ಅಪಾಯದಲ್ಲಿರುವ ದೇಶಗಳಿಂದ 16,000 ಪ್ರಯಾಣಿಕರ ಆಗಮನ; 18 ಮಂದಿ ಕೊವಿಡ್ ಪಾಸಿಟಿವ್: ಸರ್ಕಾರ
'ಅಪಾಯದಲ್ಲಿರುವ' ದೇಶಗಳಿಂದ 16,000 ಪ್ರಯಾಣಿಕರು ಬಂದಿದ್ದು ಅವರಲ್ಲಿ 18 ಜನರು ಕೊವಿಡ್-19 ಪಾಸಿಟಿವ್ ಆಗಿದ್ದಾರೆ. ಅಂತಹ ಪ್ರಯಾಣಿಕರಿಗಾಗಿ ಒಮಿಕ್ರಾನ್ ಪತ್ತೆಗಾಗಿ ಜೀನೋಮ್ ಸೀಕ್ವೆನ್ಸಿಂಗ್ ನಡೆಯುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಹೇಳಿದರು.
ದೆಹಲಿ: ಲೋಕಸಭೆಯಲ್ಲಿ(Loksabha) ಶುಕ್ರವಾರ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ( Dr Mansukh Mandaviya) ಕೊವಿಡ್ -19 (Covid-19) ವಿರುದ್ಧ ಲಸಿಕೆ ಬೂಸ್ಟರ್ ಡೋಸ್ (booster dose) ಮತ್ತು ಮಕ್ಕಳಿಗೆ ಲಸಿಕೆ ಹಾಕುವ ನಿರ್ಧಾರಗಳನ್ನು ವೈಜ್ಞಾನಿಕ ಸಲಹೆಯ ನಂತರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ವಿಜ್ಞಾನಿಗಳನ್ನು ನಂಬುವಂತೆ ಅವರು ವಿರೋಧ ಪಕ್ಷಗಳನ್ನು ಕೇಳಿದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಎರಡನೇ ಅಲೆ ಸಮಯದಲ್ಲಿ ಕೊವಿಡ್ -19 ಸಾವುಗಳ ನಿಜವಾದ ಸಂಖ್ಯೆಯನ್ನು ಬಹಿರಂಗಪಡಿಸದ ಕೇಂದ್ರದ ಮೇಲೆ ಪ್ರತಿಪಕ್ಷಗಳ ದಾಳಿಗೆ ಪ್ರತಿಕ್ರಿಯಿಸಿದ ಮಾಂಡವಿಯಾ, ಎಲ್ಲಾ ರಾಜ್ಯಗಳಿಗೆ ಆಯಾ ಸಾವಿನ ಸಂಖ್ಯೆಗಳನ್ನು ಕೇಳಲಾಗಿದೆ ಎಂದು ಹೇಳಿದರು. ಈ ವಿನಂತಿಗೆ ಪ್ರತಿಕ್ರಿಯಿಸಿದ 19 ರಾಜ್ಯಗಳಲ್ಲಿ, ಪಂಜಾಬ್ ಮಾತ್ರ ಆಮ್ಲಜನಕದ ಕೊರತೆಯಿಂದ 4 “ಶಂಕಿತ” ಸಾವುಗಳನ್ನು ವರದಿ ಮಾಡಿದೆ ಎಂದು ಅವರು ಹೇಳಿದರು. ಹಿಂದಿನ ಅಧಿವೇಶನದಲ್ಲಿ ಅಶಿಸ್ತಿನ ವರ್ತನೆಯಿಂದಾಗಿ ಸೋಮವಾರ ಹೊರಗುಳಿದ 12 ರಾಜ್ಯಸಭಾ ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಇಂದು ಮುಂಜಾನೆ ವಿರೋಧ ಪಕ್ಷದ ಸಂಸದರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದರು. ಅಮಾನತುಗೊಳಿಸುವಿಕೆಯು ಮೇಲ್ಮನೆಯ “ಪ್ರಜಾಸತ್ತಾತ್ಮಕವಲ್ಲದ ಮತ್ತು ಎಲ್ಲಾ ಕಾರ್ಯವಿಧಾನದ ನಿಯಮಗಳನ್ನು ಉಲ್ಲಂಘಿಸಿದೆ” ಎಂದು ವಿಪಕ್ಷ ಹೇಳಿದೆ.
ಗುರುವಾರ ವಿರೋಧ ಪಕ್ಷಗಳು ಕೊವಿಡ್ -19 ನಿರ್ವಹಣೆ, ನಿಧಾನಗತಿಯ ವ್ಯಾಕ್ಸಿನೇಷನ್ ಮತ್ತು ಎರಡನೇ ತರಂಗವನ್ನು ತಪ್ಪಾಗಿ ನಿರ್ವಹಿಸುವ ಬಗ್ಗೆ ಸರ್ಕಾರವನ್ನು ಟೀಕಿಸಿದವು. ಹೊಸ ಒಮಿಕ್ರಾನ್ ರೂಪಾಂತರಿ ದೃಷ್ಟಿಯಿಂದ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ವಿಪಕ್ಷಗಳು ಒತ್ತಾಯಿಸಿದೆ.
3.46 cr Corona cases have been reported in India and 4.6 Lakh people died – this is 1.36% of total cases. 25,000 cases and 340 deaths per million population reported in India – this is one of the lowest in the world: Union Health Minister Mansukh Mandaviya in Lok Sabha #COVID19 pic.twitter.com/q7hWapZXla
— ANI (@ANI) December 3, 2021
ಲೋಕಸಭೆಯಲ್ಲಿ ಸಚಿವ ಮಾಂಡವಿಯಾ ಹೇಳಿದ್ದೇನು? ‘ಅಪಾಯದಲ್ಲಿರುವ’ ದೇಶಗಳಿಂದ 16,000 ಪ್ರಯಾಣಿಕರು ಬಂದಿದ್ದು ಅವರಲ್ಲಿ 18 ಜನರು ಕೊವಿಡ್-19 ಪಾಸಿಟಿವ್ ಆಗಿದ್ದಾರೆ. ಅಂತಹ ಪ್ರಯಾಣಿಕರಿಗಾಗಿ ಒಮಿಕ್ರಾನ್ ಪತ್ತೆಗಾಗಿ ಜೀನೋಮ್ ಸೀಕ್ವೆನ್ಸಿಂಗ್ ನಡೆಯುತ್ತಿದೆ ಎಂದು ಅವರು ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭವಿಷ್ಯದ ಯಾವುದೇ ಸವಾಲುಗಳಿಗೆ ದೇಶವನ್ನು ಸಿದ್ಧಗೊಳಿಸಲು ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಕೊವಿಡ್-19 ನಲ್ಲಿನ ಯಾವುದೇ ಉಲ್ಬಣವನ್ನು ಎದುರಿಸಲು ಎಲ್ಲಾ ರಾಜ್ಯಗಳು ಸಾಕಷ್ಟು ಔಷಧಿಗಳನ್ನು ಹೊಂದಿವೆ ಎಂದು ಖಚಿತಪಡಿಸಿಕೊಳ್ಳಲು ಬಫರ್ ಸ್ಟಾಕ್ ನೀತಿಯನ್ನು ಅಳವಡಿಸಿಕೊಂಡಿದೆ ಎಂದಿದ್ದಾರೆ.
“ವೈಜ್ಞಾನಿಕ ಸಲಹೆಯ ಆಧಾರದ ಮೇಲೆ ಮಕ್ಕಳಿಗೆ ಬೂಸ್ಟರ್ ಡೋಸ್ ಮತ್ತು ಜಬ್ಸ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಅವರು ಹೇಳಿದರು ಮತ್ತು ವಿಜ್ಞಾನಿಗಳನ್ನು ನಂಬುವಂತೆ ವಿರೋಧ ಪಕ್ಷಗಳಿಗೆ ಮನವಿ ಮಾಡಿದರು.
ರಾಜ್ಯಸಭೆ ಮತ್ತು ಲೋಕಸಭೆ ಕಲಾಪಗಳು ಇಂದಿಗೆ ಮುಗಿದಿದ್ದು, ಡಿಸೆಂಬರ್ 6 ಸೋಮವಾರ ಪುನಾರಂಭವಾಗಲಿದೆ.
ವಿಶ್ವದ ಹಲವು ರಾಷ್ಟ್ರಗಳಲ್ಲಿ ಒಮಿಕ್ರಾನ್ ವೈರಸ್ ಪತ್ತೆ ಭಾರತದ ಇಬ್ಬರಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿದೆ. ಅದೇ ವೇಳೆ ದಕ್ಷಿಣ ಆಫ್ರಿಕಾ -183, ಬೋಟ್ಸ್‌ವಾನ- 19,ಯುಕೆ- 32, ಘಾನಾ -33, ಪೋರ್ಚುಗಲ್ 13, ಜರ್ಮನಿ -10, ಆಸ್ಟ್ರೇಲಿಯಾ- 8, ಅಮೆರಿಕದಲ್ಲಿ- 8, ಕೆನಡಾ- 7, ಡೆನ್ಮಾರ್ಕ್‌ನಲ್ಲಿ- 6 ,ಇಟಲಿ- 4, ಆಸ್ಟ್ರೀಯಾ- 4, ಸ್ವೀಡನ್- 4, ಸ್ವಿಟ್ಜರ್‌ಲ್ಯಾಂಡ್- 3, ದಕ್ಷಿಣ ಕೊರಿಯಾ- 3, ನೈಜೀರಿಯಾ -3, ಬೆಲ್ಜಿಯಂ- 2, ಸ್ಪೇನ್- 2, ಜಪಾನ್- 2, ಬ್ರೆಜಿಲ್- 2, ನಾರ್ವೆ -2 ಪ್ರಕರಣ ಪತ್ತೆಆಗಿದದು ಜೆಕ್ ಗಣರಾಜ್ಯ, ಫ್ರಾನ್ಸ್, ಐರ್ಲೆಂಡ್, ಸೌದಿ ಅರೇಬಿಯಾ ಮತ್ತುಯುಎಇಯಲ್ಲಿ ತಲಾ ಒಂದು ಒಮಿಕ್ರಾನ್ ಕೇಸ್ ಪತ್ತೆಯಾಗಿದೆ.
ಇದನ್ನೂ ಓದಿ: ಆಮ್ಲಜನಕದ ಕೊರತೆಯಿಂದಾಗಿ ಪಂಜಾಬ್ ಮಾತ್ರ 4 ಶಂಕಿತ ಸಾವುಗಳನ್ನು ವರದಿ ಮಾಡಿದೆ: ಮನ್ಸುಖ್ ಮಾಂಡವಿಯಾ