ರಾಬರ್ಟ್ ವಾದ್ರಾಗೆ ಕೊವಿಡ್: ಸೆಲ್ಫ್ ಐಸೋಲೇಷನ್​ನಲ್ಲಿ ಪ್ರಿಯಾಂಕಾ ಗಾಂಧಿ, ಚುನಾವಣಾ ಪ್ರಚಾರ ರದ್ದು

|

Updated on: Apr 02, 2021 | 6:07 PM

Priyanka Gandhi Vadra: ಚುನಾವಣಾ ಕಾರ್ಯಕ್ರಮದಲ್ಲಿ ಭಾಗಿಯಾಲು ಸಾಧ್ಯವಾಗದೇ ಇರುವುದಕ್ಕಾಗಿ  ಎಲ್ಲರಲ್ಲಿಯೂ ಕ್ಷಮೆ ಕೇಳುತ್ತೇನೆ. ನಾನು ಚುನಾವಣಾ ಪ್ರಚಾರ ಮಾಡಬೇಕೆಂದಿದ್ದ ಅಭ್ಯರ್ಥಿಗಳಿಗೆ ಶುಭ ಹಾರೈಕೆಗಳು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ವಿಡಿಯೊ ಟ್ವೀಟ್ ಮಾಡಿದ್ದಾರೆ.

ರಾಬರ್ಟ್ ವಾದ್ರಾಗೆ ಕೊವಿಡ್: ಸೆಲ್ಫ್ ಐಸೋಲೇಷನ್​ನಲ್ಲಿ ಪ್ರಿಯಾಂಕಾ ಗಾಂಧಿ, ಚುನಾವಣಾ ಪ್ರಚಾರ ರದ್ದು
ಪ್ರಿಯಾಂಕಾ ಗಾಂಧಿ ವಾದ್ರಾ ಜತೆ ರಾಬರ್ಟ್ ವಾದ್ರಾ
Follow us on

ದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಅವರಿಗೆ ಕೊವಿಡ್ ದೃಢಪಟ್ಟಿದ್ದು, ಈ ದಂಪತಿ ದೆಹಲಿಯಲ್ಲಿರುವ ನಿವಾಸದಲ್ಲಿ ಸೆಲ್ಫ್ ಐಸೋಲೇಷನ್​ನಲ್ಲಿದ್ದಾರೆ. ಕೊವಿಡ್ ದೃಢಪಟ್ಟಿರುವ ವಿಷಯವನ್ನು ವಾದ್ರಾ ಶುಕ್ರವಾರ ತಮ್ಮ ಫೇಸ್​ಬುಕ್ ಮೂಲಕ ತಿಳಿಸಿದ್ದಾರೆ. ಕೊವಿಡ್ ಮಾರ್ಗಸೂಚಿ ಪ್ರಕಾರ ನಾನು ಮತ್ತು ಪ್ರಿಯಾಂಕಾ ಸೆಲ್ಫ್ ಐಸೋಲೇಷನ್​ನಲ್ಲಿದ್ದೇವೆ. ಪ್ರಿಯಾಂಕಾ ಅವರಿಗೆ ನೆಗೆಟಿವ್ ವರದಿ ಬಂದಿದೆ ಎಂದು ವಾದ್ರಾ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ಏತನ್ಮಧ್ಯೆ ಟ್ವಿಟರ್​ನಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿರುವ 49ರ ಹರೆಯದ ಪ್ರಿಯಾಂಕಾ ಚುನಾವಣಾ ಆಯೋಗದ ನಿಷ್ಪಕ್ಷಪಾತಕ್ಕೆ ವಣಕ್ಕಂ, ಕೊರೊನಾ ಪರೀಕ್ಷೆ ಮಾಡಿ ವರದಿ ನೆಗೆಟಿವ್ ಬಂದಿದೆ. ವೈದ್ಯರ ಸಲಹೆಯಂತೆ ನಾನು ಕೆಲವು ದಿನ ಸೆಲ್ಫ್ ಐಸೋಲೇಟ್ ಆಗಿರಲಿದ್ದೇನೆ. ನಾನು ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.

ಚುನಾವಣಾ ಕಾರ್ಯಕ್ರಮದಲ್ಲಿ ಭಾಗಿಯಾಲು ಸಾಧ್ಯವಾಗದೇ ಇರುವುದಕ್ಕಾಗಿ  ಎಲ್ಲರಲ್ಲಿಯೂ ಕ್ಷಮೆ ಕೇಳುತ್ತೇನೆ. ನಾನು ಚುನಾವಣಾ ಪ್ರಚಾರ ಮಾಡಬೇಕೆಂದಿದ್ದ ಅಭ್ಯರ್ಥಿಗಳಿಗೆ ಶುಭ ಹಾರೈಕೆಗಳು. ಎಲ್ಲರೂ ಉತ್ತಮವಾಗಿ ಕಾರ್ಯ ನಿರ್ವಹಿಸಿ, ಕಾಂಗ್ರೆಸ್ ಗೆಲ್ಲಲಿ ಎಂದು ಹೇಳಿದ್ದಾರೆ. ಶುಕ್ರವಾರ ಅಸ್ಸಾಂ, ಶನಿವಾರ ತಮಿಳುನಾಡಿನಲ್ಲಿ ಮತ್ತು ಭಾನುವಾರ ಕೇರಳದಲ್ಲಿ ಪ್ರಿಯಾಂಕಾ ಚುನಾವಣಾ ಪ್ರಚಾರ ನಿಗದಿಯಾಗಿತ್ತು. ಈಗ ಎಲ್ಲ ಪ್ರಚಾರ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ.

ರಾಬರ್ಟ್ ವಾದ್ರಾ- ಪ್ರಿಯಾಂಕಾ ಮತ್ತು ಇಬ್ಬರು ಮಕ್ಕಳು ಕೊವಿಡ್ ಪರೀಕ್ಷೆಗೊಳಪಟ್ಟಿದ್ದು, ವಾದ್ರಾ ಹೊರತು ಪಡಿಸಿ ಎಲ್ಲರಿಗೂ ಕೊವಿಡ್ ನೆಗೆಟಿವ್ ವರದಿ ಬಂದಿದೆ.

ತಮಿಳುನಾಡು, ಪುದುಚೇರಿ ಮತ್ತು ಕೇರಳದಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಇದೇ ದಿನ ಮೂರನೇ ಹಂತದ ಮತದಾನವಾಗಲಿದೆ.

ಚುನಾವಣಾ ಆಯೋಗದ ನಿಷ್ಪಕ್ಷಪಾತಕ್ಕೆ ವಣಕ್ಕಂ
ಏಪ್ರಿಲ್ 1ರಂದು ರಾತ್ರಿ ಅಸ್ಸಾಂನಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರ ಕಾರಿನಲ್ಲಿ ಇವಿಎಂ ಸಾಗಿಸುತ್ತಿರುವ ವಿಡಿಯೊ ವೈರಲ್ ಆಗಿತ್ತು. ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆಯ ಟ್ವೀಟ್​ನ್ನು ಶೇರ್ ಮಾಡಿ ಪ್ರತಿಕ್ರಿಯಿಸಿದ ಪ್ರಿಯಾಂಕಾ, ಏನು ಕಟ್ಟುನಿಟ್ಟಿನ ಕ್ರಮ? ಚುನಾವಣಾ ಆಯೋಗದ ವಾಹನ ಕೆಟ್ಟು ಹೋದಾಗ ಅಲ್ಲಿ ಬೇರೊಂದು ವಾಹನ ಪ್ರತ್ಯಕ್ಷವಾಯಿತು. ಆ ವಾಹನ ಬಿಜೆಪಿ ಅಭ್ಯರ್ಥಿಯದ್ದಾಗಿತ್ತು. ಮುಗ್ಧ ಚುನಾವಣಾ ಆಯೋಗವು ಅದರಲ್ಲಿ ಕುಳಿತು ಪ್ರಯಾಣಿಸುತ್ತಿತ್ತು. ಪ್ರೀತಿಯ ಚುನಾವಣಾ ಆಯೋಗ, ವಿಷಯ ಏನು? ನೀವು ದೇಶದ ಜನರ ಮುಂದೆ ನಿಮ್ಮ ಸತ್ಯ ಸಾಬೀತು ಪಡಿಸುತ್ತೀರಾ? ಅಥವಾ ನಾವೆಲ್ಲರೂ ಒಂದಾಗಿ ಚುನಾವಣಾ ಆಯೋಗದ ನಿಷ್ಪಕ್ಷಪಾತಕ್ಕೆ ವಣಕ್ಕಂ ಎಂದು ಹೇಳಲೇ? ಎಂದು ಕುಟುಕಿದ್ದಾರೆ.

ಇದನ್ನೂ ಓದಿ: ಟ್ರೋಲ್​ ಆಯ್ತು ಕೇರಳ ಯುಡಿಎಫ್ ಅಭ್ಯರ್ಥಿಗಳ ಬಗ್ಗೆ ಪ್ರಿಯಾಂಕಾ ಗಾಂಧಿ ಮಾಡಿದ್ದ ಟ್ವೀಟ್ 

ಪ್ರಮಾದವೋ ಅಥವಾ ಜ್ಞಾನೋದಯವೋ: ನಿರ್ಮಲಾ ಸೀತಾರಾಮನ್​ಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ