AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವ್ಯಾಂಗರು ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಾರಾ ಸಾಕ್ಷಿ, ಇಲ್ಲಿದೆ ಕೇರಳದ ದಿವ್ಯಾಂಗ ವಕೀಲೆಯ ಯಶೋಗಾಥೆ

ದಿವ್ಯಾಂಗರು ಯಾವುದರಲ್ಲೂ ಕಡಿಮೆ ಇಲ್ಲ, ಸಾಮಾನ್ಯರಂತೆ ಎಲ್ಲಾ ಹುದ್ದೆಯನ್ನು ಅಲಂಕರಿಸಬಹುದು ಎಂಬುದಕ್ಕೆ ಸಾರಾ ಸನ್ನಿ ಸಾಕ್ಷಿ. ಹೌದು, ಸಾರಾ ಸನ್ನಿ ಅವರಿಗೆ ಮಾತು ಬರುವುದಿಲ್ಲ, ಕಿವಿಯೂ ಕೇಳಿಸುವುದಿಲ್ಲ, ಸಂಜ್ಞೆ ಭಾಷೆಯಲ್ಲಿಯೇ ಅವರು ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ವಿಭಾಗೀಯ ಪೀಠವು ಮೊದಲ ಬಾರಿಗೆ ಪೂರ್ಣಗೊಳಿಸಿದೆ. ಇದು ಐತಿಹಾಸಿಕ ವಿಚಾರಣೆ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.

ದಿವ್ಯಾಂಗರು ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಾರಾ ಸಾಕ್ಷಿ, ಇಲ್ಲಿದೆ ಕೇರಳದ ದಿವ್ಯಾಂಗ ವಕೀಲೆಯ ಯಶೋಗಾಥೆ
ಸಾರಾ ಸನ್ನಿImage Credit source: 10TV.in
Follow us
ನಯನಾ ರಾಜೀವ್
|

Updated on:Apr 09, 2024 | 7:55 AM

ದಿವ್ಯಾಂಗರು ಯಾವುದರಲ್ಲೂ ಕಡಿಮೆ ಇಲ್ಲ, ಸಾಮಾನ್ಯರಂತೆ ಎಲ್ಲಾ ಹುದ್ದೆಯನ್ನು ಅಲಂಕರಿಸಬಹುದು ಎಂಬುದಕ್ಕೆ ಸಾರಾ ಸನ್ನಿ ಸಾಕ್ಷಿ. ಹೌದು, ಸಾರಾ ಸನ್ನಿ ಅವರಿಗೆ ಮಾತು ಬರುವುದಿಲ್ಲ, ಕಿವಿಯೂ ಕೇಳಿಸುವುದಿಲ್ಲ, ಸಂಜ್ಞೆ ಭಾಷೆಯಲ್ಲಿಯೇ ಅವರು ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ವಿಭಾಗೀಯ ಪೀಠವು ಮೊದಲ ಬಾರಿಗೆ ಪೂರ್ಣಗೊಳಿಸಿದೆ. ಇದು ಐತಿಹಾಸಿಕ ವಿಚಾರಣೆ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.

ವರ್ಚ್ಯುವಲ್ ಕೋರ್ಟ್​ನಲ್ಲಿ ತನ್ನ ಮೊದಲ ಪ್ರಕರಣವನ್ನು ವಾದಿಸುವ ಮೂಲಕ ದಿವ್ಯಾಂಗ ವಕೀಲೆ ಹೊಸ ದಾಖಲೆ ನಿರ್ಮಿಸಿದ್ದಾರೆ. ಮತ್ತಷ್ಟು ದಿವ್ಯಾಂಗರಿಗೆ ಹೊಸ ದಾರಿ ತೋರಿದ್ದಾರೆ. ಸೆಪ್ಟೆಂಬರ್ 26 ರಂದು ಮೊದಲ ಬಾರಿ ದಿವ್ಯಾಂಗ ವಕೀಲರೊಬ್ಬರು ಸುಪ್ರೀಂಕೋರ್ಟ್​ಗೆ ಹಾಜರಾಗಿದ್ದರು. ದಿವ್ಯಾಂಗರಾಗಿರುವ ಸಾರಾ ಸನ್ನಿ ಸನ್ನೆಗಳ ಮೂಲಕ ವಾದವನ್ನು ಮಾಡಿದರು.

ಸಾರಾ ಸನ್ನಿಗೆ ಅರ್ಥವಾಗುವಂತೆ ಸನ್ನೆ ಭಾಷೆಯಲ್ಲಿ ವಿವರಿಸಲು ಸಂಚಿತಾ ಐನ್ ಅವರು ಭಾರತೀಯ ಸಂಕೇತ ಭಾಷೆ ಇಂಟರ್​ಪ್ರಿಟರ್ ಸೌರಭ್ ರಾಯ್ ಚೌಧರಿ ಅವರನ್ನು ನೇಮಿಸಿದರು. ಸೌರಭ್ ಚೌಧರಿ ಕೂಡ ಪರದೆಯ ಮೇಲೆ ಕಾಣಿಸಿಕೊಳ್ಳುವುದನ್ನು ಸುಪ್ರೀಂಕೋರ್ಟ್​ ಮಾಡರೇಟರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಚಿತಾ ಐನ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ಗೆ ಸಂಕೇತ ಭಾಷಾ ಇಂಟರ್​ಪ್ರಿಟರ್​ಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಅದಕ್ಕೆ ಸಿಜೆಐ ಅನುಮತಿ ನೀಡಿದ್ದರು.

ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಈ ನಿರ್ಧಾರವು  ದಿವ್ಯಾಂಗರಿಗೆ ಅವಕಾಶ ನೀಡುವಲ್ಲಿ ಒಂದು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.

ಮತ್ತಷ್ಟು ಓದಿ: ದೆಹಲಿಯಲ್ಲಿ ಮೊದಲ ದಿವ್ಯಾಂಗ ಪಾರ್ಕ್​, 2 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ ಉದ್ಯಾನ

ಸಾರಾ ಸನ್ನಿ ಯಾರು? ಸಾರಾಗೆ ಬಾಲ್ಯದಿಂದಲೂ ಕಿವಿ ಕೇಳಿಸುತ್ತಿರಲಿಲ್ಲ, ಮಾತು ಬರುತ್ತಿರಲಿಲ್ಲ, ಆದರೆ ತಂದೆ ತಾಯಿ ಬೆಂಬಲದೊಂದಿಗೆ ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಸಾರಾ ಅವರು ಬೆಂಗಳೂರಿನ ಸೇಂಟ್ ಜೋಸೆಫ್ ಕಾನೂನು ವಿದ್ಯಾಲಯದಲ್ಲಿ ಎಲ್​ಎಲ್​ಬಿ ಪದವಿ ಪಡೆದಿದ್ದಾರೆ. ಸಾರಾ ಅವರು ಹಿರಿಯ ವಕೀಲರಾದ ಸಂಚಿತಾ ಬಳಿ ಸುಪ್ರೀಂಕೋರ್ಟ್​ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಸಾರಾ ಮೊದಲು ಕರ್ನಾಟಕದ ಜಿಲ್ಲಾ ನ್ಯಾಯಾಲಯದಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ನಂತರ ನ್ಯಾಯಾಧೀಶರು ಇಂಟರ್​ಪ್ರಿಟರ್​ಗೆ ಅವಕಾಶ ನೀಡಿರಲಿಲ್ಲ, ಆ ಸಮಯದಲ್ಲಿ ಸನ್ನಿ ನ್ಯಾಯಾಲಯದಲ್ಲಿ ಬರೆದು ವಾದಿಸುತ್ತಿದ್ದರು.

ಇಂಟರ್​ಪ್ರಿಟರ್​ಗೆ ಗಂಟೆಯ ಆಧಾರದ ಮೇಲೆ ಬಿಲ್ಲಿಂಗ್ ಮಾಡಲಾಗುತ್ತದೆ. ಇಂಟರ್‌ಪ್ರಿಟರ್‌ನ ಅಗತ್ಯವಿರುವ ಯಾವುದೇ ವಕೀಲರ ಮೇಲೆ ಇದು ಗಮನಾರ್ಹ ಆರ್ಥಿಕ ಹೊರೆಯನ್ನು ಉಂಟುಮಾಡುತ್ತದೆ.

ಸಾರಾ ಸನ್ನಿ ಹುಟ್ಟೂರು ಕೊಟ್ಟಾಯಂ, ಅವರೆ ತಂದೆ ಕುರುವಿಲ್ಲಾದಲ್ಲಿ ಚಾರ್ಟರ್ಡ್​ ಅಕೌಂಟೆಂಟ್, ತಾಯಿ ಗೃಹಿಣಿ ಈ ದಂಪತಿಯ ಮಗನಿಗೂ ಕೂಡ ಕಿವಿ ಕೇಳಿಸುವುದಿಲ್ಲ, ಎಂಟು ವರ್ಷಗಳ ನಂತರ ಅವಳಿ ಹೆಣ್ಣುಮಕ್ಕಳು ಜನಿಸಿದರು, ಆ ಇಬ್ಬರು ಮಕ್ಕಳಿಗೂ ಕೂಡ ಶ್ರವಣದೋಷವಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:33 am, Thu, 5 October 23