Republic Day Google Doodle: ಕಪ್ಪು-ಬಿಳುಪು ಟಿವಿಯಿಂದ ಮೊಬೈಲ್​ ಪರದೆವರೆಗೆ, ಗಣರಾಜ್ಯೋತ್ಸವಕ್ಕೆ ಗೂಗಲ್ ವಿಶೇಷ ಗೌರವ

Republic Day 2024: ಇಂದು ಭಾರತದಲ್ಲಿ 75ನೇ ಗಣರಾಜ್ಯೋತ್ಸವ(Republic Day)ವನ್ನು ಆಚರಿಸಲಾಗುತ್ತಿದೆ, ಈ ಹಿನ್ನೆಲೆಯಲ್ಲಿ ಗೂಗಲ್​ ಡೂಡಲ್​ ಮೂಲಕ ಶುಭ ಕೋರಿದೆ. 1950ರಲ್ಲಿ ಈ ದಿನದಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು ಮತ್ತು ರಾಷ್ಟ್ರವು ತನ್ನನ್ನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯವೆಂದು ಘೋಷಿಸಿತು.

Republic Day Google Doodle: ಕಪ್ಪು-ಬಿಳುಪು ಟಿವಿಯಿಂದ ಮೊಬೈಲ್​ ಪರದೆವರೆಗೆ, ಗಣರಾಜ್ಯೋತ್ಸವಕ್ಕೆ ಗೂಗಲ್ ವಿಶೇಷ ಗೌರವ
ಗೂಗಲ್ ಡೂಡಲ್
Follow us
ನಯನಾ ರಾಜೀವ್
|

Updated on: Jan 26, 2024 | 9:12 AM

ಇಂದು ಭಾರತದಲ್ಲಿ 75ನೇ ಗಣರಾಜ್ಯೋತ್ಸವ(Republic Day)ವನ್ನು ಆಚರಿಸಲಾಗುತ್ತಿದೆ, ಈ ಹಿನ್ನೆಲೆಯಲ್ಲಿ ಗೂಗಲ್​ ಡೂಡಲ್​ ಮೂಲಕ ಶುಭ ಕೋರಿದೆ. 1950ರಲ್ಲಿ ಈ ದಿನದಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು ಮತ್ತು ರಾಷ್ಟ್ರವು ತನ್ನನ್ನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯವೆಂದು ಘೋಷಿಸಿತು.

ಕಳೆದ ವರ್ಷ ಕೂಡ ಗೂಗಲ್‌ ಡೂಡಲ್‌ ರಚಿಸುವ ಮೂಲಕ ಭಾರತದ ಗಣರಾಜೋತ್ಸವವನ್ನು ಸಂಭ್ರಮಿಸಿತ್ತು. ರಾಷ್ಟ್ರಪತಿ ಭವನ, ಇಂಡಿಯಾ ಗೇಟ್‌, ಪರೇಡ್‌ನ ದ್ರಶ್ಯವನ್ನು ಡೂಡಲ್​ನಲ್ಲಿ ಗೂಗಲ್ ರಚಿಸಿತ್ತು. ಗೂಗಲ್ ಡೂಡಲ್ ಮಾಡುವ ಮೂಲಕ ಭಾರತದ 75ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಭಾಗಿಯಾಗಿದೆ. ಅತಿಥಿ ಕಲಾವಿದೆ ವೃಂದಾ ಜವೇರಿ ಅವರು ಈ ಗೂಗಲ್ ಡೂಡಲ್​ನ್ನು ರಚಿಸಿದ್ದಾರೆ.

ಕಪ್ಪು ಬಿಳುಪಿನ ಟಿವಿ ಪರದೆ, ಬಣ್ಣದ ಟಿವಿ ಪರದೆ ಹಾಗೂ ಮೊಬೈಲ್​ ಪರದೆ ಅದರದಲ್ಲಿದೆ. ಗಣರಾಜ್ಯೋತ್ಸವ ಪರೇಡ್​ ಕೂಡ ಆ ಪರದೆಯಲ್ಲಿ ಕಾಣಬಹುದು. 75ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಪಾಲ್ಗೊಂಡಿದ್ದಾರೆ.

ಮತ್ತಷ್ಟು ಓದಿ: 75ನೇ ಗಣರಾಜ್ಯೋತ್ಸವದಲ್ಲಿ ಹಲವು ವಿಶೇಷ! ಇಲ್ಲಿದೆ ವಿವರ

ಗಣತಂತ್ರದ ಪರೇಡ್​​​ ಚಲನದ ಇತಿಹಾಸದಲ್ಲಿ ಮೊದಲ ಬಾರಿಗೆ ದೆಹಲಿ ಮಹಿಳಾ ಪೊಲೀಸರು ಭಾಗಿಯಾಗಲಿದ್ದಾರೆ. ಈ ತುಕಡಿಯಲ್ಲಿ ಸಂಪೂರ್ಣ ಮಹಿಳಾ ಪೊಲೀಸರು ಕರ್ತವ್ಯ ಪಥದಲ್ಲಿ ಹೆಜ್ಜೆ ಹಾಕಲಿದ್ದಾರೆ. ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಥೀಮ್​ ಅಡಿ 194 ಮಹಿಳಾ ಪೊಲೀಸರು ಪರೇಡ್ ಮಾಡಲಿದ್ದು, ಐಪಿಎಸ್ ಅಧಿಕಾರಿ ಶ್ವೇತಾ ಕೆ. ಸುಗತನ್ ಅವರು ಈ ಪಡೆಯನ್ನ ಮುನ್ನಡೆಸಲಿದ್ದಾರೆ.

250 ವರ್ಷಗಳ ಸೇವೆ ಪೂರೈಸಿರುವ ‘ಅಂಗರಕ್ಷಕರು’ 1773ರಲ್ಲಿ ಆರಂಭವಾದ ರಾಷ್ಟ್ರಪತಿ ಅಂಗರಕ್ಷಕ ದಳ ಇದೇ ಮೊದಲ ಬಾರಿ ರಾಷ್ಟ್ರಧ್ವಜ ಹಿಡಿದು ಸಾಗಲಿದ್ದಾರೆ. ರಾಷ್ಟ್ರಪತಿ ಭವನದಿಂದ ರಾಷ್ಟ್ರಪತಿಯವರನ್ನು ಅಂಗರಕ್ಷಕರು ಕರೆತರಲಿರಲಿದ್ದಾರೆ.

ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಫ್ರೆಂಚ್‌ ವಿದೇಶಿ ಪಡೆ ಭಾಗಿಯಾಗಲಿರುವುದು ಮತ್ತೊಂದು ವಿಶೇಷವಾಗಿದೆ. ಕ್ಯಾಪ್ಟನ್ ಖೌರ್ಡಾ ನೇತೃತ್ವದಲ್ಲಿ ಫ್ರೆಂಚ್‌ ಸೇನಾ ಬ್ಯಾಂಡ್‌ ಭಾಗಿಯಾಗಲಿದೆ. 30 ಮಂದಿ ಸಂಗೀತಗಾರರಿಂದ ರೆಜಿಮೆಂಟ್‌ ಗೀತೆ ಗಾಯನ ನಡೆಯಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ