ಭಾರತ-ಚೀನಾ ಸಂಬಂಧ ಹದಗೆಟ್ಟಿರುವುದು ನಿಜ, ಬೇರೆ ದೇಶದ ಮಧ್ಯಸ್ಥಿಕೆ ಬೇಕಿಲ್ಲ; ವಿದೇಶಾಂಗ ಸಚಿವ ಜೈಶಂಕರ್

|

Updated on: Jul 29, 2024 | 7:07 PM

India- China Border Dispute: ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಚೀನಾದೊಂದಿಗಿನ ಭಾರತದ ಗಡಿ ವಿವಾದದಲ್ಲಿ ಮೂರನೇ ವ್ಯಕ್ತಿ ಅಥವಾ ದೇಶದ ಮಧ್ಯಸ್ಥಿಕೆಯ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಈ ಸಮಸ್ಯೆ 2 ನೆರೆಯ ರಾಷ್ಟ್ರಗಳ ನಡುವಿನದ್ದಾಗಿದೆ. ಅದನ್ನು ಪರಿಹರಿಸಿಕೊಳ್ಳುವುದು ಭಾರತ ಮತ್ತು ಚೀನಾಕ್ಕೆ ಬಿಟ್ಟದ್ದು ಎಂದು ಅವರು ಹೇಳಿದ್ದಾರೆ.

ಭಾರತ-ಚೀನಾ ಸಂಬಂಧ ಹದಗೆಟ್ಟಿರುವುದು ನಿಜ, ಬೇರೆ ದೇಶದ ಮಧ್ಯಸ್ಥಿಕೆ ಬೇಕಿಲ್ಲ; ವಿದೇಶಾಂಗ ಸಚಿವ ಜೈಶಂಕರ್
ವಿದೇಶಾಂಗ ಸಚಿವ ಜೈಶಂಕರ್
Follow us on

ಟೋಕಿಯೋ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಇಂದು ಚೀನಾದೊಂದಿಗಿನ ಭಾರತದ ಗಡಿ ವಿವಾದದಲ್ಲಿ ಮೂರನೇ ವ್ಯಕ್ತಿಯ ಪಾತ್ರವನ್ನು ತಳ್ಳಿಹಾಕಿದ್ದಾರೆ. ನೆರೆಹೊರೆಯ ದೇಶಗಳಾದ ಚೀನಾ ಮತ್ತು ಭಾರತದ ನಡುವೆ ಸಮಸ್ಯೆ ಇರುವುದು ಸತ್ಯ. ಆದರೆ, ಅದನ್ನು ಬಗೆಹರಿಸಿಕೊಳ್ಳಲು ನಾವೇ ಒಂದು ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.

ಟೋಕಿಯೊದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳ ಸರಣಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವ ಜೈಶಂಕರ್, “ಭಾರತ ಮತ್ತು ಚೀನಾ ನಡುವಿನ ನಿಜವಾದ ಸಮಸ್ಯೆ ಏನೆಂಬುದನ್ನು ಗುರುತಿಸಲು ಮತ್ತು ಅದನ್ನು ಬಗೆಹರಿಸಿಕೊಳ್ಳಲು ನಾವು ಇತರ ದೇಶಗಳ ಮಧ್ಯಸ್ಥಿಕೆಯನ್ನು ಬಯಸುತ್ತಿಲ್ಲ” ಎಂದು ಜೈಶಂಕರ್ ಹೇಳಿದ್ದಾರೆ.


ಇದನ್ನೂ ಓದಿ: SCO Summit 2024: ಕಜಕಿಸ್ತಾನದಲ್ಲಿ ನಡೆದ ಎಸ್​ಸಿಒ ಶೃಂಗಭೆಗೆ ಪ್ರಧಾನಿ ಮೋದಿ ಸಂದೇಶ ತಲುಪಿಸಿದ ಜೈಶಂಕರ್

ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ಟೋಕಿಯೋಗೆ ತೆರಳಿರುವ ಭಾರತದ ವಿದೇಶಾಂಗ ಸಚಿವ ಜೈಶಂಕರ್, ಚೀನಾದೊಂದಿಗಿನ ಭಾರತದ ಸಂಬಂಧ ಚೆನ್ನಾಗಿಲ್ಲ ಮತ್ತು ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದರು. ನಿಸ್ಸಂಶಯವಾಗಿ ಪ್ರಪಂಚದ ಇತರ ದೇಶಗಳು ಈ ವಿಷಯದಲ್ಲಿ ಆಸಕ್ತಿಯನ್ನು ಹೊಂದಿರುತ್ತವೆ. ಏಕೆಂದರೆ ನಮ್ಮ ಎರಡು ದೊಡ್ಡ ದೇಶಗಳು ಮತ್ತು ನಮ್ಮ ಸಂಬಂಧದ ಸ್ಥಿತಿಯು ಪ್ರಪಂಚದ ಉಳಿದ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಚೀನಾದಲ್ಲಿ ಭಾರಿ ಮಳೆ, ಸೇತುವೆ ಕುಸಿದು 11 ಮಂದಿ ಸಾವು, 30 ಜನರು ನಾಪತ್ತೆ

ಭಾರತ ಮತ್ತು ಚೀನಾ ನಡುವಿನ ಸಂಬಂಧ “ಉತ್ತಮ” ಅಥವಾ “ಸಾಮಾನ್ಯ” ಎರಡೂ ಅಲ್ಲ ಎಂದು ವಿದೇಶಾಂಗ ಸಚಿವ ಜೈಶಂಕರ್ ಒತ್ತಿ ಹೇಳಿದ್ದಾರೆ. ಆದರೆ, ಬೀಜಿಂಗ್‌ನೊಂದಿಗೆ ಉತ್ತಮ ನೆರೆಯ ಸಂಬಂಧವನ್ನು ನವದೆಹಲಿ ಬಯಸುತ್ತದೆ ಎಂದು ಅವರು ಹೇಳಿದರು. “ಚೀನಾದೊಂದಿಗೆ ಇದೀಗ ಸಂಬಂಧವು ಉತ್ತಮವಾಗಿಲ್ಲ. ನೆರೆಹೊರೆಯವರಾಗಿ, ನಾವು ಉತ್ತಮ ಸಂಬಂಧವನ್ನು ನಿರೀಕ್ಷಿಸುತ್ತೇವೆ. ಆದರೆ, ಅವರು ಈ ಹಿಂದೆ ಸಹಿ ಮಾಡಿದ LOC ಮತ್ತು ಇತರೆ ಒಪ್ಪಂದಗಳನ್ನು ಗೌರವಿಸಿದರೆ ಮಾತ್ರ ನಮ್ಮ ನಡುವಿನ ಸಂಬಂಧ ಉತ್ತಮವಾಗುತ್ತದೆ” ಎಂದು ಜೈಶಂಕರ್ ಹೇಳಿದ್ದಾರೆ.

ಜೂನ್ 2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಭೀಕರ ಘರ್ಷಣೆಯ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಗಮನಾರ್ಹವಾಗಿ ಹದಗೆಟ್ಟವು. ಇದು ದಶಕಗಳಲ್ಲಿ ಎರಡು ಕಡೆಯ ನಡುವಿನ ಅತ್ಯಂತ ಗಂಭೀರವಾದ ಮಿಲಿಟರಿ ಸಂಘರ್ಷಕ್ಕೆ ಕಾರಣವಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ