Sadhguru Jaggi Vasudev: ಮೆದುಳಿನಲ್ಲಿ ರಕ್ತಸ್ರಾವ; ಸದ್ಗುರು ಜಗ್ಗಿ ವಾಸುದೇವ್​​ಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ

|

Updated on: Mar 20, 2024 | 8:57 PM

ಮಾರ್ಚ್ 17 ರಂದು ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.ಮಾರ್ಚ್ 15 ರಂದು ಸದ್ಗುರುವಿಗೆ ತಲೆನೋವು ಜಾಸ್ತಿ ಆಗಿದ್ದು ಅವರು ಡಾ ಸೂರಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದರು. "ನೋವು ಉಲ್ಬಣಗೊಳ್ಳುತ್ತಿದ್ದುದರಿಂದ ಏನೋ ಒಂದು ಆಗಿದೆ ಎಂದು ನಮಗೆ ತಿಳಿದಿತ್ತು" ಎಂದು ಹಿರಿಯ ನರವಿಜ್ಞಾನಿ ಹೇಳಿದ್ದಾರೆ.

Sadhguru Jaggi Vasudev: ಮೆದುಳಿನಲ್ಲಿ ರಕ್ತಸ್ರಾವ; ಸದ್ಗುರು ಜಗ್ಗಿ ವಾಸುದೇವ್​​ಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ
ಸದ್ಗುರು ಜಗ್ಗಿ ವಾಸುದೇವ್
Follow us on

ದೆಹಲಿ ಮಾರ್ಚ್ 20:ಆಧ್ಯಾತ್ಮಿಕ ಗುರು ಮತ್ತು ಇಶಾ ಫೌಂಡೇಶನ್‌ನ (Isha Foundation) ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರ ಮೆದುಳಿನಲ್ಲಿ “ಮಾರಣಾಂತಿಕ” ಊತ ಮತ್ತು ರಕ್ತಸ್ರಾವ ಆದ ನಂತರ ಅವರ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ (Emergency brain surgery) ಮಾಡಲಾಗಿದೆ. ಮಾರ್ಚ್ 17 ರಂದು ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ಮೂಲಗಳು ಹೇಳಿವೆ. ಇಶಾ ಫೌಂಡೇಶನ್ ಪೋಸ್ಟ್ ಮಾಡಿದ ವಿಡಿಯೊದಲ್ಲಿ, ಸದ್ಗುರುವನ್ನು ಪರೀಕ್ಷಿಸಿದ ಅಪೋಲೋ ಆಸ್ಪತ್ರೆಯ ಹಿರಿಯ  ನರವಿಜ್ಞಾನಿ ಡಾ ವಿನಿತ್ ಸೂರಿ, ಆಧ್ಯಾತ್ಮಿಕ ನಾಯಕ ಕಳೆದ ನಾಲ್ಕು ವಾರಗಳಿಂದ ತೀವ್ರ ತಲೆನೋವಿನಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ.

ನೋವಿದ್ದರೂ ಅವರು ತಮ್ಮ ಸಾಮಾನ್ಯ ದೈನಂದಿನ ವೇಳಾಪಟ್ಟಿ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಮುಂದುವರೆಸಿದರು. ಮಾರ್ಚ್ 8 ರಂದು ಮಹಾ ಶಿವರಾತ್ರಿ ಕಾರ್ಯಕ್ರಮವನ್ನು ಸಹ ನಡೆಸಿದರು. ಅವರು ಎಲ್ಲಾ ನೋವನ್ನು ನಿರ್ಲಕ್ಷಿಸಿ ಎಲ್ಲಾ ಸಭೆಗಳನ್ನು ಮುಂದುವರೆಸಿದರು ಎಂದು ಡಾ ಸೂರಿ ವಿಡಿಯೊದಲ್ಲಿ ಹೇಳಿದ್ದಾರೆ.

ಆದಾಗ್ಯೂ, ಮಾರ್ಚ್ 15 ರಂದು ಸದ್ಗುರುವಿಗೆ ತಲೆನೋವು ಜಾಸ್ತಿ ಆಗಿದ್ದು ಅವರು ಡಾ ಸೂರಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದರು. “ನೋವು ಉಲ್ಬಣಗೊಳ್ಳುತ್ತಿದ್ದುದರಿಂದ ಏನೋ ಒಂದು ಆಗಿದೆ ಎಂದು ನಮಗೆ ತಿಳಿದಿತ್ತು” ಎಂದು ಹಿರಿಯ ನರವಿಜ್ಞಾನಿ ಹೇಳಿದ್ದಾರೆ.

“ಅವರು ಸಂಜೆ 4 ಗಂಟೆಯ ಸುಮಾರಿಗೆ ನನಗೆ ಕರೆ ಮಾಡಿದರು. ನಾನು ಅವರಿಗೆ ತುರ್ತು MRI ಮಾಡುವಂತೆ ಒತ್ತಾಯಿಸಿದೆ. ಆದರೆ ಅವರು ಸಂಜೆ 6 ಗಂಟೆಗೆ ನಿಗದಿಪಡಿಸಿದ್ದ ಸಭೆಗೆ ಹಾಜರಾಗಲು ಬಯಸಿದ್ದರು. ಹೇಗೋ ನಾವು ಎಂಆರ್‌ಐ ಮಾಡಿಸುವಂತೆ ಮನವೊಲಿಸಿದೆವು. ಸ್ಕ್ಯಾನ್ ಮಾಡಿದಾಗ ಮೆದುಳಿನಲ್ಲಿ ಭಾರೀ ರಕ್ತಸ್ರಾವವಾಗಿದೆ ಎಂದು ಗೊತ್ತಾಯಿತು, ಮೂರರಿಂದ ನಾಲ್ಕು ವಾರಗಳ ಅವಧಿಯ ದೀರ್ಘಕಾಲದ ರಕ್ತಸ್ರಾವ ಮತ್ತು 24 ರಿಂದ 48 ಗಂಟೆಗಳ ಅವಧಿಯಲ್ಲಿಯೂ ರಕ್ತಸ್ರಾವ ಆಗಿತ್ತು ಎಂದು ಡಾ ಸೂರಿ ಹೇಳಿದ್ದಾರೆ.

ಚೇತರಿಸಿಕೊಳ್ಳುತ್ತಿದ್ದಾರೆ ಸದ್ಗುರು


ವೈದ್ಯರು ಸದ್ಗುರುಗಳಿಗೆ ತಕ್ಷಣ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದರೂ, ಅವರು ತಮ್ಮ ಬದ್ಧತೆಯನ್ನು ಪೂರೈಸಲು ಮುಂದಾದರು. ಆದಾಗ್ಯೂ, ಮಾರ್ಚ್ 17 ರಂದು, 66 ವರ್ಷ ವಯಸ್ಸಿನ ಆಧ್ಯಾತ್ಮಿಕ ನಾಯಕರಿಗೆ ಅರೆ ಪ್ರಜ್ಞೆ ಮತ್ತು ಎಡಕಾಲು ಕ್ಷೀಣಿಸಿ ಅಸ್ವಸ್ಥರಾದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: ಝೆಲೆನ್ಸ್ಕಿ ಜತೆ ಮೋದಿ ಮಾತು; ಭಾರತದ ನಿರಂತರ ಮಾನವೀಯ ಸಹಾಯವನ್ನು ಶ್ಲಾಘಿಸಿದ ಉಕ್ರೇನ್ ಅಧ್ಯಕ್ಷ

ಆ ಸಮಯದಲ್ಲಿ ಅವರು ಎಂದಿಗೂ ನೋವಿನ ಬಗ್ಗೆ ಹೇಳಿಲ್ಲ ಆದರೆ ಬೆಳಿಗ್ಗೆ, ನೀವು ಮಾಡಬೇಕಾದುದನ್ನು ಮಾಡುವ ಸಮಯ ಬಂದಿದೆ ಎಂದು ಅವರು ನನಗೆ ಹೇಳಿದರು. ನಾವು ಶಸ್ತ್ರಚಿಕಿತ್ಸೆ ಮಾಡಬಹುದು ಎಂದು ಅವರು ನಮಗೆ ಒಪ್ಪಿಗೆ ನೀಡಿದರು. ನಾವು CT ಸ್ಕ್ಯಾನ್ ಮಾಡಿದಾಗ ಮೆದುಳಿನಲ್ಲಿ ಜೀವಕ್ಕೆ ಅಪಾಯಕಾರಿ ಊತ ಮತ್ತು ರಕ್ತಸ್ರಾವವಿತ್ತು. ಮೆದುಳು ಒಂದು ಬದಿಗೆ ಸರಿದಿತ್ತು. ಅವನು ತುಂಬಾ ಕ್ಷೀಣಿತರಾಗಿದ್ದರು.ದ್ದನು. ನಾವು ತಕ್ಷಣ ಶಸ್ತ್ರಚಿಕಿತ್ಸೆಗೊಳಪಡಿಸಿದೆವು ಎಂದು ವೈದ್ಯರು ಹೇಳಿದ್ದಾರೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದ್ದು, ಸದ್ಗುರು ಈಗ ವೆಂಟಿಲೇಟರ್‌ನಿಂದ ಹೊರಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸದ್ಗುರು ಜತೆ ಮಾತಾಡಿದ ಮೋದಿ


ಸದ್ಗುರು ಜತೆ ಮಾತನಾಡಿದ್ದೇನೆ. ಅವರಿಗೆ ಉತ್ತಮ ಆರೋಗ್ಯ ಸಿಗಲಿ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ  ಬರೆದಿದ್ದಾರೆ. ಈ ಟ್ವೀಟ್​​ಗೆ ಸದ್ಗುರು ಪ್ರತಿಕ್ರಿಯಿಸಿದ್ದು ಪ್ರೀತಿಯ ಪ್ರಧಾನ ಮಂತ್ರಿಜೀ, ನನ್ನ ಬಗ್ಗೆ ನೀವು ಕಾಳಜಿ ವಹಿಸಬೇಡಿ. ನಿಮಗೆ ಮುನ್ನಡೆಸುವುದಕ್ಕೆ ಒಂದು ರಾಷ್ಟ್ರವಿದೆ. ನಾನು ಚೇತರಿಸಿಕೊಳ್ಳುತ್ತಿದ್ದು ನಿಮ್ಮ ಕಾಳಜಿಯಿಂದ ಮನತುಂಬಿ ಬಂತು. ಧನ್ಯವಾದಗಳು ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:47 pm, Wed, 20 March 24