
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಕೊವಿಡ್ 19 ಎರಡನೇ ಅಲೆ ಹೊತ್ತಲ್ಲೂ ಕಾಮಗಾರಿ ನಿಂತಿಲ್ಲ. ಅಲ್ಲೀಗ ಚಿತ್ರಣವೇ ಬದಲಾಗಿದ್ದು, ಅದರ ಸೆಟಲೈಟ್ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ರಾಮಮಂದಿರವಿದ್ದ ಸ್ಥಳ ಮೊದಲು ಹೇಗಿತ್ತು? ಈಗ ಹೇಗಾಗಿದೆ ಎಂಬುದರ ಸ್ಪಷ್ಟ ಬದಲಾವಣೆಯನ್ನು ಫೋಟೋದಲ್ಲಿ ಕಾಣಬಹುದು.
ಅಯೋಧ್ಯೆ ರಾಮಮಂದಿರದ ಸ್ಥಳದಲ್ಲಿ ಭರದ ಕಾಮಗಾರಿ ನಡೆಯುತ್ತಿದೆ. ಅವಶೇಷಗಳನ್ನು ಸ್ವಚ್ಛಗೊಳಿಸಿ, ಕಾಂಕ್ರೀಟ್ ಹಾಕಲು ನೆಲವನ್ನು ಸಮತಟ್ಟು ಮಾಡುವ ಕೆಲಸ ನಡೆಯುತ್ತಿರುವುದು ಸೆಟಲೈಟ್ ಫೋಟೋದಿಂದ ಕಾಣುತ್ತಿದೆ. ಅಲ್ಲೆಲ್ಲ ಕೆಲಸಗಾರರು, ಇಂಜನಿಯರ್ಗಳು ಇದ್ದಾರೆ. ತಜ್ಞರ ಸಲಹೆಯಂತೆ ಮಂದಿರಕ್ಕೆ ಅಡಿಪಾಯ ಹಾಕುವಾಗ ಹೆಚ್ಚುವರಿಯಾಗಿ ಕಾಂಕ್ರೀಟ್ ಪದರಗಳನ್ನು ಹಾಕಲು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಂಬಂಧಪಟ್ಟ ಇಂಜಿನಿಯರ್ಗಳಿಗೆ ಸೂಚಿಸಿದೆ.
ಶ್ರೀರಾಮಮಂದಿರಕ್ಕೆ ರೋಲರ್ ಕಾಂಪ್ಯಾಕ್ಟೆಡ್ ಕಾಂಕ್ರೀಟ್ (ಆರ್ಸಿಸಿ)ನ ಅಡಿಪಾಯ ಹಾಕಲಾಗುವುದು. ಇದರ ಅನ್ವಯ 1,20,000 ಚದರ ಅಡಿ ಪ್ರದೇಶದಲ್ಲಿ 40-45 ಪದರ ಕಾಂಕ್ರೀಟ್ ಹಾಕಲಾಗುವುದು. ಅದರಲ್ಲಿ 4 ಲೇಯರ್ಗಳಷ್ಟೇ ಮುಗಿದಿದೆ ಎಂದೂ ಟ್ರಸ್ಟ್ ಮೇ 31ರಂದು ಮಾಹಿತಿ ನೀಡಿತ್ತು. ಈಗಾಗಲೇ 1,20,000 ಘನ ಮೀಟರ್ ಪ್ರದೇಶಗಳಲ್ಲಿ ಮಣ್ಣು ಅಗೆಯಲಾಗಿದ್ದು, ಅದನ್ನೆಲ್ಲ ತೆರವುಗೊಳಿಸಲಾಗಿದೆ. ಅಕ್ಟೋಬರ್ ಅಷ್ಟೊತ್ತಿಗೆ 45 ಪದರಗಳ ಕಾಂಕ್ರೀಟ್ ಹಾಕುವ ಕೆಲಸ ಮುಗಿಯಬಹುದು ಎಂದೂ ಟ್ರಸ್ಟ್ ತಿಳಿಸಿದೆ.
ಇಲ್ಲಿದೆ ನೋಡಿ ಸೆಟಲೈಟ್ ಮೂಲಕ ಸೆರೆ ಹಿಡಿಯಲಾದ ಶ್ರೀರಾಮಮಂದಿರ ಸ್ಥಳದ ಚಿತ್ರ..

ಸೆಟಲೈಟ್ ಚಿತ್ರ