
ನವದೆಹಲಿ, ಮೇ 9: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಬಹುತೇಕ ಪೂರ್ಣ ಪ್ರಮಾಣದ ಯುದ್ಧ (India Pakistan war) ಶುರುವಾಗುವ ರೀತಿಯ ಪ್ರಚೋದನಾತ್ಮಕ ಘರ್ಷಣೆಗಳು ನಡೆಯುತ್ತಿವೆ. ಕ್ಷಿಪಣಿಗಳು, ಡ್ರೋನ್ಗಳ ದಾಳಿ ಯಥೇಚ್ಛವಾಗಿ ನಡೆದಿವೆ. ಅಚ್ಚರಿ ಎಂದರೆ, ರೂಟ್ಲೆಡ್ಜ್ ಎನ್ನುವ ಬ್ರಿಟಿಷ್ ಪುಸ್ತಕ ಮುದ್ರಣ ಸಂಸ್ಥೆ 2019ರಲ್ಲಿ ಪ್ರಕಟಿಸಿದ ಒಂದು ಸಂಶೋಧನಾ ವರದಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಯುದ್ಧ ಸಾಧ್ಯತೆ ಬಗ್ಗೆ ಬರೆಯಲಾಗಿದೆ. ಯುದ್ಧ ಹೇಗೆ ಶುರುವಾಗಬಹುದು, ಹೇಗೆ ವಿಕೋಪಕ್ಕೆ ತಿರುಗಬಹುದು ಎನ್ನುವ ಸಂಗತಿಯನ್ನು ಈ ಅಧ್ಯಯನದಲ್ಲಿ ಎಳೆ ಎಳೆಯಾಗಿ ಬಿಡಿಸಿ ಅಂದಾಜು ಮಾಡಲಾಗಿದೆ.
2025ರಲ್ಲಿ ಭಾರತದೊಳಗೆ ದೊಡ್ಡ ಮಟ್ಟದ ಉಗ್ರ ದಾಳಿ ಸಂಭವಿಸುತ್ತದೆ. ಇದರಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧಕ್ಕೆ ಕಿಡಿ ಹೊತ್ತಿಕೊಳ್ಳುತ್ತದೆ ಎಂದು 2019ರಲ್ಲೇ ಈ ರೀಸರ್ಚ್ ವರದಿ ಹೇಳಿತ್ತು. ಆರು ವರ್ಷದ ಹಿಂದೆ ಹೇಳಿದ ರೀತಿಯಲ್ಲೇ ಈಗ ಪಹಲ್ಗಾಂ ಉಗ್ರ ದಾಳಿಯು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ತೀವ್ರ ಸಂಘರ್ಷದ ಸ್ಥಿತಿ ನಿರ್ಮಾಣವಾಗಲು ಕಾರಣವಾಗಿರುವುದು ಕುತೂಹಲ.
ರೂಟ್ಲೆಡ್ಜ್ ವರದಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧ ಹೇಗೆ ಮುಂದುವರಿಯುತ್ತದೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಲಾಗಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ತಪ್ಪದ ಆರ್ಥಿಕ ಸಂಕಷ್ಟ; ಫಾರೆಕ್ಸ್ ರಿಸರ್ವ್ಸ್ ಕೇವಲ 15 ಬಿಲಿಯನ್ ಡಾಲರ್
ಈ ಮೇಲಿನವು ಮೊದಲ ಎರಡು ದಿನದಲ್ಲಿ ಸಂಭವಿಸುತ್ತವೆ. 1906ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಭೂಕಂಪ ವೇಳೆ ಸಂಭವಿಸಿದ ಅಗ್ನಿ ಅವಘಡ ಮತ್ತು ಹಿರೋಶಿಮಾದಲ್ಲಿ ಬಿದ್ದ ಬಾಂಬ್ ರೀತಿಯಲ್ಲಿ ಭಯಾನಕ ಅನುಭವವಾಗುತ್ತದಂತೆ. ಆದರೆ, ಇದು ಇಲ್ಲಿಗೆ ನಿಲ್ಲುವುದಿಲ್ಲ. ಮೂರನೇ ದಿನ ಭಾರತವು ಸಂಘರ್ಷ ಮುಂದುವರಿಸುತ್ತದೆ ಎಂದು 2019ರ ರೂಟ್ಲೆಡ್ಜ್ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರ ಮತ್ತು ಭಾರತೀಯ ಸೇನೆಗೆ ಆರ್ಎಸ್ಎಸ್ ಅಭಿನಂದನೆ
ರೂಟ್ಲೆಡ್ಜ್ ವರದಿ ಪ್ರಕಾರ ಮೇಲೆ ಹೇಳಿದ ರೀತಿಯಲ್ಲಿ ಅಣ್ವಸ್ತ್ರಗಳ ಬಳಕೆಯಾದರೆ 5ರಿಂದ 12 ಕೋಟಿ ಜನರು ಕೂಡಲೇ ಸಾಯಬಹುದು. ಎರಡೂ ದೇಶಗಳ ಪ್ರಮುಖ ನಗರಗಳೆಲ್ಲವೂ ಸಂಪೂರ್ಣ ನಿರ್ನಾಮವಾಗಬಹುದು.
ಇದರ ಪರಿಣಾಮವು ಭಾರತ ಮತ್ತು ಪಾಕಿಸ್ತಾನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ, ಜಗತ್ತಿನಾದ್ಯಂತ ಪರಿಸರಕ್ಕೆ ಹಾನಿಯಾಗುತ್ತದೆ. ಹಲವೆಡೆ ಬರ ಪರಿಸ್ಥಿತಿ ಉದ್ಭವಿಸಬಹುದು. ನೂರಾರು ಕೋಟಿ ಜನರಿಗೆ ಸಾವು ಬದುಕಿನ ಪ್ರಶ್ನೆ ಉದ್ಭವಿಸಬಹುದು ಎಂದು ಈ ರಿಸರ್ಚ್ ಸ್ಟಡಿಯಲ್ಲಿ ಅಂದಾಜಿಸಲಾಗಿದೆ.
ಸದ್ಯ, ಉಗ್ರ ದಾಳಿಯಾಗಿರುವುದು, ಅದರಿಂದ ಎರಡು ದೇಶಗಳ ಮಧ್ಯೆ ಯುದ್ಧದ ಸ್ಥಿತಿ ನಿರ್ಮಾಣವಾಗಿರುವುದು ಈ ವರದಿ ಪ್ರಕಾರವೇ ನಡೆದಿದೆ. ಮುಂದಿನ ಘಟನೆಗಳು ಪರಮಾಣು ಅಸ್ತ್ರ ಬಳಕೆ ಹಂತಕ್ಕೆ ಹೋಗದೇ ಇರಲಿ ಎಂದು ಆಶಿಸಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Fri, 9 May 25