ನವದೆಹಲಿ: ಪ್ರವಾದಿ ಮೊಹಮ್ಮದ್ ( Prophet Muhammad) ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮ(Nupur Sharma) ಹಾಗೂ ಬಿಜೆಪಿ ನಾಯಕ ನವೀನ್ ಜಿಂದಾಲ್ ಅವರನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿದೆ. ಇದಕ್ಕೆ ಬಿಜೆಪಿಯಲ್ಲೇ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ (Sadhvi Pragya Singh Thakur) ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯಿಂದ ಅಮಾನತುಗೊಂಡಿರುವ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರಿಗೆ ಬೆಂಬಲ ನೀಡಿದ್ದಾರೆ. ಪ್ರವಾದಿ ವಿವಾದಕ್ಕೆ ಸಂಬಂಧಿಸಿದಂತೆ ಕಮಲೇಶ್ ತಿವಾರಿ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿದ್ದಾರೆ.
“ನಾಸ್ತಿಕರೇ ಹೀಗೆ ಮಾಡುತ್ತಿದ್ದಾರೆ. ಕಮಲೇಶ್ ತಿವಾರಿ ಏನೋ ಹೇಳಿದಾಗ ಅವರನ್ನು ಕೊಂದಿದ್ದಾರೆ. ನಮ್ಮ ದೇವರು, ದೇವತೆಗಳ ಮೇಲೆ ಸಿನಿಮಾ ಮಾಡ್ತಾರೆ, ನಿರ್ದೇಶಿಸ್ತಾರೆ, ನಿರ್ಮಾಣ ಮಾಡ್ತಾರೆ. ಹಿಂದೂಗಳ ಧಾರ್ಮಿಕ ಭಾವನೆಗೆ ಬೆಲೆ ಇಲ್ಲದಂತಾಗಿದೆ” ಎಂದು ಸಾಧ್ವಿ ಪ್ರಜ್ಞಾ ಠಾಕೂರ್ ಹೇಳಿದ್ದಾರೆ.
#WATCH These non-believers have always done so. They have a communist history…Like Kamlesh Tiwari said something he was killed, someone else (Nupur Sharma)said something& they received threat.India belongs to Hindus & Sanatana Dharma will stay here:BJP’s Sadhvi Pragya in Bhopal pic.twitter.com/GPqg9DWKwo
— ANI (@ANI) June 10, 2022
ಇದೇನೂ ಹೊಸ ವಿಷಯವಲ್ಲ. ಭಾರತವು ಹಿಂದೂಗಳಿಗೆ ಸೇರಿದ್ದು. ಭಾರತದಲ್ಲಿ ಸನಾತನ ಸಂಸ್ಕೃತಿ ಜೀವಂತವಾಗಿದೆ. ಅದನ್ನು ಮುಂದೆಯೂ ಜೀವಂತವಾಗಿಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಸಾಧ್ವಿ ಪ್ರಜ್ಞಾ ಹೇಳಿದ್ದಾರೆ. ಪ್ರವಾದಿ ಮೊಹಮ್ಮದ್ ಕುರಿತು ನೂಪುರ್ ಶರ್ಮಾ ಅವರ ಹೇಳಿಕೆ ಕುರಿತು ನಡೆಯುತ್ತಿರುವ ಗದ್ದಲದ ನಡುವೆ, ಸಾಧ್ವಿ ಪ್ರಜ್ಞಾ ಇತ್ತೀಚೆಗೆ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
“ಸತ್ಯವನ್ನು ಹೇಳುವುದು ಬಂಡಾಯವಾಗಿದ್ದರೆ ನನ್ನನ್ನು ಬಂಡಾಯ ಎಂದು ಪರಿಗಣಿಸಿ. ಜೈ ಸನಾತನ, ಜೈ ಹಿಂದುತ್ವ.” ಎಂದು ಸಾಧ್ವಿ ಪ್ರಜ್ಞಾ ಸಿಂಗ್ ಟ್ವೀಟ್ ಮಾಡಿದ್ದಾರೆ.
सच कहना अगर वगावत है तो समझो हम भी वागी हैं।
जय सनातन, जय हिंदुत्व…— Sadhvi Pragya singh thakur (@SadhviPragya_MP) June 9, 2022
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Fri, 10 June 22