Republic Day 2023: ಗಣರಾಜ್ಯೋತ್ಸವ ಪರೇಡ್​ನಲ್ಲಿ ಕರ್ತವ್ಯಪಥದಲ್ಲಿ ನೌಕಾದಳವನ್ನು ಮುನ್ನಡೆಸಲಿದ್ದಾರೆ ಕನ್ನಡತಿ ದಿಶಾ ಅಮೃತ್

Nayana Rajeev

Nayana Rajeev |

Updated on: Jan 24, 2023 | 1:02 PM

ಜನವರಿ 26 ರಂದು ದೆಹಲಿಯ ಕರ್ತವ್ಯಪಥದಲ್ಲಿ ನಡೆಯಲಿರುವ ಸೇನಾಪಡೆಗಳ ಪಥ ಸಂಚಲನದಲ್ಲಿ ನೌಕಾಪಡೆ ತುಕಡಿಯನ್ನು ಮಂಗಳೂರಿನ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ಮುನ್ನಡೆಸಲಿದ್ದಾರೆ.

Republic Day 2023: ಗಣರಾಜ್ಯೋತ್ಸವ ಪರೇಡ್​ನಲ್ಲಿ ಕರ್ತವ್ಯಪಥದಲ್ಲಿ ನೌಕಾದಳವನ್ನು ಮುನ್ನಡೆಸಲಿದ್ದಾರೆ ಕನ್ನಡತಿ ದಿಶಾ ಅಮೃತ್
ದಿಶಾ ಅಮೃತ್

ಜನವರಿ 26 ರಂದು ದೆಹಲಿಯ ಕರ್ತವ್ಯಪಥದಲ್ಲಿ ನಡೆಯಲಿರುವ ಸೇನಾಪಡೆಗಳ ಪಥ ಸಂಚಲನದಲ್ಲಿ ನೌಕಾಪಡೆ ತುಕಡಿಯನ್ನು ಮಂಗಳೂರಿನ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ಮುನ್ನಡೆಸಲಿದ್ದಾರೆ. ರಾಜಪಥ್​ಗೆ ಕರ್ತವ್ಯಪಥ ಎಂದು ಮರು ನಾಮಕರಣ ಮಾಡಿದ ನಂತರ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವ ಇದಾಗಿದ್ದು, ಅಂಡಮಾನ್ ನಿಕೋಬಾರ್ ಕಾರ್ಯ ನಿರ್ವಹಿಸುತ್ತಿರುವ ನೌಕಾ ವಾಯು ಕಾರ್ಯಾಚರಣೆಯ ಅಧಿಕಾರಿ ಆಗಿರುವ 29 ವರ್ಷದ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ನೌಕಾಪಡೆಯ ವಿಭಾಗವನ್ನು ಮುನ್ನಡೆಸಲಿದ್ದಾರೆ.

ಒಟ್ಟು 144 ಸದಸ್ಯರ ಯುವ ನಾವಿಕರ ತಂಡವನ್ನು ದಿವ್ಯಾ ಅಮೃತ್ ಮುನ್ನಡೆಸಲಿದ್ದು, ಇದರಲ್ಲಿ ಮೂವರು ಮಹಿಳೆಯರು ಮತ್ತು ಐವರು ಪುರುಷರು ಅಗ್ನಿವೀರರಾಗಿ ತರಬೇತಿ ಪಡೆಯುತ್ತಿದ್ದಾರೆ. ಮತ್ತೊಬ್ಬ ಮಹಿಳಾ ಅಧಿಕಾರಿ ಸಬ್ –ಲೆಫ್ಟಿನೆಂಟ್ ಎಸ್. ವಲ್ಲಿ ಮೀನಾ ಮೂರು ದಳದ ಕಮಾಂಡರ್​ಗಳಲ್ಲಿ ಒಬ್ಬರಾಗಿರುತ್ತಾರೆ.

ಮತ್ತಷ್ಟು ಓದಿ: Republic Day Interesting Facts: ಸಂವಿಧಾನವು ಜನವರಿ 26 ರಂದು ಏಕೆ ಜಾರಿಗೆ ಬಂತು, ಭಾರತದ ಸಂವಿಧಾನಕ್ಕೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳು ಇಲ್ಲಿವೆ

ನೌಕಾದಳದ ಸ್ತಬ್ಧಚಿತ್ರವು ‘ನಾರಿಶಕ್ತಿ‘ಯನ್ನು ಧ್ಯೇಯ ಹೊಂದಿದ್ದು, ಮೇಕ್ ಇನ್ ಇಂಡಿಯಾದ ಯೋಜನೆಯಡಿ ತಯಾರಿಸಿದ ಸ್ಕಾರ್ಪೀನ್, ಕಲ್ವರಿ ಜಲಾಂತರ್ಗಾಮಿ ನೌಕೆಗಳು ಸೇರಿದಂತೆ ನೌಕಾಪಡೆಯ ಬಹು ಆಯಾಮದ ಸಾಮರ್ಥ್ಯ ಪರೇಡ್​ನಲ್ಲಿ ಪ್ರದರ್ಶನಗೊಳ್ಳಲಿದೆ.

ಲೆಫ್ಟಿನೆಂಟ್ ದಿಶಾ ಮಹಿಳಾ ಅಧಿಕಾರಿ ಎಂದು ಕರೆಸಿಕೊಳ್ಳುವ ಬದಲು ಅಧಿಕಾರಿ ಎಂದು ಕರೆಸಿಕೊಳ್ಳಲು ಇಷ್ಟಪಡುತ್ತಾರೆ ಎಂದು ವಾಯುಪಡೆ ಮೂಲಗಳು ತಿಳಿಸಿವೆ. ನಾನು ಪುರುಷ ಸಹೋದ್ಯೋಗಿಗಳಷ್ಟೇ ಸಮನಾಗಿದ್ದೇನೆ. ಅದನ್ನು ಸಾಬೀತು ಕೂಡ ಮಾಡಿದ್ದೇನೆ. ನೌಕಾಪಡೆಯ ಕವಾಯತು ತಂಡವನ್ನು ಮುನ್ನಡೆಸುವುದು ನನ್ನ ಜೀವಮಾನದ ಅದ್ಭುತ ಅವಕಾಶ ಎಂದು ದಿಶಾ ಹೇಳಿದ್ದಾರೆ. ಡಾ. ಅಶ್ವತ್ಥ ನಾರಾಯಣ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.

ದಿಶಾ ಅಮೃತ್ ಮಂಗಳೂರಿನ ಬೋಳೂರಿನ ತಿಲಕ್​ ನಗರದ ನಿವಾಸಿಯಾಗಿದ್ದು, ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ತಂದೆ ಅಮೃತ್​ಕುಮಾರ್ ಮತ್ತು ತಾಯಿ ಲೀಲಾ. ಬಾಲ್ಯದಿಂದಲೇ ನೌಕಾಪಡೆಯ ಅಧಿಕಾರಿಯಾಗಬೇಕೆಂಬ ಆಸೆ ಹೊಂದಿದ್ದ ದಿಶಾ, ಶಾಲೆಯಲ್ಲಿ ಕಲಿಯುತ್ತಿರುವಾಗಲೇ ದೆಹಲಿಯ ಗಣರಾಜ್ಯೋತ್ಸವ ಪರೇಡ್​ಗೆ ಆಯ್ಕೆಯಾಗಿದ್ದರು.

ಎಂಜಿನಿಯರಿಂಗ್ ವ್ಯಾಸಂಗ ಮಾಡುವಾಗಲೇ ನೌಕಾಪಡೆಯ ವಿವಿಧ ಅರ್ಹತಾ ಪರೀಕ್ಷೆಗಳನ್ನು ಎದುರಿಸಿದ್ದರು. 2008ರಿಂದಲೇ ಸಶಸ್ತ್ರ ಪಡೆಗಳ ಗಣರಾಜ್ಯೋತ್ಸವ ದಿನದ ತುಕಡಿಯ ಭಾಗವಾಗುವ ಕನಸು ಹೊಂದಿದ್ದೆ. ನನ್ನ ತಂದೆ ಕೂಡ ಸಶಸ್ತ್ರ ಪಡೆಯ ಭಾಗವಾಗಲು ಬಯಸಿದ್ದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ. ನಾನು ನೌಕಾಪಡೆಯ ಭಾಗವಾಗಿರುವುದಕ್ಕೆ ಹೆಮ್ಮೆಇದೆ ಎಂದಿದ್ದಾರೆ.

ಕೆಲವು ಬಾರಿ ಇದರಲ್ಲಿ ವಿಫಲರಾದರೂ ಛಲ ಬಿಡದೆ ನೌಕಾಪಡೆಯ ವಿಶೇಷ ಅಧಿಕಾರಿಯಾಗಿ ನೇಮಕಗೊಂಡರು. ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಕಲಿಯುವಾಗಲೇ ನೌಕಾಪಡೆಯ ವಿವಿಧ ಅರ್ಹತಾ ಪರೀಕ್ಷೆಗಳನ್ನು ಎದುರಿಸಿದ್ದರು. ಕೆಲವು ಬಾರಿ ಇದರಲ್ಲಿ ವಿಫಲರಾದರೂ ಛಲ ಬಿಡದೇ ಭಾರತೀಯ ನೌಕಾಪಡೆಯ ವಿಶೇಷ ಅಧಿಕಾರಿಯಾಗಿ ನೇಮಕಗೊಂಡಿದ್ದರು.

2016ರಲ್ಲಿ ನೌಕಾಪಡೆಗೆ ಸೇರಿದ ದಿಶಾ, 2017ರಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada