ರಫೇಲ್, ಶಬರಿಮಲೆ ಕೇಸ್​ಗಳ ‘ಸುಪ್ರೀಂ​’ ತೀರ್ಪು ಇಂದು

ರಫೇಲ್, ಶಬರಿಮಲೆ ಕೇಸ್​ಗಳ ‘ಸುಪ್ರೀಂ​’ ತೀರ್ಪು ಇಂದು

ಸುಪ್ರೀಂಕೋರ್ಟ್​ನಲ್ಲಿಂದು ಮಹತ್ವದ ಪ್ರಕರಣಗಳ ತೀರ್ಪು ನೀಡಲಿದೆ. ರಫೇಲ್ ಯುದ್ಧ ವಿಮಾನಗಳ ಖರೀದಿ ಬಗ್ಗೆ, ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶಾವಕಾಶ ಪ್ರಕರಣದ ಬಗ್ಗೆ ಸುಪ್ರೀಂ ನೀಡೋ ತೀರ್ಪು ಕುತೂಹಲ ಹೆಚ್ಚಿಸಿದೆ.

ರಫೇಲ್ ಅವ್ಯವಹಾರದ ಬಗ್ಗೆ ತೀರ್ಪು: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಪ್ರಶಾಂತ್ ಭೂಷಣ್, ಅರುಣ್ ಶೌರಿ, ಯಶವಂತ್ ಸಿನ್ಹಾ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ರು. ಇದ್ರ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ರಫೇಲ್ ಯುದ್ಧ ವಿಮಾನ ಖರೀದಿಗೆ ತನ್ನ ಒಪ್ಪಿಗೆ ನೀಡಿ ತೀರ್ಪು ನೀಡಿತ್ತು. ಇದರಿಂದಾಗಿ ಮೋದಿ ಸರ್ಕಾರವು ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಸುಪ್ರೀಂಕೋರ್ಟ್ ಟೆಸ್ಟ್​ನಲ್ಲಿ ಪಾಸಾಗಿತ್ತು. ಸುಪ್ರೀಂಕೋರ್ಟ್ ತೀರ್ಪಿನ ಮರುಪರಿಶೀಲನೆ ಕೋರಿ ಅರುಣ್ ಶೌರಿ, ಯಶವಂತ್ ಸಿನ್ಹಾ ಅರ್ಜಿ ಸಲ್ಲಿಸಿದ್ರು. ಈ ಅರ್ಜಿ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ. ತೀರ್ಪಿನ ಮರುಪರಿಶೀಲನಾ ಅರ್ಜಿಯ ಬಗ್ಗೆ ಇಂದು ಸುಪ್ರೀಂಕೋರ್ಟ್ ತೀರ್ಪು ನೀಡಲಿದೆ.

ಶಬರಿಮಲೆ ತೀರ್ಪಿನ ಬಗ್ಗೆಯೂ ಕೌತುಕ: ಎರಡನೆಯದಾಗಿ ಕೇರಳದ ಶಬರಿಮಲೆ ದೇವಾಲಯಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೂ ಪ್ರವೇಶಾವಕಾಶ ನೀಡಿ ಕಳೆದ ವರ್ಷವೇ ಸುಪ್ರೀಂ ತೀರ್ಪು ನೀಡಿದೆ. ಈ ತೀರ್ಪಿನ ಮರುಪರಿಶೀಲನೆ ಕೋರಿ 49 ಅರ್ಜಿಗಳು ಸಲ್ಲಿಕೆಯಾಗಿದ್ವು. ಇವುಗಳ ಬಗ್ಗೆ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ರೋಹಿಂಟನ್ ಫಾಲಿ ನಾರಿಮನ್, ಜಸ್ಟೀಸ್ ಎ.ಎಂ.ಖಾನ್ ವಿಲಕರ್, ಜಸ್ಟೀಸ್ ಡಿ.ವೈ.ಚಂದ್ರಚೂಢ ಹಾಗೂ ಜಸ್ಟೀಸ್ ಇಂದೂ ಮಲ್ಹೋತ್ರಾ ಅವರನ್ನೊಳಗೊಂಡ ಪೀಠವು ಮರುಪರಿಶೀಲನಾ ಅರ್ಜಿಯ ಬಗ್ಗೆ ತೀರ್ಪು ನೀಡಲಿದೆ.

Published On - 7:17 am, Thu, 14 November 19

Click on your DTH Provider to Add TV9 Kannada