Mumbai News: ಮನೆಗೆ ನುಗ್ಗಿ ಚಿನ್ನ ಕದ್ದ ಕಳ್ಳರ ಬೆನ್ನತ್ತಿ ಹಿಡಿದ 9 ವರ್ಷದ ಬಾಲಕಿ
ಮನೆಗೆ ನುಗ್ಗಿದ್ದ ಕಳ್ಳರು ತನ್ನ ತಾಯಿಯನ್ನು ಹೊಡೆಯುವುದನ್ನು ನೋಡಿ ಕೋಪಗೊಂಡ ಚಿತಾಲ್ಸರ್‌ನ 9 ವರ್ಷದ ಬಾಲಕಿ ಹರ್ಷಿತಾ ಕಳ್ಳರು ತಮ್ಮ ಮನೆಯಿಂದ 120 ಗ್ರಾಂ ಚಿನ್ನದೊಂದಿಗೆ ಪರಾರಿಯಾಗುತ್ತಿದ್ದಾಗ ಅವರನ್ನು ಬೀದಿಯಲ್ಲಿ ಬೆನ್ನಟ್ಟಿದ್ದಾಳೆ.
ತನ್ನ ಮನೆಗೆ ನುಗ್ಗಿ, ಚಿನ್ನಾಭರಣವನ್ನು ಕದ್ದೊಯ್ದ ಕಳ್ಳರ ಬೆನ್ನತ್ತಿದ ಮಹಾರಾಷ್ಟ್ರದ (Maharashtra) 4ನೇ ತರಗತಿಯ ಬಾಲಕಿ ಶಾಲಾ ಸಮವಸ್ತ್ರದಲ್ಲೇ ಓಡಿಹೋಗಿ ಕಳ್ಳರನ್ನು ಹಿಡಿದಿದ್ದಾಳೆ. ಮನೆಗೆ ಬಂದಾಗ ಕೆಳಗೆ ಬಿದ್ದಿದ್ದ ತನ್ನ ತಾಯಿಯ ಸ್ಥಿತಿಯನ್ನು ಕಂಡು ಗಾಬರಿಯಾದ ಶಾಲಾ ಸಮವಸ್ತ್ರದಲ್ಲಿದ್ದ 9 ವರ್ಷದ ಬಾಲಕಿ ಹರ್ಷಿತಾ ಪಾಂಡೆ ತನ್ನ ಶಾಲಾ ಚೀಲ ಮತ್ತು ನೀರಿನ ಬಾಟಲಿಯನ್ನು ಹಿಡಿದುಕೊಂಡೇ ಕಳ್ಳರ ಹಿಂದೆ ಓಡಿಹೋಗಿದ್ದಾಳೆ. ಈ ವೇಳೆ ಜೋರಾಗಿ ಆಕೆ ಕಳ್ಳ ಕಳ್ಳ ಎಂದು ಕಿರುಚಿದ್ದರಿಂದ ನೆರೆಹೊರೆಯವರು ಕೂಡ ಆಕೆಯೊಂದಿಗೆ ಓಡಿಬಂದು ಕಳ್ಳನನ್ನು ಹಿಡಿಯಲು ಸಹಾಯ ಮಾಡಿದ್ದಾರೆ.
ಮನೆಗೆ ನುಗ್ಗಿದ್ದ ಕಳ್ಳರು ತನ್ನ ತಾಯಿಯನ್ನು ಹೊಡೆಯುವುದನ್ನು ನೋಡಿ ಕೋಪಗೊಂಡ ಚಿತಾಲ್ಸರ್‌ನ 9 ವರ್ಷದ ಧೈರ್ಯಶಾಲಿ ಬಾಲಕಿ ಹರ್ಷಿತಾ ಕಳ್ಳರು ತಮ್ಮ ಮನೆಯಿಂದ 120 ಗ್ರಾಂ ಚಿನ್ನದೊಂದಿಗೆ ಪರಾರಿಯಾಗುತ್ತಿದ್ದಾಗ ಅವರನ್ನು ಬೀದಿಯಲ್ಲಿ ಬೆನ್ನಟ್ಟಿದ್ದಾಳೆ. ಮೂವರು ಕಳ್ಳರಲ್ಲಿ ಒಬ್ಬನ ಕೈಯಲ್ಲಿ ಕುಡುಗೋಲು ಇದ್ದುದರಿಂದ ದಾರಿಹೋಕರು ಸಹಾಯ ಮಾಡಲು ಹಿಂದೇಟು ಹಾಕಿದರು.
ಡಿಸೆಂಬರ್ 22ರಂದು ಸಂಜೆ 5.30ಕ್ಕೆ ಥಾಣೆಯ ಧರ್ಮವೀರ್ ನಗರದ ಸಾಯಿ ಶ್ರದ್ಧಾ ಸಹಕಾರಿ ಹೌಸಿಂಗ್ ಸೊಸೈಟಿಯ ನಿವಾಸಿಯಾದ 36 ವರ್ಷದ ಸುಷ್ಮಾ ಪಾಂಡೆ 12 ವರ್ಷದ ತಮ್ಮ ಅವಳಿ ಹೆಣ್ಣು ಮಕ್ಕಳಿಗೆ ತಮ್ಮ ಟ್ಯೂಷನ್ ತರಗತಿಗಳಿಗೆ ಹೊರಡಲು ಹೇಳಿದರು. ನಂತರ ತನ್ನ 9 ವರ್ಷದ ಮಗಳು ಹರ್ಷಿತಾಳನ್ನು ಶಾಲೆಯಿಂದ ಕರೆತರಲು ಹೊರಟಳು. ಆಕೆಯ ಇಬ್ಬರು ಅವಳಿ ಮಕ್ಕಳು ತಮ್ಮ ಎರಡನೇ ಮಹಡಿಯ ಫ್ಲಾಟ್‌ನ ಬಾಗಿಲನ್ನು ಲಾಕ್ ಮಾಡಿ ತಮ್ಮ ಟ್ಯೂಷನ್ ತರಗತಿಗಳಿಗೆ ತೆರಳಿದರು.
ಸುಷ್ಮಾ ತನ್ನ ಮಗಳೊಂದಿಗೆ ಮನೆಗೆ ಹಿಂದಿರುಗಿದಾಗ ಮನೆಗೆ ಬೀಗ ಹಾಕದೇ ಇರುವುದು ಕಂಡು ಬಂತು. ಒಳಗೆ ಹೋಗಿ ನೋಡಿದಾಗ ಮನೆಯೊಳಗೆ ಮೂವರು ಕಳ್ಳರು ಚಿನ್ನಾಭರಣವನ್ನು ಕದಿಯುತ್ತಿದ್ದರು. ಅವರನ್ನು ತಡೆಯಲು ಹೋದ ಸುಷ್ಮಾಳನ್ನು ಕೆಳಗೆ ತಳ್ಳಿದ ಅವರು ಆಕೆಯ ಮೇಲೆ ಹಲ್ಲೆ ನಡೆಸಿ ಓಡಿಹೋದರು. ತಕ್ಷಣ ಅವರ ಬೆನ್ನತ್ತಿದ ಹರ್ಷಿತಾ ಅಕ್ಕಪಕ್ಕದ ಮನೆಯವರ ಸಹಾಯದಿಂದ ಅವರನ್ನು ಹಿಡಿದಿದ್ದಾಳೆ.
ಇದನ್ನೂ ಓದಿ: ಶಿರಸಿ ಪೊಲೀಸರ ಭರ್ಜರಿ ಬೇಟೆ: 9 ಅಂತರ್ ಜಿಲ್ಲಾ ಕಳ್ಳರ ಬಂಧನ, 13,80,000 ರೂ. ನಗದು, 2 ಕಾರು, 12 ಮೊಬೈಲ್ ಜಪ್ತಿ
ತನ್ನ ತಾಯಿ ನೋವಿನಿಂದ ನರಳುತ್ತಿರುವುದನ್ನು ಸಹಿಸಲಾಗದೆ ಹರ್ಷಿತಾ ಸುಮಾರು ಒಂದೂವರೆ ಕಿಲೋಮೀಟರ್ ವರೆಗೆ ಕಳ್ಳರನ್ನು ಬೆನ್ನಟ್ಟಿದ್ದಾಳೆ. ಅವರಲ್ಲಿ ಇಬ್ಬರನ್ನು ಹಿಡಿಯಲು ಯಶಸ್ವಿಯಾಗಿದ್ದು, ಇನ್ನೊಬ್ಬ ತಪ್ಪಿಸಿಕೊಂಡಿದ್ದಾನೆ. ನಂತರ ಅವರು ಚಿತಾಲ್ಸರ್ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರನ್ನು ಸೆರೆಹಿಡಿದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:16 am, Tue, 27 December 22