ಶಾಸಕರು ಅನರ್ಹರೇ ಸರಿ, ಆದ್ರೂ ಚುನಾವಣೆಗೆ ನಿಲ್ಲಬಹುದು: ಸುಪ್ರೀಂ ತೀರ್ಪು

ಶಾಸಕರು ಅನರ್ಹರೇ ಸರಿ, ಆದ್ರೂ ಚುನಾವಣೆಗೆ ನಿಲ್ಲಬಹುದು: ಸುಪ್ರೀಂ ತೀರ್ಪು

ದೆಹಲಿ: ದೇಶದ ಗಮನ ಸೆಳೆದು ರಾಜ್ಯ ರಾಜಕಾರಣವನ್ನ ಬುಡಮೇಲು ಮಾಡಿದ್ದ ಅನರ್ಹ ಶಾಸಕರು ಅನರ್ಹರೇ ಸರಿ. ಆದರೂ ಅವರು ಉಪಚುನಾವಣೆಗೂ ಸ್ಪರ್ಧಿಸಬಹುದು  ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿ ಎನ್​.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತೀರ್ಪು ನೀಡಿದೆ.

ಇದೇ ವೇಳೆ ರಾಜೀನಾಮೆ ನೀಡಿದ್ದ 17 ಶಾಸಕರನ್ನೂ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದು ಸರಿಯಿದೆ. ಅದು ನೈತಿಕತೆಯಿಂದ ಕೂಡಿದೆ ಎಂದೂ ಸಹ ಸುಪ್ರೀಂಕೋರ್ಟ್ ಆದೇಶ ನೀಡಿದೆ.

ನ್ಯಾಯಮೂರ್ತಿಗಳಾದ ಎನ್​ವಿ ರಮಣ, ಸಂಜಯ್​ ಖನ್ನಾ ಮತ್ತು ಕೃಷ್ಣ ಮುರಾರಿ ಅವರ ತ್ರಿಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.

Published On - 10:45 am, Wed, 13 November 19

Click on your DTH Provider to Add TV9 Kannada