆಪಿ ಸಂಸದ ವರುಣ್ ಗಾಂಧಿ (Varun Gandhi)ಭಾನುವಾರ ಟ್ವೀಟ್ ಮಾಡಿದ್ದಾರೆ. ಕಳೆದ ವಾರ ಕೈವ್ (Kyiv) ಮೇಲೆ ರಷ್ಯಾ ದಾಳಿ ಪ್ರಾರಂಭವಾದಾಗಿನಿಂದ ಸಾವಿರಾರು ಜನರು ದೇಶಕ್ಕೆ ಹಿಂತಿರುಗಿದ್ದಾರೆ. “ಉಕ್ರೇನ್ ಬಿಕ್ಕಟ್ಟು ಸಾವಿರಾರು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ, ಒಂದೆಡೆ, ಅವರಿಗೆ ಯುದ್ಧಭೂಮಿಯ ಕಹಿ ನೆನಪುಗಳಿವೆ, ಮತ್ತೊಂದೆಡೆ , ಅವರ ಭವಿಷ್ಯವು ತೂಗಿದಂತಾಗಿದೆ ಎಂದು ಉತ್ತರ ಪ್ರದೇಶದ ಪಿಲಿಭಿತ್‌ನ 41 ವರ್ಷದ ಸಂಸದ ವರುಣ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಭಾರತೀಯ ಸಂಸ್ಥೆಗಳಲ್ಲಿ ಈ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ನಾವು ನಿಯಮಗಳನ್ನು ಸಡಿಲಿಸಬೇಕಾಗುತ್ತದೆ. ಅವರ ಚಿಂತೆಗಳು ಮತ್ತು ಅವರ ಪೋಷಕರ ಚಿಂತೆಗಳು ನಮ್ಮ ಚಿಂತೆಯಾಗಬೇಕು” ಎಂದು ವರುಣ್ ಹೇಳಿದ್ದಾರೆ. ಪೋಲೆಂಡ್, ರೊಮೇನಿಯಾ, ಹಂಗೇರಿ ಮತ್ತು ಸ್ಲೋವಾಕ್ ಗಣರಾಜ್ಯದ ಗಡಿ ದೇಶಗಳ ಮೂಲಕ ವಿಶೇಷ ವಿಮಾನಗಳಲ್ಲಿ ಉಕ್ರೇನ್‌ನಿಂದ 13,000 ಕ್ಕೂ ಹೆಚ್ಚು ಭಾರತೀಯರನ್ನು ಮರಳಿ ಕರೆತರಲಾಗಿದೆ ಎಂದು ಸರ್ಕಾರ ಹೇಳಿದ ಒಂದು ದಿನದ ನಂತರ ವರುಣ್ ಗಾಂಧಿ ಈ ಟ್ವೀಟ್ ಮಾಡಿದ್ದಾರೆ. ರಾಜಧಾನಿ ಕೈವ್ ಮತ್ತು ಎರಡನೇ ದೊಡ್ಡ ನಗರವಾದ ಖಾರ್ಕಿವ್ ಸೇರಿದಂತೆ ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ರಷ್ಯಾ ದಾಳಿಯನ್ನು ತೀವ್ರಗೊಳಿಸಿದ್ದರಿಂದ ಕಳೆದ ಒಂದು ವಾರದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಲವು ಮನವಿಗಳನ್ನು ಹಂಚಿಕೊಳ್ಳಲಾಗಿದೆ. ಕಳೆದ ವಾರ ವರುಣ್ ಗಾಂಧಿ “ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳದ ಕಾರಣ” 15,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯುದ್ಧದ ಮಧ್ಯೆ ಸಿಲುಕಿಕೊಂಡಿದ್ದಾರೆ ಎಂದು ಸರ್ಕಾರದ ವಿರುದ್ಧ ಗುಡುಗಿದ್ದು, ವಿಡಿಯೊ ಮನವಿಯೊಂದನ್ನು ತಮ್ಮ ಟ್ವೀಟ್ ಜತೆ ಹಂಚಿಕೊಂಡಿದ್ದರು.
यूक्रेन विवाद ने हजारों छात्रों को मानसिक रूप से तोड़ दिया है।
एक तरफ युद्धभूमि की कड़वी स्मृतियाँ हैं और दूसरी तरफ अधर में लटका हुआ भविष्य।
हमें नियमों को शिथिल कर भारतीय संस्थानों में इन छात्रों का समायोजन करना होगा।
उनकी और उनके अभिभावकों की चिंता, हमारी चिंता होनी चाहिए।
— Varun Gandhi (@varungandhi80) March 6, 2022
ಉದ್ವಿಗ್ನ ಪರಿಸ್ಥಿತಿ ಉಲ್ಬಣವಾಗಿದ್ದು, ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾ ನಡೆಸಿದ ದಾಳಿಯು ಜಗತ್ತು ತನ್ನ ಉಸಿರನ್ನು ಹಿಡಿದಿಟ್ಟುಕೊಂಡಿರುವಾಗ ಬೆಂಕಿಯನ್ನು ಉಂಟುಮಾಡಿದೆ ಎಂದು ಕೈವ್ ಶುಕ್ರವಾರ ಹೇಳಿತ್ತು. ನಂತರದ ಗಂಟೆಗಳಲ್ಲಿ ಮಾಸ್ಕೊ ಮೇಲೆ “ಪರಮಾಣು ಭಯೋತ್ಪಾದನೆ” ಆಪಾದನೆ ಹೊರಿಸಲಾಯಿತು.
सही समय पर सही फैसले न लिए जाने के कारण 15 हजार से अधिक छात्र भारी अव्यवस्था के बीच अभी भी युद्धभूमि में फंसे हुए है।
ठोस रणनीतिक और कूटनैतिक कार्यवाही कर इनकी सुरक्षित वापसी इन पर कोई उपकार नहीं बल्कि हमारा दायित्व है।
हर आपदा में ‘अवसर’ नही खोजना चाहिए। pic.twitter.com/6GIhJpmcDF
— Varun Gandhi (@varungandhi80) February 28, 2022
ಪರಿಸ್ಥಿತಿ ಹದಗೆಡುತ್ತಿರುವ ಮಧ್ಯೆ, ಭಾರತದಲ್ಲಿ ಹತಾಶ ಕುಟುಂಬಗಳು ವಿದ್ಯಾರ್ಥಿಗಳು ಮತ್ತು ಇತರ ನಾಗರಿಕರನ್ನು ಸುರಕ್ಷಿತವಾಗಿ ಹಿಂದಿರುಗಿಸಲು ಒತ್ತಾಯಿಸುತ್ತಿವೆ.
ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉಕ್ರೇನ್ ಕುರಿತು ‘ಬೇಜವಾಬ್ದಾರಿ ಹೇಳಿಕೆ’ ನೀಡಿದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. “ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದೆ. ಭಾರತದ ಸಾವಿರಾರು ವಿದ್ಯಾರ್ಥಿಗಳು ಅಲ್ಲಿ ಓದುತ್ತಿದ್ದಾರೆ. ನಮ್ಮ ಯುವಕರು ಬಾಂಬ್ ಸ್ಫೋಟದ ನಡುವೆ ಸಿಲುಕಿಕೊಂಡಿದ್ದಾರೆ. ಈ ಯುವಕರು ತಮ್ಮನ್ನು ಉಳಿಸುವಂತೆ ಮನವಿ ಮಾಡುವ ವಿಡಿಯೊಗಳನ್ನು ಕಳುಹಿಸುತ್ತಿದ್ದಾರೆ. ಈ ಜನರು (ವಿದ್ಯಾರ್ಥಿಗಳು) ಭಾರತದಲ್ಲಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯದ ಕಾರಣ ಉಕ್ರೇನ್‌ಗೆ ಹೋಗಿದ್ದಾರೆ ಎಂದು ಪ್ರಧಾನಿಯವರ ಸಂಪುಟ ಸಚಿವರು ಹೇಳುತ್ತಾರೆ. ವಿದ್ಯಾರ್ಥಿಗಳು ಇಲ್ಲಿ ವಿಫಲರಾದರು ಮತ್ತು ಅಲ್ಲಿಗೆ (ಉಕ್ರೇನ್‌ಗೆ) ಹೋದರು. ಇವರು ಭಾರತದ ವಿದ್ಯಾರ್ಥಿಗಳಲ್ಲವೇ? ಅವರು ನಮ್ಮವರಲ್ಲವೇ? ಅವರನ್ನು ಮರಳಿ ಕರೆತರುವುದು ನಿಮ್ಮ (ಸರ್ಕಾರದ) ಜವಾಬ್ದಾರಿಯಲ್ಲವೇ? ಎಂದು ರಾಹುಲ್ ಕೇಳಿದ್ದರು. 90 ಪ್ರತಿಶತ ಭಾರತೀಯರು ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಿಲ್ಲ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಹೇಳಿಕೆಯನ್ನು ರಾಹುಲ್ ಸ್ಪಷ್ಟವಾಗಿ ಇಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್‌ನಲ್ಲಿ ನಿನ್ನೆ ಯುದ್ಧ ನಿಲ್ಲಿಸಿದ್ದು ಪ್ರಧಾನಿ ನರೇಂದ್ರ ಮೋದಿ: ಹಾಲಪ್ಪ ಆಚಾರ್ ಹೇಳಿಕೆ