ಯೋಗ ವಿಜ್ಞಾನವೇ ಹೊರತು ಕ್ರೀಡೆಯಲ್ಲ; ಒಲಿಂಪಿಕ್ ಕೌನ್ಸಿಲ್​ ನಿರ್ಧಾರಕ್ಕೆ ಸದ್ಗುರು ಆಕ್ಷೇಪ

|

Updated on: Sep 10, 2024 | 10:33 PM

ಜಪಾನ್‌ನ ನಗೋಯಾದಲ್ಲಿ ಆಯೋಜಿಸಲಾಗುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಯೋಗಾಸನವನ್ನು ಪ್ರದರ್ಶನ ಕ್ರೀಡೆಯಾಗಿ ಸೇರಿಸಲು ಏಷ್ಯಾದ ಒಲಿಂಪಿಕ್ ಕೌನ್ಸಿಲ್ (OCA) ಇತ್ತೀಚಿನ ನಿರ್ಧಾರ ಮಾಡಿತ್ತು. ಈ ಬಗ್ಗೆ ಆಧ್ಯಾತ್ಮಿಕ ನಾಯಕ ಮತ್ತು ಇಶಾ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಟೀಕೆ ಮಾಡಿದ್ದಾರೆ.

ಯೋಗ ವಿಜ್ಞಾನವೇ ಹೊರತು ಕ್ರೀಡೆಯಲ್ಲ; ಒಲಿಂಪಿಕ್ ಕೌನ್ಸಿಲ್​ ನಿರ್ಧಾರಕ್ಕೆ ಸದ್ಗುರು ಆಕ್ಷೇಪ
ಸದ್ಗುರು
Follow us on

ನವದೆಹಲಿ: 2026ರ ಏಷ್ಯನ್ ಗೇಮ್ಸ್‌ನಲ್ಲಿ ಯೋಗಾಸನವನ್ನು ಪ್ರದರ್ಶನ ಕ್ರೀಡೆಯಾಗಿ ಸೇರಿಸುವ ಏಷ್ಯಾದ ಒಲಿಂಪಿಕ್ ಕೌನ್ಸಿಲ್ (OCA) ನಿರ್ಧಾರಕ್ಕೆ ಇಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿನ ಈ ಬಗ್ಗೆ ಪೋಸ್ಟ್‌ ಮಾಡಿರುವ ಸದ್ಗುರು ಈ ನಿರ್ಧಾರದ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಯೋಗದಂತಹ ಪುರಾತನ ವಿಜ್ಞಾನವನ್ನು ಸರ್ಕಸ್ ತರಹದ ಚಟುವಟಿಕೆಯ ಮಟ್ಟಕ್ಕೆ ತಗ್ಗಿಸುವ ಅಪಾಯವನ್ನುಂಟುಮಾಡುವ ನಿರಾಶಾದಾಯಕ ಕ್ರಮವಾಗಿದ ಎಂದು ಅವರು ಹೇಳಿದ್ದಾರೆ.

ಸ್ವಯಂ-ವಿಕಾಸ ಮತ್ತು ಆಂತರಿಕ ಬೆಳವಣಿಗೆಗೆ ಶಕ್ತಿಯುತ ಸಾಧನವೆಂದು ದೀರ್ಘಕಾಲದಿಂದ ಪರಿಗಣಿಸಲ್ಪಟ್ಟಿರುವ ಯೋಗವು ಮೂಲಭೂತವಾಗಿ ಮಾನವ ಪ್ರಜ್ಞೆಯನ್ನು ಹೆಚ್ಚಿಸುತ್ತದೆ. ಅದು ಹೋಲಿಕೆ ಅಥವಾ ಸ್ಪರ್ಧೆಗೆ ಒಳಗಾಗಬಾರದು ಎಂದು ಸದ್ಗುರು ವಾದಿಸಿದ್ದಾರೆ.


ಇದನ್ನೂ ಓದಿ: ಸದ್ಗುರು ಜನ್ಮದಿನದ ಪ್ರಯುಕ್ತ ಗುಜರಾತ್​ನಲ್ಲಿ ಮಣ್ಣು ಆಧಾರಿತ ರೈತರ ಕಂಪನಿ ಪ್ರಾರಂಭ

ಯೋಗವು ಎಂದಿಗೂ ಸ್ಪರ್ಧೆಯಾಗಲಾರದು. ಯೋಗವು ಸ್ವಯಂ-ವಿಕಸನಕ್ಕೆ ಒಂದು ಶಕ್ತಿಶಾಲಿ ಸಾಧನ ಮತ್ತು ಕಾರ್ಯವಿಧಾನವಾಗಿದೆ. ಅದು ಮಾನವನನ್ನು ಸೀಮಿತ ಸಾಧ್ಯತೆಗಳಿಂದ ಅನಿಯಮಿತ ಗ್ರಹಿಕೆ ಮತ್ತು ಜೀವನದ ಅನುಭವದವರೆಗೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಬೇರೆಯವರೊಂದಿಗೆ ಪೈಪೋಟಿಯಲ್ಲಿ ಯೋಗಾಸನವನ್ನು ಮಾಡಬಾರದು. ಇದರೊಂದಿಗೆ, ನಾವು ಯೋಗದ ಶಕ್ತಿಶಾಲಿ ವಿಜ್ಞಾನವನ್ನು ಸರ್ಕಸ್ ತರಹದ ಚಟುವಟಿಕೆಯಾಗಿ ಕಡಿಮೆಗೊಳಿಸುತ್ತೇವೆ. ಒಬ್ಬರಿಗಿಂತ ಒಬ್ಬರು ಉತ್ತಮವಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂದು ಸದ್ಗುರು ಎಕ್ಸ್​ನಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ರೈಲು: ಸೆಪ್ಟೆಂಬರ್ 15ರಂದು ಪ್ರಧಾನಿ ಮೋದಿ ಚಾಲನೆ

ಯೋಗದ ನಿಜವಾದ ಸಾರವು ವ್ಯಕ್ತಿಗಳು ತಮ್ಮ ಮಿತಿಗಳನ್ನು ಮೀರಲು ಮತ್ತು ಜೀವನದ ಆಳವಾದ ಆಯಾಮಗಳನ್ನು ಅನ್ವೇಷಿಸಲು ಸಹಾಯ ಮಾಡುವುದರಲ್ಲಿದೆಯೇ ವಿನಃ ಇದು ಸ್ಪರ್ಧಾತ್ಮಕ ಚೌಕಟ್ಟಿಗೆ ಸೂಕ್ತವಲ್ಲ ಎಂದಿದ್ದಾರೆ.


ಜಪಾನ್‌ನ ನಗೋಯಾದಲ್ಲಿ ಆಯೋಜಿಸಲಾಗುವ 2026 ರ ಏಷ್ಯನ್ ಗೇಮ್ಸ್‌ನಲ್ಲಿ ಯೋಗಾಸನವನ್ನು ಪ್ರದರ್ಶನ ಕ್ರೀಡೆಯಾಗಿ ಸೇರಿಸಲು ಏಷ್ಯಾದ ಒಲಿಂಪಿಕ್ ಕೌನ್ಸಿಲ್ (OCA) ಇತ್ತೀಚಿನ ನಿರ್ಧಾರದ ನಡುವೆ ಸದ್ಗುರುಗಳ ಕಟುವಾದ ಟೀಕೆ ಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:29 pm, Tue, 10 September 24