ಮೊಹಮ್ಮದ್ ಜುಬೇರ್ ಮಧ್ಯಂತರ ಜಾಮೀನು ವಿಸ್ತರಿಸಿದ ಸುಪ್ರೀಂ; ಸೆಪ್ಟೆಂಬರ್ 7ಕ್ಕೆ ಮುಂದಿನ ವಿಚಾರಣೆ

ಉತ್ತರಪ್ರದೇಶದ ಸೀತಾಪುರ್​​ನಲ್ಲಿ ಜುಬೇರ್ ವಿರುದ್ಧ ದಾಖಲಾದ ಎಫ್ಐಆರ್​​ಗೆ ಸಂಬಂಧಿಸಿದಂತೆ ಕೋರ್ಟ್ ಈ ಆದೇಶ ನೀಡಿದೆ. ಜುಬೇರ್ ವಿರುದ್ಧ ದೆಹಲಿ ಮತ್ತು ಲಖಿಂಪುರದಲ್ಲಿರುವ ವಿಚಾರಣೆಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

ಮೊಹಮ್ಮದ್ ಜುಬೇರ್ ಮಧ್ಯಂತರ ಜಾಮೀನು ವಿಸ್ತರಿಸಿದ ಸುಪ್ರೀಂ; ಸೆಪ್ಟೆಂಬರ್ 7ಕ್ಕೆ ಮುಂದಿನ ವಿಚಾರಣೆ
ಮೊಹಮ್ಮದ್ ಜುಬೇರ್
TV9kannada Web Team

| Edited By: Rashmi Kallakatta

Jul 12, 2022 | 12:36 PM

ಆಲ್ಟ್ ನ್ಯೂಸ್ (Alt News) ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ (Mohammad Zubair) ಮಧ್ಯಂತರ ಜಾಮೀನನ್ನು ಮುಂದಿನ ಆದೇಶದವರಗೆ ಸುಪ್ರೀಂಕೋರ್ಟ್ (Supreme Court) ವಿಸ್ತರಿಸಿದ್ದು ಮುಂದಿನ ವಿಚಾರಣೆ ಸೆಪ್ಟೆಂಬರ್ 7ಕ್ಕೆ ನಡೆಯಲಿದೆ. ಉತ್ತರಪ್ರದೇಶದ ಸೀತಾಪುರ್​​ನಲ್ಲಿ ಜುಬೇರ್ ವಿರುದ್ಧ ದಾಖಲಾದ ಎಫ್ಐಆರ್​​ಗೆ ಸಂಬಂಧಿಸಿದಂತೆ ಕೋರ್ಟ್ ಈ ಆದೇಶ ನೀಡಿದೆ. ಜುಬೇರ್ ವಿರುದ್ಧ ದೆಹಲಿ ಮತ್ತು ಲಖಿಂಪುರದಲ್ಲಿರುವ ವಿಚಾರಣೆಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಹಿಂದೂ ಸ್ವಾಮೀಜಿಗಳನ್ನು ದ್ವೇಷ ಪ್ರಚೋದಕರು ಎಂದು ಹೇಳಿ ಜುಬೇರ್ ಟ್ವೀಟ್ ಮಾಡಿದ್ದು, ಇದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಸೀತಾಪುರ್​​ನಲ್ಲಿ ಪ್ರಕರಣ ದಾಖಲಾಗಿತ್ತು. ಆದಾಗ್ಯೂ, ನಾಲ್ಕು ವಾರಗಳಲ್ಲಿ ಈ ಪ್ರಕರಣಕ್ಕೆ ಪ್ರತಿಕ್ರಿಯಿಸಬೇಕು ಎಂದು ನ್ಯಾಯಾಲಯ ಉತ್ತರ ಪ್ರದೇಶ ಸರ್ಕಾರಕ್ಕೆ ಹೇಳಿದೆ. ಜುಲೈ 8ರಂದು ಸುಪ್ರೀಂಕೋರ್ಟ್ ಜುಬೇರ್ ಅವರಿಗೆ 5 ದಿನಗಳ ಕಾಲ ಮಧ್ಯಂತರ ಜಾಮೀನು ಅನುಮತಿಸಿತ್ತು. ಈ ಅವಧಿಯಲ್ಲಿ ಟ್ವೀಟ್ ಮಾಡಬಾರದು ಅಥವಾ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ತಿದ್ದುವ ಕೆಲಸ ಮಾಡುವಂತಿಲ್ಲ ಎಂದು ಹೇಳಿತ್ತು.

ಇದನ್ನೂ ಓದಿ

ಸುಪ್ರೀಂಕೋರ್ಟ್​​​ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್. ವಿ ರಾಜು ಅವರು ಈ ಪ್ರಕರಣದಲ್ಲಿ ಸ್ಥಿತಿ ವರದಿ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಜುಬೇರ್ ಪರ ಹಾಜರಾದ ಹಿರಿಯ ವಕೀಲ ಕೋಲಿನ್ ಗೋನ್ಸ್ಲೆವ್ ತಮ್ಮ ಕಕ್ಷಿದಾರರರಿಗೆ ಕೇವಲ 5 ದಿನ ಜಾಮೀನು ನೀಡಿರುವುದು ಎಂದು ನ್ಯಾಯಾಲಯಕ್ಕೆ ಹೇಳಿದರು. ಇದಾದ ನಂತರ ಸುಪ್ರೀಂಕೋರ್ಟ್ ಮುಂದಿನ ಆದೇಶದ ವರಗೆ ಜುಬೇರ್ ಮಧ್ಯಂತರ ಜಾಮೀನು ವಿಸ್ತರಣೆ ಮಾಡುವುದಾಗಿ ಹೇಳಿದೆ. ಕೌಂಟರ್ ಅಫಿಡವಿಟ್ ಸಲ್ಲಿಸಲು ರಾಜ್ಯ ಕಾಲಾವಕಾಶ ಕೋರಿದೆ. ನಾಲ್ಕು ವಾರಗಳೊಳಗೆ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada