ಗುಜರಾತ್ ಚುನಾವಣೆ: ಡಿಸೆಂಬರ್ 1ರಂದು ಪ್ರಥಮ, 5ರಂದು 2ನೇ ಹಂತದ ಮತದಾನ; ಡಿಸೆಂಬರ್ 8ರಂದು ಫಲಿತಾಂಶ ಪ್ರಕಟ

Gujarat Election Dates ಗುಜರಾತ್ ಚುನಾವಣೆಯಲ್ಲಿ 4.9 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಮತದಾರರಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ 34,000 ಕ್ಕಿಂತ ಹೆಚ್ಚು ಸೇರಿದಂತೆ 51,000 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು

ಗುಜರಾತ್ ಚುನಾವಣೆ: ಡಿಸೆಂಬರ್ 1ರಂದು ಪ್ರಥಮ, 5ರಂದು 2ನೇ ಹಂತದ ಮತದಾನ; ಡಿಸೆಂಬರ್ 8ರಂದು ಫಲಿತಾಂಶ ಪ್ರಕಟ
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 03, 2022 | 12:57 PM

ಗುಜರಾತ್ ವಿಧಾನಸಭಾ ಚುನಾವಣೆ (Gujarat Assembly elections) ದಿನಾಂಕವನ್ನು ಚುನಾವಣಾ ಆಯೋಗ(Election Commission) ಇಂದು ಪ್ರಕಟಿಸಿದೆ. ಗುಜರಾತಿನಲ್ಲಿ ಡಿಸೆಂಬರ್ 1ರಂದು ಪ್ರಥಮ, 5ರಂದು 2ನೇ ಹಂತದ ಮತದಾನ ನಡೆಯಲಿದ್ದು ಡಿಸೆಂಬರ್​ 8ರಂದು ಫಲಿತಾಂಶ ಪ್ರಕಟವಾಗಲಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್  ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ಮಹಿಳೆಯರು, ವೃದ್ಧರು, ಅಂಗವಿಕಲರಿಗೆ ಪ್ರವೇಶ ಮತ್ತು ಸೇರ್ಪಡೆಗಾಗಿ ವಿಶೇಷ ವೀಕ್ಷಕರನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಿಯೋಜಿಸಲಾಗುವುದು ಎಂದು ಹೇಳಿದ್ದಾರೆ. ಚುನಾವಣಾ ದಿನಾಂಕ ಪ್ರಕಟಿಸುವ ಮೊದಲು, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮೊರ್ಬಿ ಸೇತುವೆ ಕುಸಿತದ ಸಂತ್ರಸ್ತರಿಗೆ ಸಂತಾಪ ಸೂಚಿಸಿದ್ದಾರೆ. ಗುಜರಾತ್ ಚುನಾವಣೆಯಲ್ಲಿ 4.9 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಮತದಾರರಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ 34,000 ಕ್ಕಿಂತ ಹೆಚ್ಚು ಸೇರಿದಂತೆ 51,000 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.ಗುಜರಾತ್ ನಲ್ಲಿ 2.53ಕೋಟಿ ಪುರುಷ ಮತದಾರರು ಇದ್ದಾರೆ.2.37 ಕೋಟಿ ಮಹಿಳಾ ಮತದಾರರು ಇದ್ದು 4.61ಲಕ್ಷ ಮತದಾರರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು 92 ಸದಸ್ಯರ ಬೆಂಬಲ ಬೇಕಿದೆ. ಪ್ರಸ್ತುತ ಆಡಳಿತಾರೂಢ ಬಿಜೆಪಿ 111, ಕಾಂಗ್ರೆಸ್​ 62 ಸದಸ್ಯ ಬಲ ಹೊಂದಿವೆ. ಐದು ಸ್ಥಾನಗಳು ವಿವಿಧ ಕಾರಣಗಳಿಂದ ತೆರವಾಗಿವೆ.

ಗುಜರಾತ್​ನ ಒಟ್ಟು ಮತದಾರರ ಸಂಖ್ಯೆ 51,782. ಇದರಲ್ಲಿ 2.53 ಕೋಟಿ ಪುರುಷ ಮತದಾರರು, 2.37 ಕೋಟಿ ಮಹಿಳಾ ಮತದಾರರು ಇದ್ದಾರೆ. ಮೊದಲ ಬಾರಿಗೆ 4.61 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. ಗೀರ್ ಕಾಡಿನಲ್ಲಿರುವ ಒಬ್ಬನೇ ಒಬ್ಬ ಮತದಾರನಿಗೆ ಒಂದು ಬೂತ್ ಸ್ಥಾಪಿಸಲಾಗುವುದು. 182 ಕ್ಷೇತ್ರಗಳ ಬಲ ಹೊಂದಿರುವ ಗುಜರಾತ್ ವಿಧಾನಸಭೆಯಲ್ಲಿ 142 ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಮೀಸಲು. 13 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ, 27 ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ.

ಗುಜರಾತ್ ವಿಧಾನಸಭೆ ಚುನಾವಣೆ ವೇಳಾಪಟ್ಟಿ

ಗೆಜೆಟ್ ಅಧಿಸೂಚನೆ ಹೊರಡಿಸಿದ ದಿನಾಂಕ: ನವೆಂಬರ್ 5 (ಹಂತ 1), ನವೆಂಬರ್ 10 (ಹಂತ 2)

ನಾಮನಿರ್ದೇಶನಗಳಿಗೆ ಕೊನೆಯ ದಿನಾಂಕ: ನವೆಂಬರ್ 14 (ಹಂತ 1), ನವೆಂಬರ್ 17 (ಹಂತ 2)

ನಾಮನಿರ್ದೇಶನಗಳ ಪರಿಶೀಲನೆಯ ದಿನಾಂಕ: ನವೆಂಬರ್ 15 (ಹಂತ 1); ನವೆಂಬರ್ 18 (ಹಂತ 2)

ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕ: ನವೆಂಬರ್ 15 (ಹಂತ 1), ನವೆಂಬರ್ 18 (ಹಂತ 2)

ಮತದಾನದ ದಿನಾಂಕ: ಡಿಸೆಂಬರ್ 1 (ಹಂತ 1), ಡಿಸೆಂಬರ್ 5 (ಹಂತ 2)

ಎಣಿಕೆಯ ದಿನಾಂಕ: ಡಿಸೆಂಬರ್ 8 (ಎರಡೂ ಹಂತಗಳು)

ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರವು 160 ಕಂಪನಿಗಳ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳನ್ನು (ಸಿಎಪಿಎಫ್) ಗುಜರಾತ್‌ಗೆ ಕಳುಹಿಸಿದೆ. ಸಿಬ್ಬಂದಿಯ ಸುಲಭ ಸಾರಿಗೆಗಾಗಿ ವಿಶೇಷ ರೈಲುಗಳನ್ನು ಕಾಯ್ದಿರಿಸಲಾಗಿದೆ. 182 ಸದಸ್ಯರ ರಾಜ್ಯ ಅಸೆಂಬ್ಲಿಯ ಅವಧಿಯು ಫೆಬ್ರವರಿ 18, 2023 ರಂದು ಕೊನೆಗೊಳ್ಳುತ್ತದೆ.  ಚುನಾವಣೆಯ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದ ನಂತರ ಇಲ್ಲಿ ಮಾದರಿ ನೀತಿ ಸಂಹಿತೆ  ಜಾರಿಗೆ ಬರಲಿದೆ.

Published On - 12:28 pm, Thu, 3 November 22