Sambhaji Bhide: ಭಾರತ ಮಾತೆ ವಿಧವೆಯಲ್ಲ, ಬಿಂದಿ ಧರಿಸದ ಪತ್ರಕರ್ತೆಯೊಂದಿಗೆ ಮಾತನಾಡಲು ನಿರಾಕರಿಸಿದ ಸಂಭಾಜಿ ಭಿಡೆ
ಮಹಾರಾಷ್ಟ್ರದ ಹಿಂದೂ ಕಾರ್ಯಕರ್ತ ಸಂಭಾಜಿ ಭಿಡೆ ಬುಧವಾರ ಮಹಿಳಾ ಪತ್ರಕರ್ತೆಯೊಬ್ಬರು ಹಣೆಗೆ ಬಿಂದಿಗೆ ಹಾಕದ ಕಾರಣ ಅವರ ಜೊತೆಗೆ ಮಾತನಾಡಲು ನಿರಾಕರಿಸಿದ್ದಾರೆ.
ಮಹಾರಾಷ್ಟ್ರ: ಮಹಾರಾಷ್ಟ್ರದ ಹಿಂದೂ ಕಾರ್ಯಕರ್ತ ಸಂಭಾಜಿ ಭಿಡೆ ಬುಧವಾರ ಮಹಿಳಾ ಪತ್ರಕರ್ತೆಯೊಬ್ಬರು ಹಣೆಗೆ ಬಿಂದಿ ಹಾಕದ ಕಾರಣ ಅವರ ಜೊತೆಗೆ ಮಾತನಾಡಲು ನಿರಾಕರಿಸಿದ್ದಾರೆ. ದಕ್ಷಿಣ ಮುಂಬೈಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇದೀಗ ಎಲ್ಲ ಕಡೆ ಈ ವಿಡಿಯೊ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ತಿಳಿಸಿರುವಂತೆ ಸಂಭಾಜಿ ಭಿಡೆ ಮಹಿಳಾ ವರದಿಗಾರರಿಗೆ ತನ್ನ ಬೈಟ್ ತೆಗೆದುಕೊಳ್ಳಲು ಬರುವ ಮೊದಲು ಬಿಂದಿಯನ್ನು ಹಾಕಿಕೊಂಡು ಬನ್ನಿ ಎಂದು ಹೇಳುವುದನ್ನು ಈ ವಿಡಿಯೊದಲ್ಲಿ ಕೇಳಬಹುದು.
ನಾನು ನಿಮ್ಮ ಜೊತೆಗೆ ಮಾತನಾಡಬೇಕೆಂದರೆ ಮೊದಲು ಹಣೆಗೆ ಕುಂಕುಮ ಹಾಕಿಕೊಂಡು ಬನ್ನಿ ನಂತರ ಮಾತನಾಡುವ ಎಂದು ಸಂಭಾಜಿ ಭಿಡೆ ಹೇಳಿದ್ದಾರೆ. ನಮ್ಮ ದೇಶದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನವಿದೆ, ನೀವು ಭಾರತ ಮಾತೆಯನ್ನು ಹೋಲುತ್ತೀರಿ. ಭಾರತ ಮಾತೆ ಬಿಂದಿ ಹಾಕದೆ ವಿಧವೆಯಂತೆ ಕಾಣಿಸಿಕೊಳ್ಳಬಾರದು ಎಂದು ಪತ್ರಕರ್ತೆಗೆ ಹೇಳಿದರು ಎಂದು ಪಿಟಿಐ ವರದಿ ಮಾಡಿದೆ.
शर्मनाक!शिव प्रतिष्ठान हिंदुस्तान के संभाजी भिड़े ने @saamTVnews के एक महिला पत्रकार को कहा की तुमने बिंदी नहीं लगाया, इसलिए मैं तुमसे बात नहीं करूंगा! क्या यही है महिला सम्मान?
आज मुख्यमंत्री @mieknathshinde से मिलने संभाजी भिड़े पहुंचे थे,प्रधानमंत्री मोदी से भी मिल चुके हैं! pic.twitter.com/TcMkOpG8y2
— sohit mishra (@sohitmishra99) November 2, 2022
ಘಟನೆಯ ವಿಡಿಯೊ ವೈರಲ್ ಆಗುತ್ತಿದ್ದಂತೆ, ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಅವರು ಭಿಡೆ ಅವರ ಹೇಳಿಕೆಗಳಿಗೆ ವಿವರಣೆಯನ್ನು ಕೋರಿ ನೋಟಿಸ್ ಜಾರಿಗೊಳಿಸಿದ್ದಾರೆ.