Republic Day 2022 Parade: ಗಣರಾಜ್ಯೋತ್ಸವ ಪಥಸಂಚಲನಕ್ಕೆ ಪೂರ್ವಾಭ್ಯಾಸ; ಈ ಬಾರಿಯ ಪರೇಡ್​ನ ವಿಶೇಷತೆಗಳೇನು?

Republic Day 2022 Parade: ಗಣರಾಜ್ಯೋತ್ಸವ ಪಥಸಂಚಲನಕ್ಕೆ ಪೂರ್ವಾಭ್ಯಾಸ; ಈ ಬಾರಿಯ ಪರೇಡ್​ನ ವಿಶೇಷತೆಗಳೇನು?
ಗಣರಾಜ್ಯೋತ್ಸವ ದಿನಾಚರಣೆಯ ಪಥಸಂಚಲನ

Ganatantra Diwas Parade Rehearsal: ಕಾರ್ಯಕ್ರಮದ ಹಿನ್ನೆಲೆಯಲ್ಲಿ ರೈಲು ಹಾಗೂ ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ರೈಲ್ವೇ ಇಲಾಖೆ ಮಾಹಿತಿಯಂತೆ ಜನವರಿ 23 ಹಾಗೂ 26 ರಂದು ಹಲವು ರೈಲುಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

TV9kannada Web Team

| Edited By: ganapathi bhat

Jan 23, 2022 | 12:54 PM


ದೆಹಲಿ: ಗಣರಾಜ್ಯೋತ್ಸವ ದಿನಾಚರಣೆಯ ಪಥಸಂಚಲನದ ರಿಹರ್ಸಲ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿದೆ. ವಿಜಯ್ ಚೌಕ್ ನಿಂದ ಆರಂಭವಾಗುವ ಪರೇಡ್ ನೇಷನಲ್ ಸ್ಟೇಡಿಯಂ ಪ್ರವೇಶಿಸಲಿದೆ. ಫುಲ್ ಡ್ರೆಸ್ ರಿಹರ್ಸಲ್ ಇದಾಗಿದ್ದು, ಕಾರ್ಯಕ್ರಮದ ಹಿನ್ನೆಲೆಯಲ್ಲಿ ರೈಲು, ಮೆಟ್ರೋ ಹಾಗೂ ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ರೈಲ್ವೇ ಮಾಹಿತಿಯಂತೆ ಜನವರಿ 23 ಹಾಗೂ 26 ರಂದು ಹಲವು ರೈಲುಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಅದೇ ರೀತಿ ರಸ್ತೆ ಸಂಚಾರದಲ್ಲಿ ಕೂಡ ನಿರ್ಬಂಧಗಳನ್ನು ಹೇರಲಾಗಿದೆ. ವಿಜಯ್ ಚೌಕ್​ನಿಂದ ಇಂಡಿಯಾ ಗೇಟ್ ವರೆಗಿನ ರಾಜ್​ಪಥ್ ಮಾರ್ಗದಲ್ಲಿ ಪಥಸಂಚಲನ ರಿಹರ್ಸಲ್ ಮುಗಿಯುವ ವರೆಗೂ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಹೇಳಲಾಗಿದೆ.

ಪಥಸಂಚಲನ ಹಿನ್ನೆಲೆಯಲ್ಲಿ ಪೊಲೀಸ್ ಜಂಟಿ ಆಯುಕ್ತ ವಿವೇಕ್ ಕಿಶೋರ್ ಕೊರೊನಾ ನಿಯಮ ಪಾಲನೆಯ ಕುರಿತಾಗಿಯೂ ಹೇಳಿಕೆ ನೀಡಿದ್ದಾರೆ. ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್ ಹಾಗೂ ವೈದ್ಯಕೀಯ ತಂಡಗಳು ಇರಲಿವೆ. ಜನವರಿ 26ರ ಪಥಸಂಚಲನ ವೇಳೆಯಲ್ಲಿ ಇವು ಕಾರ್ಯನಿರ್ವಹಿಸಲಿವೆ. ಕಾರ್ಯಕ್ರಮ ವೀಕ್ಷಣೆಗೆ ಆಗಮಿಸಿರುವ ವ್ಯಕ್ತಿಗೆ ವೈದ್ಯಕೀಯ ನೆರವು ಬೇಕು ಎಂದು ಆದರೂ ವೈದ್ಯಕೀಯ ತಂಡವು ತಕ್ಷಣವೇ ಅವರಿಗೆ ಅಗತ್ಯಸೇವೆ ನೀಡಲಿದೆ ಎಂದು ಹೇಳಲಾಗಿದೆ.

ಈ ಬಾರಿಯ ಗಣರಾಜ್ಯೋತ್ಸವ ಥೀಮ್ ಏನು?, ಪಥಸಂಚಲನ 30 ನಿಮಿಷ ವಿಳಂಬ ಎಂಬ ಮಾಹಿತಿ

ಗಣರಾಜ್ಯೋತ್ಸವ ಪಥಸಂಚಲನವನ್ನು ಜನವರಿ 26 ರಂದು ಪರಿಪೂರ್ಣವಾಗಿ ವೀಕ್ಷಿಸಬಹುದಾಗಿದೆ. ಈ ಬಾರಿ ಗಣರಾಜ್ಯೋತ್ಸವ ಪಥಸಂಚಲನಕ್ಕೆ India@75 ಎಂಬ ಥೀಮ್ ಇದೆ. ಭಾರತದ ಸ್ವಾತಂತ್ರ್ಯಕ್ಕೆ 75 ವರ್ಷಗಳ ಹೊತ್ತಲ್ಲಿ ಈ ರೀತಿ ಗಣರಾಜ್ಯೋತ್ಸವ ಆಚರಣೆ ಆಗಲಿದೆ.

75 ವರ್ಷಗಳಲ್ಲೇ ಮೊದಲ ಬಾರಿಗೆ ಪಥಸಂಚಲನ 30 ನಿಮಿಷ ವಿಳಂಬ ಆಗಲಿದೆ ಎಂದು ತಿಳಿದುಬಂದಿದೆ. ಕೊರೊನಾ ಕಾರಣದಿಂದ 10 ಗಂಟೆಯ ಬದಲಾಗಿ 30 ನಿಮಿಷ ವಿಳಂಬವಾಗಿ ಪಥಸಂಚಲನ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ.

ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಈ ಬಾರಿ 21 ಟ್ಯಾಬ್ಲೋಗಳು ಭಾಗವಹಿಸಲಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಟ್ಟು 56 ಸ್ತಬ್ಧಚಿತ್ರಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅದರಲ್ಲಿ 21 ಆಯ್ಕೆ ಆಗಿವೆ ಎಂದು ತಿಳಿದುಬಂದಿದೆ. ಈ ಬಾರಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ಕೇವಲ 24,000 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಕೊರೊನಾ ಸೋಂಕಿಗೆ ಮೊದಲು ಸುಮಾರು 1.25 ಲಕ್ಷ ಮಂದಿಗೆ ಪಥಸಂಚಲನ ನೋಡಲು ಅವಕಾಶ ನೀಡಲಾಗುತ್ತಿತ್ತು.

ದೆಹಲಿಯ ರಂಗಶಾಲಾ ಶಿಬಿರದಲ್ಲಿ ಕಲಾ ತಂಡಗಳಿಂದ ಗಣರಾಜ್ಯೋತ್ಸವ ತಯಾರಿ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕಾರ: ಮಂಗಳೂರಿನಲ್ಲಿ ಮೆರವಣಿಗೆ ನಡೆಸಿ ಪ್ರತಿಭಟಿಸಲು ಜನಾರ್ದನ ಪೂಜಾರಿ ಕರೆ

ಇದನ್ನೂ ಓದಿ: ಗೌರವ ಹೆಚ್ಚಿಸಿಕೊಂಡ ಇಳಕಲ್ ಸೀರೆ, ಗುಳೇದಗುಡ್ಡ ಖಣ; ಗಣರಾಜ್ಯೋತ್ಸವ ಸ್ತಬ್ಧಚಿತ್ರಕ್ಕೆ ಆಯ್ಕೆ

Follow us on

Related Stories

Most Read Stories

Click on your DTH Provider to Add TV9 Kannada