Watch ಮಹಾರಾಷ್ಟ್ರದ ಬಲಪಂಥೀಯ ಸಂಘಟನೆಯ ನಾಯಕ ಸಂಭಾಜಿ ಭಿಡೆ ಪಾದಕ್ಕೆ ನಮಸ್ಕರಿಸಿದ ಸುಧಾಮೂರ್ತಿ; ಹಲವರಿಂದ ಟೀಕೆ

| Updated By: ರಶ್ಮಿ ಕಲ್ಲಕಟ್ಟ

Updated on: Nov 09, 2022 | 7:23 PM

ಛತ್ರಪತಿ ಶಿವಾಜಿ ಮಹಾರಾಜರ ಹಿಂದಿನ ರಾಜಧಾನಿ ರಾಯಗಢ ಕೋಟೆಯಲ್ಲಿ ಚಿನ್ನದ ಸಿಂಹಾಸನವನ್ನು ಸ್ಥಾಪಿಸಲು ಸಹಾಯಕ್ಕಾಗಿ ಬಿಢೆ ಸುಧಾ ಮೂರ್ತಿಯನ್ನು ಭೇಟಿಯಾದರು ಎಂದು ಭಿಡೆ ಅವರ ಶಿವ ಪ್ರತಿಷ್ಠಾನ ಸಂಘಟನೆಯ ಕಾರ್ಯಕಾರಿಯೊಬ್ಬರು ಹೇಳಿದರು.

Watch ಮಹಾರಾಷ್ಟ್ರದ ಬಲಪಂಥೀಯ ಸಂಘಟನೆಯ ನಾಯಕ ಸಂಭಾಜಿ ಭಿಡೆ ಪಾದಕ್ಕೆ ನಮಸ್ಕರಿಸಿದ ಸುಧಾಮೂರ್ತಿ; ಹಲವರಿಂದ ಟೀಕೆ
ಸಂಭಾಜಿ ಭಿಡೆ ಜತೆ ಸುಧಾಮೂರ್ತಿ
Follow us on

ಲೇಖಕಿ ಸುಧಾ ಮೂರ್ತಿ(Sudha Murthy) ಅವರು ಮಹಾರಾಷ್ಟ್ರದ (Maharashtra) ಬಲಪಂಥೀಯ ಸಂಘಟನೆಯ ನಾಯಕನ ಪಾದಕ್ಕೆ ನಮಸ್ಕರಿಸುತ್ತಿರುವ ವಿಡಿಯೊ ವೈರಲ್ ಆಗಿದ್ದು, ಹಲವರು ಇದನ್ನು ಟೀಕಿಸಿದ್ದಾರೆ. ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸಂಭಾಜಿ ಭಿಡೆ  (Sambhaji Bhide)ಅವರ ಪಾದಗಳಿಗೆ ನಮಸ್ಕರಿಸುತ್ತಿರುವುದು ವಿಡಿಯೊದಲ್ಲಿ ಕಾಣಬಹುದು. ಇತ್ತೀಚೆಗಷ್ಟೇ ಹಣೆ ಮೇಲೆ ಬಿಂದಿ ಇಲ್ಲ ಎಂದು ಮಹಿಳಾ ಪತ್ರಕರ್ತೆಯೊಬ್ಬರೊಂದಿಗೆ ಮಾತನಾಡಲು ನಿರಾಕರಿಸಿದ್ದಕ್ಕಾಗಿ ರಾಜ್ಯ ಮಹಿಳಾ ಆಯೋಗವು ಭಿಡೆ ಅವರಿಗೆ ನೋಟಿಸ್ ನೀಡಿತ್ತು. ಭಿಡೆ ಅವರು ಮಹಿಳಾ ಪತ್ರಕರ್ತರು ತಮ್ಮೊಂದಿಗೆ ಮಾತನಾಡುವ ಮೊದಲು ‘ಬಿಂದಿ’ಯನ್ನಿಡಬೇಕು ಎಂದಿದ್ದರು. ಹಣೆಯಲ್ಲಿ ಬಿಂದಿ ಇಡಬೇಕು, ನೀವು ಭಾರತ ಮಾತೆಯನ್ನು ಹೋಲುತ್ತೀರಿ, ಆಕೆ ವಿಧವೆ ಅಲ್ಲ.ಬಿಂದಿ ಇರಿಸಿದವರ ಜತೆ ಮಾತ್ರ ನಾನು ಮಾತನಾಡುತ್ತೇನೆ ಎಂದು ಬಿಢೆ ಹೇಳಿದ್ದರು. ಪಶ್ಚಿಮ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಭಿಡೆ- ಸುಧಾಮೂರ್ತಿ ಭೇಟಿ ನಡೆದಿದೆ. ಸುಧಾ ಮೂರ್ತಿ ಸೋಮವಾರ ತಮ್ಮ ಪುಸ್ತಕಗಳ ಪ್ರಚಾರ ಕಾರ್ಯಕ್ರಮದಲ್ಲಿ ಓದುಗರೊಂದಿಗೆ ಸಂವಾದ ನಡೆಸುತ್ತಿದ್ದರು. ಸುಧಾ ಮೂರ್ತಿ ಅವರ ಹಲವು ಪುಸ್ತಕಗಳು ಮರಾಠಿಗೆ ಅನುವಾದವಾಗಿವೆ

ಛತ್ರಪತಿ ಶಿವಾಜಿ ಮಹಾರಾಜರ ಹಿಂದಿನ ರಾಜಧಾನಿ ರಾಯಗಢ ಕೋಟೆಯಲ್ಲಿ ಚಿನ್ನದ ಸಿಂಹಾಸನವನ್ನು ಸ್ಥಾಪಿಸಲು ಸಹಾಯಕ್ಕಾಗಿ ಬಿಢೆ ಸುಧಾ ಮೂರ್ತಿಯನ್ನು ಭೇಟಿಯಾದರು ಎಂದು ಭಿಡೆ ಅವರ ಶಿವ ಪ್ರತಿಷ್ಠಾನ ಸಂಘಟನೆಯ ಕಾರ್ಯಕಾರಿಯೊಬ್ಬರು ಹೇಳಿದರು.

ಇದನ್ನೂ ಓದಿ
Sambhaji Bhide: ಭಾರತ ಮಾತೆ ವಿಧವೆಯಲ್ಲ, ಬಿಂದಿ ಧರಿಸದ ಪತ್ರಕರ್ತೆಯೊಂದಿಗೆ ಮಾತನಾಡಲು ನಿರಾಕರಿಸಿದ ಸಂಭಾಜಿ ಭಿಡೆ
Fact Check ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಮುಂದೆ ಮಂಡಿಯೂರಿ ನಮಸ್ಕರಿಸಿದ ಸುಧಾಮೂರ್ತಿ, ವೈರಲ್ ಚಿತ್ರ 3 ವರ್ಷ ಹಿಂದಿನದ್ದು
ಮೈಸೂರು ರಾಜವಂಶಸ್ಥರಿಗೆ ನಮಸ್ಕರಿಸಿದ ಸುಧಾಮೂರ್ತಿ; ರಾಜಪ್ರಭುತ್ವ ಕೊನೆಯಾದರೂ ಯಾಕೆ ಹೀಗೆ ಎಂದು ಪ್ರಶ್ನಿಸಿದ ನೆಟ್ಟಿಗರು


ಆದಾಗ್ಯೂ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಅತ್ತೆ ಸುಧಾ ಮೂರ್ತಿ ಅವರ ಸಹಾಯಕರು ಅವರಿಗೆ ಭಿಡೆ ಯಾರೆಂದು ತಿಳಿದಿರಲಿಲ್ಲ. ಹಿರಿಯ ನಾಗರಿಕರ ಗೌರವದಿಂದ ಅವರಿಗೆ ನಮಸ್ಕರಿಸಿದ್ದರು ಎಂದು ಹೇಳಿದರು.

ಸಾಂಗ್ಲಿ ಕಾರ್ಯಕ್ರಮವನ್ನು ಆಯೋಜಿಸಿದ ಮೆಹ್ತಾ ಪಬ್ಲಿಷಿಂಗ್ ಹೌಸ್‌ನ ಸಂಪಾದಕೀಯ ಮುಖ್ಯಸ್ಥ ಯೋಜನಾ ಯಾದವ್, ಸ್ಥಳೀಯ ಪೊಲೀಸರು ಭಿಡೆ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಿದ್ದರೂ ಸುಧಾ ಮೂರ್ತಿ ಅವರನ್ನು ಭೇಟಿಯಾಗಲು ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದ್ದರು.
ಸುಧಾ ಮೂರ್ತಿ ಅವರು ಯಾರನ್ನೂ ಭೇಟಿಯಾಗಲು ನಿರಾಕರಿಸಿದ್ದರು. ಆದರೆ ಭಿಡೆ ಅವರ ಬೆಂಬಲಿಗರು ಯಾವುದೇ ಆಹ್ವಾನವಿಲ್ಲದೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸಭಾಂಗಣದ ಹೊರಗೆ ಭಿಡೆ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ, ಸ್ಥಳೀಯ ಪೊಲೀಸರು ಒತ್ತಡಕ್ಕೆ ಒಳಗಾದರು. ನಂತರ ಓದುಗರೊಂದಿಗೆ ಸಂವಾದ ನಡೆಸುತ್ತಿದ್ದ ಭಿಡೆ ಮೂರ್ತಿ ಅವರನ್ನು ಭೇಟಿಯಾಗಲು ಅವಕಾಶ ನೀಡುವಂತೆ ಮನವಿ ಮಾಡಿದರ ಯೋಜನಾ ಯಾದವ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಒತ್ತಡ ಎಷ್ಟಿತ್ತೆಂದರೆ ಇದರಿಂದ ಇರಿಸುಮುರಿಸುಗೊಂಡ ಸುಧಾ ಮೂರ್ತಿಯವರು ತಮ್ಮ ಓದುಗರೊಂದಿಗೆ ಸಂವಾದವನ್ನು ನಿಲ್ಲಿಸಿ ಭಿಡೆ ಅವರನ್ನು ಭೇಟಿ ಮಾಡಲು ಹೊರಟರು. ಭಿಡೆ ಯಾರೆಂದು ಅವರಿಗೆ ತಿಳಿದಿರಲಿಲ್ಲ, ಆದ್ದರಿಂದ ಅವರು ನನ್ನಲ್ಲಿ ಭಿಡೆ ಅವರ ವಯಸ್ಸು ಕೇಳಿದರು. ಹಿರಿಯರಿಗೆ ಗೌರವ ನೀಡುವ ಸಲುವಾಗಿ ಅವರ ಕಾಲಿಗೆ ನಮಸ್ಕರಿಸಿದ್ದಾರೆ ಎಂದು ಯಾದವ್ ಹೇಳಿದ್ದಾರೆ. ಭಿಡೆ ತನ್ನೊಂದಿಗೆ ಒಂದೂವರೆ ಗಂಟೆಗಳ ಕಾಲ ಮಾತನಾಡಲು ಬಯಸಿದ್ದರು. ಆದರೆ ನನ್ನಲ್ಲಿ ಒಂದೂವರೆ ನಿಮಿಷದಷ್ಟೂ ಸಮಯವಿಲ್ಲ ಎಂದು ನಾನು ಅವರಿಗೆ ಹೇಳಿದೆ ಎಂದು ಸುಧಾಮೂರ್ತಿ ನನ್ನಲ್ಲಿ ಹೇಳಿದರು ಎಂದಿದ್ದಾರೆ ಯಾದವ್.

ಭಿಡೆ ಅವರೊಂದಿಗಿನ ಭೇಟಿಯ ದೃಶ್ಯಾವಳಿಯನ್ನು ಅವರು ಪ್ರಚಾರಕ್ಕೆ ಬಳಸಬಹುದು ಎಂದಾವು ಸುಧಾ ಮೂರ್ತಿಯವರಿಗೆ ಎಚ್ಚರಿಕೆ ನೀಡಿದ್ದೆವು ಎಂದು ಯೋಜನಾ ಯಾದವ್ ಹೇಳಿದ್ದಾರೆ.

ಆ ಭೇಟಿ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪತ್ರಕರ್ತ ನಿಖಿಲ್ ವಾಗ್ಲೆ, “ಇಂತಹ ಕುಖ್ಯಾತ ವ್ಯಕ್ತಿಯ ಪಾದಗಳನ್ನು ಮುಟ್ಟಿ ಏನು ಸಾಧಿಸಿದರು? ಎಂದು ಟ್ವೀಟ್ ಮಾಡಿದ್ದಾರೆ.  ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಪ್ರೀತಿ ಶರ್ಮಾ ಮೆನನ್ ಟ್ವೀಟ್ ಮಾಡಿ, “ಸುಧಾ ಮೂರ್ತಿ ಬಿಂದಿ ಧರಿಸಿದ್ದರು. ಸುಧಾ ಮೂರ್ತಿಯಂತಹವರು ಭಿಡೆಯಂತಹ ಧರ್ಮಾಂಧರನ್ನು ಭೇಟಿಯಾದಾಗ, ಅವರು ತಮ್ಮ ನಿಜವಾದ ಬಣ್ಣವನ್ನು ಬಹಿರಂಗಪಡಿಸುತ್ತಾರೆ ಎಂದು ಟೀಕಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ವಿಶ್ವಂಭರ ಚೌಧರಿ ಅವರು “ನಮ್ಮಲ್ಲಿ ಏನೋ ಗೊಂದಲವಿದೆ, ಇಲ್ಲದಿದ್ದರೆ ಸುಧಾ ಮೂರ್ತಿ ಅವರು ಭಿಡೆ ಅವರನ್ನು ಭೇಟಿಯಾಗುವಂತೆ ಒತ್ತಡಕ್ಕೆ ಮಣಿಯುತ್ತಿರಲಿಲ್ಲ. ಅವರು ಪಾದಗಳಿಗೆ ನಮಸ್ಕರಿಸಿದ್ದನ್ನು ಬಿಟ್ಟುಬಿಡಿ” ಎಂದು ಟ್ವೀಟ್ ಮಾಡಿದ್ದಾರೆ.

Published On - 9:00 pm, Tue, 8 November 22