ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್(Anantnag)ನಲ್ಲಿ ನಡೆದ ಎನ್ಕೌಂಟರ್(Encounter)ನಲ್ಲಿ ಹುತಾತ್ಮ(Martyr)ರಾದ ಮೇಜರ್ ಆಶಿಶ್ ಅವರ ಪಾರ್ಥಿವ ಶರೀರ ಶುಕ್ರವಾರ ಪಾಣಿಪತ್ ತಲುಪಿದೆ.ಈ ಸಂದರ್ಭದಲ್ಲಿ ಮಾತನಾಡಿದ ಆಶಿಶ್( Ashish) ಅವರ ತಾಯಿ‘‘ನಾನು ಸಿಂಹದಂಥಾ ಮಗನಿಗೆ ಜನ್ಮ ನೀಡಿದ್ದೇನೆ, ನಾನು ಅಳುವುದಿಲ್ಲ, ಭಯೋತ್ಪಾದಕರಿಗೆ ಬೆನ್ನು ತೋರಿಸಿ ಓಡಿಹೋಗಲಿಲ್ಲ ನನ್ನ ಮಗ, ಆತ ಭಯೋತ್ಪಾದಕರನ್ನು ಎದುರಿಸಿ ಹುತಾತ್ಮನಾಗಿದ್ದಾನೆ, ಆತನ ಬಗ್ಗೆ ಹೆಮ್ಮೆ ಇದೆ’’ ಎಂದರು.
ಪಾಣಿಪತ್‌ನ ಬೀದಿಗಳಲ್ಲಿ ಒಂದೇ ಒಂದು ಘೋಷಣೆ ಪ್ರತಿಧ್ವನಿಸುತ್ತಿತ್ತು.‘ಮೇಜರ್ ಆಶಿಶ್ ಅಮರ್ ರಹೇ’. ಯೋಧನ ಮೃತದೇಹದ ಅಂತಿಮ ದರ್ಶನ ಪಡೆಯಲು ಪಾಣಿಪತ್ ನ ಸೆಕ್ಟರ್ 7ರಲ್ಲಿ ಸಾವಿರಾರು ಜನರು ಜಮಾಯಿಸಿದ್ದರು.
ಅವರ ಅಂತಿಮ ಸಂಸ್ಕಾರವನ್ನು ಅವರ ಹುಟ್ಟೂರು ಬಿಂಜೌಲ್‌ನಲ್ಲಿ ನಡೆಸಲಾಗುವುದು ಎಂದು ಹೇಳಲಾಗುತ್ತಿದೆ.ಅವರ ಪಾರ್ಥಿವ ಶರೀರವನ್ನು ಅವರು ನಿರ್ಮಿಸಿದ ಟಿಡಿಐ ಸಿಟಿಯಲ್ಲಿರುವ ಅವರ ಹೊಸ ಮನೆಗೆ ತರಲಾಯಿತು.
ಮತ್ತಷ್ಟು ಓದಿ: ಅನಂತ್ನಾಗ್ನಲ್ಲಿ ಮುಂದುವರೆದ ಎನ್ಕೌಂಟರ್ನಲ್ಲಿ ಮತ್ತೋರ್ವ ಯೋಧ ಹುತಾತ್ಮ
ಮೇಜರ್ ಆಶಿಶ್ ಸೇನಾ ಪದಕ ಪಡೆದಿದ್ದರು
ಮೇಜರ್ ಆಶಿಶ್ ಅವರ ಶೌರ್ಯಕ್ಕಾಗಿ ಈ ವರ್ಷದ ಆಗಸ್ಟ್ 15 ರಂದು ದೇಶದ ಅಧ್ಯಕ್ಷ ದ್ರೌಪದಿ ಮುರ್ಮು ಅವರಿಂದ ಸೇನಾ ಪದಕ ಪಡೆದಿದ್ದರು. ಭಯೋತ್ಪಾದಕರ ವಿರುದ್ಧ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹುತಾತ್ಮ ಯೋಧ ಆಶಿಶ್ ಅವರ ಸೋದರ ಮಾವ ಸುರೇಶ್ ಹೇಳಿದ್ದಾರೆ.
ಪಾಣಿಪತ್ ನಲ್ಲಿ ಹೊಸ ಮನೆ ಕಟ್ಟಲಾಗಿದೆ. ಆಶಿಶ್ ರಜೆ ಪಡೆದು ಮನೆಗೆ ಮರಳಲು ಮುಂದಾಗಿದ್ದರು. ಅವರ ಹುಟ್ಟುಹಬ್ಬ ಅಕ್ಟೋಬರ್‌ನಲ್ಲಿಯೇ ಇತ್ತು. 23ರಂದು ಅವರ ಹುಟ್ಟುಹಬ್ಬ ಆಚರಿಸಿ, ಅದೇ ದಿನ ಹೊಸ ಮನೆಗೆ ತೆರಳಲು ಕುಟುಂಬಸ್ಥರು ನಿರ್ಧರಿಸಿದ್ದರು. ಆಶಿಶ್ 2012ರಲ್ಲಿ ಸೇನೆಗೆ ಸೇರಿದ್ದರು.
ಆಶಿಶ್ ಮೊದಲಿನಿಂದಲೂ ಸೇನೆಗೆ ಸೇರಲು ಬಯಸಿದ್ದರು, ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬುದು ಅವರ ಆಸೆಯಾಗಿತ್ತು, ಸ್ನಾತಕೋತ್ತರ ಪದವಿವರೆಗೆ ಓದಿದ್ದರು. ಕುಟುಂಬ ಪಾಣಿಪತ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ