AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uber: ದೆಹಲಿಯಲ್ಲಿ ಕ್ಯಾಬ್​ ಚಾಲಕನಿಂದ ಅತ್ಯಾಚಾರ ಪ್ರಕರಣ; ಭಾರತದ ದೋಷಪೂರಿತ ವ್ಯವಸ್ಥೆಯೇ ಕಾರಣವೆಂದು ಉಬರ್ ಆರೋಪ

ದೆಹಲಿಯಲ್ಲಿ ನಡೆದ ಅತ್ಯಾಚಾರಕ್ಕೆ ಭಾರತದಲ್ಲಿನ ದೋಷಪೂರಿತ ಲೈಸೆನ್ಸ್​ ವ್ಯವಸ್ಥೆಯೇ ಕಾರಣ ಎಂದು ಉಬರ್ ಆರೋಪಿಸಿದೆ.

Uber: ದೆಹಲಿಯಲ್ಲಿ ಕ್ಯಾಬ್​ ಚಾಲಕನಿಂದ ಅತ್ಯಾಚಾರ ಪ್ರಕರಣ; ಭಾರತದ ದೋಷಪೂರಿತ ವ್ಯವಸ್ಥೆಯೇ ಕಾರಣವೆಂದು ಉಬರ್ ಆರೋಪ
ಉಬರ್Image Credit source: The Print
TV9 Web
| Edited By: |

Updated on:Jul 12, 2022 | 1:00 PM

Share

ನವದೆಹಲಿ: 2014ರ ಡಿಸೆಂಬರ್ 5ರಂದು ದೆಹಲಿಯಲ್ಲಿ 25 ವರ್ಷದ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಉಬರ್ (Uber) ಕ್ಯಾಬ್ ಚಾಲಕ ಕ್ಯಾಬ್‌ನಲ್ಲಿಯೇ ಅತ್ಯಾಚಾರ (Rape) ಮಾಡಿದ ನಂತರ ಸ್ಯಾನ್ ಫ್ರಾನ್ಸಿಸ್ಕೋದ ಪ್ರಧಾನ ಕಛೇರಿಯಲ್ಲಿರುವ ಉಬರ್ ಸಿಬ್ಬಂದಿ ಭಯಭೀತರಾಗಿದ್ದಾರೆ. ಆದರೆ, ದೆಹಲಿಯಲ್ಲಿ ನಡೆದ ಅತ್ಯಾಚಾರಕ್ಕೆ ಭಾರತದಲ್ಲಿನ ದೋಷಪೂರಿತ ಲೈಸೆನ್ಸ್​ ವ್ಯವಸ್ಥೆಯೇ ಕಾರಣ ಎಂದು ಉಬರ್ ಆರೋಪಿಸಿದೆ.

ಈ ಬಗ್ಗೆ ಮಾತನಾಡಿರುವ ಉಬರ್ ಸಂವಹನ ವಿಭಾಗದ ಮುಖ್ಯಸ್ಥ ನೈರಿ ಹವರ್ದಜ್ಜನ್, ಉಬರ್​ನ ಚಾಲಕನಿಗೆ ಭಾರತದಿಂದ ಪರವಾನಗಿ ನೀಡಲಾಗಿದೆ. ಭಾರತದ ಪರವಾನಗಿ ಯೋಜನೆಯಲ್ಲಿ ದೋಷವಿದೆ. ಲೈಸೆನ್ಸ್​ ನೀಡುವಾಗ ಆ ವ್ಯಕ್ತಿಯ ಹಿನ್ನೆಲೆ ಪರೀಕ್ಷಿಸದೆ ವಾಹನ ಪರವಾನಗಿ ನೀಡಲಾಗಿದ್ದು, ಭಾರತದ ವ್ಯವಸ್ಥೆಯಲ್ಲೇ ಸಮಸ್ಯೆಯಿದೆ ಎಂದಿದ್ದಾರೆ. ಈ ಅತ್ಯಾಚಾರ ಪ್ರಕರಣ ದೆಹಲಿಯಲ್ಲಿ ಉಬರ್‌ ಬ್ರ್ಯಾಂಡ್​ಗೆ ದೊಡ್ಡ ಹೊಡೆತ ನೀಡಿತ್ತು. ಸರ್ಕಾರವು ಉಬರ್ ಸೇವೆಗಳನ್ನು ನಿಷೇಧಿಸಿತ್ತು. ಉಬರ್ ಕ್ಯಾಬ್‌ಗಳು ಮತ್ತೆ ರಸ್ತೆಗೆ ಇಳಿಯಲು ದೆಹಲಿ ಹೈಕೋರ್ಟ್‌ ಮೊರೆ ಹೋಗಲಾಗಿತ್ತು. ಹೈಕೋರ್ಟ್​ ಅನುಮತಿ ನೀಡಿದ ಬಳಿಕ ಮತ್ತೆ ಉಬರ್ ಕ್ಯಾಬ್ ಸೇವೆ ಆರಂಭವಾಗಿತ್ತು.

ಇದನ್ನೂ ಓದಿ: Uber: ತೆರಳಬೇಕಾದ ಸ್ಥಳದ ವಿವರ ಉಬರ್ ಚಾಲಕರಿಗೆ ಇನ್ನು ಮುಂದೆ ಆರಂಭದಲ್ಲೇ ಲಭ್ಯ; ಟ್ರಿಪ್ ರದ್ದು ಕಡಿಮೆ ಮಾಡಲು ಕ್ರಮ

ಉಬರ್ ಕ್ಯಾಬ್​ನಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆಸಿದ ಚಾಲಕನನ್ನು ಪೊಲೀಸರು ಸೆರೆಹಿಡಿದಿದ್ದರು. 2011ರಲ್ಲಿ ದೆಹಲಿಯ ಮೆಹರೌಲಿ ಪ್ರದೇಶದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಈತ ತಿಹಾರ್ ಜೈಲಿನಲ್ಲಿ 7 ತಿಂಗಳು ಶಿಕ್ಷೆ ಅನುಭವಿಸಿದ್ದ ಎಂಬ ವಿಚಾರವನ್ನು ಸ್ವತಃ ಆತನೇ ಪೊಲೀಸರಿಗೆ ಹೇಳಿಕೊಂಡಿದ್ದ.

Published On - 12:57 pm, Tue, 12 July 22