ರಾಹುಲ್ ಗಾಂಧಿಯನ್ನು ರಾಮನಿಗೆ ಹೋಲಿಸಿದ ಖುರ್ಷಿದ್ ವಿರುದ್ಧ ಬಿಜೆಪಿ ವಾಗ್ದಾಳಿ; ರಾಮನ ಸೇನೆ ಬಟ್ಟೆ ಬಿಚ್ಚಿ ಓಡಾಡಬೇಕು ಎಂದ ಬಿಜೆಪಿ ನಾಯಕ
"ರಾಮನ 'ಪಾದುಕೆ ' ತುಂಬಾ ದೂರ ಹೋಗುತ್ತದೆ. ರಾಮ್‌ಜಿಗೆ ತಲುಪಲು ಸಾಧ್ಯವಾಗದಿದ್ದಾಗ ಭರತ ಅದನ್ನು ತೆಗೆದುಕೊಂಡು ಸ್ಥಳಗಳಿಗೆ ಹೋಗುತ್ತಾನೆ. ಅದರಂತೆ ನಾವು ಯುಪಿಯಲ್ಲಿ ಪಾದುಕೆಯನ್ನು ಸಾಗಿಸಿದ್ದೇವೆ. ಈಗ ಅದು ತಲುಪಿದೆ. ರಾಮ್‌ಜಿ (ರಾಹುಲ್ ಗಾಂಧಿ) ಕೂಡ ಬರುತ್ತಾರೆ ಎಂದು ಖುರ್ಷಿದ್ ಹೇಳಿದ್ದಾರೆ.
ತಮ್ಮ ಪಕ್ಷದ ‘ಭಾರತ್ ಜೋಡೋ ಯಾತ್ರೆ’ (Bharat Jodo Yatra)ಕುರಿತು ಮಾತನಾಡಿದ್ದ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಯಾತ್ರೆಯ ನೇತೃತ್ವ ವಹಿಸುತ್ತಿರುವ ಲೋಕಸಭಾ ಸಂಸದ ರಾಹುಲ್ ಗಾಂಧಿ (Rahul Gandhi) ಅವರನ್ನು ರಾಮನಿಗೆ ಮತ್ತು ಕಾಂಗ್ರೆಸ್ ಪಕ್ಷವನ್ನು ಭರತನಿಗೆ ಹೋಲಿಸಿದ್ದಾರೆ. ಖುರ್ಷಿದ್ ಅವರ ಬಣ್ಣನೆ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ದುಷ್ಯಂತ್ ಗೌತಮ್ (Dushyant Gautam )ಆತ ರಾಮನ ಅವತಾರವಾಗಿದ್ದರೆ, ಚಳಿ ಅನುಭವಕ್ಕೆ ಬರದಂತೆ ಅವರೇನು ತಿನ್ನುತ್ತಿದ್ದಾರೆ ಎಂದು ಅವರ ಸೇನೆಗೆ ಹೇಳಬೇಕು. ಅವರ ‘ಸೇನೆ’ ಏಕೆ ಬಟ್ಟೆಯಿಲ್ಲದೆ ತಿರುಗುವುದಿಲ್ಲ. ರಾಮನ ಸೇನೆಯಂತೆ ಕಾಂಗ್ರೆಸ್ಸಿಗರು ಬೆತ್ತಲೆಯಾಗಿ ಇರಬೇಕು ಎಂದು ಗೌತಮ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ. ಸೋಮವಾರ ಖುರ್ಷಿದ್ ಅವರು ರಾಹುಲ್ ಗಾಂಧಿಯನ್ನು ‘ಅತಿಮಾನುಷ’ ಎಂದು ಕರೆದಿದ್ದು “ನಾವು ಚಳಿಯಲ್ಲಿ ಹೆಪ್ಪುಗಟ್ಟುತ್ತಿರುವಾಗ ಮತ್ತು ಜಾಕೆಟ್ ಧರಿಸಿರುವಾಗ, ಅವರು ಟೀ-ಶರ್ಟ್‌ಗಳಲ್ಲಿ ಹೊರಗೆ ಹೋಗುತ್ತಿದ್ದಾರೆ. ಅವರು ಗಮನವನ್ನು ಪೂರ್ತಿ ನೆಟ್ಟ ‘ತಪಸ್ಸು’ ಮಾಡುವ ಯೋಗಿಯಂತಿದ್ದಾರೆ ಎಂದು ಹೇಳಿದ್ದರು.ರಾಹುಲ್ ಗಾಂಧಿ ಅವರ ಪಾದಯಾತ್ರೆ ಶನಿವಾರ ಬೆಳಿಗ್ಗೆ ದೆಹಲಿಯನ್ನು ತಲುಪಿತು. ದೆಹಲಿಯಲ್ಲಿ ಶೀತ ಅಲೆಯು ಕನಿಷ್ಠ ತಾಪಮಾನವನ್ನು ಐದು ಡಿಗ್ರಿ ಸೆಲ್ಸಿಯಸ್‌ಗೆ ಇಳಿಸಿದೆ.
“ರಾಮನ ‘ಪಾದುಕೆ ‘ ತುಂಬಾ ದೂರ ಹೋಗುತ್ತದೆ. ರಾಮ್‌ಜಿಗೆ ತಲುಪಲು ಸಾಧ್ಯವಾಗದಿದ್ದಾಗ ಭರತ ಅದನ್ನು ತೆಗೆದುಕೊಂಡು ಸ್ಥಳಗಳಿಗೆ ಹೋಗುತ್ತಾನೆ. ಅದರಂತೆ ನಾವು ಯುಪಿಯಲ್ಲಿ ಪಾದುಕೆಯನ್ನು ಸಾಗಿಸಿದ್ದೇವೆ. ಈಗ ಅದು ತಲುಪಿದೆ. ರಾಮ್‌ಜಿ (ರಾಹುಲ್ ಗಾಂಧಿ) ಕೂಡ ಬರುತ್ತಾರೆ ಎಂದು ಅವರು ಹೇಳಿದ್ದಾರೆ.
ಗಂಟೆಗಳ ಹಿಂದೆ ರಾಹುಲ್ ಗಾಂಧಿ ಅವರು ಮಹಾತ್ಮ ಗಾಂಧಿ ಮತ್ತು ಹಲವಾರು ಮಾಜಿ ಪ್ರಧಾನಿಗಳ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು.
ಕಾಂಗ್ರೆಸ್‌ನ ಯಾತ್ರೆಯು ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾದಾಗಿನಿಂದ ವಿವಾದದಳು ಆಗಾಗ್ಗೆ ಸುತ್ತಿಕೊಳ್ಳುತ್ತಿವೆ. ಇತ್ತೀಚೆಗಷ್ಟೇ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಕೋವಿಡ್ ಬಗ್ಗೆ ಕಳವಳ ವ್ಯಕ್ತಪಡಿಸಿ ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸಿ ಇಲ್ಲವೇ ಯಾತ್ರೆ ನಿಲ್ಲಿಸಿ ಎಂದು ರಾಹುಲ್ ಗಾಂಧಿಗೆ ಪತ್ರ ಬರೆದಿದ್ದರು.
ಇದನ್ನೂ ಓದಿ:ಒಡಿಶಾದ ಹೋಟೆಲ್‌ನಲ್ಲಿ ರಷ್ಯಾದ ಸಂಸದ ಸೇರಿ ಇಬ್ಬರು ಪ್ರವಾಸಿಗಳು ಅನುಮಾನಾಸ್ಪದ ಸಾವು
ಈ ಪತ್ರವನ್ನು ಕಾಂಗ್ರೆಸ್ ತನ್ನ ಶಕ್ತಿ ಪ್ರದರ್ಶನವನ್ನು ಹಳಿತಪ್ಪಿಸುವ ಪ್ರಯತ್ನ ಎಂದು ತಳ್ಳಿಹಾಕಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಮೋದಿ ರ್ಯಾಲಿ ನಡೆಸಿರುವಾಗ ಈ ಮಾನದಂಡಗಳು ಯಾಕೆ ಅನ್ವಯವಾಗಿಲ್ಲ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿತ್ತು.
“ಯಾವುದೇ ವೈಜ್ಞಾನಿಕ ಪ್ರೋಟೋಕಾಲ್ ಈ ದೇಶಕ್ಕೆ ಅನ್ವಯಿಸಿದರೆ, ಅದು ನಮಗೂ ಅನ್ವಯಿಸುತ್ತದೆ. ಆದರೆ ಕೋವಿಡ್ -19 ಇದು ಕಾಂಗ್ರೆಸ್‌ಗೆ ಬರುತ್ತದೆ ಮತ್ತು ಬಿಜೆಪಿಗೆ ಬರುವುದಿಲ್ಲ ಎಂದು ಹೇಳಲಾಗುವುದಿಲ್ಲ. ಯಾರಾದರೂ ಪ್ರೋಟೋಕಾಲ್ ಅನ್ನು ಅನುಸರಿಸಿದರೆ, ನಾವು ಮಾಡುತ್ತೇವೆ..ಆದರೆ ಇಂದು ಯಾವುದೇ ಪ್ರೋಟೋಕಾಲ್ ಇಲ್ಲ” ಎಂದು ಖುರ್ಷಿದ್ ಹೇಳಿದರು.
ಏತನ್ಮಧ್ಯೆ, ದೆಹಲಿಯ ಐಕಾನಿಕ್ ಕೆಂಪು ಕೋಟೆಯ ಹೊರಗೆ ಶನಿವಾರ ‘ಭಾರತ್ ಜೋಡೋ ಯಾತ್ರಾ’ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ‘ಹಿಂದೂ-ಮುಸ್ಲಿಂ ಪ್ರಚಾರ ಮೂಲಕ ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ