ರಾಹುಲ್ ಗಾಂಧಿಯ ಮಾತಿಗೆ ಸದನದಲ್ಲಿ ಮುಖ ಮುಚ್ಚಿ ನಕ್ಕ ನಿರ್ಮಲಾ ಸೀತಾರಾಮನ್; ಕ್ಷಮೆಗೆ ಕಾಂಗ್ರೆಸ್ ಒತ್ತಾಯ

ಲೋಕಸಭಾ ಅಧಿವೇಶನದ ವೇಳೆ ಇಂದು ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಎಸ್​ಸಿ, ಎಸ್​ಟಿ, ಓಬಿಸಿ ಮೀಸಲಾತಿ ವಿಚಾರದಲ್ಲಿ ಮೋದಿ ಸರ್ಕಾರದ ಭೇದಭಾವವನ್ನು ಖಂಡಿಸಿದ್ದಾರೆ. ಈ ವೇಳೆ ಅವರು ತಮ್ಮ ಮೇಲೆ ಮಾಡಿದ ಆರೋಪವನ್ನು ಕೇಳಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಖ ಮುಚ್ಚಿ ಗಹಗಹಿಸಿ ನಕ್ಕಿದ್ದಾರೆ.

ರಾಹುಲ್ ಗಾಂಧಿಯ ಮಾತಿಗೆ ಸದನದಲ್ಲಿ ಮುಖ ಮುಚ್ಚಿ ನಕ್ಕ ನಿರ್ಮಲಾ ಸೀತಾರಾಮನ್; ಕ್ಷಮೆಗೆ ಕಾಂಗ್ರೆಸ್ ಒತ್ತಾಯ
ರಾಹುಲ್ ಗಾಂಧಿ
Follow us
|

Updated on: Jul 29, 2024 | 8:07 PM

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು 2024ರ ಕೇಂದ್ರ ಬಜೆಟ್ ಅನ್ನು ‘ಹಲ್ವಾ ಸಮಾರಂಭ’ ಎಂದು ಟೀಕಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಅನ್ನು ಟೀಕಿಸಿರುವ ರಾಹುಲ್ ಗಾಂಧಿ ಅವರ ಮಾತನ್ನು ಕೇಳಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಖ ಮುಚ್ಚಿಕೊಂಡು ನಗುತ್ತಿರುವ ವಿಡಿಯೋ ಎಲ್ಲ ಕಡೆ ಹರಿದಾಡುತ್ತಿದೆ. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಸಚಿವೆ ನಿರ್ಮಲಾ ಸೀತಾರಾಮನ್ ಕ್ಷಮೆ ಕೋರಬೇಕೆಂದು ಒತ್ತಾಯಿಸಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಮಂಡಿಸಿದ ಕೇಂದ್ರ ಬಜೆಟ್ 2024 ಬಗ್ಗೆ ಇಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು. ನಿರ್ಮಲಾ ಸೀತಾರಾಮನ್ ಹಲ್ವಾ ಮಾಡುತ್ತಿರುವ ಫೋಟೋವನ್ನು ತೋರಿಸಿದ ರಾಹುಲ್ ಗಾಂಧಿ ಬಿಜೆಪಿ ಬಜೆಟ್​ನ ಹಲ್ವಾ ವಿತರಿಸುತ್ತಿದೆ ಎಂದು ವಿವರಿಸಲು ಪ್ರಯತ್ನಿಸಿದರು.

ಇದನ್ನೂ ಓದಿ: 6 ಜನ ರಚಿಸಿರುವ ‘ಚಕ್ರವ್ಯೂಹ’ದಲ್ಲಿ ಆಧುನಿಕ ಭಾರತ ಸಿಲುಕಿದೆ; ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹಲ್ವಾ ಸಮಾರಂಭದ ಚಿತ್ರವನ್ನು ತೋರಿಸಲು ಪ್ರಯತ್ನಿಸಿದರು. ಆದರೆ ಅದಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಿರಾಕರಿಸಿದರು. ಆದರೆ ಈ ಸಮಯದಲ್ಲಿ ಅವರು ಏನನ್ನೋ ವಿವರಿಸಲು ಪ್ರಯತ್ನಿಸಿದಾಗ ಅದನ್ನು ಕೇಳಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹಣೆಯ ಮೇಲೆ ತಮ್ಮ ಎರಡೂ ಕೈಗಳನ್ನು ಮುಚ್ಚಿಕೊಂಡು ನಕ್ಕರು.

ಮುಂಗಾರು ಅಧಿವೇಶನದ ಲೋಕಸಭೆಯ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಸರ್ಕಾರವನ್ನು ಗುರಿಯಾಗಿಸಿದ್ದರು.

ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಹಲ್ವಾ ಸಮಾರಂಭದ ಚಿತ್ರವನ್ನು ತೋರಿಸಲು ಪ್ರಯತ್ನಿಸಿದರು. ಇದಕ್ಕೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ನಿರಾಕರಿಸಿದರು. ಏಕೆಂದರೆ ಇದು ನಿಯಮಕ್ಕೆ ವಿರುದ್ಧವಾಗಿದೆ ಎಂದರು. ಈ ಕುರಿತು ವಿವರಿಸಲು ಪ್ರಯತ್ನಿಸಿದ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ”ಬಜೆಟ್ ಹಲ್ವ ಹಂಚಲಾಗುತ್ತಿದ್ದು, ಈ ಚಿತ್ರದಲ್ಲಿ ಒಬ್ಬ ಒಬಿಸಿ ಅಧಿಕಾರಿಯೂ ಕಾಣಿಸುತ್ತಿಲ್ಲ, ಒಬ್ಬ ಗಿರಿಜನ ಅಧಿಕಾರಿ, ದಲಿತ ಅಧಿಕಾರಿಯೂ ಕಾಣಿಸುತ್ತಿಲ್ಲ ಎಂದು ಚಿತ್ರ ತೋರಿಸಿ ವಿವರಿಸಲು ಬಯಸುತ್ತೇನೆ’’ ಎಂದು ಹೇಳಿದರು.

ಇದನ್ನೂ ಓದಿ: ಮುಡಾ ಹಗರಣ ಸೃಷ್ಟಿಸಿ ಬಿಜೆಪಿಯವರು ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾರೆ: ಸಿದ್ದರಾಮಯ್ಯ

ಇದನ್ನು ಕೇಳಿ ನಿರ್ಮಲಾ ಸೀತಾರಾಮನ್ ತನ್ನ ಹಣೆಯ ಮೇಲೆ ಕೈ ಇಟ್ಟುಕೊಂಡು ನಗಲಾರಂಭಿಸಿದರು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕ್ಷಮೆ ಕೇಳಲೇಬೇಕು. ಎಸ್‌ಸಿ-ಎಸ್‌ಟಿ-ಒಬಿಸಿ ಮೀಸಲಾತಿ ಕುರಿತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮಾತನಾಡುತ್ತಿದ್ದಾಗ ನಿರ್ಮಲಾ ಸೀತಾರಾಮನ್ ಉಡಾಫೆಯ ನಗು ಖಂಡನೀಯ. ಇದು ಎಸ್‌ಸಿ – ಎಸ್‌ಟಿ – ಒಬಿಸಿ ಬಗ್ಗೆ ಬಿಜೆಪಿಯ ಮನಸ್ಥಿತಿಯ ಅನಾವರಣ ಎಂದು ಕರ್ನಾಟಕ ಕಾಂಗ್ರೆಸ್ ಎಕ್ಸ್​ನಲ್ಲಿ ಟೀಕಿಸಿದೆ.

ಇದೇ ವೇಳೆ, ಹಿಂದೂ ಮಹಾಕಾವ್ಯ ಮಹಾಭಾರತವನ್ನು ಉಲ್ಲೇಖಿಸಿ ಮಾತನಾಡಿರುವ ರಾಹುಲ್ ಗಾಂಧಿ, ದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲಾಗಿದೆ. ಆ ‘ಚಕ್ರವ್ಯೂಹ’ವನ್ನು ಪಿಎಂ ನರೇಂದ್ರ ಮೋದಿ ನೇತೃತ್ವದ 6 ಜನರು ನಡೆಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. “ಸಾವಿರಾರು ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ 6 ಜನರು ಅಭಿಮನ್ಯುವನ್ನು ‘ಚಕ್ರವ್ಯೂಹ’ದಲ್ಲಿ ಸಿಲುಕಿಸಿ ಕೊಂದರು. ನಾನು ಕೂಡ ಆ ಬಗ್ಗೆ ಸ್ವಲ್ಪ ಸಂಶೋಧನೆ ಮಾಡಿದ್ದೇನೆ. ‘ಚಕ್ರವ್ಯೂಹ’ವನ್ನು ‘ಪದ್ಮವ್ಯೂಹ’ ಎಂದೂ ಕರೆಯಲಾಗುತ್ತದೆ. ಅದರ ಅರ್ಥ ‘ಕಮಲ ರಚನೆ’ ಎಂದು ತಿಳಿಯಿತು. ಚಕ್ರವ್ಯೂಹವು ಕಮಲದ ಆಕಾರದಲ್ಲಿದೆ” ಎಂದು ಕಳೆದ ವಾರ ಮಂಡಿಸಿದ ಕೇಂದ್ರ ಬಜೆಟ್ ಮೇಲಿನ ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ