ಭಯೋತ್ಪಾದನೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಮುಂದೊಂದು ದಿನ ನಾವೇ ಬಲಿಪಶುಗಳಾಗಬಹುದು: ಜೈಶಂಕರ್
ಭಯೋತ್ಪಾದನೆ(Terrorism) ಇತರೆ ದೇಶಗಳ ಮೇಲೆ ಬೀರುತ್ತಿರುವ ಪರಿಣಾಮವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಮುಂದೊಂದು ದಿನ ದೊಡ್ಡ ಸಮಸ್ಯೆಯನ್ನೇ ಎದುರಿಸಬೇಕಾಗಬಹುದು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್(S Jaishankar) ಹೇಳಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧ ಮೂರು ವಾರಗಳನ್ನು ಕಳೆದಿದೆ.ಈ ಯುದ್ಧದಲ್ಲಿ ಒಂಬತ್ತೂವರೆ ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹೋರಾಟದಲ್ಲಿ ಬಹುತೇಕ ರಾಷ್ಟ್ರಗಳು ಇಸ್ರೇಲ್ ಬೆಂಬಲಕ್ಕೆ ನಿಂತಿವೆ.

ಅದೇ ಸಮಯದಲ್ಲಿ, ಮಾನವೀಯ ಆಧಾರದ ಮೇಲೆ ಇಬ್ಬರ ನಡುವೆ ಕದನ ವಿರಾಮವನ್ನು ತಕ್ಷಣವೇ ಜಾರಿಗೆ ತರಲು ಪ್ರಸ್ತಾವನೆಯನ್ನು ನೀಡಲಾಗಿದೆ. ನಾವು ಭಯೋತ್ಪಾದನೆ ಮೇಲೆ ಕಠಿಣ ನಿಲುವನ್ನು ತೆಗೆದುಕೊಳ್ಳದಿದ್ದರೆ ಮುಂದೊಂದು ದಿನ ನಾವೇ ಬಲಿಪಶುಗಳಾಗುತ್ತೇವೆ ಎಂದಿದ್ದಾರೆ.
ಮತ್ತಷ್ಟು ಓದಿ: Jammu and Kashmir: ಭಯೋತ್ಪಾದಕರು ನಡೆಸಿದ ಬಾಂಬ್ ಸ್ಫೋಟದಲ್ಲಿ ಸೇನಾ ಸಿಬ್ಬಂದಿಗಳು ಹುತಾತ್ಮ
ಇಂದು ಉತ್ತಮ ಸರ್ಕಾರ ಮತ್ತು ಬಲಿಷ್ಠ ಆಡಳಿತ ತನ್ನ ಜನರ ಪರ ನಿಂತಿದೆ, ಸ್ವದೇಶದಲ್ಲಿ ಉತ್ತಮ ಆಡಳಿತ ಎಷ್ಟು ಅಗತ್ಯವೋ, ವಿದೇಶದಲ್ಲಿಯೂ ಅದೇ ರೀತಿ ಸರಿಯಾದ ನಿರ್ಧಾರಗಳು ಅಗತ್ಯ. ನಾವು ಭಯೋತ್ಪಾದನೆಯ ಬಗ್ಗೆ ಬಲವಾದ ನಿಲುವು ತೆಗೆದುಕೊಳ್ಳುತ್ತೇವೆ.
ಭಯೋತ್ಪಾದನೆ ನಮ್ಮ ಮೇಲೆ ಪರಿಣಾಮ ಬೀರಿದಾಗ ಮಾತ್ರ ಗಂಭೀರ ವಿಷಯ ಎಂದು ಹೇಳಿದಾಗ ಭಾರತದ ಮೇಲೆ ಬೇರೆ ದೇಶಗಳಿಗಿರುವ ವಿಶ್ವಾಸಾರ್ಹತೆ ಕಡಿಮೆಯಾಗಬಹುದು ಹಾಗಾಗಿ ನಾವು ಸ್ಥಿರ ನಿಲುವು ಕಾಯ್ದುಕೊಳ್ಳಬೇಕು.
ಇಸ್ರೇಲ್-ಹಮಾಸ್ ಯುದ್ಧದ ನಡುವೆ ಗಾಜಾದಲ್ಲಿ ಮಾನವೀಯ ಆಧಾರದ ಮೇಲೆ ಕದನ ವಿರಾಮಕ್ಕಾಗಿ ಜೋರ್ಡಾನ್ ಮಂಡಿಸಿದ ಪ್ರಸ್ತಾವನೆಯನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಗಿದೆ ಎಂಬುದು ಗಮನಾರ್ಹ. ಪ್ರಸ್ತಾವನೆಯ ಪರವಾಗಿ 120 ಮತಗಳು ಚಲಾವಣೆಗೊಂಡರೆ, ವಿರುದ್ಧವಾಗಿ 14 ಮತಗಳು ಚಲಾವಣೆಯಾದವು. ಆದರೆ 45 ದೇಶಗಳು ತಮ್ಮನ್ನು ಮತದಾನದಿಂದ ದೂರವಿಟ್ಟಿದ್ದವು.
ಉಕ್ರೇನ್-ರಷ್ಯಾ ಯುದ್ಧದ ಸಮಯದಲ್ಲಿ, ಯುರೋಪಿಯನ್ ರಾಷ್ಟ್ರಗಳು ರಷ್ಯಾದ ತೈಲವನ್ನು ಖರೀದಿಸಲು ನಿರ್ಬಂಧವನ್ನು ಹೇರಿದ್ದವು, ಆದರೆ ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುತ್ತಲೇ ಇತ್ತು. ಈ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವ ಜೈಶಂಕರ್, ಯುರೋಪಿಯನ್ ರಾಷ್ಟ್ರಗಳು ರಷ್ಯಾದಿಂದ ತೈಲವನ್ನು ಖರೀದಿಸಬೇಡಿ ಎಂದು ಹೇಳುತ್ತಿವೆ.
ಪ್ರತಿಯೊಂದು ದೇಶವೂ ತನ್ನ ಜನರ ಕಲ್ಯಾಣ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ನೋಡಿಕೊಳ್ಳುವಾಗ, ನಾವೇಕೆ ಹಿಂದುಳಿಯಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:28 am, Mon, 30 October 23