AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Russia-Ukraine War: ರಷ್ಯಾದ ದಾಳಿಯಲ್ಲಿ ಇಡೀ ಕುಟುಂಬವನ್ನು ಕಳೆದುಕೊಂಡ ಉಕ್ರೇನ್ ಪ್ರಜೆ ವಾರಾಣಸಿಯಲ್ಲಿ ಆತ್ಮಹತ್ಯೆ

ರಷ್ಯಾ-ಉಕ್ರೇನ್ ಯುದ್ಧದಲ್ಲಿ ತನ್ನ ಕುಟುಂಬದ ಸದಸ್ಯರನ್ನು ಕಳೆದುಕೊಂಡ ನಂತರ ಆ ವ್ಯಕ್ತಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಈ ಪ್ರಕರಣದ ಬಗ್ಗೆ ಉಕ್ರೇನ್ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ.

Russia-Ukraine War: ರಷ್ಯಾದ ದಾಳಿಯಲ್ಲಿ ಇಡೀ ಕುಟುಂಬವನ್ನು ಕಳೆದುಕೊಂಡ ಉಕ್ರೇನ್ ಪ್ರಜೆ ವಾರಾಣಸಿಯಲ್ಲಿ ಆತ್ಮಹತ್ಯೆ
ವಾರಾಣಸಿ ಎಸಿಪಿ ಸಂತೋಷ್ ಕುಮಾರ್ ಸಿಂಗ್
TV9 Web
| Edited By: |

Updated on: Dec 27, 2022 | 9:45 AM

Share

ವಾರಾಣಸಿ: ರಷ್ಯಾ- ಉಕ್ರೇನ್ ಯುದ್ಧದಲ್ಲಿ (Russia-Ukraine War) ತನ್ನ ಇಡೀ ಕುಟುಂಬವನ್ನು ಕಳೆದುಕೊಂಡ ಉಕ್ರೇನ್ ಪ್ರಜೆಯೊಬ್ಬರು ವಾರಾಣಸಿಯ ಭೇಲುಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ನಾರದ್ ಘಾಟ್ ಪ್ರದೇಶದ ಅತಿಥಿಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆ ಕೊಠಡಿಯಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ.

ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಈ ಪ್ರಕರಣದ ಬಗ್ಗೆ ಉಕ್ರೇನ್ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ. ರಷ್ಯಾ-ಉಕ್ರೇನ್ ಯುದ್ಧದಲ್ಲಿ ತನ್ನ ಕುಟುಂಬದ ಸದಸ್ಯರನ್ನು ಕಳೆದುಕೊಂಡ ನಂತರ ಆ ವ್ಯಕ್ತಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಕಾಶಿಯಲ್ಲಿ ಅವರು ಮರಣಾನಂತರದ ಮೋಕ್ಷದ ಬಗ್ಗೆ ಮಾತನಾಡಿದ್ದರು.

ಇದನ್ನೂ ಓದಿ: Gyanvapi Case: ಜ್ಞಾನವಾಪಿ ಮಸೀದಿ ಪ್ರಕರಣ; ನ. 17ಕ್ಕೆ ತೀರ್ಪು ಮುಂದೂಡಿದ ವಾರಾಣಸಿ ಕೋರ್ಟ್

50 ವರ್ಷದ ಉಕ್ರೇನಿಯನ್ ಪ್ರಜೆ ಕೋಸ್ಟಿಯಾಟಿನ್ ಬೆಲಿಯಾಯೆವ್, ನವೆಂಬರ್ 29ರಿಂದ ನಾರದ್ ಘಾಟ್‌ನಲ್ಲಿರುವ ಮುನ್ನಾ ಗೆಸ್ಟ್‌ಹೌಸ್‌ನಲ್ಲಿ ಉಳಿದುಕೊಂಡಿದ್ದರು. ಅವರು ಭಾನುವಾರ ಸಸಾರಾಮ್ (ಬಿಹಾರ)ಗೆ ಹೋಗಬೇಕಾಗಿತ್ತು. ಆದರೆ, ಅವರು ಬೆಳಗ್ಗೆ ಬಾಗಿಲು ತೆರೆದಿರಲಿಲ್ಲ. ಕೊನೆಗೆ ಬಲವಂತವಾಗಿ ರೂಮಿನ ಬಾಗಿಲು ತೆರೆದಾಗ ಸೀಲಿಂಗ್ ರಾಡ್‌ಗೆ ನೇಣು ಹಾಕಿಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಭೇಲುಪುರ ಎಸ್‌ಎಚ್‌ಒ ರಮಾಕಾಂತ್ ದುಬೆ ತಿಳಿಸಿದ್ದಾರೆ.

ಇದನ್ನೂ ಓದಿ: Talaghattapura: 19ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಸ್ಥಳೀಯರ ಪ್ರಕಾರ, ಅವರು ತಮ್ಮ ರಷ್ಯಾದ ಗೆಳತಿಯೊಂದಿಗೆ ವಾರಾಣಸಿಯಲ್ಲಿ ತಂಗಿದ್ದರು. ಮಾಧ್ಯಮದವರೊಂದಿಗೆ ಮಾತನಾಡಿದ ವಾರಾಣಸಿ ಎಸಿಪಿ ಸಂತೋಷ್ ಕುಮಾರ್ ಸಿಂಗ್, “ಮೃತ ವ್ಯಕ್ತಿಯನ್ನು ಕೋಸ್ಟಿಯಾಂಟ್ಯಾನ್ ಬೆನೆವ್ ಎಂದು ಗುರುತಿಸಲಾಗಿದೆ. ಪ್ರಾಥಮಿಕವಾಗಿ ಮೇಲ್ನೋಟಕ್ಕೆ ಅವರ ಕೊಠಡಿಯ ಒಳಗಿನಿಂದ ಬೀಗ ಹಾಕಿದ್ದರಿಂದ ಇದು ಆತ್ಮಹತ್ಯೆ ಎಂದು ತೋರುತ್ತದೆ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ