Manjuvirattu Video: ತಮಿಳುನಾಡಿನಲ್ಲಿ ಮಂಜುವಿರಟ್ಟು ವೇಳೆ ಗೂಳಿ ಎದೆಗೆ ಗುದ್ದಿ ಯುವಕ ಸಾವು
Shocking Video: ತಮಿಳುನಾಡಿನಲ್ಲಿ ಸಾಂಪ್ರದಾಯಿಕ ಕ್ರೀಡೆಯಾದ ಮಂಜುವಿರಟ್ಟು ವೇಳೆ ಗೂಳಿ ಎದೆಗೆ ಕೊಂಬಿನಿಂದ ಇರಿದ ಹಿನ್ನೆಲೆಯಲ್ಲಿ ಗೂಳಿಯನ್ನು ಪಳಗಿಸುವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ಘಟನೆಯನ್ನು ಸುತ್ತಲೂ ನೆರೆದಿದ್ದ ಪ್ರೇಕ್ಷಕರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಚೆನ್ನೈ: ತಮಿಳುನಾಡಿನಲ್ಲಿ ಮಂಜುವಿರಟ್ಟು ಅಥವಾ ಜಲ್ಲಿಕಟ್ಟು ಎಂದೂ ಕರೆಯಲಾಗುವ ಸಾಂಪ್ರದಾಯಿಕ ಕ್ರೀಡೆಯನ್ನು ನೋಡಲು ಸುತ್ತಲೂ ಜನರು ಸೇರಿದ್ದರು. ಈ ವೇಳೆ 28 ವರ್ಷದ ಯುವಕನತ್ತ ಬಂದ ಗೂಳಿ ತನ್ನ ಕೊಂಬುಗಳಿಂದ ಆತನ ಎದೆಯನ್ನು ಇರಿದಿದೆ. ಇದರಿಂದಾಗಿ ಕೆಳಗೆ ಕುಸಿದು ಬಿದ್ದ ಆತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರಎ, ಎದೆಗೆ ಇರಿದು ತೀವ್ರವಾದ ಗಾಯಗಳಾಗಿದ್ದರಿಂದ ಆ ಯುವಕ ಸಾವನ್ನಪ್ಪಿದ್ದಾನೆ.
ತಮಿಳುನಾಡಿನ ಶಿವಗಂಗೆಯ ಕಾರೈಕುಡಿಯಲ್ಲಿ ಭಾನುವಾರ ಆಯೋಜಿಸಿದ್ದ ಗೂಳಿ ಪಳಗಿಸುವ ಕಾರ್ಯಕ್ರಮವಾದ ಮಂಜುವಿರಟ್ಟು ವೇಳೆ 28 ವರ್ಷದ ವ್ಯಕ್ತಿಯೊಬ್ಬ ಗೂಳಿಯ ದಾಳಿಯಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: Video: ತಾಯಿ ಮುಂದೆಯೇ ಕುರಿ ಮರಿಯನ್ನು ದರದರನೇ ಎಳೆದೊಯ್ದ ಬೀದಿ ನಾಯಿಗಳು, ವಿಡಿಯೋ ವೈರಲ್
ಈ ತ್ತು ಹೋರಿಗಳನ್ನು ಕರೆತರಲಾಗಿತ್ತು. ಪ್ರತಿ ಗೂಳಿಯನ್ನು ಸುಮಾರು 30 ನಿಮಿಷಗಳ ಕಾಲ ನೆಲದ ಮೇಲೆ ಬಿಡಲಾಯಿತು. 9 ಜನರು ಅದನ್ನು ಪಳಗಿಸಲು ಪ್ರಯತ್ನಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಧುರೈ, ತಿರುಚ್ಚಿ, ರಾಮನಾಥಪುರಂ, ಪುದುಕೊಟ್ಟೈ ಸೇರಿದಂತೆ ಹಲವು ಜಿಲ್ಲೆಗಳಿಂದ ಜನರು ಆಗಮಿಸಿದ್ದರು.
Tamer dies after he was attacked by a bull during Manjuvirattu in Tamil Nadu’s Sivaganga.
The victim was identified as 28-year-old Karthik from Salem. He was hit by the bull on his chest. #TamilNadu pic.twitter.com/aMopF3VKKf
— Vani Mehrotra (@vani_mehrotra) July 29, 2024
ಈ ಕಾರ್ಯಕ್ರಮದ ನಾಲ್ಕನೇ ಸುತ್ತಿನ ಸಮಯದಲ್ಲಿ, ಸೇಲಂನ ಕಾರ್ತಿಕ್ ಎಂಬ ಯುವಕ ತನ್ನ ಕಡೆಗೆ ಬರುತ್ತಿದ್ದ ಗೂಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಅದು ಅವನ ಎದೆಯ ಮೇಲೆ ತನ್ನ ಕೊಂಬುಗಳಿಂದ ಇರಿಯಿತು. ನಂತರ ಅವನು ನೆಲದ ಮೇಲೆ ಕುಸಿದನು. ಈ ಘಟನೆಯ ನಂತರ ಕಾರ್ಯಕ್ರಮವನ್ನು ಮಧ್ಯದಲ್ಲಿ ನಿಲ್ಲಿಸಲಾಯಿತು ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕುಂದ್ರಕುಡಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:40 pm, Mon, 29 July 24