Caste Census: ಜನರ ಒಳಿತಿಗಾಗಿ ನಡೆಯಬೇಕೇ ವಿನಃ ಚುನಾವಣಾ ಲಾಭಕ್ಕಾಗಿ ಅಲ್ಲ; ಜಾತಿ ಗಣತಿಗೆ ಆರ್‌ಎಸ್‌ಎಸ್ ಬೆಂಬಲ

|

Updated on: Sep 02, 2024 | 5:11 PM

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಇಂದು ರಾಷ್ಟ್ರವ್ಯಾಪಿ ಜಾತಿ ಗಣತಿಗೆ ತನ್ನ ಬೆಂಬಲವನ್ನು ನೀಡಿದ್ದು, ಇದನ್ನು ಸೂಕ್ಷ್ಮ ವಿಷಯ ಎಂದು ಕರೆದಿದೆ. ಜಾತಿ ಗಣತಿ ನಡೆಯಬೇಕಿರುವುದು ಜನರ ಒಳಿತಿಗಾಗಿಯೇ ಹೊರತು ಚುನಾವಣಾ ಲಾಭಕ್ಕಾಗಿ ಅಲ್ಲ ಎಂದು ಆರ್‌ಎಸ್‌ಎಸ್ ಹೇಳಿದೆ. ಪ್ರತಿ ಜಾತಿಯ ಜನರ ಅಭಿವೃದ್ಧಿಗೆ ಶ್ರಮಿಸಲು ಎಷ್ಟು ಜನ ಸಂಖ್ಯೆಯಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ ಎಂದು ಆರ್​ಎಸ್​ಎಸ್​ ತಿಳಿಸಿದೆ.

Caste Census: ಜನರ ಒಳಿತಿಗಾಗಿ ನಡೆಯಬೇಕೇ ವಿನಃ ಚುನಾವಣಾ ಲಾಭಕ್ಕಾಗಿ ಅಲ್ಲ; ಜಾತಿ ಗಣತಿಗೆ ಆರ್‌ಎಸ್‌ಎಸ್ ಬೆಂಬಲ
ಸುನೀಲ್ ಅಂಬೇಕರ್
Follow us on

ನವದೆಹಲಿ: ಚುನಾವಣಾ ಲಾಭಕ್ಕಾಗಿ ಜಾತಿ ಗಣತಿಯನ್ನು ಮಾಡಬಾರದು, ಜನರ ಒಳಿತಿಗಾಗಿ ಜಾತಿ ಗಣತಿ ನಡೆಯಬೇಕು ಎನ್ನುವ ಮೂಲಕ ಆರ್​ಎಸ್​ಎಸ್​ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಜಾತಿ ಗಣತಿಗೆ ಬೆಂಬಲ ಸೂಚಿಸಿದೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಬೇಡ. ಜನರ ಅಭಿವೃದ್ಧಿಗಾಗಿ ಪ್ರತಿಯೊಂದು ಜಾತಿಯ ಜನರ ಸಂಖ್ಯೆಯನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದು ಆರ್‌ಎಸ್‌ಎಸ್ ಹೇಳಿದೆ.

ಜಾತಿ ಗಣತಿಯು ಜನರ ಕಲ್ಯಾಣದ ಅಗತ್ಯಗಳನ್ನು ಪೂರೈಸಲು ಉಪಯುಕ್ತವಾಗಿದೆ ಎಂದು ಆರ್‌ಎಸ್‌ಎಸ್ ಹೇಳಿದೆ. ಆದರೆ, ಅದನ್ನು ಪ್ರಚಾರ ಮತ್ತು ಚುನಾವಣಾ ಉದ್ದೇಶಗಳಿಗಾಗಿ ಬಳಸದಂತೆ ಎಚ್ಚರಿಕೆ ನೀಡಿದೆ. ರಾಷ್ಟ್ರವ್ಯಾಪಿ ಜಾತಿ ಗಣತಿಗಾಗಿ ರಾಹುಲ್ ಗಾಂಧಿ ನೇತೃತ್ವದ ವಿರೋಧ ಪಕ್ಷದ ಪ್ರಚಾರದ ನಡುವೆ ಬಿಜೆಪಿಯ ಸೈದ್ಧಾಂತಿಕ ಪೋಷಕ ಸಂಸ್ಥೆಯಾದ ಆರ್‌ಎಸ್‌ಎಸ್‌ ಈ ಹೇಳಿಕೆ ನೀಡಿದೆ.


ಇದನ್ನೂ ಓದಿ: ಕೇರಳದ ಪಾಲಕ್ಕಾಡ್‌ನಲ್ಲಿ 3 ದಿನಗಳ ಆರ್‌ಎಸ್‌ಎಸ್ ಅಖಿಲ ಭಾರತೀಯ ಸಮನ್ವಯ ಬೈಠಕ್ ಆರಂಭ

“ಜಾತಿ ಗಣತಿಯು ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಇದು ನಮ್ಮ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಮುಖ್ಯವಾಗಿದೆ. ಇದನ್ನು ಬಹಳ ಗಂಭೀರವಾಗಿ ವ್ಯವಹರಿಸಬೇಕು. ಕೆಲವೊಮ್ಮೆ, ಸರ್ಕಾರಕ್ಕೆ ಜಾತಿಯ ಜನರ ಸಂಖ್ಯೆಗಳ ಅಗತ್ಯವಿರುತ್ತದೆ ಮತ್ತು ಈ ಹಿಂದೆ ಇದೇ ರೀತಿಯ ಗಣತಿಯನ್ನು ಮಾಡಲಾಗಿದೆ” ಎಂದು ಆರ್‌ಎಸ್‌ಎಸ್ ಪ್ರಚಾರ ಪ್ರಮುಖ್ (ಮುಖ್ಯ ವಕ್ತಾರ) ಸುನೀಲ್ ಅಂಬೇಕರ್ ಕೇರಳದ ಪಾಲಕ್ಕಾಡ್‌ನಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: ಈ ನಿರ್ಧಾರ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ; ನಿಷೇಧ ತೆರವುಗೊಳಿಸಿದ್ದಕ್ಕೆ ಆರ್​ಎಸ್​ಎಸ್​ ಮೆಚ್ಚುಗೆ

ರಾಹುಲ್ ಗಾಂಧಿ ಅವರು ರಾಷ್ಟ್ರವ್ಯಾಪಿ ಸಾಮಾಜಿಕ-ಆರ್ಥಿಕ ಜಾತಿ ಗಣತಿಗೆ ದೃಢವಾದ ಬೆಂಬಲಿಗರಾಗಿದ್ದಾರೆ. ಇದು ಲೋಕಸಭೆ ಚುನಾವಣೆಯ ಪಕ್ಷದ ಪ್ರಣಾಳಿಕೆಯ ಭಾಗವಾಗಿತ್ತು. 54 ವರ್ಷದ ನಾಯಕ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದರೆ ಜನಗಣತಿ ನಡೆಸುವುದಾಗಿ ಭರವಸೆ ನೀಡಿದ್ದರು. “ಇದು ಸಂವಿಧಾನವನ್ನು ರಕ್ಷಿಸಲು ನೇರವಾಗಿ ಸಂಬಂಧ ಹೊಂದಿದೆ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ